Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಊಹೆಗೂ ನಿಲುಕದ ವಿನಿಗರ್‌ನ ಅಸಾಧಾರಣ ಪ್ರಯೋಜನಗಳೇನು?
ವಿನಿಗರ್ ನಮ್ಮ ಮನೆಯಲ್ಲಿ ಒಮ್ಮೊಮ್ಮೆ ದೊಡ್ಡ ಬಾಟಲಿಗಳಲ್ಲಿ ಉಳಿದು ಬಿಡುವುದು ಸಹಜ. ಆಗ ಇದರಿಂದ ನಾವೇನು ಮಹಾ ಅಡಿಗೆ ಮಾಡುತ್ತೇವೆಯೆಂದೊ, ಅಥವಾ ಯಾವಾಗಲೋ ಬಳಸುತ್ತೇವೆ ಬಿಡು ಎಂದೋ ಎಸೆಯಬೇಡಿ. ಕೇವಲ ಚೈನೀಸ್ ಅಡುಗೆ ಮಾಡಲು, ಅಥವಾ ಗೋಬಿ ಮಂಚೂರಿ ಮುಂತಾದ ಆಹಾರ ಪದಾರ್ಥಗಳನ್ನು ತಯಾರಿಸಲು ಮಾತ್ರವಲ್ಲದೆ ಇನ್ನುಳಿದ ಕೆಲಸಗಳಿಗು ಸಹ ಬಳಸಬಹುದು.
ಇದರ ಉಪಯೋಗವನ್ನು ಮನಗಂಡರೆ, ಇದರಿಂದ ಸಾವಿರಾರು ಕೆಲಸಗಳನ್ನು ನಾವು ಮಾಡಬಹುದು. ಬನ್ನಿ ಇಲ್ಲಿ ನಾವು ನಿಮಗಾಗಿ ವಿನಿಗರ್‌ನ ಅಸಾಧರಣ ಉಪಯೋಗಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ, ಮುಂದೆ ಓದಿ...

ಬಾಯಿ ಹುಣ್ಣಿಗೆ ಉತ್ತಮ ಪರಿಹಾರ
ಬಾಯಿ ಹುಣ್ಣು ಆದರೆ ಅಪ್ಪಲ್ ಸಿಡೆರ್ ವಿನಿಗರ್ ಅನ್ನು ಸ್ವಲ್ಪ ಬೆಚ್ಚಗಿನ ನೀರಿಗೆ ಬೆರೆಸಿ ಬಾಯಿ ಮುಕ್ಕಳಿಸಿ. ಅಥವಾ ವಿನಿಗರ್ ಅನ್ನು ಜೇನಿನ ಜೊತೆ ಬೆರೆಸಿ ಬಳಸಿ. ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇರುವೆಗಳನ್ನು ತೊಲಗಿಸಲು
ಮನೆಯಲ್ಲಿ ಇರುವೆಗಳ ಸಾಲನ್ನು ನೋಡಿ ನೋಡಿ ಬೇಸತ್ತಿರಾ? ಏಕೆ ಯೋಚನೆ ಮಾಡುವಿರಿ. ಈ ಇರುವೆಗಳು ವಿನಿಗರ್ ಅನ್ನು ದ್ವೇಷಿಸುತ್ತವೆ. ವಿನಿಗರ್ ಅನ್ನು, ನೀರಿನೊಂದಿಗೆ ಸಮ ಪ್ರಮಾಣದಲ್ಲಿ ಬೆರೆಸಿ, ಇರುವೆಗಳು ಓಡಾಡುವ ಸ್ಥಳದಲ್ಲಿ ಚಿಮುಕಿಸಿ. ಇರುವೆಗಳು ನಿಮ್ಮ ಮನೆಯಿಂದ ಜಾಗ ಖಾಲಿ ಮಾಡುತ್ತವೆ. ಗ್ಯಾಸ್ ಸಿಲಿಂಡರ್ ಸುರಕ್ಷತೆ: ತಪ್ಪದೇ ಇಂತಹ ಸೂಚನೆಗಳನ್ನು ಪಾಲಿಸಿ!
