Latest Updates
-
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ!
ಕಿರಿದಾದ ಅಡುಗೆ ಮನೆಯನ್ನು ಈ ರೀತಿ ಆಕರ್ಷಿತಗೊಳಿಸಿ
ಮನೆ ಎಂದ ಮೇಲೆ ಅಡುಗೆ ಮನೆ ಇದ್ದೇ ಇರುತ್ತದೆ. ಅಡುಗೆ ಮನೆ ಚಂದವಾಗಿ ಸ್ವಚ್ಛವಾಗಿದ್ದರೇ ಇಡೀ ಮನೆಯೇ ಆರೋಗ್ಯವಾಗಿದ್ದಂತೆ ಎಂದು ಅನೇಕರು ನಂಬಿದ್ದಾರೆ. ಆದರೆ ಇತ್ತೀಚಿನ ಜನಾಂಗದವರು ಅವರ ಬಿಡುವಿಲ್ಲದ ಕೆಲಸಗಳ ಒತ್ತಡದಿಂದ ಅಡುಗೆ ಮನೆಯ ಸಿಂಗಾರಕ್ಕೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲು ಸಾಧ್ಯವಾಗುತ್ತಿಲ್ಲ. ಮನೆಗೆ ಯಾರೇ ಮಹಿಳೆಯರು ಬಂದರೂ ಮೊದಲು ಅವರ ಚಿತ್ತವು ಅಡುಗೆ ಮನೆಯತ್ತ ಇರುತ್ತದೆ. ಅಡುಗೆ ಮನೆಯು ಮಹಿಳೆಯರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಹೊಸ ಮನೆ ಹುಡುಕುವಾಗ ಅನೇಕ ಮಹಿಳೆಯರು ಅಡುಗೆ ಮನೆಯ ಸುಸಜ್ಜಿತ ಮತ್ತು ಸ್ವಚ್ಛತೆಯನ್ನು ಗಮನಿಸುತ್ತಾರೆ.

ಅಲ್ಲದೇ ಅಡುಗೆ ಮಾಡುವಾಗ ಅವರಿಗಿರುವ ಸುಸಜ್ಜಿತ ಸ್ಥಳಾವಕಾಶದ ಬಗ್ಗೆಯೂ ಹೆಚ್ಚು ಅವಲೋಕಿಸುವುದರ ಜೊತೆಗೆ, ಅಡುಗೆ ಪಾತ್ರೆಗಳನ್ನು ಸರಿಯಾಗಿ ಇಡಲು ಬೇಕಾಗುವ ಸ್ಥಳಾವಕಾಶದ ಬಗ್ಗೆ ಗಮನಿಸುತ್ತಾರೆ. ದೊಡ್ಡ ಅಡುಗೆ ಮನೆ ಹೊಂದುವುದು ಎಲ್ಲ ಮಹಿಳೆಯರ ಕನಸಾಗಿರುತ್ತದೆ. ಆದರೆ ಅನೇಕರಲ್ಲಿ ಅವರಿಗಿರುವ ಹಣಕಾಸಿನ ಮಿತಿಯನುಸಾರ ಮನೆಗಳನ್ನು ಮಾಡಿಕೊಂಡಿರುತ್ತಾರೆ. ಈ ರೀತಿಯ ಮನೆಗಳಲ್ಲಿ ಸಹಜವಾಗಿ ಅಡುಗೆ ಮನೆಯು ಕಿರಿದಾಗಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಮಹಿಳೆಯರು ಪ್ರತಿದಿನ ದು:ಖ ಪಡುತ್ತಿರುತ್ತಾರೆ.
