ಬಟ್ಟೆಗಳ ಬಣ್ಣ ಮಾಸದಂತೆ ತಡೆಯುವ ಅದ್ಭುತ ವಿಧಾನಗಳು

By Arshad

ನಾವು ನಿತ್ಯವೂ ತೊಡುವ ಬಟ್ಟೆಗಳು ಪ್ರತಿ ಬಾರಿ ಒಗೆದಾಗಲೂ ಕೊಂಚವಾಗಿ ಮಾಸುತ್ತಾ ಬರುತ್ತವೆ. ಹೆಚ್ಚಿನ ಬಟ್ಟೆಗಳು ಆರೆಂಟು ಬಾರಿ ತೊಳೆಯುವುದರಲ್ಲಿಯೇ ತಮ್ಮ ಮೂಲ ಬಣ್ಣವನ್ನು ಕಳೆದುಕೊಂಡು ಮೇಲ್ಮೈಯಲ್ಲಿ ಬಣ್ಣ ಮಾಸಿ ಹಳೆಯದಂತೆ ಕಾಣುವ ಬಟ್ಟೆಗಳನ್ನು ತೊಡಲು ಅಸಹ್ಯ ಹುಟ್ಟಿಸುತ್ತವೆ. ಅಷ್ಟೊಂದು ಅಸ್ಥೆಯಿಂದ ಕೊಂಡಿದ್ದ ಬಟ್ಟೆಗೆ ಒದಗಿದ ಈ ಪರಿಗೆ ನೂಲು ನೇದ ನೇಕಾರನಿಂದ ಹಿಡಿದು ಒಳ್ಳೆಯ ಬಟ್ಟೆ ಎಂದು ಕೊಟ್ಟ ಅಂಗಡಿಯವನವರೆಗೆ ಎಲ್ಲರನ್ನೂ ಬೈದುಕೊಂಡು ಇದರ ಬಳಕೆಯನ್ನು ಮನೆಗೆ ತೊಡಲು ಅಥವಾ ಅಡುಗೆಮನೆಯ ಒರಸುಬಟ್ಟೆಯಾಗಿ ಬಳಸಲು ಒಲ್ಲದ ಮನಸ್ಸಿನಿಂದ ಬಿಟ್ಟು ಬಿಡುತ್ತೀರಿ. ಆದರೆ ಇಂತಹ ಅವ್ಯವಸ್ಥೆಗೆ ಸುಮಾರು ಪ್ರಮಾಣದಲ್ಲಿ ನಾವೇ ಕಾರಣರು ಎಂದು ಗೊತ್ತಿತ್ತೇ? ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ಹೌದು, ಬಟ್ಟೆಯನ್ನು ಸರಿಯಾಗಿ ಬಳಸದೇ, ಸರಿಯಾದ ಕ್ರಮದಲ್ಲಿ ಒಗೆಯದೇ ಇರುವುದರಿಂದ ಈ ಸ್ಥಿತಿ ಬಂದಿದೆ. ಅಲ್ಲದೇ ಬೆಲೆ ಅಗ್ಗ ಎಂದು ಕೊಂಡ ಬಟ್ಟೆಗಳು ಸುಲಭವಾಗಿ ಬಣ್ಣವನ್ನು ಕಳೆದುಕೊಂಡು ಇದರೊಂದಿಗಿದ್ದ ಇತರ ಬಟ್ಟೆಗಳಿಗೆಲ್ಲಾ ಮೆತ್ತಿಕೊಂಡು ತಾವೂ ಕೆಡುವುದಲ್ಲದೇ ವನದಲ್ಲಿರುವ ಇತರ ಬಟ್ಟೆಗಳನ್ನೂ ಕೆಡಿಸುತ್ತವೆ. ಆದ್ದರಿಂದ ಕೊಂಚ ಬೆಲೆ ಹೆಚ್ಚಾದರೂ ಚಿಂತಿಲ್ಲ, ಉತ್ತಮ ಗುಣಮಟ್ಟದ ಬಟ್ಟೆಯನ್ನು ಕೊಳ್ಳುವುದು ಜಾಣತನ. ಇಂದು ಲಭ್ಯವಿರುವ ಉತ್ತಮ ಗುಣಮಟ್ಟದ ಎಲ್ಲಾ ಬಟ್ಟೆಗಳಲ್ಲಿ ಒಗೆಯುವ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಿರುತ್ತಾರೆ, ಇದನ್ನು ಪಾಲಿಸುವ ಮೂಲಕ ಹೆಚ್ಚು ಕಾಲ ಬಟ್ಟೆಗಳನ್ನು ಮಾಸದಂತೆ ತಡೆಯಬಹುದು. ರಫ್ ಅಂಡ್ ಟಫ್‌ನಂತಿರುವ ಜೀನ್ಸ್ ಪ್ಯಾಂಟ್‌ಗಳನ್ನು ಒಗೆಯುವುದು ಹೇಗೆ?

