Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಡುಗೆ ಮನೆಯ ವಾಸನೆ ಹೋಗಲಾಡಿಸುವ ಸೂಪರ್ ಟಿಪ್ಸ್
ನಾವು ವಾಸಿಸುವ ಮನೆ ದೇವಾಲಯವಿದ್ದಂತೆ. ಮನೆಕಟ್ಟಲು ಹೆಚ್ಚಿನ ಖರ್ಚು ವೆಚ್ಚಗಳನ್ನು ನಾವು ಮಾಡುತ್ತೇವೆ ಅದರ ಜೊತೆಗೆ ಅದನ್ನು ಸ್ವಚ್ಛವಾಗಿಡುವಲ್ಲಿಯೂ ನಾವು ಜಿಪುಣತನವನ್ನು ಮಾಡಬಾರದು. ಮನೆಯ ಮೂಲೆ ಮೂಲೆಯೂ ಫಳಫಳನೆ ಹೊಳೆಯುತ್ತಾ ಸ್ವಚ್ಛವಾಗಿದ್ದರೆ ಅಲ್ಲಿ ವಾಸಿಸುವರಿಗೂ ಮನೆಗೆ ಬರುವ ಅತಿಥಿಗಳಿಗೂ ತೃಪ್ತಿ ಸಮಾಧಾನವಿರುತ್ತದೆ. ಮನೆಯಲ್ಲಿ ಮುಖ್ಯಸ್ಥಾನವಿರುವುದು ಅಡುಗೆ ಮನೆಗೆ. ಆಹಾರಗಳನ್ನು ಇಲ್ಲಿ ತಯಾರಿಸುವುದರಿಂದ ಈ ಭಾಗಕ್ಕೆ ಹೆಚ್ಚಿನ ಗಮನವನ್ನು ನೀಡಬೇಕು.
ಕೀಟಗಳ ಉಪಟಳಗಳನ್ನು ನಿಯಂತ್ರಿಸುವುದು, ಅಡುಗೆ ಕೋಣೆ ವಾಸನೆ ಬರದಂತೆ ನೋಡಿಕೊಳ್ಳುವುದು ಇದರಲ್ಲಿ ಮುಖ್ಯವಾದುದಾಗಿದೆ. ಆಹಾರ ತಯಾರಿಸಿದ ನಂತರ ಅಡುಗೆ ಮನೆಯನ್ನು ಸ್ವಚ್ಛ ಮಾಡುವ ಕ್ರಿಯೆಯಲ್ಲಿ ನಾವು ಹಿಂದೇಟು ಹಾಕಬಾರದು. ಅಂತೆಯೇ ಅಲ್ಲಿ ಹೊರಸೂಸುವ ವಾಸನೆಯನ್ನು ನಿಗ್ರಹಿಸುವಂತಹ ಕೆಲವೊಂದು ಸ್ವಚ್ಛತಾ ಕಾರ್ಯಗಳನ್ನು ನಾವು ಹಮ್ಮಿಕೊಳ್ಳಬೇಕು. ಇಂದಿನ ಲೇಖನದಲ್ಲಿ ಅಡುಗೆ ಮನೆಯಲ್ಲಿ ಸುವಾಸನೆಯನ್ನು ಪಸರಿಸುವುದು ಹೇಗೆ ಮತ್ತು ಅದಕ್ಕಾಗಿ ನಾವು ಕಂಡುಕೊಳ್ಳಬೇಕಾದ ಮಾರ್ಗೋಪಾಯಗಳೇನು ಎಂಬುದನ್ನು ಕಂಡುಕೊಳ್ಳೋಣ. ಅಡುಗೆ ಕೋಣೆಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ
ಕಿತ್ತಳೆ ಸಿಪ್ಪೆಯನ್ನು ಬಳಸಿ ದುರ್ವಾಸನೆಯನ್ನು ಹೋಗಲಾಡಿಸಬಹುದಾಗಿದೆ. ಕುದಿಯುವ ನೀರಿನಲ್ಲಿ ಕಿತ್ತಳೆ ಸಿಪ್ಪೆಯೊಂದಿಗೆ ದಾಲ್ಚಿನ್ನಿ ಮತ್ತು ಏಲಕ್ಕಿಯನ್ನು ಹಾಕಿರಿ ಇದು ಮಾಡುವ ಮ್ಯಾಜಿಕ್ ಅನ್ನು ನೀವು ನೋಡಿಯೇ ತಿಳಿದುಕೊಳ್ಳಬೇಕು. ಇಂತಹುದೇ ಕೆಲವೊಂದು ಸಲಹೆಗಳನ್ನು ಇಂದಿನ ಲೇಖನದಲ್ಲಿ ನಾವು ನೀಡಿದ್ದು ಅದರತ್ತ ದೃಷ್ಟಿ ಹಾಯಿಸಿ...

