Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ವಿದ್ಯುತ್ ಬಿಲ್ ನಿಯಂತ್ರಣಕ್ಕೆ ಸ್ಮಾರ್ಟ್ ಟಿಪ್ಸ್
ಇಂದಿನ ಆಧುನಿಕ ಜೀವನ ಪದ್ಧತಿಯಲ್ಲಿ ಎಲ್ಲವನ್ನೂ ಸಮಪ್ರಮಾಣದಲ್ಲಿ ವಿನಿಯೋಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ನಿಮ್ಮ ಬಜೆಟ್ ಮೀರಿ ಖರ್ಚು ವೆಚ್ಚಗಳು ಹೆಚ್ಚಾದಾಗ ಆಮೇಲೆ ಪರಿಪಾಟಲು ಅನುಭವಿಸಬೇಕಾಗುತ್ತದೆ. ಹಾಲು, ತರಕಾರಿ, ಮನೆಬಾಡಿಗೆ ನೀರಿನ ಬಿಲ್, ಹೀಗೆ ಪ್ರತಿಯೊಂದು ಖರ್ಚುವೆಚ್ಚಗಳನ್ನು ನಾವು ನಿಯಂತ್ರಿಸಿಕೊಂಡು ಹೋಗಬೇಕಾಗುತ್ತದೆ. ಇನ್ನು ನಿಮ್ಮ ಜೇಬಿಗೆ ಕತ್ತರಿ ಹಾಕುವ ವಿದ್ಯುತ್ ಬಿಲ್ ಮಿತಿಮೀರಿದಾಗ ಬಜೆಟ್ಗೆ ಕೊಕ್ ಖಂಡಿತ.
ವಿದ್ಯುತ್ ಬಿಲ್ನ ಮೇಲೆ ನೀವು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ವಿದ್ಯುತ್ ಬಿಲ್ ಉಳಿಸುವಲ್ಲಿ ನಿಮ್ಮ ಕುಟುಂಬದ ಪ್ರತಿಯೋರ್ವನೂ ಜವಬ್ದಾರಿಯುತನಾಗಿರ ಬೇಕಾಗಿರುತ್ತದೆ. ಬಳಕೆಯಲ್ಲಿಲ್ಲದ ಸಂದರ್ಭದಲ್ಲಿ ವಿದ್ಯುತ್ ಪರಿಕರಗಳನ್ನು ಆಫ್ ಮಾಡುವುದು, ಅವುಗಳ ನಿರ್ವಹಣೆ ಮತ್ತು ಅವುಗಳ ರಿಪೇರಿ ಮಾಡಿಸುವುದು ಮೊದಲಾದ ಚಟುವಟಿಕೆಗಳನ್ನು ಇದು ಒಳಗೊಂಡಿದೆ.
ನಿಮ್ಮ ವಿದ್ಯುತ್ ಬಿಲ್ ಮೇಲೆ ಹಣ ಉಳಿಸುವ ಮುನ್ನ ಬೇರೆ ವಿದ್ಯುತ್ ಉಪಕರಣಗಳು ಮತ್ತು ಅವುಗಳು ವಿನಿಯೋಗಿಸುವ ವಿದ್ಯುತ್ ಅನ್ನು ಕುರಿತು ನೀವು ತಿಳಿದುಕೊಂಡಿರಬೇಕು. ಈ ಬಗ್ಗೆ ಗಮನಹರಿಸಿದಲ್ಲಿ ವಿದ್ಯುತ್ ಬಿಲ್ ಮೇಲೆ ನಿಮಗೆ ಕಡಿವಾಣ ಹಾಕಬಹುದಾಗಿದೆ. ಆಧುನಿಕ ಜೀವನ ಪದ್ಧತಿಗೆ ನಾವು ಒಗ್ಗಿಕೊಂಡಂತೆಲ್ಲಾ ತಂತ್ರಜ್ಞಾನ ಪರಿಕರಗಳ ಬಳಕೆಯನ್ನು ನಾವು ಹೆಚ್ಚು ಮಾಡುತ್ತೇವೆ. ಮನೆಯಲ್ಲಿ ವಿದ್ಯುತ್ ಉಪಕರಣಗಳು ಹೆಚ್ಚು ಇರುವುದು ದೊಡ್ಡ ಸಂಗತಿಯಲ್ಲ ಆದರೆ ವಿನಾಕಾರಣ ಅವುಗಳನ್ನು ಬಳಸುವುದರ ಮೇಲೆ ನಾವು ನಿಯಂತ್ರಣವನ್ನು ಸಾಧಿಸಬೇಕು.
ಹಾಗಿದ್ದರೆ ಇದರ ಮೇಲೆ ನಿಗಾ ಇರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ವಿಧಾನಗಳು ಹೆಚ್ಚು ಹೊರೆಯಾಗಿರುವ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು ವಿದ್ಯುತ್ ಉಪಕರಣಗಳನ್ನು ಹೇಗೆ ಬಳಸಬೇಕು ಎಂಬ ಚಿಕ್ಕ ಪಾಠವನ್ನು ಕಲಿಸಲಿದೆ...