ಸ್ನಾಯುಗಳಿಗೆ ಹುರುಪು ತುಂಬಲು
ಅಪ್ಪಲ್ ಸಿಡೆರ್ ವಿನಿಗರ್ ನಿಮ್ಮ ದೇಹದಲ್ಲಿರುವ ಲ್ಯಾಕ್ಟಿಕ್ ಆಮ್ಲವನ್ನು ಹೊಡೆದೋಡಿಸುತ್ತವೆ. ಇವುಗಳು ನಮ್ಮ ಸ್ನಾಯುಗಳ ವ್ಯಾಯಾಮಕ್ಕೆ ತೀರ ಅತ್ಯಾವಶ್ಯಕ. ಅದಕ್ಕಾಗಿ ಒಂದು ಚಮಚ ವಿನಿಗರ್ ಅನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ. ಇದನ್ನು ಬಟ್ಟೆಯಲ್ಲಿ ಅದ್ದಿಕೊಂಡು ನೋವು ಇರುವ ಭಾಗಕ್ಕೆ ಹಾಕಿ, 20 ನಿಮಿಷದ ನಂತರ ತೊಳೆಯಿರಿ.
ಸ್ಟಿಕರ್ ತೆಗೆಯಲು
ಸ್ವಲ್ಪ ವಿನಿಗರ್ ಅನ್ನು ತೆಗೆದುಕೊಂಡು ಸ್ಟೌವ ಮೇಲೆ ಆಗಲಿ ಅಥವಾ ಓವೆನ್‍ನಲ್ಲಾಗಲಿ ಕಾಯಿಸಿ. ಅದರಲ್ಲಿ ಒಂದು ಬಟ್ಟೆ ತುಂಡನ್ನು ಅದ್ದಿ, ನಂತರ ಅದನ್ನು ಸ್ಟಿಕರ್ ಮೇಲೆ ಇಡಿ. ಆ ಸ್ಟಿಕರ್ ನೋಡಿ ಸ್ವಲ್ಪ ಹೊತ್ತಿನಲ್ಲಿ ಕಿತ್ತರೆ ನಿಮ್ಮ ಕೈಗೆ ಬರುತ್ತದೆ. ಕಾರ್ಪೆಟ್ ಮೇಲೆ ಬಿದ್ದ ಒಡೆದ ಗಾಜುಗಳನ್ನು ಸ್ವಚ್ಛಗೊಳಿಸುವುದು ಹೇಗೆ?
ಆಹಾರದಲ್ಲಿ ಖಾರ ಹೆಚ್ಚಾದರೆ ಕಮ್ಮಿ ಮಾಡಲು
ನಿಮ್ಮ ಊಟ ತಿಂಡಿಯಲ್ಲಿ ಖಾರ ಹೆಚ್ಚಾದರೆ ಏನು ಮಾಡುವುದು? ಅದರಲ್ಲೂ ಅತಿಥಿಗಳು ಬಂದಿದ್ದಾರೆಂದು ಅವರಿಗಾಗಿ ವಿಶೇಷ ಅಡಿಗೆ ಮಾಡಿದಾಗ ಈಗಾದರೆ ಏನು ಮಾಡುವುದು? ಯೋಚನೆ ಮಾಡಬೇಡಿ. ಅದಕ್ಕೆ ಆಪದ್ಭಾಂಧವನಾಗಿ ವಿನಿಗರ್ ಬಳಸಿ. ಅದಕ್ಕಾಗಿ ನೀವು ಬಿಳಿಯ ಅಥವಾ ಅಪ್ಪಲ್ ಸಿಡೆರ್ ವಿನಿಗರ್ ಅನ್ನು ಬಳಸಬಹುದು. ಖಾರ ಕಡಿಮೆ ಮಾಡಲು ಒಂದು ಟೀ ಚಮಚದಷ್ಟು ವಿನಿಗರ್ ಅನ್ನು ಬಳಸಿ ಸಾಕು.



Click it and Unblock the Notifications


