Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ಅಡುಗೆ ಕೋಣೆಯ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ
ಸುಂದರವಾದ ಮನೆ ನಮ್ಮ ಅತಿದೊಡ್ಡ ಬಯಕೆಗಳಲ್ಲಿ ಒಂದಾಗಿರುತ್ತದೆ. ದೊಡ್ಡ ಬಂಗಲೆಯಂತಹ ನಿವಾಸವನ್ನು ತಾನು ಕಟ್ಟಿಕೊಳ್ಳಬೇಕು ಮತ್ತು ಎಲ್ಲರೂ ಆ ಮನೆಯನ್ನು ನೋಡಿ ಹೊಟ್ಟೆಉರಿದುಕೊಳ್ಳಬೇಕು ಆನಂದಿಸಬೇಕು ಎಂಬ ದೂರಾಲೋಚನೆ ನಮ್ಮದಾಗಿರುತ್ತದೆ. ಆದರೆ ಮನೆ ಬಂಗಲೆಯಂತೆ ಕಂಗೊಳಿಸದೇ ಇದ್ದರೂ ಅಲ್ಲಿರುವ ಒಂದು ಆಸ್ತಿ ಮಾತ್ರ ಎಂದಿಗೂ ನಳನಳಿಸುತ್ತಿರಬೇಕು ಎಂಬುದೇ ಇಂದಿನ ಲೇಖನದ ಮುಖ್ಯ ಅಂಶವಾಗಿದೆ.
ಮನೆಯಲ್ಲಿರುವ ಹಾಲ್, ಕೋಣೆಗಳು, ಬಾಲ್ಕನಿ, ದೇವರ ಕೋಣೆ ಹೀಗೆ ಪ್ರತಿಯೊಂದನ್ನು ತನ್ನ ಆಸೆ ಅಭಿರುಚಿಗೆ ತಕ್ಕಂತೆ ನಿರ್ಮಿಸಿಕೊಳ್ಳುತ್ತೇವೆ. ನಾವೇ ಶ್ರಮಪಟ್ಟು ಕಟ್ಟಿಸಿದ ಮನೆ ಎಂದಾದಲ್ಲಿ ನಮಗೊಂದು ನೆಮ್ಮದಿ ಇರುತ್ತದೆ ನಿಶ್ಚಿಂತೆಯಿರುತ್ತದೆ. ಆದರೆ ಮನೆಗೆ ಶೋಭೆ ತರುವ ಅಡುಗೆ ಮನೆ ಪಾಕಶಾಲೆ ಅಸ್ತವ್ಯಸ್ಥವಾಗಿದೆ ಎಂದಾದಲ್ಲಿ ನಾವು ಅಸಮರ್ಥರು ಎಂಬುದನ್ನು ಅದು ಎದ್ದು ತೋರಿಸುವಂತಿರುತ್ತದೆ.
ನಿಮ್ಮ ಮನೆಯ ಅಡುಗೆ ಕೋಣೆ ನೋಡಿಯೇ ಮನೆಯನ್ನು ನೀವು ಹೇಗೆ ಇಟ್ಟುಕೊಂಡಿದ್ದೀರಾ ಎಂಬುದನ್ನು ಲೆಕ್ಕಾಚಾರ ಮಾಡಬಹುದಾಗಿದೆ. ಆಹಾರ ಸಿದ್ಧಪಡಿಸುವ ಸ್ಥಳವಾಗಿರುವ ಅಡುಗೆ ಕೋಣೆಯಲ್ಲಿ ಸ್ವಚ್ಛತೆ ಸುಂದರತೆ ಮತ್ತು ಶುಭ್ರತೆ ಇರಲೇಬೇಕು. ಮನೆಯ ಸದಸ್ಯರೆಲ್ಲರ ಆರೋಗ್ಯದ ಕೀಲಿಕೈ ಅಡುಗೆ ಕೋಣೆಯೆಂಬ ತಿಜೋರಿಯಲ್ಲಿದೆ ಎಂಬುದನ್ನು ಮಾತ್ರ ನೀವು ಮರೆಯಬಾರದು. ಬನ್ನಿ ಅಡುಗೆಮನೆಯ ಸ್ವಚ್ಛತೆಗೆ ಕೆಲವೊಂದು ಟಿಪ್ಸ್ ಅನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ ಮುಂದೆ ಓದಿ..

