Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಹಾಸಿಗೆ ಸ್ವಚ್ಛವಾಗಿದ್ದರೆ, ನಿದ್ದೆಗೆ ಬರಗಾಲವಿಲ್ಲ!
ಪ್ರತಿಯೊಬ್ಬರಿಗೂ ತಮ್ಮ ಮನೆಯ ಒಳಾಂಗಣ ಅಂದವಾಗಿ ಕಾಣಬೇಕೆಂಬ ಬಯಕೆ. ಅದಕ್ಕೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಅದಕ್ಕೂ ಮುಂಚಿತವಾಗಿ ಮನೆಯನ್ನು ಶುಚಿಯಾಗಿರಿಸಬೇಕೆಂದು ಕೆಲವರಿಗೆ ತಿಳಿಯದ ವಿಷಯ. ಮನೆಯನ್ನು ಶುಚಿಯಾಗಿಡದಿದ್ದರೆ ನಾನಾ ರೀತಿಯ ಕೀಟಾಣುಗಳಿಗೆ ಆಹ್ವಾನ ನೀಡಿದಂತೆ. ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಇದರಿಂದ ತಿಗಣೆಗಳು, ಸೊಳ್ಳೆಗಳು ಹಾಗೂ ಗೆದ್ದಲು ಹುಳಗಳು ಹೆಚ್ಚಾಗುವುದಲ್ಲದೆ ನಿಮ್ಮ ಮನೆಯ ಪೀಠೋಪಕರಣಗಳನ್ನು ಹಾಳು ಮಾಡಲು ನೇರ ಕಾರಣವಾಗುತ್ತದೆ.
ನಿಮ್ಮ ಮಲಗುವ ಮಂಚ ಹಾಗೂ ಹಾಸಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ಮುಖ್ಯ ಅಂಶವಾಗಿದೆ. ಹಾಸಿಗೆಯನ್ನು ನೇರಗೊಳಿಸಿ, ಅದರಲ್ಲಿನ ಕಸವನ್ನು ಆಗಿಂದಾಗ್ಗೆ ಹೊರಹಾಕುವುದು, ಹಾಸಿಗೆಯ ಹೊದಿಕೆಯನ್ನು ವಾರಕ್ಕೆ ಎರಡು ಬಾರಿ ಬದಲಾಯಿಬೇಕು ಎಂಬ ಅಂಶಗಳು ನಿಮ್ಮ ನೆನಪಿನಲ್ಲಿರಲಿ. ನೀವು ಮಲಗುವ ಕೊಠಡಿಯ ಅಂದವನ್ನು ಹೆಚ್ಚಿಸಲು ಪಾಲಿಸಬಹುದಾದ ಸುಲಭ ವಿಧಾನಗಳನ್ನು ನಿಮಗಾಗಿ ನಾವು ನೀಡುತ್ತಿದ್ದೇವೆ. ಮುಂದೆ ಓದಿ..

ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ
ವಾರಕ್ಕೆ ಎರಡು ಬಾರಿ ಹಾಸಿಗೆಯ ಹೊದಿಕೆಯನ್ನು ಬದಲಾಯಿಸಿ. ಹೆಚ್ಚು ಆರಾಮದಾಯಕವಾಗಿರಲು ಋತುಗಳಿಗೆ ತಕ್ಕಂತಹ ಬಟ್ಟೆಯ ಹೊದಿಕೆಯನ್ನು ಉಪಯೋಗಿಸಿ. ಬೇಸಿಗೆಯಲ್ಲಿ ಕಾಟನ್, ಚುಮುಚುಮು ಚಳಿಯಲ್ಲಿ ರೇಷ್ಮೆ ಹಾಗೂ ಕಂಬಳಿಯಂತಹ ಬೆಚ್ಚನೆಯ ಹೊದಿಕೆಗಳು ಸಹ ನಿಮ್ಮನ್ನು ಹೆಚ್ಚು ಆರಾಮದಾಯಕವೆನಿಸುತ್ತದೆ.
