Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಮನೆಯ ಗೋಡೆಗಳ ಮೇಲಿನ ಕಲೆಗಳ ನಿವಾರಣೆಗೆ ಸರಳ ಸೂತ್ರ
ಯಾವುದೇ ಮನೆಯಲ್ಲಿ ಬಣ್ಣವು ಅಲ್ಲಲ್ಲಿ ಕಳಚಿಕೊಂಡು ಬರುವುದು ಸಾಮಾನ್ಯ. ಅಂತಹ ಜಾಗದಲ್ಲಿ ಅದೇ ಬಣ್ಣವನ್ನು ಬಳಿದಾಗ ತೇಪೆ ಹಾಕಿದ ರೀತಿಯಲ್ಲಿ ಅದು ಕಾಣಿಸಿಕೊಳ್ಳುತ್ತದೆ. ಇಂತಹ ತೇಪೆಗಳು (ಕಲೆ, ಗುರುತು) ಯಾವುದೇ ಮನೆಯ ಅಂದವನ್ನು ಕೆಡಿಸಿ ಹಾಕುತ್ತವೆ. ಹಾಗೆಂದು ಇಡೀ ಮನೆಗೆ ಬಣ್ಣವನ್ನು ಪುನಃ ಬಳಿಯಲು ಹೋದರೆ ಅಧಿಕ ಶ್ರಮ ಮತ್ತು ಹಣದ ವ್ಯಯವಾಗುತ್ತದೆ.
ಆದರೆ ಅಂತಹ ತೇಪೆಗಳನ್ನು ಸಹ ನೀವು ಅಧಿಕ ಶ್ರಮವಿಲ್ಲದೆ ಮುಚ್ಚಬಹುದು. ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿದ್ದರೆ ನಿಮ್ಮ ಮನೆಯ ಮಾಲೀಕರು ಇದಕ್ಕೆ ತಕ್ಷಣ ಅಷ್ಟು ಸುಲಭವಾಗಿ ಒಪ್ಪದೆ ಇರಬಹುದು. ಹಾಗಾದರೆ ಈ ತೇಪೆಗಳನ್ನು ಮುಚ್ಚುವುದು ಹೇಗೆ? ಅದಕ್ಕಾಗಿಯೇ ಈ ಅಂಕಣ ಬರೆದಿರುವುದಲ್ಲವೇನು! ಮೊದಲು ನಿಮಗೆ ಹೊಂದುವಂತಹ ಪರಿಹಾರವನ್ನು, ನಿಮ್ಮ ಬಳಿಯಿರುವ ಬಜೆಟ್‍ನಲ್ಲಿ ಆಲೋಚಿಸಿ.

ಆದರು ಇಲ್ಲಿ ನೀಡಿರುವ ಮೂರು ಸಲಹೆಗಳು ನಿಮ್ಮ ಮನೆಯಲ್ಲಿ ಒದ್ದೆಯಾಗಿರುವ ತೇಪೆಗಳಿದ್ದರೆ ಸರಿ ಹೊಂದುವುದಿಲ್ಲ ಎಂಬುದನ್ನು ಮನಗಾಣಿರಿ. ಉದಾಹರಣೆಗೆ ಒದ್ದೆಯಾದ ತೇಪೆಗಳಿಗೆ ಇನ್ನಿತರ ಪರಿಹಾರೋಪಾಯಗಳ ಅಗತ್ಯವಿರುತದೆ. ಅವುಗಳ ಮೇಲೆ ಪೋಸ್ಟರ್ ಹಚ್ಚುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಾಗಾದರೆ ನಿಮಗೆ ಅರ್ಥವಾಗಿರಬಹುದು ನಾವಿಲ್ಲಿ ಮಾತನಾಡುತ್ತಿರುವುದು ಬಣ್ಣ ಕಿತ್ತು ಬಂದ ಮತ್ತು ಗೀರುಗಳು ಬಿದ್ದ ಗೋಡೆಗಳು ಮತ್ತು ಅವುಗಳ ಮೇಲೆ ನೀವು ಹಚ್ಚಿದ ಬಣ್ಣದಿಂದ ಆದ ತೇಪೆಗಳ ಬಗ್ಗೆ.. ಬನ್ನಿ ಗೋಡೆಗಳ ಮೇಲೆ ಇರುವ ತೇಪೆಗಳನ್ನು ಮುಚ್ಚುವುದು ಹೇಗೆ ಎಂಬುದನ್ನು ಓದಿ..
