ಸುದ್ದಿ ಪತ್ರಿಕೆಯ ಸದ್ವಿನಿಯೋಗ ಮಾಡಿಕೊಳ್ಳುವುದು ಹೇಗೆ?

ಹಲವಾರು ಮಾಹಿತಿಗಳನ್ನು ಹೊತ್ತು ಬರುವ ದಿನಪತ್ರಿಕೆಗಾಗಿ ನಾವು ಪ್ರತಿದಿನ ಬೆಳಿಗೆ ಕಾದು ಕುಳಿತಿರುತ್ತೇವೆ. ಅದೇ ಮರುದಿನ ಆ ಸುದ್ದಿ ಪತ್ರಿಕೆ ನಮ್ಮ ಮನೆಯ ಮೂಲೆ ಹಿಡಿದಿರುತ್ತದೆ. ಇಂತಹ ಹಳೆಯ ಸುದ್ದಿ ಪತ್ರಿಕೆಗಳು ದಿನೇ ದಿನೇ ಬೆಳೆಯುತ್ತ ಹೋಗುತ್ತದೆ. ಆದರೆ ನೀವು ಸ್ವಲ್ಪ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಲ್ಲಿ ಸುದ್ದಿ ಪತ್ರಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು.

ನಿಮ್ಮ ಮನೆಯ ಪ್ರತಿಯೊಬ್ಬ ಸದಸ್ಯರು ಇದರಲ್ಲಿ ಭಾಗವಹಿಸುವ ಮೂಲಕ ಈ ಕಾರ್ಯವನ್ನು ಮತ್ತಷ್ಟು ಚೇತೋಹಾರಿಯಾಗಿ ಮಾಡಬಹುದು. ಸುದ್ದಿ ಪತ್ರಿಕೆಗಳನ್ನು ಬಳಸಲು ಹಲವಾರು ಸೃಜನಶೀಲ ಮಾರ್ಗಗಳು ಇವೆ. ಅವುಗಳ ಕುರಿತಾಗಿ ಬಹುತೇಕ ಮಂದಿಗೆ ತಿಳಿದಿಲ್ಲ. ಇನ್ನೂ ಇವುಗಳನ್ನು ಬಳಸುವಾಗ ಸುದ್ದಿ ಪತ್ರಿಕೆಗಳಿಗೆ ಬಳಸಿರುವ ಕಚ್ಛಾ ಪದಾರ್ಥಗಳಿಂದ ಯಾವುದಾದರು ಹಾನಿ ಸಂಭವಿಸುತ್ತದೆ ಎಂಬ ಭಯ ಸಹ ನಿಮ್ಮನ್ನು ಕಾಡುವುದಿಲ್ಲ. ಬನ್ನಿ ಇಂದು ನಾವು ಹಳೆಯ ಸುದ್ದಿ ಪತ್ರಿಕೆಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ನೋಡೋಣ.

Top Ways To Reuse Old Newspapers

ಬೊಂಬೆಗಳಿಗೆ ಬಟ್ಟೆಗಳು
ಇದು ನೀವು ಮಾಡಬಹುದಾದ ಕಲಾತ್ಮಕ ಕೆಲಸಗಳಲ್ಲಿ ಒಂದಾಗಿರುತ್ತದೆ. ಸುದ್ದಿ ಪತ್ರಿಕೆಗಳನ್ನು ನಿಮಗೆ ಬೇಕಾದ ರೂಪಕ್ಕೆ ಕತ್ತರಿಸಿಕೊಂಡು, ಅದಕ್ಕೆ ಬಣ್ಣವನ್ನು ಮತ್ತು ಗ್ಲಿಟ್ಟರ್‌ಗಳನ್ನು ಸಹ ಹಚ್ಚಿ ರಂಗು ರಂಗಾಗಿ ಬಳಸಬಹುದು. ಇದಕ್ಕಾಗಿ ನೀವು ನಿಮ್ಮ ಮಕ್ಕಳನ್ನು ಸಹ ಜೊತೆಗೂಡಿಸಿಕೊಳ್ಳಬಹುದು. ಹೀಗೆ ನೀವು ನಿಮ್ಮ ಹಳೆಯ ದಿನ ಪತ್ರಿಕೆಗಳನ್ನು ಬಳಸಿಕೊಳ್ಳಬಹುದು.

ಫ್ರೂಟ್ ಬಾಸ್ಕೆಟ್
ಬಾಸ್ಕೆಟನ್ನು ಸಾಮಾನ್ಯವಾಗಿ ಬಿದಿರಿನಲ್ಲಿ ಮತ್ತು ಪ್ಲಾಸ್ಟಿಕ್‍ನಲ್ಲಿ ಮಾಡಿರುತ್ತಾರೆ. ಅದರ ಬದಲಿಗೆ ನೀವು ದಿನ ಪತ್ರಿಕೆಯಲ್ಲಿ ಇದನ್ನು ಮಾಡಿ ಬಳಸಬಹುದು. ದಿನ ಪತ್ರಿಕೆಯಲ್ಲಿ ಮಾಡಲಾಗುವ ಬಾಸ್ಕೆಟ್ ನೀವು ಕೊಳ್ಳುವ ಫ್ರೂಟ್ ಬಾಸ್ಕೆಟ್‍ಗಿಂತಲು ಒಳ್ಳೆಯ ವಿನ್ಯಾಸವನ್ನು ಹೊಂದಿರುತ್ತದೆ.