ದಿಂಬುಗಳನ್ನು ಸರಿಯಾಗಿರಿಸಿ
ಪ್ರತಿದಿನ ನೀವು ಎದ್ದಾಗ, ಹೊದಿಕೆಯನ್ನು ಸರಿಮಾಡಿ ದಿಂಬುಗಳನ್ನು ಸುಸ್ಥಾನದಲ್ಲಿ ಇರಿಸಿ. ತಲೆ ಹೊಟ್ಟು ಸಮಸ್ಯೆಯಿಂದ ಹೊರಬರಬೇಕಾದರೆ, ಸಾಧ್ಯವಾದಲ್ಲಿ ದಿಂಬುಗಳನ್ನು ಅಥವಾ ದಿಂಬುಗಳ ಹೊದಿಕೆಯನ್ನು ವಾರಕ್ಕೆ ಮೂರು ಬಾರಿ ಬದಲಾಯಿಸುವ ಪದ್ಧತಿಯನ್ನು ಅನುಸರಿಸಿ.
ಹಾಸಿಗೆಯನ್ನು ಬಲವಾಗಿ ಹೊಡೆಸುವುದು
ಹಾಸಿಗೆ ವೃತ್ತಿಪರರಿಂದ ತಿಂಗಳಿಗೆ ಒಮ್ಮೆಯಾದರೂ ಬಲವಾಗಿ ಹೊಡಿಸಿ ಸುಸ್ಥಿತಿಯಲ್ಲಿರಿಸುವುದು. ಇದರಿಂದ ಹಾಸಿಗೆಯ ಒಳಭಾಗಗಳಲ್ಲಿ ಅಡಗಿರುವ ತಿಗಣೆಗಳು ಹಾಗೂ ಇತರೆ ಕೀಟಗಳನ್ನು ಹೊರಹಾಕಬಹುದು ಮತ್ತು ಹಾಸಿಗೆಯಲ್ಲಿರುವ ನಾರು ಸಹ ಹದಗೊಂಡು ಹಾಸಿಗೆ ಆರಾಮದಾಯಕವೆನಿಸುವುದು.
ನಿರ್ವಾಯುವಿಕೆಯಿಂದ ಹಾಸಿಗೆ ಸ್ವಚ್ಛವಾಗಿಡಿ
ಇತ್ತೀಚಿನ ಹೊಸ ಆವಿಶ್ಕಾರವಾದ ನಿರ್ವಾಯು (vaccum) ಪದ್ಧತಿಯಿಂದ ಹಾಸಿಗೆಯನ್ನು ಸ್ವಚ್ಛಾ ಮಾಡಿ. ಈ ರೀತಿಯ ಒಳ್ಳೆಯ ಸಾಧನವನ್ನು ಆಯ್ಕೆ ಮಾಡಿ, ಇದರಿಂದ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಅಂದವನ್ನು ಹೆಚ್ಚಿಸಿಕೊಳ್ಳಿ.
ಸೂಕ್ತವಾದ ಹಾಸಿಗೆಯ ಹೊದಿಕೆಯನ್ನು ಆಯ್ದುಕೊಳ್ಳಿ
ನಿಮಗೆ ಸರಿಹೊಂದುವ ಸೂಕ್ತ ಮಾದರಿಯ ಹಾಸಿಗೆಯ ಹೊದಿಕೆನ್ನೇ ಆಯ್ದುಕೊಳ್ಳಿ. ಹೌದು, ಧೂಳು ಹೆಚ್ಚು ಆವರಿಸುವ ಹೊದಿಕೆಯನ್ನು ಬಳಸಬೇಡಿ. ಇದರಿಂದ ಅಲರ್ಜಿ ಹಾಗೂ ಚರ್ಮದ ಸೋಂಕಿನ ಸಮಸ್ಯೆಗಳು ಹೆಚ್ಚಾಗುತ್ತದೆ.
ಆಹಾರಪದಾರ್ಥವನ್ನು ಹಾಸಿಗೆ ಬಳಿ ಇಡಬೇಡಿ
ಆಹಾರಪದಾರ್ಥಗಳನ್ನು ಹಾಸಿಗೆ ಬಳಿ ಇಡದಿರುವುದು ಸಹ ಬಹು ಮುಖ್ಯ ಅಂಶ. ಇದರಿಂದ ಅನಾವಶ್ಯಕ ಹಾಗೂ ಹಾನಿಕಾರಕ ಕೀಟಗಳನ್ನು ದೂರವಿಡಬಹುದು. ಆಹಾರಪದಾರ್ಥವನ್ನು ಮೇಜಿನ ಮೇಲೆ ಅಥವಾ ಕಪಾಟಿನ ಸ್ಥಳದಲ್ಲಿ ಇರಿಸುವುದು ಸೂಕ್ತ.



Click it and Unblock the Notifications

