Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒಳಉಡುಪಿನಲ್ಲಿ ಬಿಳಿ ಕಲೆಗಳಾಗಿದ್ಯಾ? ಹಾಗಾದ್ರೆ ಹೀಗೆ ಮಾಡಿ..
ಯಾರಿಗೆ ಆಗ್ಲಿ ತಮ್ಮ ಅಂಡರ್ ಗಾರ್ಮೆಂಟ್ಸ್ ಶುದ್ಧವಾಗಿರಬೇಕು, ಶುಚಿಯಾಗಿರಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಈಗಂತೂ ಹೊರಉಡುಪಿಗಿಂತ ಒಳಉಡುಪಿನ ಬೆಲೆಯೇ ಅತ್ಯಧಿಕವಾಗಿರುತ್ತೆ. ಆದ್ರೆ ಏನ್ಮಾ ಡೋದು.. ಕೆಲವೇ ದಿನ ಕಳೆದ ಹಾಗೆ ಅಂಡರ್‌ವೇರ್‌ನಲ್ಲಿ ಬಿಳಿಯ ಕಲೆಗಳಾಗಿ ಬಿಡುತ್ತೆ. ಪ್ರತಿದಿನ ಶುದ್ಧವಾಗೇ ತೊಳೆದುಕೊಳ್ತೀನಿ.
ಆದ್ರೂ ಯಾಕೆ ಹೀಗೆ ಆಗ್ತಿದೆ ಅನ್ನೋ ಗೊಂದಲ ಕೆಲವರಿಗೆ.. ಇದು ಸಾಮಾನ್ಯ ಕೂಡ.. ಇನ್ನು ಭಾರೀ ಬೆಲೆ ತೆತ್ತಿ ಕೊಂಡುಕೊಂಡಿರುವ ಅಂಡರ್‌ವೇರ್‌ನ್ನು ಬಿಳಿಯ ಕಲೆ ಆಗಿದೆ ಅನ್ನೋ ಕಾರಣಕ್ಕೆ ಎಸೆದು ಬಿಡಲು ಮನಸ್ಸು ಬರೋದಿಲ್ಲ. ಯಾಕಂದ್ರೆ ಅದು ಇನ್ನು ಹರಿದಿರೋದಿಲ್ಲ. ಹಾಗಾದ್ರೆ ಅಂಡರ್‌ವೇರ್‌ನಲ್ಲಿ ಆಗುವ ಬಿಳಿಯ ಕಲೆಗಳನ್ನು ತೆಗೆಯಲು ಏನಾದ್ರೂ ಉಪಾಯ ಇದೆ. ಏನುಪಾಯ ಮುಂದೆ ಓದಿ..

ಬೇಕಿಂಗ್ ಸೋಡಾ
ಬೇಕಿಂಗ್ ಸೋಡಾ ಕೂಡ ಕಲೆಗಳ ನಿವಾರಣೆಗೆ ಬಳಸಲಾಗುತ್ತೆ. ಅದ್ರಲ್ಲೂ ಪ್ರಮುಖವಾಗಿ ಚಿಕ್ಕ ಮಕ್ಕಳ ಅಂಡರ್‌ವೇರ್‌ನಲ್ಲಿ ಮೂತ್ರದಿಂದಾಗಿ ಆಗುವ ಬಿಳಿಯ ಪ್ಯಾಚಸ್‌ಗಳು ಬೇಕಿಂಗ್ ಸೋಡಾ ಹಚ್ಚಿ ತೊಳೆಯೋದ್ರಿಂದ ತೆಗೆದುಹಾಕ್ಬಹುದು. ಆದ್ರೆ ಬೇಕಿಂಗ್ ಸೋಡಾ ದೊಡ್ಡವರ ಅಂಡರ್‌ವೇರ್‌ನಲ್ಲಿ ಆಗುವ ಕಲೆಗಳನ್ನೆಲ್ಲ ತೆಗೆದುಹಾಕುತ್ತೆ ಎಂದು ಹೇಳಲಾಗುವುದಿಲ್ಲ. ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಬೆರಿಸಿ ದಪ್ಪವಾಗಿ ಪೇಸ್ಟ್ ತಯಾರಿಸಿ ಕಲೆಗಳಿರುವ ಜಾಗದಲ್ಲಿ ಹಚ್ಚಿ ಉಜ್ಜಿ. ಬೇಕಿಂಗ್ ಸೋಡಾ ಕಾಟನ್ ಬಟ್ಟೆಗಳಲ್ಲಿ ಆಗಿರುವ ಬಿಳಿಯ ಕಲೆಗಳನ್ನು ತೆಗೆಯಲು ಹೆಚ್ಚು ನೆರವಾಗುತ್ತೆ.

