Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಹಣ್ಣನ್ನು ಆಕ್ರಮಿಸುವ ನೊಣಗಳಿಂದ ಸಂರಕ್ಷಣೆ ಹೇಗೆ?
ನೀವು ಸೇವಿಸುವ ಆಹಾರಗಳನ್ನು ಎಷ್ಟೇ ತಾಜಾತನದಿಂದ ಕಾಪಾಡಿದರೂ ಅವುಗಳನ್ನು ಮುತ್ತುವ ಕ್ರಿಮಿಕೀಟಗಳು ಮತ್ತು ನೊಣಗಳಿಂದ ರಕ್ಷಣೆಗಳನ್ನು ಪಡೆದುಕೊಳ್ಳಲು ನೀವು ಹರಸಾಹಸವನ್ನೇ ಪಡುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ.
ಇವುಗಳು ಹಣ್ಣು ಮತ್ತು ತರಕಾರಿಗಳಿಗೆ ಆಕರ್ಷಿತವಾಗಿ ಬಂದು ಅವುಗಳನ್ನು ಆಕ್ರಮಿಸಿಕೊಂಡರೂ ನಾವು ಸೇವಿಸುವ ಇದೇ ಹಣ್ಣು ತರಕಾರಿಗಳು ವಿಷಕಾರಿಯಾಗಿ ಪರಿಣಮಿಸಬಹುದಾಗಿದೆ. ಇವುಗಳು ಎಷ್ಟು ಬೇಗನೇ ಬಂದು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಹೋಗುತ್ತವೆ ಎಂದರೆ ನಮಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ. ನೊಣಗಳನ್ನು ಹೋಗಲಾಡಿಸಲು 16 ಮನೆಮದ್ದುಗಳು

ಇವುಗಳಿಗೆ ರಾಸಾಯನಿಕಗಳು ಬಿಸಿ ಮುಟ್ಟಿಸುತ್ತವೆಯಾದರೂ ಇದರಿಂದ ನಮ್ಮ ಆರೋಗ್ಯ ಇನ್ನಷ್ಟು ಹದಗೆಡುವುದಂತೂ
ಗ್ಯಾರಂಟಿ. ಹಾಗಿದ್ದರೆ ಮನೆಯಲ್ಲೇ ದೊರೆಯುವ ಸಾಮಾಗ್ರಿಗಳನ್ನು ಬಳಸಿಕೊಂಡು ಇಂತಹ ನೊಣಗಳ ಮತ್ತು ಕೀಟಗಳ ಮೇಲೆ ನಿಯಂತ್ರಣವನ್ನು ಸಾಧಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಈ ಪರಿಹಾರ ಕ್ರಮಗಳು ಅಷ್ಟೊಂದು ಖರ್ಚನ್ನು ಉಂಟುಮಾಡದೇ ಮಿತದರದಲ್ಲಿ ನಿಮಗೆ ಸಹಕಾರವನ್ನು ನೀಡಲಿದೆ.
ಆಪಲ್ ಸೀಡರ್ ವಿನೇಗರ್
ಹಣ್ಣನ್ನು ಆಕ್ರಮಿಸುವ ನೊಣಗಳಿಗೆ ಇದು ಪರಿಹಾರವನ್ನೊದಗಿಸುತ್ತದೆ. ಜಾರ್ಗೆ ಆಪಲ್ ಸೀಡರ್ ವಿನೇಗರ್ ಅನ್ನು ಹಾಕಿ. ಇದು ಪರಿಮಳ ಬೀರಲು ಇದನ್ನು ಬಿಸಿ ಮಾಡಿಕೊಳ್ಳಿ. ಪಾತ್ರೆ ತೊಳೆಯುವ ಸೋಪ್ ಅನ್ನು ಇದಕ್ಕೆ ಅದ್ದಿಕೊಳ್ಳಿ. ಇದು ನೊಣಗಳನ್ನು ಕೊಲ್ಲುತ್ತದೆ. ಪ್ಲಾಸ್ಟಿಕ್ನಿಂದ ಇದನ್ನು ಸುತ್ತಿ ಮತ್ತು ಫೋರ್ಕ್ ಬಳಸಿ ಸಣ್ಣ ತೂತು ಮಾಡಿ ಇದರಿಂದ ನೊಣ ಒಳಪ್ರವೇಶಿಸುತ್ತದೆ.
ಕೊಳೆತ ಹಣ್ಣುಗಳು
ಕೊಳೆತ ಹಣ್ಣುಗಳನ್ನು ಸೇವಿಸಲು ಸಾಧ್ಯವಿಲ್ಲ ಆದರೆ ಇವುಗಳನ್ನು ನೊಣ ಹಿಡಿಯಲು ಬಳಸಿಕೊಳ್ಳಬಹುದಾಗಿದೆ. ಇವುಗಳನ್ನು ತುಂಡುಗಳನ್ನಾಗಿ ಮಾಡಿ ಮತ್ತು ಮಾಸನ್ಗೆ ಹಾಕಿ. ಪ್ಲಾಸ್ಟಿಕ್ನಿಂದ ಸುತ್ತಿ ಮತ್ತು ಅದಕ್ಕೆ ತೂತು ಮಾಡಿ. ಸ್ವಲ್ಪ ಹೊತ್ತಿನ ಬಳಿಕ ನೊಣಗಳನ್ನು ಇಲ್ಲಿ ಕಾಣುತ್ತೀರಿ. ನಂತರ ಸೋಪು ನೀರಿನಲ್ಲಿ ಇದನ್ನು ಮುಳುಗಿಸಿ.
