ಕಡಿಮೆ ಖರ್ಚಿನಲ್ಲಿ, ರೆಡಿ ಮಾಡಿ ಆಕರ್ಷಕ ದೇವರ ಮಂಟಪ...

By Jaya subramanya

ಮನೆ ಎಂದರೆ ಅಲ್ಲಿ ದೇವರ ಮನೆ ಅತ್ಯಗತ್ಯ. ಮನೆಗೆ ಒಂದು ವಿನೂತನ ಕಳೆಯನ್ನು ನೀಡುವ ದೇವರ ಮನೆಯಿಂದ ಮನೆಯ ಶುದ್ಧತೆ ಹೆಚ್ಚಾಗಿ, ಅಲ್ಲಿ ದೈವಿಕ ವಾತಾವರಣ ಏರ್ಪಡುತ್ತದೆ. ನೀವು ಪೂಜಿಸುವ ಭಗವಂತ ನಿಮ್ಮ ಮನದಲ್ಲಿದ್ದರೂ ನಿಮ್ಮ ಮನೆಯಲ್ಲಿರುವುದರಿಂದ ಮನೆಯ ಸುಖ ಶಾಂತಿ ನೆಮ್ಮದಿ ಇಮ್ಮಡಿಯಾಗುತ್ತದೆ.

ದೇವರ ಮನೆಯಲ್ಲಿ ದೇವರನ್ನಿರಿಸಲು ದೇವರ ಮಂಟಪ ಬೇಕೇ ಬೇಕು ಅಲ್ಲವೇ? ಆದರೆ ಈ ದೇವರ ಮಂಟಪ ನಿಮ್ಮಿಷ್ಟದಂತೆಯೇ ಇರಬೇಕು ನಿಮ್ಮ ಅಭಿರುಚಿಗೆ ತಕ್ಕಂತೆ ಇರಬೇಕು ಎಂದು ನೀವು ಬಯಸುವುದು ತಪ್ಪಲ್ಲ. ಬನ್ನಿ ಇಂದಿನ ಬೆಲೆ ಏರಿಕೆ ಯುಗದಲ್ಲಿ ಎಲ್ಲವನ್ನೂ ಹಣದಿಂದಲೇ ಅಳೆಯುವಂತಹ ಸ್ಥಿತಿ ಬಂದೊದಗಿದೆ. ಒಂದಕ್ಕೆರಡರಷ್ಟು ಕೇಳುವ ಜಮಾನೇ ಸೃಷ್ಟಿಯಾಗಿಬಿಟ್ಟಿದೆ. ಈ ಸಂದರ್ಭದಲ್ಲಿ ನಾವು ನಮ್ಮ ಆಸೆಗಳನ್ನು ಬದಿಗೊತ್ತಿ ಕಡಿಮೆ ಖರ್ಚಿನ ಕಡೆಗೆ ಮುಖಮಾಡುತ್ತೇವೆ.

Easy Steps To Build A Puja Mandap

ಇಂತಹುದೇ ತೀರ್ಮಾನವನ್ನು ನೀವು ದೇವರ ಮಂಟಪದ ವಿಚಾರದಲ್ಲೂ ತೆಗೆದುಕೊಂಡಿರುತ್ತೀರಿ ಅಲ್ಲವೇ? ಮಂಟಪಕ್ಕೆ ಬೇಕಾಗುವ ಸಾಮಾಗ್ರಿಗಳು, ಅದನ್ನು ಹೊಂದಿಸುವ ಸಮಯ, ನಂತರ ಅದನ್ನು ತಯಾರಿಸಲು ವ್ಯಕ್ತಿಗೆ ನೀಡುವ ಹಣ ಇದೆಲ್ಲಾ ನಿಮ್ಮ ಬಜೆಟ್‎ಗೆ ತೀವ್ರ ಪೆಟ್ಟನ್ನು ನೀಡಬಹುದು. ಬನ್ನಿ ಇಂದಿನ ಲೇಖನದಲ್ಲಿ ನಿಮ್ಮ ಇಷ್ಟದ ದೇವರ ಮಂಟಪವನ್ನು ನೀವೇ ನಿರ್ಮಿಸುವುದು ಹೇಗೆ ಎಂಬುದನ್ನು ಕುರಿತು ಸಲಹೆಗಳನ್ನು ನಾವು ನೀಡುತ್ತಿದ್ದೇವೆ.ನಿಮ್ಮ ದೇವರ ಮಂಟಪ ನಿಮ್ಮಿಷ್ಟದಂತೆಯೇ ನೀವೇ ನಿರ್ಮಾಣ ಮಾಡುವ ಹಾಗಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನೊಂದು ಇರಲಿಕ್ಕಿಲ್ಲ ಅಲ್ಲವೇ?

ಇದಕ್ಕೆ ನೀವೇನು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಅತಿ ಕಡಿಮೆ ಸಂಪನ್ಮೂಲಗಳಲ್ಲೇ ಸುಸಜ್ಜಿತ ದೇವರ ಮಂಟಪದ ನಿರ್ಮಾಣವನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಏನೂ ಯೋಚನೆ ಮಾಡದೇ ದೇವರ ಮಂಟಪದ ತಯಾರಿಗೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ.