ಡಿಟೆರ್ಜೆಂಟ್ ಪೌಡರ್ ಮತ್ತು ಅಮೋನಿಯ
ಅಡುಗೆಮನೆಯ ಬಿಳಿ ಟೈಲ್ಸ್‌ಗಳ ಮೇಲೆ ಮೇಣದ ಚೂರುಗಳು ಸೇರಿದ್ದರೆ ಡಿಟೆರ್ಜೆಂಟ್ ಪೌಡರ್ ಮತ್ತು ಅಮೋನಿಯ ಮಿಶ್ರಣವು ಸ್ವಚ್ಛಗೊಳಿಸಲು ಒಂದು ಅತ್ಯುತ್ತಮ ವಿಧಾನವಾಗಿದೆ. ಇದಕ್ಕೆ ನೀವು ಒಂದು ಕಪ್ ಲಾಂಡ್ರಿ ಡಿಟೆರ್ಜೆಂಟ್ ಪೌಡರ್, ಅರ್ಧ ಕಪ್ ಅಮೋನಿಯ ದ್ರವ ಮತ್ತು ಒಂದು ಗ್ಯಾಲನ್ ಬಿಸಿನೀರು ಮಿಶ್ರಣ ಅಗತ್ಯ. ಈ ಮಿಶ್ರಣವನ್ನು ಬೇಕಾದ ಸ್ಥಳಗಳ ಮೇಲೆ ಹಾಕಿ ಮೇಣ ಅಂಟಿಕೊಂಡಿರುವುದನ್ನು ತೆಗೆಯಲು ಒಂದು ಸ್ಥಿರ ಸ್ಕ್ರಬ್ ಬ್ರಶ್ ಉಪಯೋಗಿಸಿದರೆ ನಿಮ್ಮ ಬಿಳಿ ಟೈಲ್ಸ್‌ಗಳನ್ನು ನಿರ್ಮಲವಾಗಿ ಹೊಳೆಯುವಂತೆ ಇರಿಸಿಕೊಳ್ಳಬಹುದು. ಮನೆ ಸಣ್ಣದಾದರೂ ಪರವಾಗಿಲ್ಲ, ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ
ಲಿಂಬೆ ಮತ್ತು ಕಿತ್ತಳೆ ಹಣ್ಣಿನ ಸಿಪ್ಪೆ
ಅಡುಗೆ ಮನೆಯಲ್ಲಿರುವ ಕಸ ಕೆಟ್ಟ ವಾಸನೆ ಉಂಟು ಮಾಡಬಹುದು. ಇದನ್ನು ಹೋಗಲಾಡಿಸಲು ಲಿಂಬೆ ಅಥವಾ ಕಿತ್ತಳೆ ಸಿಪ್ಪೆಯನ್ನು ವಿನೇಗರ್ ಹಾಕಿ ಐಸ್ ಕ್ಯೂಬ್‌ನಲ್ಲಿಡಿ ಮತ್ತು ಹತ್ತು ಸೆಕೆಂಡು ಇದನ್ನು ಪುಡಿ ಮಾಡಿ. ಇದು ಕೆಟ್ಟ ವಾಸನೆಯಿಂದ ಮುಕ್ತಿ ನೀಡುತ್ತದೆ ಮತ್ತು ನಿಮ್ಮ ಅಡುಗೆ ಕೋಣೆಗೆ ಸುವಾಸನೆ ನೀಡುತ್ತದೆ.
ಅಡುಗೆಮನೆಯ ಸ್ಟೀಲಿನ ಸಿಂಕ್‌ನ ಸ್ವಚ್ಛತೆ
ಸಾಮಾನ್ಯವಾಗಿ ಪಾತ್ರೆ ತೊಳೆಯುವ ಸ್ಟೀಲಿನ ಸಿಂಕ್ ಕೆಲಕಾಲದ ಬಳಿಕ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಈ ಹೊಳಪನ್ನು ಮತ್ತೆ ಪಡೆಯಲು ರಾಸಾಯನಿಕ ಮಾರ್ಜಕ ಹಾಗೂ ಧೃಢವಾದ ಬ್ರಷ್‌ಗಳನ್ನು ಉಪಯೋಗಿಸಿದರೆ ಸೂಕ್ಷ್ಮವಾದ ಗೆರೆಗಳು ಬಿದ್ದು ಹೊಳಪು ಪಡೆಯುತ್ತದೆ. ಬದಲಿಗೆ ಕಿತ್ತಳೆ ಸಿಪ್ಪೆಗಳನ್ನು ಅಥವಾ ಲಿಂಬೆಯ ಸಿಪ್ಪೆಯನ್ನು ಬಿಸಿನೀರಿನಲ್ಲಿ ಹಾಕಿ ಕೊಂಚ ಕಾಲದ ಬಳಿಕ ಈ ನೀರನ್ನು ತೊಟ್ಟಿಯ ಎಲ್ಲೆಡೆ ಚಿಮುಕಿಸಿ ಕೆಲಕಾಲದ ಬಳಿಕ ಮೃದುವಾದ ಬ್ರಷ್ ಅಥವಾ ಬಟ್ಟೆಯಿಂದ ಒರೆಸಿದರೆ ಯಾವುದೇ ಗೀರು ಬೀಳದೇ ತೊಟ್ಟಿ ಥಳಥಳನೆ ಹೊಳೆಯುತ್ತದೆ.