ಕನ್ನಡಿಯನ್ನು ಹಾಕಿ
ಒಂದು ವೇಳೆ ನಿಮ್ಮ ಮನೆಯಲ್ಲಿನ ಗೋಡೆಯ ಮೇಲೆ ತೇಪೆ ಕಂಡು ಬಂದರೆ, ಅಲ್ಲಿ ಒಂದು ಕನ್ನಡಿಯನ್ನು ಹಾಕುವುದು ಒಂದು ಅದ್ಭುತವಾದ ಆಲೋಚನೆಯಾಗಿರುತ್ತದೆ. ಒಂದು ಸುಂದರವಾದ ಅಲಂಕಾರಿಕ ಕನ್ನಡಿಯನ್ನು ಕೊಂಡು ತಂದು ತೇಪೆಯಿರುವ ಗೋಡೆಗೆ ಹಾಕಿರಿ. ಇದರಿಂದ ತೇಪೆಯು ಮುಚ್ಚಿಕೊಳ್ಳುತ್ತದೆ ಮತ್ತು ಮನೆಯ ಅಲಂಕಾರವು ಹೆಚ್ಚುತ್ತದೆ.
ನಿಮ್ಮ ಶೆಲ್ಫ್ ಅನ್ನು ಜರುಗಿಸಿ
ಎಲ್ಲಾದರು ತೇಪೆ ಕಂಡು ಬಂದರೆ ಆ ತೇಪೆ ಮುಚ್ಚುವಂತೆ ನಿಮ್ಮ ಮನೆಯಲ್ಲಿನ ಬುಕ್ ಶೆಲ್ಫ್ ಅದರೆ ಎದುರಿಗೆ ಇಡಬಹುದು. ಮರದ ಈ ಪೀಠೋಪಕರಣಗಳು ಎತ್ತರವಾಗಿದ್ದು, ತಮ್ಮ ಹಿಂಬದಿ ಕಾಣದಂತೆ ಮಾಡುತ್ತವೆ. ಈ ಮೂಲಕವು ಸಹ ನಿಮ್ಮ ಮನೆಯನ್ನು ಅಲಂಕಾರಗೊಳಿಸಬಹುದು.
ಫ್ಯಾಮಿಲಿ ಫೋಟೊಗಳು
ನಿಮ್ಮ ಮನೆಯಲ್ಲಿನ ತೇಪೆಗಳನ್ನು ಮುಚ್ಚುವುದು ಹೇಗೆ ಗೊತ್ತೆ? ಒಂದು ವೇಳೆ ಮನೆಯಲ್ಲಿ ನಿಮ್ಮ ಫ್ಯಾಮಿಲಿಯ ಅಧಿಕ ಫೋಟೊಗಳಿದ್ದಲ್ಲಿ, ಅವುಗಳನ್ನು ಒಂದು ಸುಂದರವಾದ ಫ್ರೇಮ್‍ಗೆ ಹಾಕಿ, ತೇಪೆ ಇರುವ ಗೋಡೆಯಲ್ಲಿ ತೇಪೆ ಕಾಣದಂತೆ ಹಾಕಿ. ಇದರಿಂದ ಗೋಡೆಯು ಸುಂದರವಾಗಿ ಕಾಣುತ್ತದೆ ಮತ್ತು ನಿಮ್ಮ ಹಳೆಯ ನೆನಪುಗಳು ಇದನ್ನು ನೋಡಿದಾಗಲೆಲ್ಲ ಮರುಕಳಿಸುತ್ತವೆ.
