Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಮನೆ ಸ್ವಚ್ಛವಾಗಿದ್ದರೆ ಸಾಲದು, ಇತ್ತ ಕಡೆಯೂ ಗಮನವಿರಲಿ...
ಮನೆಯನ್ನು ಸ್ವಚ್ಛಮಾಡುವುದರಿಂದ ಮನೆ ಸುಂದರವಾಗಿ ತೋರುವುದರ ಜೊತೆಗೆ ನಿಮ್ಮ ಕುಟುಂಬದ ಆರೋಗ್ಯಕ್ಕೂ ಉತ್ತಮವಾಗಿದೆ. ಮನೆಯ ಮೂಲೆ ಮೂಲೆಯನ್ನು ಸ್ವಚ್ಛಮಾಡುವುದರ ಜೊತೆಗೆ ಅಡುಗೆ ಮನೆಯ ಸ್ವಚ್ಛತೆಯ ಕಡೆಗೂ ನೀವು ಗಮನ ಹರಿಸಬೇಕು. ಅಡುಗೆ ಮನೆಯಲ್ಲಿ ನಿಮಗೆ ಗೊತ್ತಿಲ್ಲದ ರೀತಿಯಲ್ಲಿ ಕೊಳೆ ತುಂಬಿರುತ್ತದೆ. ಗ್ಯಾಸ್ ಸ್ಟವ್ ಮೇಲ್ಭಾಗದಲ್ಲಿ ಇಲ್ಲವೇ ಸಂದಿನಲ್ಲಿ ಅಂತೆಯೇ ಅಡುಗೆ ಕಟ್ಟೆಯ ಮೇಲೆ ಹೊಗೆ ಹೊರಗೆ ಹೋಗುವ ಎಕ್ಸಾಸ್ಟ್ ಫ್ಯಾನ್ ಮೇಲೆ ಧೂಳು ಕುಳಿತುಕೊಂಡಿರುತ್ತದೆ ಅಂತೆಯೇ ಇದು ಮನೆಯವರ ಆರೋಗ್ಯವನ್ನು ಹಾಳುಗೆಡವಬಹುದು.
ಅಡುಗೆ ಮನೆ ಮಾತ್ರವಲ್ಲದೆ ಧೂಳು ಕುಳಿತುಕೊಳ್ಳುವ ಹಲವಾರು ಮೂಲೆಗಳು ಮನೆಯಲ್ಲಿ ಲಭ್ಯವಾಗಿರುತ್ತದೆ. ಸ್ವಿಚ್ ಬೋರ್ಡ್, ಗೀಸರ್ ಎಕ್ಸಾಸ್ಟ್ ಫ್ಯಾನ್, ಟ್ಯೂಬ್ ಲೈಟ್ಗಳ ಮೇಲೆ ಹೀಗೆ ಧೂಳು ಆರಾಮವಾಗಿ ಈ ಸ್ಥಳಗಳಲ್ಲಿ ಕುಳಿತುಬಿಡುತ್ತದೆ. ಆದರೆ ಇವುಗಳನ್ನು ನಿತ್ಯವೂ ಸ್ವಚ್ಛಮಾಡುವುದು ಕೊಂಚ ಪ್ರಯಾಸದ ಕೆಲಸವಾದರೂ ವಾರಕ್ಕೊಮ್ಮೆಯಾದರೂ ಧೂಳು ಕೊಡವಿ ಶುದ್ಧವಾಗಿರಿಸಿ ಕೊಳ್ಳಬಹುದು.

ಇದರಿಂದ ಕಾಯಿಲೆ ಕಸಾಲೆಗಳನ್ನು ದೂರವಿಟ್ಟುಕೊಳ್ಳಬಹುದು. ನಿಮ್ಮ ಕಣ್ಣು ತಪ್ಪಿಸಿ ಈ ಧೂಳುಗಳು ವಸ್ತುಗಳ ಮೇಲ್ಭಾಗದಲ್ಲಿ ಕುಳಿತಿರುತ್ತದೆ. ಮನೆಯಲ್ಲಿರುವ ನಿಮಗೆ ಇದು ಸಾಧಾರಣ ವಿಷಯವಾಗಿದ್ದರೂ ಮನೆಗೆ ಬರುವ ಅತಿಥಿಗಳು ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವ ಸಂಭವ ಇರುವುದರಿಂದ ಈ ಭಾಗದ ಸ್ವಚ್ಛತೆಗೆ ಗಮನ ನೀಡಿ. ಹಾಗಿದ್ದರೆ ಇಂದಿನ ಲೇಖನದಲ್ಲಿ ನೀವು ಸ್ವಚ್ಛತೆಯನ್ನು ಮಾಡಬೇಕಾದ ಪ್ರಮುಖ ಸ್ಥಳಗಳ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದು ಈ ಲೇಖನವನ್ನು ಓದಿದ ನಂತರ ಈ ಸ್ಥಳಗಳಲ್ಲಿ ಕಣ್ಣುಹಾಯಿಸಿ. ಎಷ್ಟೊಂದು ಧೂಳು ಅಲ್ಲಿ ಜಮೆಯಾಗಿರುತ್ತದೆ ಎಂಬುದು ನಿಮ್ಮ ಗಮನಕ್ಕೆ ಬರಬಹುದು.