ಆದರೆ ಇದಕ್ಕೂ ಮಿಗಿಲಾಗಿ ನಾವು ಅನುಸರಿಸಬಹುದಾದ ಕೆಲವು ಕ್ರಮಗಳ ಮೂಲಕ ಬಟ್ಟೆಗಳು ಮಾಸದಂತೆ ತಡೆಗಟ್ಟಬಹುದು. ಬಟ್ಟೆ ಒಗೆಯುವ ಯಂತ್ರದಲ್ಲಿ ಬಟ್ಟೆ ಒಗೆಯುವುದಾದರೆ ಅದಕ್ಕೆ ಸೂಕ್ತ ಪೌಡರ್‌ ಹಾಗೂ ಬಟ್ಟೆಗೆ ಸೂಕ್ತವಾದ ನಿಯಂತ್ರಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಬಾಳಿಕೆ ಪಡೆಯಬಹುದು. ಕೈಯಲ್ಲಿಯೇ ಒಗೆಯುವ ಬಟ್ಟೆಗಳಿಗೆ ಒಗೆಯುವ ಮುನ್ನ ಕೆಲವು ಗಂಟೆಗಳ ಕಾಲ ನೆನೆಸಿಡುವ ಮೂಲಕ ಉತ್ತಮ ಒಗೆತ ಮತ್ತು ಬಾಳಿಕೆಯನ್ನು ಪಡೆಯಬಹುದು. ಇಂತಹ ಉತ್ತಮವಾದ ಹಲವು ಸಲಹೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

ಒಳಭಾಗ ಹೊರಬರುವಂತೆ ಮಡಚಿ ಒಗೆಯಿರಿ

ಒಳಭಾಗ ಹೊರಬರುವಂತೆ ಮಡಚಿ ಒಗೆಯಿರಿ

ವಾಷಿಂಗ್ ಮೆಷೀನ್ ನಲ್ಲಿ ಗಾಢವರ್ಣದ ಬಟ್ಟೆಗಳನ್ನು ಒಗೆಯುವಾಗ ಈ ಬಟ್ಟೆಗಳ ಒಳಭಾಗ ಹೊರಬರುವಂತೆ ಮಾಡಿ ಬಳಿಕ ಒಗೆಯುವುದರಿಂದ ಉತ್ತಮ ಬಾಳಿಕ ಬರುತ್ತದೆ. ಇದರಿಂದ ಬಟ್ಟೆಯ ಹೊರಭಾಗದಲ್ಲಿ ಅಂಟಿಕೊಂಡಿದ್ದ ಕೊಳೆ ಹೋಗುತ್ತದೋ ಇಲ್ಲವೋ ಎಂಬ ಅನುಮಾನ ಬೇಡ. ಇದು ಇತರ ಬಟ್ಟೆಯಂತೆ ಹೊರಬರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಳಭಾಗ ಹೊರಬರುವಂತೆ ಮಡಚಿ ಒಗೆಯಿರಿ

ಒಳಭಾಗ ಹೊರಬರುವಂತೆ ಮಡಚಿ ಒಗೆಯಿರಿ

ಆದರೆ ಮರಳು ಮೊದಲಾದ ಭಾರವಾದ ಕಣಗಳಿದ್ದರೆ ಮಾತ್ರ ಆ ಕಣಗಳು ಉಳಿದುಕೊಳ್ಳುತ್ತವೆ. ಆದರೆ ಸಡಿಲವಾಗಿರುತ್ತವೆ. ಒಣಗಿದ ಬಳಿಕ ನವಿರಾಗಿ ಕೊಡವಿಕೊಳ್ಳುವ ಮೂಲಕ ಮರಳನ್ನು ನಿವಾರಿಸಬಹುದು. ಬಟ್ಟೆಯನ್ನು ಮಾಸದಂತೆ ತಡೆಯಲು ಇದು ಪ್ರಥಮವಾಗಿ ಆಗಬೇಕಾದ ಪ್ರಯತ್ನವಾಗಿದೆ.