ಕಿತ್ತಳೆ ಸಿಪ್ಪೆ ನೀರು
ಪಾತ್ರೆಯಲ್ಲಿ ಒಂದು ಕಪ್‌ನಷ್ಟು ನೀರು ಹಾಕಿ. ನೀರು ಕುದಿಯುತ್ತಿರುವಂತೆ ಇದಕ್ಕೆ ಕಿತ್ತಳೆ ಸಿಪ್ಪೆಯನ್ನು ಸೇರಿಸಿ. ಎರಡು ನಿಮಷಗಳಷ್ಟು ಸಮಯ ಇದು ಕುದಿಯಲಿ. ನಂತರ ದಾಲ್ಚಿನ್ನಿಯನ್ನು ಸೇರಿಸಿ ಜೊತೆಗೆ ಏಲಕ್ಕಿ ಸೇರಿಸಲು ಮರೆಯದಿರಿ.

ಬೇಕಿಂಗ್ ಸೋಡಾದ ಕಮಾಲು
ಅಡುಗೆ ಮಾಡುವಾಗ ಬೇಕಿಂಗ್ ಸೋಡಾ (ಅಡುಗೆ ಸೋಡಾ) ವನ್ನು ಬಳಸುವುದೂ ಉತ್ತಮ ಉಪಾಯವಾಗಿದೆ. ಗಾಳಿಯಲ್ಲಿರುವ ಆಸಿಡ್ ಅನ್ನು ಬೇಕಿಂಗ್ ಸೋಡಾ ಹೀರಿಕೊಳ್ಳುತ್ತದೆ ಇದರಿಂದ ಅಡುಗೆ ಮಾಡುವಾಗ ಹೊರಬರುವ ವಾಸನೆಯನ್ನು ಇದು ನಿಗ್ರಹಿಸುತ್ತದೆ.

ಲಿಂಬೆ ನೀರು
ಫ್ರಿಡ್ಸ್ ಕೆಟ್ಟ ವಾಸನೆಯನ್ನು ಬೀರುತ್ತಿದೆ ಎಂದಾದಲ್ಲಿ ಲಿಂಬೆ ಬೆರೆತ ನೀರನ್ನು ಫ್ರಿಡ್ಜ್‌ನಲ್ಲಿರಿಸಿ. ಹತ್ತು ನಿಮಿಷಗಳ ಕಾಲ ಈ ಪ್ರಯೋಗವನ್ನು ಮಾಡಿ. ನಿಮ್ಮ ಫ್ರಿಡ್ಜ್‌ನಿಂದ ಹೊರಸೂಸುವ ಕೆಟ್ಟ ವಾಸನೆ ಮಾಯವಾಗುತ್ತದೆ.

ಸಕ್ಕರೆ
ಮೀನು ತುಂಡರಿಸಿದ ನಂತರ ನಿಮ್ಮ ಕೈಬೆರಳುಗಳಿಂದ ವಾಸನೆ ಬರುತ್ತಿದೆಯೇ? ಇದಕ್ಕಿರುವ ಒಂದೇ ಪರಿಹಾರವೆಂದರೆ ನಿಮ್ಮ ಹಸ್ತಗಳನ್ನು ಸಕ್ಕರೆಯಿಂದ ಮಸಾಜ್ ಮಾಡಿಕೊಳ್ಳುವುದಾಗಿದೆ ತದನಂತರ ಸೋಪಿನ ಬಳಕೆಯನ್ನು ಮಾಡಿ. ನಿಮ್ಮ ಹಸ್ತಗಳಿಂದ ಬರುವ ಮೀನಿನ ವಾಸನೆಯನ್ನು ನಿಗ್ರಹಿಸಲು ಸಕ್ಕರೆ ಸಹಕಾರಿ.

ವಾಸನೆ ಹೋಗಲಾಡಿಸಲು ವಿನೇಗರ್ ಬಳಕೆ
ಅಡುಗೆ ಮನೆಯಿಂದ ವಾಸನೆಯನ್ನು ಹೋಗಲಾಡಿಸಲು ವಿನೇಗರ್ ನಿಮಗೆ ಸಹಕಾರಿಯಾಗಲಿದೆ. ಬಿಳಿ ವಿನೇಗರ್ ಅನ್ನು ಅಡುಗೆ ಮನೆಯಲ್ಲಿ ಇರಿಸಿಕೊಳ್ಳಿ. ಇದಕ್ಕೆ ತಾಜಾ ದಾಲ್ಚಿನ್ನಿಯನ್ನು ಸೇರಿಸಿ. ಇವೆರಡೂ ನಿಮ್ಮ ಅಡುಗೆ ಮನೆಯ ವಾಸನೆಯನ್ನು ನಿಯಂತ್ರಿಸಲು ಪರಿಣಾಮಕಾರಿ ಪರಿಕರಗಳಾಗಿವೆ.



Click it and Unblock the Notifications
