Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಾಜೂಕಿನ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಸರಳ ಟ್ರಿಕ್ಸ್!
ಮನೆಯ ಅಲಂಕಾರದಲ್ಲಿ ಪ್ರಮುಖವಾಗಿ ಇರುವುದು ಅಡುಗೆ ಮನೆಯ ಅಲಂಕಾರ. ಪ್ರತಿಯೊಬ್ಬರು ಬಂದು ವೀಕ್ಷಿಸಿ ಎರಡು ಮಾತು ಹೇಳುವುದು ಮನೆಯ ಅಡುಗೆ ಮನೆಯನ್ನು ನೋಡಿಯೇ. ಅಡುಗೆ ಮನೆಯನ್ನು ತುಂಬಾ ಅಂದ ಹಾಗೂ ಅಚ್ಚುಕಟ್ಟಾಗಿ ಇಡಲು ಸ್ವಲ್ಪ ಜಾಣ್ಮೆ ಕೂಡ ಬೇಕಾಗುತ್ತದೆ. ಅದರಲ್ಲೂ ಸುಂದರವಾಗಿರುವ ಗಾಜಿನ ಸೆಟ್‌ಗಳನ್ನು ಮನೆಯ ಅಡುಗೆಮನೆಯಲ್ಲಿ ಜೋಡಿಸಿಡುವುದು ತುಂಬಾ ಕಠಿಣ ಕೆಲಸವೆನ್ನಬಹುದು.
ನೋಡಲು ಸುಂದರವಾಗಿ ಕಾಣುವ ಮಣ್ಣಿನ ಪಾತ್ರೆ, ಗಾಜಿನ ಮತ್ತು ಪಿಂಗಾಣಿಯ ಸೆಟ್‌ಗಳು (ಪ್ಲೇಟ್‌ಗಳು, ಗ್ಲಾಸ್‌ಗಳು, ಪದಾರ್ಥದ ಬೌಲ್‌ಗಳು) ನಿಮ್ಮ ಅಡುಗೆ ಮನೆಯ ಕೋಣೆಯ ಕಪಾಟು ತುಂಬಿರುವಂತೆ ಮಾಡುತ್ತದೆ. ಆದರೆ ತುಂಬಾ ನಾಜೂಕಾಗಿರುವ ಇವುಗಳನ್ನು ತುಂಬಾ ಜಾಗರೂಕತೆಯಾಗಿ ನಿರ್ವಹಿಸಬೇಕಾಗುತ್ತದೆ ಅಲ್ಲವೇ..?
ಸಾಮಾನ್ಯವಾಗಿ ಗಾಜಿನ ಪಾತ್ರೆಗಳು ಮತ್ತು ಪಿಂಗಾಣಿಗಳು ತುಂಬಾ ನಾಜೂಕು. ಇಂತಹ ಸೆಟ್‌ಗಳನ್ನು ತೊಳೆಯುವ ವಿಧಾನ ತಿಳಿದಿರಬೇಕು. ಯಾಕೆಂದರೆ ಇದಕ್ಕಾಗಿ ಕೆಲವೊಂದು ವಿಶೇಷವಾದ ಟ್ರಿಕ್ಸ್ ಬೇಕಾಗುತ್ತದೆ. ಒಂದು ವೇಳೆ ಸೆಟ್‌ನ ಒಂದು ಪಾತ್ರೆ ತುಂಡಾದರೂ ಸಂಪೂರ್ಣ ಸೆಟ್ ನಿಷ್ಪ್ರಯೋಜಕವಾಗುತ್ತದೆ. ಇಂತಹ ನಾಜೂಕಾಗಿರುವ ಸಾಮಾನುಗಳು ಒಡೆದು ಹೋಗುವುದು ಅದನ್ನು ತೊಳೆಯುವ ಸಂದರ್ಭದಲ್ಲಿ. ಇದನ್ನು ಒಡೆಯದೇ ತೊಳೆಯುವಂತಹ ಟ್ರಿಕ್ಸ್ ಅನ್ನು ನೀವು ಕಲಿತುಕೊಳ್ಳಬೇಕಾಗಿದೆ. ಆದರೆ ಕೆಲವೊಮ್ಮೆ ಕೇವಲ ನೀರಿನಿಂದ ತೊಳೆದರೆ ಸಾಕಾಗುವುದಿಲ್ಲ. ಪಾತ್ರೆಗಳಿಗೆ ಅಂಟಿಕೊಂಡಿರುವಂತಹ ಕಲೆ, ಎಣ್ಣೆಜಿಡ್ಡು ಮತ್ತು ಆಹಾರದ ವಾಸನೆಯನ್ನು ತೆಗೆಯಬೇಕಾಗುತ್ತದೆ. ನಾಜೂಕಾಗಿರುವ ಸೆಟ್‌ಗಳನ್ನು ತೊಳೆಯುವ ವಿಧಾನಗಳನ್ನು ಇಲ್ಲಿ ತಿಳಿದುಕೊಳ್ಳಿ... ಡಿಶ್ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ

ಇತರ ಸಾಮಾನುಗಳೊಂದಿಗೆ ತೊಳೆಯಬೇಡಿ
ನಿಮ್ಮ ಅಡುಗೆ ಮನೆಯಲ್ಲಿ ಹಲವಾರು ರೀತಿಯ ಸಾಮಾನುಗಳಿರಬಹುದು. ಆದರೆ ಇವುಗಳನ್ನು ನೀವು ಗಾಜಿನ ಪಾತ್ರೆ ಮತ್ತು ಪಿಂಗಾಣಿಗಳ ಜತೆಯಲ್ಲಿ ತೊಳೆಯಲು ಹೋದರೆ ಆಗ ಪಾತ್ರೆ ಒಡೆದು ಹೋಗುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಕೈಯಿಂದಲೇ ಇಂತಹ ಪಾತ್ರೆಗಳನ್ನು ತೊಳೆಯಿರಿ.
