Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಕಾಫಿ ಟೇಬಲ್: ಅಂದದ ಮನೆಗೆ ಸುಂದರ ಕೈಗನ್ನಡಿ
ಮನೆಯು ಅಂದವಾಗಿ ಕಾಣುವುದು ಅಲ್ಲಿ ನೀವು ವಸ್ತುಗಳನ್ನು ಒಪ್ಪ ಓರಣವಾಗಿ ಜೋಡಿಸಿದಾಗ ಮಾತ್ರ. ಮನೆಯಲ್ಲಿ ಬಳಸುವ ಪ್ರತಿಯೊಂದು ವಸ್ತುಗಳನ್ನು ಕಾಳಜಿಯಿಂದ ಜಾಗರೂಕರಾಗಿ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಮನೆ ಕಳೆಕಳೆಯಾಗಿ ಇದ್ದಲ್ಲಿ ಅಲ್ಲಿ ವಾಸಿಸುವವರಿಗೂ ನೆಮ್ಮದಿ ಅಂತೆಯೇ ಮನೆಗೆ ಭೇಟಿ ನೀಡುವ ಬಂಧು ಮಿತ್ರರೂ ಖುಷಿಯಿಂದ ಇರುತ್ತಾರೆ. ಅಂತೆಯೇ ಮನೆಯನ್ನು ಮನೆಯವರನ್ನೂ ಅವರು ಸದಾ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ.

ಮನೆಯಲ್ಲಿರುವ ಪೀಠೋಪಕರಣಗಳ ಉಸ್ತುವಾರಿಗೆ ನೀವು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಅದರಲ್ಲೂ ನೀವು ಆರಾಮವಾಗಿ ಕುಳಿತುಕೊಂಡು ಪುಸ್ತಕಗಳನ್ನು ಓದುತ್ತಾ ಕಾಫಿ ಕುಡಿಯುವ ಕಾಫಿ ಟೇಬಲ್ ಅನ್ನು ಶುಭ್ರವಾಗಿ ಇರಿಸಿಕೊಳ್ಳಬೇಕು ಅಂತೆಯೇ ಅದನ್ನು ಅಂದವಾಗಿ ಜೋಡಿಸಿಟ್ಟುಕೊಳ್ಳುವುದೂ ಮುಖ್ಯವಾಗಿದೆ. ಅಂದದ ಮನೆಗೆ ಕೈಗನ್ನಡಿ ಎಂಬಂತೆ ಕಾಫಿ ಟೇಬಲ್ ಅನ್ನು ಸುಂದರವಾಗಿ ಜೋಡಿಸಿಟ್ಟು ಕೊಳ್ಳುವುದೂ ಒಂದು ಕಲೆಯಾಗಿದೆ.
ಪುಸ್ತಕಗಳನ್ನೂ ಸುಂದರವಾಗಿ ಕಾಫಿ ಟೇಬಲ್ ಮೇಲೆ ಜೋಡಿಸಿಡಬಹುದಾದ್ದರಿಂದ ಕಾಫಿ ಟೇಬಲ್ ಅಂದವನ್ನು ಇನ್ನಷ್ಟು ವರ್ಧಿಸಬಹುದಾಗಿದೆ. ಇಂದಿನ ಲೇಖನದಲ್ಲಿ ಕಾಫಿ ಟೇಬಲ್ ಅನ್ನು ಸುಂದರವಾಗಿ ಜೋಡಿಸಿಡುವುದು ಹೇಗೆ ಎಂಬುದನ್ನು ಕುರಿತು ಕೆಲವೊಂದು ಟಿಪ್ಸ್‌ಗಳನ್ನು ನೀಡಲಿದ್ದೇವೆ. ಖಂಡಿತ ಈ ಟಿಪ್ಸ್‌ಗಳು ನಿಮಗೆ ಹೆಚ್ಚು ಸಹಕಾರಿ ಎಂದೆನಿಸಲಿದೆ. ಹಾಗಿದ್ದರೆ ಅದನ್ನು ತಿಳಿಯುವ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಇಲ್ಲಿದೆ ಆ ಸಲಹೆಗಳು
ಕ್ಯಾಂಡಲ್ ಸ್ಟ್ಯಾಂಡ್ಸ್ ಮತ್ತು ಟ್ರೇ
ಮಾರುಕಟ್ಟೆಯಲ್ಲಿ ವಿಧವಿಧದ ಕ್ಯಾಂಡಲ್‌ಗಳು ಲಭ್ಯವಿದ್ದು ಇದನ್ನು ಬಳಸಿ ಕಾಫಿ ಟೇಬಲ್ ಅನ್ನು ಆಕರ್ಷಕವಾಗಿ ಇರಿಸಿಕೊಳ್ಳಬಹುದಾಗಿದೆ ಸಂಜೆಯ ಸಮಯದಲ್ಲಿ ಇದು ಇನ್ನಷ್ಟು ಸುಂದರತೆಯನ್ನು ನಿಮ್ಮ ಕಾಫಿ ಸೇವನೆಗೆ ಇದು ಪೂರೈಸಲಿದೆ. ಹೂಗಳು ಮತ್ತು ಕರಕುಶಲ ವಸ್ತುಗಳಿಂದ ಇನ್ನಷ್ಟು ಸುಂದರವಾಗಿ ಕಾಫಿ ಟೇಬಲ್ ಅನ್ನು ಜೋಡಿಸಬಹುದಾಗಿದೆ.