ಮೈಕ್ರೋವೇವ್‌ನ ಒಳಭಾಗವನ್ನು ಸ್ವಚ್ಛಗೊಳಿಸಲು
ಅಡುಗೆಮನೆಯಲ್ಲಿರುವ ಮೈಕ್ರೋವೇವ್‌ನ ಒಳಭಾಗವನ್ನು ಪೂರ್ಣವಾಗಿ ಸ್ವಚ್ಛಗೊಳಿಸಲು ಕಿತ್ತಳೆ ಸಿಪ್ಪೆ ಹಾಗೂ ಲಿಂಬೆ ಉಪಯೋಗಕ್ಕೆ ಬರುತ್ತದೆ. ಇದಕ್ಕಾಗಿ ಒಂದು ಗಾಜಿನ ಪಾತ್ರೆಯಲ್ಲಿ ನೀರು ಭರ್ತಿ ಮಾಡಿ ಆ ನೀರಿನಲ್ಲಿ ಕಿತ್ತಳೆ, ಲಿಂಬೆಗಳ ಸಿಪ್ಪೆಗಳನ್ನು ಮುಳುಗಿಸಿಡಿ. ಈ ಪಾತ್ರೆಯನ್ನು ಸುಮಾರು ಐದು ನಿಮಿಷಗಳವರೆಗೆ ಮೈಕ್ರೋವೇವ್ ನಲ್ಲಿ ಬೇಯಿಸಿ (ಗ್ರಿಲ್ ಅಗತ್ಯವಿಲ್ಲ).
ಐದು ನಿಮಿಷ ಕಳೆದ ಬಳಿಕ ಬಾಗಿಲು ತೆಗೆಯದೇ ಸುಮಾರು ಹತ್ತು ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ಬಾಗಿಲು ತೆಗೆದು ಬಿಸಿಯಾಗಿರುವ ಗಾಜಿನ ಬೋಗುಣಿಯನ್ನು ಹೊರತೆಗೆದು ನೀರು ಚೆಲ್ಲಿ. ಮೈಕ್ರೋವೇವ್ ನ ಒಳಭಾಗವೆಲ್ಲಾ ತೇವವಾಗಿರುತ್ತದೆ. ಈ ತೇವವನ್ನು ಲಿಂಬೆಯ ಅಥವಾ ಕಿತ್ತಳೆಯ ಸಿಪ್ಪೆಯಿಂದ ಒರೆಸಿ ತೆಗೆಯಿರಿ. ಬಳಿಕ ಸ್ವಚ್ಛವಾದ ಒಣಬಟ್ಟೆಯಿಂದ ಇಡಿಯ ಒಳಭಾಗವನ್ನು ಸ್ವಚ್ಛವಾಗಿ ಒರೆಸಿ ಸ್ವಲ್ಪ ಹೊತ್ತು ಬಾಗಿಲು ತೆರೆದಿಟ್ಟು ನಂತರ ಮುಚ್ಚಿರಿ. ಈಗ ಒಳಭಾಗ ಹೊಸತ್ತಾಗಿಯೇ ಇರುತ್ತದೆ. ಮನೆಯ ಮರದ ಪರಿಕರಗಳ ಸ್ವಚ್ಛತೆಗೆ ಸರಳ ಸೂತ್ರ
ವಿನೇಗರ್
ಗ್ಯಾಸ್ ಸ್ಟವ್ ಸ್ವಚ್ಛಗೊಳಿಸಲು ಅಡುಗೆಸೋಡಾ ಮತ್ತು ವಿನೇಗರ್
ಇದನ್ನು ಹಾಗೆಯೇ 15 ನಿಮಿಷಗಳ ಕಾಲ ಬಿಡಿ. ಹೀಗೆ ಮಾಡಲು ನಿಮಗೆ ಸ್ವಲ್ಪ ತಾಳ್ಮೆಯ ಅಗತ್ಯವಿರುತ್ತದೆ. ಈಗ ಒಂದು ಟೂಥ್‍ಬ್ರಶ್ ಸಹಾಯದಿಂದ ಕಲೆಗಳನ್ನು ಉಜ್ಜಿ. ಆನಂತರ ಒಂದು ಮೃದುವಾದ ನೀರು ಹೀರುವಂತಹ ಬಟ್ಟೆಯಿಂದ ಇದನ್ನು ಒರೆಸಿ. ಕೊನೆಗೆ ಒಂದು ಒಣ ಬಟ್ಟೆಯಿಂದ ಒರೆಸಿ. ಆಗ ನಿಮ್ಮ ಗ್ಯಾಸ್ ಸ್ಟೌವ್ ಫಳ ಫಳ ಎಂದು ಹೊಳೆಯುತ್ತಿರುತ್ತದೆ.



Click it and Unblock the Notifications