ಡಿಶ್ ವಾಶಿಂಗ್ ಟಿಪ್ಸ್
ನಾಜೂಕಾಗಿರುವ ಸಾಮಾನುಗಳನ್ನು ತೊಳೆಯಲು ನೀವು ಡಿಶ್ ವಾಶರ್ ಬಳಸಲು ನಿರ್ಧರಿಸಿದ್ದರೆ ಆಗ ಯಾವುದೇ ಪಾತ್ರೆಗಳಿಗೆ ತೊಂದರೆಯಾಗದ ರೀತಿಯಲ್ಲಿ ಅದನ್ನು ಸ್ವಚ್ಛಗೊಳಿಸುವ ಟಿಪ್ಸ್ ಇದೆ. ಬಿಸಿ ಮಾಡುವಂತಹ ಯಾವುದೇ ತಂತ್ರವನ್ನು ಬಳಸಬೇಡಿ. ಡಿಶ್ ವಾಶರ್‌ನಲ್ಲಿ ಇಂತಹ ನಾಜೂಕಾದ ಸೆಟ್ ಅನ್ನು ಜೋಡಿಸಲು ತಿಳಿದಿರಬೇಕು. ಪ್ರತೀ ಪಾತ್ರೆಯ ಮಧ್ಯೆ ಅಂತರವನ್ನು ಕಾಯ್ದುಕೊಳ್ಳಿ. ಯಾಕೆಂದರೆ ಅದು ಒಂದಕ್ಕೊಂದು ಬಡಿದು ಒಡೆಯುವುದು ತಪ್ಪುವುದು.
ಕೈಯಲ್ಲಿ ತೊಳೆಯುವ ವಿಧಾನ
ನೀವು ನಾಜೂಕಾಗಿರುವ ಅಡುಗೆ ಪಾತ್ರೆಗಳನ್ನು ತೊಳೆಯಲು ಬಯಸುವಾಗ ಇದು ತುಂಬಾ ಒಳ್ಳೆಯ ವಿಧಾನ. ಒಂದೊಂದನ್ನೇ ತೆಗೆದುಕೊಂಡು ತುಂಬಾ ಜಾಗೃತೆಯಿಂದ ತೊಳೆಯಿರಿ. ನೀವು ಗ್ಲಾಸ್ ಟಂಬ್ಲರ್ ತೊಳೆಯುತ್ತಾ ಇದ್ದರೆ ಅದರೊಳಗೆ ಕೈಹಾಕಲು ಪ್ರಯತ್ನಿಸಬೇಡಿ. ಒಳಗಡೆ ತೊಳೆಯಲು ಬ್ರಶ್ ಬಳಸಿ.
ಬಿಸಿ ನೀರು ಬಳಸಿ
ಗಾಜಿನ ಅಥವಾ ಪಿಂಗಣಿಯ ಸೆಟ್ ಅನ್ನು ಒಡೆಯದೆ ತೊಳೆಯಲು ಒಂದು ತುಂಬಾ ಪರಿಣಾಮಕಾರಿ ವಿಧಾನ. ಬಿಸಿ ನೀರನ್ನು ಬಳಸಿ, ಅದರಲ್ಲೂ ಗಾಜಿನ ಪಾತ್ರೆಗಳಲ್ಲಿರುವ ಎಣ್ಣೆಜಿಡ್ಡು ಹೋಗಲಾಡಿಸಲು ಪ್ರಮುಖ ಪಾತ್ರವಹಿಸುತ್ತದೆ ಅಷ್ಟೇ ಏಕೆ ಕೊಳ್ಳೆಯನ್ನು ಕೂಡ ನಿಮಿಷಾರ್ಧದಲ್ಲಿ ಸ್ವಚ್ಛಗೊಳಿಸುತ್ತದೆ
ಪಿಂಗಾಣಿಗಳಿಗೆ ಬಿಸಿ ಹಾಲು
ಅಡುಗೆ ಮನೆಯ ನಾಜೂಕಾಗಿರುವ ಪಾತ್ರೆಗಳನ್ನು ತೊಳೆಯುವಲ್ಲಿ ನೀವು ಎಷ್ಟೇ ಜಾಗೃತೆ ವಹಿಸಿದರೂ ಪಿಂಗಾಣಿಗಳು ಬೇಗನೆ ಬಿರುಕು ಬಿಡುವುದು. ಇದು ಬಿರುಕು ಬಿಡದಂತೆ ತಡೆಯುವುದು ಹೇಗೆ? ಇದನ್ನು ರಾತ್ರಿ ಬಿಸಿ ಹಾಲಿನಲ್ಲಿ ಅದ್ದಿಡಿ, ತದನಂತರ ಮೃದುವಾದ ಡಿಟರ್ಜೆಂಟ್ ನಿಂದ ತುಂಬಾ ಎಚ್ಚರಿಕೆಯಿಂದ ತೊಳೆಯಿರಿ. ಇದನ್ನು ಕೈಯಿಂದಲೇ ತೊಳೆಯಲು ಮರೆಯದಿರಿ.



Click it and Unblock the Notifications