ಉಡುಗೊರೆಗಳನ್ನು ಸುತ್ತಲು
ನಿಮ್ಮ ಉಡುಗೊರೆಗಳನ್ನು ವಿಶಿಷ್ಟವಾಗಿ ಕಾಣುವಂತೆ ಮಾಡಬೇಕೆ: ಸಂಶಯವೇ ಬೇಡ ನಿಮ್ಮ ಹಳೆಯ ಸುದ್ದಿ ಪತ್ರಿಕೆಗಳನ್ನು ಬಳಸಿ. ಎಷ್ಟಾದರು ಉಡುಗೊರೆಗಳನ್ನು ನೀಡಲು ಒಂದು ಬಾರಿ ಮಾತ್ರ ಬಳಸುವುದರಿಂದ ಬೇರೆ ರ‍್ಯಾಪರ್‌ಗಿಂತ ದಿನ ಪತ್ರಿಕೆಯನ್ನು ಸಹ ಬಳಸಬಹುದು. ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಸ್ಟಫ್ಫಿಂಗ್ ಆಗಿ
ದಿನ ಪತ್ರಿಕೆಗಳನ್ನು ಕ್ರಷ್ ಮಾಡಿದಾಗ ಉತ್ತಮ ಬಗೆಯಲ್ಲಿ ಬಳಸಬಹುದು. ಇವುಗಳನ್ನು ಹ್ಯಾಂಡ್ ಬ್ಯಾಗ್ ಮತ್ತು ಶೂಗಳ ಆಕಾರಕ್ಕೆ ಸಹ ತರಬಹುದು. ಅದರಲ್ಲೂ ಯಾವುದಾದರು ಕಲೆ ಮತ್ತು ಕುಶಲ ಕಲೆಗಳನ್ನು ಮಾಡುವಾಗ ಅಥವಾ ಹ್ಯಾಲೋವೀನ್‍ನಂತಹ ಹಬ್ಬಕ್ಕೆ ಸಿದ್ಧ ಮಾಡಿಕೊಳ್ಳುವಾಗ ದಿನ ಪತ್ರಿಕೆಗಳನ್ನು ಬಳಸಿಕೊಳ್ಳಬಹುದು. ಮನೆಯ ಗೋಡೆಗಳ ಮೇಲಿನ ಕಲೆಗಳ ನಿವಾರಣೆಗೆ ಸರಳ ಸೂತ್ರ

ರಕ್ಷಣೆಗಾಗಿ
ನಿಮ್ಮ ಮಗುವು ಬಣ್ಣಗಳೊಂದಿಗೆ ಕೆಲಸ ಮಾಡುವಾಗ ನಿಮ್ಮ ಮನೆಯ ದುಬಾರಿ ಟೇಬಲ್‍ಗಳನ್ನು ಮತ್ತು ಕಾರ್ಪೆಟ್‍ಗಳನ್ನು ರಕ್ಷಿಸಲು ದಿನ ಪತ್ರಿಕೆಗಳನ್ನು ಬಳಸಿಕೊಳ್ಳಬಹುದು. ಇವುಗಳನ್ನು ಹರಡಿ ನಿಮ್ಮ ಪಾಡಿಗೆ ನೀವು ನಿಶ್ಚಿಂತೆಯಾಗಿರಬಹುದು.

ಕಿಟಕಿಗಳನ್ನು ತೊಳೆಯಲು
ದಿನ ಪತ್ರಿಕೆಗಳನ್ನು ಬಳಸಿ ನಿಮ್ಮ ಮನೆಯ ಕಿಟಕಿಗಳನ್ನು ಸ್ವಚ್ಛಗೊಳಿಸಿದಾಗ ನಿಮಗೆ ಅಚ್ಚರಿಯಾಗಬಹುದು. ಇದರ ಮೇಲೆ ಕೆಲವೊಂದು ಕಿಟಕಿ ಒರೆಸುವ ದ್ರಾವಣಗಳನ್ನು ಅಥವಾ ನೀರನ್ನು ಮತ್ತು ಸೋಪನ್ನು ಹಾಕಿಕೊಂಡು ಕಿಟಕಿಗಳನ್ನು ಸ್ವಚ್ಛಗೊಳಿಸಬಹುದು. ಗ್ಲಾಸ್ ಮೇಲೆ ದ್ರಾವಣವನ್ನು ಸ್ಪ್ರೇ ಮಾಡಿ, ದಿನ ಪತ್ರಿಕೆಯಿಂದ ಒರೆಸಿ.

ಪೇಪರ್ ಮಷಿನ್ ಪ್ರೊಜೆಕ್ಟ್‌ಗಳು
ಇದು ಸಹ ದಿನ ಪತ್ರಿಕೆಗಳನ್ನು ಬಳಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಇದನ್ನು ಸರಿಯಾಗಿ ಮಾಡಿದಾಗ, ಇವುಗಳಿಗೆ ಸಾಟಿಯಾಗಿ ಯಾವುದು ಇರುವುದಿಲ್ಲ. ಒಣಗಿದ ಮೇಲೆ ಇವುಗಳಿಗೆ ಬಣ್ಣ ಬಳಿದಾಗ ಮತ್ತಷ್ಟು ಸುಂದರವಾಗಿ ಕಾಣುತ್ತವೆ.

X
Desktop Bottom Promotion