ಶಿರ್ಕಾದಲ್ಲಿ ಮುಳುಗಿಸಿ

ಶಿರ್ಕಾದಲ್ಲಿ ಮುಳುಗಿಸಿ

ಒಂದು ವೇಳೆ ಕೈಯಲ್ಲಿಯೇ ಒಗೆಯುವುವುದಾದರೆ ಅರ್ಧ ಬಕೆಟ್ ನೀರಿಗೆ ಒಂದು ಕಪ್ ಶಿರ್ಕಾ ಮತ್ತು ಅಗತ್ಯವಿರುವಷ್ಟು ಡಿಟರ್ಜೆಂಟ್ ಪೌಡರ್ ಹಾಕಿ ಕಲಕಿ ಬಟ್ಟೆಗಳನ್ನು ನೆನೆಸಿಡಿ. ಐದು ನಿಮಿಷದ ಬಳಿಕ ಒಗೆದರೆ ಬಟ್ಟೆಗಳು ಸ್ವಚ್ಛವಾಗುವ ಜೊತೆಗೇ ಬಣ್ಣವನ್ನೂ ಬಹುಕಾಲ ಉಳಿಸಿಕೊಳ್ಳುತ್ತವೆ. ವಿಶೇಷವಾಗಿ ಕಪ್ಪು ಮತ್ತು ಇತರ ಗಾಢವರ್ಣದ ಬಟ್ಟೆಗಳಿಗೆ ಈ ವಿಧಾನ ಸೂಕ್ತವಾಗಿದೆ.

ನೇರವಾಗಿ ಬಿಸಿಲಿನಲ್ಲಿ ಒಣಗಿಸಬೇಡಿ

ನೇರವಾಗಿ ಬಿಸಿಲಿನಲ್ಲಿ ಒಣಗಿಸಬೇಡಿ

ಅಗಸರು ಒಗೆದ ಬಟ್ಟೆಗಳು ಬಲುಬೇಗನೇ ಮಾಸಲು ಅವರು ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸುವುದೇ ಕಾರಣ. ಏಕೆಂದರೆ ಸೂರ್ಯನ ಕಿರಣಗಳಲ್ಲಿ ಬಟ್ಟೆಗಳ ನೂಲುಗಳನ್ನು ಬಿಳಿಚಿಸುವ ಶಕ್ತಿಯಿದೆ. ಇದು ಬಿಳಿಬಟ್ಟೆಯನ್ನೂ ಮಾಸಲು ಮಾಡುತ್ತದೆ. ಒಂದು ವೇಳೆ ಬಿಸಿಲಿನಲ್ಲಿ ಒಣಗಿಸುವುದು ಅನಿವಾರ್ಯವಾಗಿದ್ದರೆ ಒಳಭಾಗ ಹೊರಬರುವಂತೆ ಮಡಚಿ ಒಣಗಿಸಿ, ಮದ್ಯಾಹ್ನದ ಬಿರುಬಿಸಿಲು ಬೀಳದಂತೆ ಎಚ್ಚರವಹಿಸಿ.

 ತಣ್ಣೀರಿನಲ್ಲಿ ತೊಳೆಯಿರಿ

ತಣ್ಣೀರಿನಲ್ಲಿ ತೊಳೆಯಿರಿ

ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿಡುವುದು, ತೊಳೆಯುವ ವೇಳೆ ಬಿಸಿನೀರನ್ನು ಬಳಸುವ ಮೂಲಕವೂ ಬಟ್ಟೆ ಬಣ್ಣಬಿಡಲು ಕಾರಣವಾಗುತ್ತದೆ. ಆದ್ದರಿಂದ ಬಟ್ಟೆಗಳನ್ನು ಒಗೆಯಲು ಸಾಧ್ಯವಾದಷ್ಟು ಮಟ್ಟಿಗೆ ತಣ್ಣೀರನ್ನೇ ಬಳಸಿ. ಅನಿವಾರ್ಯ ಸಂದರ್ಭಗಳಲ್ಲಿ ಉಗುರುಬೆಚ್ಚನೆಯ ನೀರನ್ನು ಬಳಸಿ.

X
Desktop Bottom Promotion