ಹವಾನಿಯಂತ್ರಿತ ನಿರ್ವಹಣೆ
ನಿಮ್ಮ ಹವಾನಿಯಂತ್ರಿತ (ಏಸಿ) ವನ್ನು ಸೂಕ್ತ ನಿರ್ವಹಣೆ ಮಾಡಿ. ವಿಶೇಷವಾಗಿ ಅದನ್ನು ನೀವು ಬೇಸಿಗೆಯಲ್ಲಿ ಬಳಸುತ್ತಿದ್ದೀರಿ ಎಂದಾದಲ್ಲಿ. ತಾಪಮಾನ ಸೆಟ್ಟಿಂಗ್ಗಳನ್ನು ನಿಖರವಾಗಿ ಇರಿಸಿಕೊಳ್ಳಿ. ನಾವು ತಿಳಿಸಲಿರುವ ವಿಧಾನಗಳಲ್ಲಿ ಇದೂ ಒಂದಾಗಿದೆ.

ಸೂಕ್ತ ಕಿಟಕಿ ವ್ಯವಸ್ಥೆ
ನಿಮ್ಮ ಕೊಠಡಿಗೆ ನೀವು ಸೂಕ್ತವಾದ ಕಿಟಕಿಯನ್ನು ಜೋಡಿಸಿದ್ದೀರಿ ಎಂದಾದಲ್ಲಿ ಹವಾನಿಯಂತ್ರಿತ, ಫ್ಯಾನ್, ಲೈಟುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು. ವಿದ್ಯುತ್ ಬಿಲ್ ಕಡಿಮೆ ಮಾಡಲು ಇದೂ ಸಹಕಾರಿಯಾಗಲಿದೆ.

ವಾಶಿಂಗ್ ಮೆಶಿನ್
ನಿತ್ಯವೂ ನಿಮ್ಮ ವಾಶಿಂಗ್ ಮೆಶಿನ್ ಅನ್ನು ನೀವು ಬಳಸುತ್ತೀರಾ? ಹಾಗಿದ್ದರೆ ಆ ಅಭ್ಯಾಸವನ್ನು ನಿಲ್ಲಿಸುವ ಸಮಯ ಬಂದೊದಗಿದೆ. ಒಗೆಯುವ ಬಟ್ಟೆಗಳು ಹೆಚ್ಚಿದ್ದಾಗ ಮಾತ್ರವೇ ಮೆಶಿನ್ ಬಳಕೆಯನ್ನು ಮಾಡಿ.

ಸರಿಯಾದ ಪ್ಲಂಬಿಂಗ್
ಹಾನಿಯಾಗಿರುವ ಪೈಪ್ನಿಂದ ನೀರು ಸೋರಿಕೆಯಾಗುತ್ತಿದ್ದಲ್ಲಿ ಟ್ಯಾಂಕಿಯಲ್ಲಿರುವ ನೀರು ಬೇಗನೇ ಮುಗಿದು ಹೋಗುತ್ತದೆ.ಇದರಿಂದ ಟ್ಯಾಂಕಿಗೆ ನೀರು ತುಂಬಿಸುವ ಕೆಲಸ ಆಗಾಗ್ಗೆ ಮಾಡಬೇಕಾಗುತ್ತದೆ. ಇದೂ ಕೂಡ ವಿದ್ಯುತ್ ಬಿಲ್ ಅನ್ನು ದುಬಾರಿಯಾಗಿಸುತ್ತದೆ.

ಡಿಶ್ ವಾಶರ್ಸ್
ವಾಶಿಂಗ್ ಮೆಶಿನ್ಗೆ ಹೇಳಿದ ಅದೇ ಕ್ರಮವನ್ನು ನೀವು ಡಿಶ್ ವಾಶರ್ಸ್ಗೂ ಅನ್ವಯಿಸಬೇಕು. ಸಾಕಷ್ಟು ಪಾತ್ರೆಗಳಿದ್ದಲ್ಲಿ ಮಾತ್ರವೇ ಇದರ ಬಳಕೆಯನ್ನು ಮಾಡಿ.