ಕಿಚನ್ ಕ್ಯಾಬಿನೇಟ್ಸ್ ಮತ್ತು ಅಡುಗೆ ಕಟ್ಟೆ
ಅಡುಗೆ ಕೋಣೆಯ ಮೇಲ್ಭಾಗದಲ್ಲಿ ಒಮ್ಮೆ ಕಣ್ಣುಹಾಯಿಸಿ ಇಷ್ಟು ದಪ್ಪ ಪದರವಾಗಿ ಧೂಳು ಕುಳಿತುಕೊಂಡಿರುವುದು ನಿಮಗೆ
ಕಾಣಿಸುತ್ತದೆ. ಧೂಳು ಮತ್ತು ಅಡುಗೆ ಎಣ್ಣೆ ಜಿಡ್ಡಿನ ರೂಪದಲ್ಲಿ ಕಟ್ಟೆಯ ಮೇಲೆ ಕುಳಿತಿರುತ್ತದೆ. ಇದರ ಸ್ವಚ್ಛತೆಯ ಕಡೆಗೆ ನೀವು ಗಮನ ಹರಿಸಲೇಬೇಕು.
ಸ್ವಿಚ್ ಬೋರ್ಡ್ ಮೇಲ್ಭಾಗ ಮತ್ತು ಸುತ್ತಲೂ
ಸ್ವಿಚ್ ಬೋರ್ಡ್ನಲ್ಲಿ ಕೂಡ ಧೂಳು ಬೇಗನೇ ಕುಳಿತುಕೊಳ್ಳುವುದರಿಂದ ಈ ಭಾಗದ ಸ್ಚಚ್ಛತೆಯನ್ನು ನೀವು ಮಾಡಲೇಬೇಕು. ಜನರು ಸ್ವಿಚ್ ಅನ್ನು ಆಗಾಗ್ಗೆ ಅದುಮುದರಿಂದ ಆ ಭಾಗದಲ್ಲಿ ಬೇಗನೇ ಕೊಳಕು ನೆಲೆಗಟ್ಟುತ್ತದೆ.
ಎಕ್ಸಾಸ್ಟ್ ಫ್ಯಾನ್ ಸುತ್ತಲೂ
ನಿಮ್ಮ ಅಡುಗೆ ಮನೆ ಮತ್ತು ಬಚ್ಚಲು ಮನೆಯ ಎಕ್ಸಾಸ್ಟ್ ಫ್ಯಾನ್ ಬ್ಲೇಡ್ಗಳನ್ನು ನೀಟಾಗಿ ಇಟ್ಟುಕೊಳ್ಳಬೇಕಾಗುತ್ತದೆ ಜೊತೆಗೆ ಕಿಟಕಿಯನ್ನು ನೀವು ನೋಡಿದಾಗ ಅಲ್ಲಿ ದಪ್ಪ ಪದರವಾಗಿ ಧೂಳು ಕುಳಿತಿರುವುದನ್ನು ಕಾಣುತ್ತೀರಿ.
ಗೀಸರ್ ಮೇಲ್ಭಾಗದಲ್ಲಿ
ನಲ್ಲಿ ತಿರುಗಿಸಿದಾಗ ಸ್ನಾನಕ್ಕೆ ಹಿತಕಾರಿಯಾದ ಬಿಸಿ ನೀರನ್ನು ಒದಗಿಸುವ ಗೀಸರ್ ಮೇಲ್ಭಾಗದಲ್ಲಿ ಧೂಳು ಕುಳಿತಿರುವುದನ್ನು ನೀವು ಕಂಡಿರಬಹುದು ಅಲ್ಲವೇ? ಧೂಳಿನ ಪದರ ಇಲ್ಲೂ ಕುಳಿತಿರುತ್ತದೆ.
ಟ್ಯೂಬ್ ಲೈಟ್ ಮೇಲ್ಭಾಗದಲ್ಲಿ
ಟ್ಯೂಬ್ ಲೈಟ್ ಮೊದಲಾದ ಬಲ್ಬ್ಗಳಲ್ಲಿ ಧೂಳು ಮಡುಗಟ್ಟಿರುತ್ತದೆ. ಧೂಳಿದ್ದಾಗ ಬೆಳಕು ಅಷ್ಟೊಂದು ಸರಿಯಾಗಿ ಬೀರುವುದಿಲ್ಲ. ಆಗ ಧೂಳು ಇರುವುದನ್ನು ಗಮನಿಸಿಕೊಳ್ಳಿ. ಈ ಭಾಗವನ್ನು ಮನೆಯ ಇತರೆ ವಸ್ತುಗಳ ಜೊತೆಗೆ ನೀವು ಸ್ವಚ್ಛಮಾಡಬೇಕು.



Click it and Unblock the Notifications