ಗಣೇಶ ಮಂಟಪಕ್ಕಾಗಿ ನಿಮಗೆ ಬೇಕಾಗಿರುವ ಸಾಮಾಗ್ರಿಗಳು
ಕರ್ಟನ್, ಹೆಚ್ಚುವರಿ ಕರ್ಟನ್ ಅಥವಾ ಕಾರ್ಡ್‎ಬೋರ್ಡ್, ಟೇಪ್, ಥರ್ಮಾಕೋಲ್, ಫೆವಿಕಾಲ್ ಅಥವಾ ಗ್ಲು, ಟಿಶ್ಯೂ ಪೇಪರ್,ಫೆವಿಕ್ರಿಲ್ ಆಕ್ರಿಲಿಕ್ ಕಲರ್ಸ್, ವಾರ್ನಿಶ್, ಕಾಟನ್ ಸ್ಟ್ರಿಂಗ್, ಬೆಲ್ಸ್ ಮತ್ತು ಓಮ್.

ಹಂತ:1 ಮರದ ಕಾರ್ಟನ್ ಬಾಕ್ಸ್ ಅನ್ನು ತೆಗೆದುಕೊಳ್ಳಿ. ರಂಗೋಲಿ ಆಕಾರವನ್ನು ಬರೆದುಕೊಳ್ಳಿ ಅಥವಾ ಎರಡೂ ಬದಿಗಳಲ್ಲಿ ಮಂದಿರ ಆಕಾರವನ್ನು ಚಿತ್ರಿಸಿಕೊಳ್ಳಿ ನಂತರ ಎರಡೂ ಬದಿಗಳನ್ನು ಕತ್ತರಿಸಿ.

ಹಂತ:2 ಬಾಕ್ಸ್‎ನ ಬದಿಗಳಿಂದ ಎರಡು ಮಡಿಕೆಗಳನ್ನು ಅಥವಾ ಮುಚ್ಚಳ‎ಗಳನ್ನು ತೆಗೆದುಹಾಕಿ.

ಹಂತ:3 ಇದೀಗ ಬಾಕ್ಸ್‎ನ ಬದಿಯ ಪ್ಯಾನೆಲ್‎ಗಳಲ್ಲಿ ಬೆಲ್ ಆಕಾರವನ್ನು ಚಿತ್ರಿಸಿ ಮತ್ತು ಅದನ್ನು ಕತ್ತರಿಸಿಕೊಳ್ಳಿ.

ಹಂತ:4 ನೀವು ಈ ಹಿಂದೆ ಕತ್ತರಿಸಿದ ಸಣ್ಣ ಮಡಿಕೆಗಳನ್ನು ಬಳಸಿಕೊಂಡು, ಇನ್ನೊಂದು ವಿನ್ಯಾಸವನ್ನು ಬರೆದುಕೊಳ್ಳಿ ಹಾಗೂ ಮಂಟಪದ ಛಾವಣಿಯಲ್ಲಿ ಅದನ್ನಿರಿಸಿ. ಮಂಟಪದ ಕಂಬವನ್ನು ಮಾಡಲು ಮತ್ತು ಅದು ನೇರವಾಗಿ ನಿಂತುಕೊಳ್ಳಲು ಥರ್ಮಾಕೋಲ್ ಅನ್ನು ಬಳಸಿ.

ಹಂತ:5 ಸಂಪೂರ್ಣ ಮಂಟಪದಲ್ಲಿ ಟಿಶ್ಯೂ ಪೇಪರ್ ಅನ್ನು ಅಂಟಿಸಿ ಮತ್ತು ಅದನ್ನು ಒಣಗಲು ಬಿಡಿ. ಒಣಗಿದ ನಂತರ ನಿಮ್ಮ ಇಷ್ಟದ ಬಣ್ಣದಿಂದ ಮಂಟಪಕ್ಕೆ ಪೈಂಟ್ ಮಾಡಿಕೊಳ್ಳಿ. ಪೇಂಟ್‎ನ ಪ್ರಥಮ ಕೋಟ್ ಬೇಸ್‌ ಬಣ್ಣವಾಗಿರಬೇಕು.

ಹಂತ:6 ಎರಡು ರಂಧ್ರಗಳಿಂದ ಗಣೇಶ ಮಂಟಪದ ಛಾವಣಿಯನ್ನು ಭೇದಿಸಿ ಹಾಗೂ ಬೆಲ್‎ಗಳೊಂದಿಗೆ ಹತ್ತಿಯ ಸ್ಟ್ರಿಂಗ್ ಅನ್ನು ಒಳತೂರಿಸಿ.

ಹಂತ:7 ಪೂಜಾ ಮಂಟಪದ ಛಾವಣಿಯ ಮೇಲೆ ಓಮ್ ಸ್ಟಿಕ್ಕರ್ ಅನ್ನು ಅಂಟಿಸಿ ಅಥವಾ ಚಿತ್ರಿಸಿ.

ಹಂತ:8 ಪೇಂಟ್‎ನಿಂದ ಮಂಟಪವನ್ನು ಕೋಟ್ ಅಥವಾ ವಾರ್ನಿಶ್ ಮಾಡಿ. ನೀವು ಮಾಡುತ್ತಿರುವ ಪೇಂಟ್ ಕೊನೆಯ ಟಚ್ ಅಪ್ ಆಗಿರಲಿ. ಈ ಹಂತಗಳನ್ನು ಬಳಸಿಕೊಂಡು ಸುಂದರವಾದ ಮಂಟಪವನ್ನು ನಿಮಗೆ ಸಿದ್ಧಪಡಿಸಿಕೊಳ್ಳಬಹುದಾಗಿದೆ.

Story first published: Monday, March 14, 2016, 23:16 [IST]
X
Desktop Bottom Promotion