ಈ ಪರಿಸ್ಥಿತಿಯು ನಿಮ್ಮದಾಗಿದ್ದಲ್ಲಿ, ನಿಮ್ಮ ಕಿರಿದಾದ ಅಡುಗೆ ಮನೆಯನ್ನು ಆಕರ್ಷಿತವಾಗಿಡಲು ಕೆಲವೊಂದು ವಿವಿಧ ಶೈಲಿಯ ವಿನ್ಯಾಸಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಈ ವಿಧಾನಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಚಿಕ್ಕದಾದ ಅಡುಗೆಮನೆಯನ್ನು ಆಕರ್ಷಿತಗೊಳಿಸಿ. ವಿವರಗಳಿಗೆ ಮುಂದೆ ಓದಿ... ಅಡುಗೆ ಕೋಣೆಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ
ಪ್ರಕಾಶಿತ ಬಣ್ಣಗಳನ್ನು ಉಪಯೋಗಿಸಿ
ನಿಮ್ಮ ಅಡುಗೆಮನೆಯ ಗೋಡೆಗಳಿಗೆ ಪ್ರಕಾಶಮಾನವಾದ ಬಣ್ಣಗಳನ್ನು ಬಳಸುವುದರಿಂದ ನಿಮ್ಮ ಅಡುಗೆ ಮನೆಯ ಸ್ಥಳವು ದೊಡ್ಡದಾದಂತೆ ಕಾಣುತ್ತದೆ. ಇದು ಆಧುನಿಕ ರಂಗನ್ನು ನೀಡಲಿದ್ದು, ಮೆಟಾಲಿಕ್, ಮರದ ಅಥವಾ ಬೇರ್ ಬ್ರಿಕ್ ಶೈಲಿಯ ವಿನ್ಯಾಸವನ್ನು ಬಳಸಬಹುದಾಗಿದೆ.
ಉದ್ದದ ಜಾಗವನ್ನು ಸದುಪಯೋಗಪಡಿಸಿಕೊಳ್ಳಿ
ನಿಮ್ಮ ಪಾತ್ರೆಗಳನ್ನು ಇಡಲು ಕಪಾಟು, ಅಲಮಾರು ಮತ್ತು ಹುಕ್ಸ್ ಅನ್ನು ಗೋಡೆಗೆ ಅಳವಡಿಸಿ. ಇದರಿಂದ ನೆಲದ ಜಾಗವು ನಿಮಗೆ ಹೆಚ್ಚು ಲಭ್ಯವಾಗಲಿದ್ದು, ನಿಮಗೆ ಓಡಾಡಲು ಅನುಕೂಲವಾಗಲಿದ್ದು, ಅಲ್ಯೂಮಿನಿಯಮ್ ಪಾತ್ರೆಗಳು ಸದಾ ಕಾಲ ನಿಮಗೆ ತೊಡಕಾಗದ ಹಾಗೆ ಮಾಡಬಹುದು.
ಒಳ್ಳೆಯ ಗಾಳಿ ಬೆಳಕಿರುವ ಅಡುಗೆ ಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುತ್ತಾಳೆ
ಅಡುಗೆ ಮನೆಯ ಕಿಟಕಿಯನ್ನು ತೆಗೆದು, ಹೊರಗಿನ ಸ್ವಾಭಾವಿಕ ಗಾಳಿಯು ನಿಮ್ಮ ಅಡುಗೆ ಮನೆಯನ್ನು ಪ್ರವೇಶಿಸಲು ಅನುವು ಮಾಡಿ. ಮುಚ್ಚಿರುವ ಗಾಳಿಯಿಲ್ಲದ ಕೃತಕ ಗಾಳಿ ಹೊಂದಿರುವ ಅಡುಗೆ ಮನೆಯಿಂದ ಯಾರಿಗೂ ಉಪಯೋಗವಿಲ್ಲ. ಆದ್ದರಿಂದ ನಿಮ್ಮ ಅಡುಗೆ ಮನೆಯಲ್ಲಿ ಕಿಟಕಿಗಳಿದ್ದಲ್ಲಿ, ಅದನ್ನು ಕರ್ಟೇನ್‌ನಿಂದ ಮುಚ್ಚದೇ ಸದಾ ತೆರೆದಿರುವಂತೆ ನೋಡಿಕೊಳ್ಳಿ. ಒಂದು ವೇಳೆ ಕಿಟಕಿ ಇಲ್ಲದಿದ್ದಲ್ಲಿ, ಗಾಳಿ ಸೂಸುವ ಸಾಧನಗಳನ್ನು ಬಳಸಬಹುದಾಗಿದೆ. ಇದರಿಂದ ನಿಮಗೆ ಹಿತವಾದ ಅನುಭವವುಂಟಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆಯ ರಂಗನ್ನು ಹೆಚ್ಚಿಸಲು ಮೇಲ್ಛಾವಣೆಗೆ ಹೊಳೆಯುವ ಸಾಧನಗಳನ್ನು ಬಳಸಲಾಗುತ್ತಿದೆ.



Click it and Unblock the Notifications