ವಿನೆಗರ್
ಒಂದು ಟೀ ಸ್ಪೂನ್ ಫುಲ್ ವಿನೆಗರ್ ತೆಗೆದುಕೊಂಡು ಅಂಡರ್‌ವೇರ್‌ನಲ್ಲಿ ಬಿಳಿಯ ಕಲೆಗಳಿರುವ ಜಾಗದಲ್ಲಿ ಹಚ್ಚಿ. 15 ನಿಮಿಷ ಹಾಗೆಯೇ ಬಿಡಿ. ನಂತ್ರ ಸ್ವಚ್ಛವಾಗಿ ಉಜ್ಜಿ ಒಳಉಡುಪನ್ನು ತೊಳೆಯಿರಿ. ಇನ್ನೂ ಕಲೆಗಳು ಹಾಗೆಯೇ ಉಳಿದಿದ್ದಲ್ಲಿ ಬೇಕಿಂಗ್ ಸೋಡಾ ಮತ್ತು ವಿನೆಗರ್ ಎರಡನ್ನೂ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಅಪ್ಲೈ ಮಾಡಿ.. ನಂತ್ರ 10 ನಿಮಿಷ ಹಾಗೆಯೇ ಅಂಡರ್‌ವೇರ್‌ನ್ನು ಆ ಮಿಶ್ರಣದಲ್ಲಿ ನೆನಸಿಡಿ. ನಂತ್ರ ಉಜ್ಜಿ ಶುದ್ಧನೀರಿನಲ್ಲಿ ತೊಳೆಯಿರಿ. ಬಿಳಿಯ ಕಲೆಗಳನ್ನು ನಿವಾರಿಸುವಲ್ಲಿ ಈ ಕ್ರಮ ಹೆಚ್ಚು ಪರಿಣಾಮಕಾರಿಯಾಗಿರುತ್ತೆ.

ಶಾಂಪೂ
ನಂಬಿದ್ರೆ ನಂಬಿ ಬಿಟ್ರೆ ಬಿಡಿ. ಶಾಂಪೂ ಕೇವಲ ತಲೆಕೂದಲನ್ನು ತೊಳೆಯಲು ಮಾತ್ರವಲ್ಲ ಬದಲಾಗಿ ನಿಮ್ಮ ಅಂಡರ್‌ಗಾರ್ಮೆಂಟ್ಸ್ ನ್ನು ಕ್ಲೀನ್ ಮಾಡಲು ಕೂಡ ನೆರವಾಗುತ್ತೆ. ಅಂಡರ್‌ವೇರ್‌ನಲ್ಲಿ ಬಿಳಿಯ ಕಲೆಗಳಾಗಿರುವ ಜಾಗಕ್ಕೆ ಶಾಂಪ್ಯೂ ಹಚ್ಚಿ ಚೆನ್ನಾಗಿ ಉಜ್ಜಿ ತೊಳೆಯರಿ. ಬದಲಾವಣೆಯನ್ನು ನೀವೇ ಗಮನಿಸ್ಬಹುದು.

ಉಪ್ಪು
ಲವಣಾಂಶಗಳಿಂದ ಸಮೃದ್ಧವಾಗಿರುವ ಉಪ್ಪನ್ನು ಅಂಡರ್‌ವೇರ್‌ನಲ್ಲಿ ಬಿಳಿಯ ಕಲೆಗಳಾಗಿರುವ ಜಾಗಕ್ಕೆ ಹಚ್ಚಿ ಕೆಲವು ನಿಮಿಷ ಹಾಗೆಯೇ ಬಿಡಿ. ನಂತ್ರ ಚೆನ್ನಾಗಿ ಆ ಬಟ್ಟೆಯನ್ನು ಉಜ್ಜಿ ತೊಳೆಯಿರಿ. ಹೀಗೆ ಮಾಡೋದ್ರಿಂದ ಕೂಡ ಒಳಉಡುಪಿನಲ್ಲಾದ ಫಂಗಸ್‌ನ ಬಿಳಿಯ ಕಲೆಗಳನ್ನು ತೊಡೆದುಹಾಕ್ಬಹುದು.