ಹಾಲು, ಸಕ್ಕರೆ ಮತ್ತು ಕಾಳುಮೆಣಸಿನ ದ್ರಾವಣ
ಹಣ್ಣುಗಳ ನೊಣಗಳಿಂದ ಪರಿಹಾರವನ್ನು ಕಂಡುಕೊಳ್ಳಲು ನೈಸರ್ಗಿಕ ವಿಧಾನ ನಿಮಗೆ ಬೇಕಾದಲ್ಲಿ ಇಲ್ಲಿದೆ ಪರಿಹಾರ. ಹಾಲು, ಹುಡಿಮಾಡಿದ ಕಾಳುಮೆಣಸು ಮತ್ತು ಸಕ್ಕರೆಯನ್ನು ಬಳಸಿ ದ್ರಾವಣ ಸಿದ್ಧಪಡಿಸಿ. ಮಂದ ಉರಿಯಲ್ಲಿ 10-12 ನಿಮಿಷ ಬಿಸಿ ಮಾಡಿ. ಹೆಚ್ಚಿನ ನೊಣಗಳನ್ನು ಕಾಣುವ ಸ್ಥಳದಲ್ಲಿ ಈ ದ್ರಾವಣವನ್ನು ಇರಿಸಿ. ಸ್ವಲ್ಪ ಸಮಯದಲ್ಲೇ ನೊಣಗಳ ಹಿಂಡನ್ನೇ ಈ ದ್ರಾವಣದಲ್ಲಿ ಕಾಣುತ್ತೀರಿ. ನಂತರ ಅದನ್ನು ತೊಳೆದುಕೊಳ್ಳಿ.
ಕೆಂಪು ವೈನ್
ಆಪಲ್ ಸೀಡರ್ ವಿನೇಗರ್ ಅನ್ನು ನೀವು ಹೇಗೆ ಬಳಸಿಕೊಂಡಿದ್ದಿರೋ ಅಂತೆಯೇ ಕೆಂಪು ವೈನ್ ಅನ್ನು ನೊಣಗಳ ನಾಶಕ್ಕಾಗಿ ಬಳಸಿ. ಕೆಂಪು ವೈನ್ನ ಸುವಾಸನೆ ನೊಣಗಳಿಗೆ ಇಷ್ಟವಾಗುತ್ತದೆ. ನೀರು ಮತ್ತು ವೈನ್ ಅನ್ನು ಬಳಸಿಕೊಂಡು ದ್ರಾವಣವನ್ನು ಸಿದ್ಧಪಡಿಸಿ ಮತ್ತು ಜಾರ್ಗೆ ಇದನ್ನು ಹಾಕಿ. ಸತ್ತ ನೊಣಗಳನ್ನು ನೀವು ಜಾರ್ನಲ್ಲಿ ಕಂಡೊಡನೆ ಪಾತ್ರೆಯನ್ನು ನೀರಿನಿಂದ ತೊಳೆದುಕೊಳ್ಳಿ.
ಲಿಂಬೆ ಸುವಾಸನೆಯ ಸೋಪು
ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಇದು ಸರಳ ವಿಧಾನವಾಗಿದೆ. ಸೋಪಿನ ಸುವಾಸನೆಯು ಹೆಚ್ಚು ಪ್ರಮಾಣದಲ್ಲಿ ನೊಣಗಳನ್ನು ಆಕರ್ಷಿಸುತ್ತದೆ. ಸೋಪಿನ ದ್ರಾವಣವನ್ನು ಮಾಡಿಕೊಳ್ಳಿ ಮತ್ತು ಸ್ಪ್ರೇ ಬಾಟಲಿಗೆ ಇದನ್ನು ಹಾಕಿ. ನಿಮ್ಮ ಮನೆಯ ಮೂಲೆಗೂ ಇದನ್ನು ಸ್ಪ್ರೇ ಮಾಡಿ.
ವೆಜಿಟೇಬಲ್ ಆಯಿಲ್
ನಿಮ್ಮ ಅಡುಗೆ ಮನೆಯ ಸಿಂಕ್ ಮೂಲೆಯಿಂದ ನೊಣಗಳು ಬರುತ್ತವೆ ಎಂದಾದಲ್ಲಿ ವೆಜಿಟೇಬಲ್ ಆಯಿಲ್ ನಿಮಗೆ
ಸಹಕಾರಿಯಾಗಿದೆ. ತೂತಿಗೆ 1/2 ಕಪ್ನಷ್ಟು ವೆಜಿಟೇಬಲ್ ಆಯಿಲ್ ಅನ್ನು ಸುರಿಯಿರಿ ಮತ್ತು ಟೇಪ್ನಿಂದ ಇದನ್ನು ಕವರ್ ಮಾಡಿ. ಟೇಪ್ನಲ್ಲಿ ಸತ್ತಿರುವ ನೊಣಗಳನ್ನು ನೀವು ಕಾಣುತ್ತೀರಿ. ಇದೇ ಕ್ರಿಯೆಯನ್ನು ಮುಂದುವರಿಸಿ. ಹಣ್ಣಿನ ನೊಣಗಳಿಂದ ಸಂರಕ್ಷಣೆಯನ್ನು ಪಡೆದುಕೊಳ್ಳಲು ಇವುಗಳು ಸುರಕ್ಷಿತ ವಿಧಾನಗಳಾಗಿವೆ ಅಲ್ಲವೇ? ಇವುಗಳನ್ನು ಪ್ರಯೋಗಿಸುವ ಮೂಲಕ ನಿಮ್ಮ ಸುತ್ತಲಿನ ಪರಿಸರವನ್ನು ನೀವು ಸ್ವಚ್ಛವಾಗಿರಿಸಬಹುದು ಅಲ್ಲವೇ?



Click it and Unblock the Notifications