ನಿಮ್ ಆಯ್ಕೆಯ ಪಾನೀಯಗಳು ಮತ್ತು ಬಾರ್
ನಿಮ್ಮ ಟೇಬಲ್ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಇಲ್ಲಿ ಸುಲಭವಾಗಿ ನಿಮಗೆ ಟ್ರೇಯನ್ನು ಇರಿಸಬಹುದಾಗಿದೆ ಟೇಬಲ್ ಅನ್ನು ಬಳಸಿ ಸಣ್ಣ ಬಾರ್ ವಾತಾವರಣವನ್ನು ನಿಮಗೆ ಸೃಷ್ಟಿಸಿಕೊಳ್ಳಬಹುದಾಗಿದೆ. ನಿಮ್ಮ ಮೆಚ್ಚಿನ ಮದ್ಯ ಮತ್ತು ಜೋಡಿ ಗ್ಲಾಸ್‌ಗಳನ್ನು ಹೊಂದಿರಬೇಕು, ಓಪನರ್ ಐಸ್ ಟಬ್ ಇಷ್ಟಿದ್ದರೆ ಆಯಿತು ನೀವು ಪಾರ್ಟಿಗೆ ರೆಡಿ!
ಕಾಫಿ ಟೇಬಲ್ ಪುಸ್ತಕಗಳು
ಪುಸ್ತಕಗಳಿಲ್ಲದೆ ಕಾಫಿ ಟೇಬಲ್‌ಗೆ ಯಾವುದೇ ಕಳೆ ಇರುವುದಿಲ್ಲ. ಆದ್ದರಿಂದಲೇ ಪುಸ್ತಕಗಳನ್ನು ಇದರ ಮೇಲೆ ಅಂದವಾಗಿ ಜೋಡಿಸಿಟ್ಟುಕೊಳ್ಳಿ. ಒಪ್ಪ ಓರಣವಾಗಿ ಪುಸ್ತಕಗಳನ್ನು ನೀವು ಮೇಜಿನ ಮೇಲೆ ಜೋಡಿಸಿಡುವುದು ಮೇಜಿನ ಅಂದವನ್ನು ಇಮ್ಮಡಿಸುತ್ತದೆ. ಅಂತೆಯೇ ನಿಮ್ಮ ಮೆಚ್ಚಿನ ಪುಸ್ತಕವೊಂದನ್ನು ಎದುರಲ್ಲಿಡಿ ಇದರಿಂದ ನಿಮ್ಮ ಓದುವ ಆಸಕ್ತಿ ಎಲ್ಲರಿಗೂ ಇಷ್ಟವಾಗುತ್ತದೆ ಇದರೊಂದಿಗೆ ನಿಮ್ಮ ಆಯ್ಕೆಗೂ ಎಲ್ಲರಿಂದಲೂ ಮನ್ನಣೆ ದೊರಕುತ್ತದೆ.
ಸಣ್ಣ ಬಾಕ್ಸ್‌ಗಳು
ಸಣ್ಣ ಅಂದದ ಪೆಟ್ಟಿಗೆಗಳಲ್ಲಿ ನೀವು ರಿಮೋಟ್ ಕಂಟ್ರೋಲ್, ತುತ್ತು ಚಿಕಿತ್ಸಾ ಪರಿಕರಗಳು, ಸ್ಪೆಕ್ಟೇಕಲ್ಸ್, ಪೆನ್ನು ಮತ್ತು ಪುಸ್ತಕ, ನ್ಯಾಪ್‌ಕಿನ್ಸ್, ಕೋಸ್ಟರ್ಸ್ ಮುಂತಾದವುಗಳನ್ನು ಒಳಗೊಂಡಿರಲಿ. ಇದರಿಂದ ಈ ವಸ್ತುಗಳನ್ನು ಎಲ್ಲೆಂದರಲ್ಲಿ ಹರಡದಂತೆ ಜೋಪಾನವಾಗಿ ವ್ಯವಸ್ಥಿತವಾಗಿ ಇರಿಸಿಕೊಳ್ಳಬಹುದು.
ಫ್ಲವರ್ ವಾಸ್
ಕೊಠಡಿಯ ಗಾತ್ರವನ್ನು ಆಧರಿಸಿ ಫ್ಲವರ್ ವಾಸ್ ಆಯ್ಕೆಯನ್ನು ಮಾಡಿ. ತೀರಾ ದೊಡ್ಡದು ಇಲ್ಲವೇ ತೀರಾ ಸಣ್ಣದು ಬೇಡ. ಸಾಧ್ಯವಾದಲ್ಲಿ ತಾಜಾ ಹೂಗಳು ಕೊಠಡಿಗೆ ಸುಗಂಧವನ್ನು ಪಸರಿಸುವುದರಿಂದ ಆದಷ್ಟು ಇವುಗಳನ್ನೇ ವಾಜ್‌ನಲ್ಲಿರಿಸಿ. ಸಾಧ್ಯವಿಲ್ಲದಿದ್ದಲ್ಲಿ ಕೃತಕ ಹೂಗಳನ್ನು ವಾಜ್‌ನಲ್ಲಿ ಇರಿಸಬಹುದಾಗಿದೆ. ಈ ಹೂಗಳು ಬೇರೆ ಬೇರೆ ಬಣ್ಣಗಳಲ್ಲಿ ವೈವಿಧ್ಯಮಯವಾಗಿ ನಿಮಗೆ ಲಭ್ಯವಿದೆ.



Click it and Unblock the Notifications