ಆಲ್ಕೋಹಾಲ್
ಆಲ್ಕೋಹಾಲ್ ಬಳಸಿ ನಿಮ್ಮ ಬಿಳಿಯ ಕಲೆಯಾಗಿರುವ ಒಳಉಡುಪನ್ನು ತೊಳೆದುಕೊಳ್ಳಬಹುದು. ಅಲ್ಕೊಹಾಲನ್ನು ಬಿಳಿಯ ಕಲೆಗಳ ಮೇಲೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷ ಹಾಗೆಯೇ ಬಿಡಿ. ನಂತ್ರ ಚೆನ್ನಾಗಿ ತಿಕ್ಕಿತೊಳೆಯಿರಿ. ಫಂಗಸ್‌ಗಳಿಂದ, ಬ್ಯಾಕ್ಟೀರಿಯಾಗಳಿಂದಾಗಿ ಅಂಡರ್‌ಗಾರ್ಮೆಂಟ್ಸ್‌ನಲ್ಲಿ ನಿರ್ಮಾಣವಾಗಿರುವ ಬಿಳಿಯ ಕಲೆಗಳು ನಿವಾರಣೆಯಾಗುತ್ತೆ.

ಸ್ಕ್ರಬ್ಬರ್
ಪ್ರತಿದಿನವೂ ನೀವು ಸಮಯ ಇಲ್ಲ ಅಂತ ಯಾವುದೇ ಕಾರಣಕ್ಕೂ ಬ್ರಷ್ ಬಳಸದೇ ಒಳಉಡುಪನ್ನು ತೊಳೆಯಬೇಡಿ.. ಸ್ಕಬ್ಬರ್ ಬಳಸಿ ಪ್ರತಿದಿನವೂ ಉಜ್ಜಿ ತೊಳೆಯೋದ್ರಿಂದ ಬಿಳಿ ಕಲೆಯಾಗೋದನ್ನು ನಿಯಂತ್ರಿಸಿಕೊಳ್ಳಬಹುದು.

ಡಿಶ್ ವಾಷಿಂಗ್ ಸೋಪ್
ಡಿಶ್ ವಾಷಿಂಗ್ ಸೋಪನ್ನು ನೀರಿಗೆ ಹಾಕದೆ ಅಂಡರ್‌ವೇರ್‌ನಲ್ಲಿ ಬಿಳಿಯ ಕಲೆಗಳಾಗಿರುವ ಜಾಗಕ್ಕೆ ಡೈರೆಕ್ಟ್ ಆಗಿ ಹಾಕಿ. ಎಷ್ಟು ಸಾಧ್ಯವೋ ಅಷ್ಟು ಸ್ಕ್ರಬ್ ಮಾಡಿ..ಡಿಶ್ ವಾಷಿಂಗ್ ಸೋಪ್ ಬಳಸಿದಾಗ ತಣ್ಣೀರಿನಲ್ಲೇ ತೊಳೆಯಿರಿ. ಒಂದು ವೇಳೆ ಬಿಸಿನೀರು ಬಳಸಿದ್ರೆ ಬಿಳಿಯ ಕಲೆಗಳು ಹಾಗೆ ಉಳಿದುಬಿಡುವ ಸಾಧ್ಯತೆ ಇರುತ್ತೆ.

ನೆನಪಿನಲ್ಲಿ ಇಡಬೇಕಾದ ಅಂಶಗಳು
1.ವಿನೆಗರ್ ಮತ್ತು ಬ್ಲೀಚ್‌ನ್ನು ಯಾವತ್ತು ಮಿಕ್ಸ್ ಮಾಡ್ಬೇಡಿ.. ಯಾಕಂದ್ರೆ ಇವೆರಡೂ ಮಿಕ್ಸ್ ಆದ್ರೆ ವಿಷಕಾರಿ ಅನಿಲ ಬಿಡುಗಡೆಯಾಗುತ್ತೆ. ಅದು ನಿಮ್ಗೆ ಹಾನಿಯನ್ನುಂಟುಮಾಡುತ್ತೆ.
2.ಬಿಳಿಯ ಕಲೆಗಳನ್ನು ತೆಗೆಯಲು ಬಳಸುವ ಈ ಎಲ್ಲಾ ಮೆಥೆಡ್‌ಗಳು ನಿಮ್ಮ ಉಡುಪಿನ ಬಣ್ಣವನ್ನು ಸ್ವಲ್ಪ ಕಡಿಮೆಗೊಳಿಸುವ ಸಾಧ್ಯತೆ ಇರುತ್ತೆ.
3.ಈ ಎಲ್ಲಾ ಮೆಥೆಡ್‌ಗಳನ್ನು ಪ್ರತಿದಿನವೂ ಒಳಉಡುಪನ್ನು ತೊಳೆಯಲು ಬಳಸುವ ಅಗತ್ಯವಿಲ್ಲ.
4.ಮಕ್ಕಳ ಒಳಉಡುಪನ್ನು ಸಪರೇಟ್ ಆಗಿ ತೊಳೆಯರಿ.



Click it and Unblock the Notifications