ಪೆಯಿಂಟೆಡ್ ಫ್ಯಾಬ್ರಿಕ್
ಒಂದು ವೇಳೆ ನಿಮಗೆ ಫ್ಯಾಬ್ರಿಕ್ ಮೇಲೆ ಪೆಯಿಂಟಿಂಗ್ ಮಾಡುವ ಹವ್ಯಾಸವಿದ್ದಲ್ಲಿ, ಅದನ್ನು ತೋರಿಸಿಕೊಳ್ಳಲು ಇದು ನಿಮಗೆ ಸದಾವಕಾಶವನ್ನು ನೀಡುತ್ತದೆ. ಒಂದು ವೇಳೆ ನಿಮ್ಮ ಬಳಿ ಫ್ಯಾಬ್ರಿಕ್‌ನಲ್ಲಿ ಮಾಡಿದ ಪೆಯಿಂಟಿಂಗ್ ಇಲ್ಲವಾದಲ್ಲಿ ಅದನ್ನು ನೀವು ಅಂಗಡಿಯಲ್ಲಿ ಖರೀದಿಸಬಹುದು. ಇವುಗಳನ್ನು ತೇಪೆ ಇರುವ ಭಾಗದಲ್ಲಿ ತೂಗು ಹಾಕುವ ಮೂಲಕ ತೇಪೆಗಳನ್ನು ಮುಚ್ಚ ಬಹುದು. ನಿಮ್ಮ ಕಲಾ ಪ್ರಜ್ಞೆಯನ್ನು ಸಹ ತೋರಿಸಬಹುದು. ಆದರೆ ಒಂದು ನೆನಪಿಡಿ, ಈ ಬಟ್ಟೆಯನ್ನು ಮೊದಲು ಸ್ಟಾರ್ಚ್‌ನಲ್ಲಿ ನೆನೆಸಲು ಮಾತ್ರ ಮರೆಯಬೇಡಿ. ಇದರಿಂದ ಇದು ತುಂಬಾ ಕಾಲ ಬಾಳಿಕೆ ಬರುತ್ತದೆ.
ಪೆಯಿಂಟಿಂಗ್ ಕೊಂಡುಕೊಳ್ಳಿ
ಪೆಯಿಂಟಿಂಗ್‌ಗಳು ಗೋಡೆಗಳಲ್ಲಿರುವ ತೇಪೆಗಳನ್ನು ಮುಚ್ಚಲು ಒಂದು ಒಳ್ಳೆಯ ಮಾರ್ಗಗಳಾಗಿವೆ. ಒಂದು ವೇಳೆ ನೀವು ಇವುಗಳು ದುಬಾರಿಯೆಂದು ಆಲೋಚಿಸಿದಲ್ಲಿ, ಚಿಂತೆ ಬಿಡಿ. ನಿಮಗಾಗಿ ಆನ್-ಲೈನ್‍ನಲ್ಲಿ ಮತ್ತು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಹ ಪೆಯೆಂಟಿಂಗ್‌ಗಳು ದೊರೆಯುತ್ತವೆ. ಇವುಗಳನ್ನು ಕೊಂಡುಕೊಂಡು ನಿಮ್ಮ ಗೋಡೆಗಳಲ್ಲಿರುವ ತೇಪೆಗಳನ್ನು ಮುಚ್ಚಬಹುದು. ಈ ಸಲಹೆಗಳನ್ನು ಪಾಲಿಸಿ ನಿಮ್ಮ ಗೋಡೆಯಲ್ಲಿನ ನಿಮ್ಮ ಮನಸ್ಸಿಗೆ ಮುಜುಗರ ತರುವ ಭಾಗಗಳನ್ನು ಮುಚ್ಚಿ.



Click it and Unblock the Notifications