ಇಲೆಕ್ಟ್ರಾನಿಕ್ ಪರಿಕರಗಳು ಮತ್ತು ಇಲೆಕ್ಟ್ರಾನಿಕ್ಸ್
ನಿಮ್ಮೆಲ್ಲಾ ವಿದ್ಯುತ್ ಪರಿಕರಗಳು ಉತ್ತಮ ಸ್ಥಿತಿಯಲ್ಲಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇವುಗಳು ಹಾಳಾಗಿದ್ದಲ್ಲಿ ಕೂಡ ವಿದ್ಯುತ್ ಪೋಲಾಗುತ್ತಿರುತ್ತದೆ ಎಂಬುದು ನೆನಪಿರಲಿ. ಹಾಳಾಗಿರುವ ಮತ್ತು ಹಳೆಯ ವಿದ್ಯುತ್ ಉಪಕರಣಗಳು ಹೆಚ್ಚಿನ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತವೆ.

ಪವರ್ ಸ್ಟ್ರಿಪ್
ಒಂದೇ ಪವರ್ ಯೂನಿಟ್ಗೆ ನಿಮ್ಮೆಲ್ಲಾ ವಿದ್ಯುತ್ ಉಪಕರಣಗಳನ್ನು ಸಂಪರ್ಕಪಡಿಸುವುದು ಅತ್ಯುತ್ತಮ ವಿಧಾನವಾಗಿದೆ. ಎಲ್ಲವನ್ನೂ ಒಟ್ಟಿಗೆ ನಿಯಂತ್ರಿಸಲು ನಿರ್ವಹಿಸಲು ಈ ವಿಧಾನ ಸಹಕಾರಿ. ವಿದ್ಯುತ್ ಬಿಲ್ ಉಳಿಸುವ 10 ವಿಧಾನಗಳಲ್ಲಿ ಇದೂ ಕೂಡ ಒಂದು.

ಎಲ್ಇಡಿ ಲೈಟ್ಗಳ ಬಳಕೆ
ಎಲ್ಇಡಿ ಲೈಟ್ಗಳು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುವಲ್ಲಿ ಸಹಕಾರಿಯಾಗಿದೆ. ಬೇರೆ ಬಲ್ಬುಗಳಿಗಿಂತಲೂ ಎಲ್ಇಡಿ ಲೈಟ್ಗಳು ಬಳಸುವ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ.

ಬಳಕೆಯ ನಂತರ ಆಫ್ ಮಾಡಿ
ಇದು ನಿಮ್ಮ ಮನೆಯ ಮಕ್ಕಳೂ ಕೂಡ ಅನುಸರಿಸಬಹುದಾದ ವಿದ್ಯುತ್ ಬಿಲ್ ಉಳಿಸುವ ಉತ್ತಮ ಯೋಜನೆಯಾಗಿದೆ. ವಿದ್ಯುತ್ ವಸ್ತುಗಳ ಬಳಕೆಯನ್ನು ನೀವು ಮಾಡಿದ ನಂತರ ಅವುಗಳನ್ನು ಆರಿಸಲು ಮರೆಯದಿರಿ. ಮಕ್ಕಳಿಗೂ ಈ ಪಾಠವನ್ನು ಕಲಿಸಿ.

ಸೋಲಾರ್ ಬಳಕೆ
ಇತ್ತೀಚಿನ ದಿನಗಳಲ್ಲಿ ಸೌರಶಕ್ತಿಯನ್ನು ಬಳಸುವುದು ಹೆಚ್ಚು ಜನಪ್ರಿಯವಾಗಿದೆ. ಆರಂಭದಲ್ಲಿ ಕೊಂಚ ವೆಚ್ಚವಾದರೂ ಇವುಗಳನ್ನು ಸ್ಥಾಪಿಸಿದ ನಂತರ ಅವುಗಳು ಮಾಡುವ ಕೆಲಸ ಮಾತ್ರ ನಿಜಕ್ಕೂ ಮೆಚ್ಚುವಂತಹದ್ದು. ಶಕ್ತಿಯ ವಿನಿಯೋಗವನ್ನು ಸೌರಶಕ್ತಿ ಮಾಡುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುವ ಭಯ ಇರುವುದಿಲ್ಲ. ವಿದ್ಯುತ್ ಪೋಲಾಗುವ ಚಿಂತೆ ಕೂಡ ಇರುವುದಿಲ್ಲ.



Click it and Unblock the Notifications











