Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲಿರುವ ಹಾಸಿಗೆಯ ಸ್ವಚ್ಛತೆ ಹೀಗಿರಲಿ
ಇಡೀ ದಿನವನ್ನು ನಾವು ಕೆಲಸ, ಕಾರ್ಯ, ಸಂಸಾರ, ಇತ್ಯಾದಿ ಜಂಜಾಟಗಳಿಂದ ಸಂಪೂರ್ಣವಾಗಿ ಕಳೆದು ಬಂದು, ನೆಮ್ಮದಿಯಾಗಿ ನಮ್ಮದು ಮತ್ತು ನಮಗೆ ಎಂದು ಇರಿಸಿಕೊಳ್ಳುವಂತಹ ಕಾಲದಲ್ಲಿ ಸಿಂಹಪಾಲನ್ನು ನೀಡುವುದು ನಿದ್ದೆಗೆ. ಈ ನಿದ್ದೆ ಚೆನ್ನಾಗಿ ಬರಬೇಕು ಎಂದರೆ ಪ್ರಶಾಂತವಾದ ವಾತಾವರಣ ಇರುವ ಜೊತೆಗೆ ಸುಖಕರವಾದ ಹಾಸಿಗೆಯು ಸಹ ಇರಲೇಬೇಕು. ಈ ಹಾಸಿಗೆ, ಹೊದಿಕೆಗಳು ಮತ್ತು ಪರಿಸರ ಎಲ್ಲವೂ ಕೂಡಿದಾಗ ಮಾತ್ರ ನಿಮಗೆ ನಿದ್ರಾ ದೇವಿಯ ಕೃಪೆ ಲಭಿಸುತ್ತದೆ. ಕೆಲವೊಮ್ಮೆ ನಿಮ್ಮ ಹಾಸಿಗೆಯು ನಿಮ್ಮ ನಿದ್ದೆಯನ್ನು ಕಸಿದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕಾರಣ ಅದು ಕೊಳಕಾಗಿರುತ್ತದೆ.
ಹಾಸಿಗೆ ಕೊಳಕಾಗಿರುವುದಕ್ಕು ನಮ್ಮ ನಿದ್ದೆಗೂ ಏನೂ ಸಂಬಂಧ ಎಂದು ಆಲೋಚಿಸುತ್ತಿರುವಿರಾ? ಇದೆ ಎಲ್ಲಿ ಆರೋಗ್ಯಕರವಾದ ಹಾಸಿಗೆ ಇರುತ್ತದೆಯೋ, ಅಲ್ಲಿ ಆರೋಗ್ಯಕರವಾದ ನಿದ್ದೆ ಸಹ ಇರುತ್ತದೆ. ಹಾಸಿಗೆಯ ಆರೋಗ್ಯವನ್ನು ಕಾಪಾಡಬೇಕು ಎಂದಲ್ಲಿ ಮೊದಲು ಅದರ ಸ್ವಚ್ಛತೆಗೆ ಒತ್ತು ನೀಡಬೇಕು. ಬನ್ನಿ ಇನ್ನು ತಡ ಮಾಡದೆ ಹಾಸಿಗೆಯನ್ನು ಸುಧಾರಿಸಿಕೊಳ್ಳುವ ಮತ್ತು ಅದರ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಸಲಹೆಗಳನ್ನು ಒಮ್ಮೆ ನೋಡಿಕೊಂಡು ಬರೋಣ. ಹಾಸಿಗೆ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು?

ಲಿನೆನ್ ಬದಲಾಯಿಸಿ
ವಾರಕ್ಕೆ ಎರಡು ಬಾರಿ ನಿಮ್ಮ ಹಾಸಿಗೆಯ ಲಿನೆನ್ ಬದಲಾಯಿಸಿ. ಆದಷ್ಟು ಆಯಾ ಕಾಲಕ್ಕೆ ಒಪ್ಪುವ ಫ್ಯಾಬ್ರಿಕ್ ಬಳಸಿ, ಇದರಿಂದ ನಿಮಗೆ ಮನೆಯಲ್ಲಿ ಸುಖವು ಸುಗಮವಾಗಿ ಸಿಗುವ ಮಾರ್ಗವು ದೊರೆಯುತ್ತದೆ. ಹತ್ತಿಯ ಬೆಡ್‌ಶೀಟ್‌ಗಳು ಬೇಸಿಗೆಗೆ, ರೇಷ್ಮೆಯ ಬೆಡ್‌ಶೀಟ್‌ಗಳು ಚಳಿಗಾಲಕ್ಕೆ ಮತ್ತು ಬೆಚ್ಚನೆಯ ಫ್ಯಾಬ್ರಿಕ್‌ನಂತಹ ಉಣ್ಣೆ ಬಟ್ಟೆಗಳನ್ನು ಸಹ ಚಳಿಗಾಲಕ್ಕೆ ಮತ್ತು ಮಳೆಗಾಲ ಎರಡಕ್ಕೂ ಬಳಸಬಹುದು. ಆದರೆ ಇದರಲ್ಲಿ ಧೂಳು ಕೂರದಂತೆ ಮುಖ್ಯವಾಗಿ ಕಾಪಾಡಿಕೊಳ್ಳಬೇಕು.
ದಿಂಬನ್ನು ಹಸನುಗೊಳಿಸಿ
ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಮುದುರಿಕೊಂಡ ನಿಮ್ಮ ತಲೆದಿಂಬನ್ನು ನೇರಗೊಳಿಸಿ. ಬೆಡ್‌ಶೀಟನ್ನು ಸಹ ನೇರ ಮಾಡಿ. ಒಂದು ವೇಳೆ ನಿಮಗೆ ತಲೆ ಹೊಟ್ಟು ಮುಂತಾದ ಸಮಸ್ಯೆಗಳು ಇದ್ದಲ್ಲಿ, ವಾರಕ್ಕೆ ಮೂರು ಬಾರಿಯಾದರು ತಲೆ ದಿಂಬಿನ ಕವರ್ ಬದಲಾಯಿಸಿ.
ಹಾಸಿಗೆಯನ್ನು ಹೊಡೆಯಿರಿ
ತಿಂಗಳಿಗೊಮ್ಮೆ ನಿಮ್ಮ ಹಾಸಿಗೆಯನ್ನು ವೃತ್ತಿಪರ ಹಾಸಿಗೆ ರಿಪೇರಿ ಮಾಡುವವರಿಂದ ಹೊಡೆಸಿಕೊಳ್ಳಿ. ಇದರಿಂದ ನಿಮ್ಮ ಹಾಸಿಗೆಯಲ್ಲಿ ಕೀಟಗಳು ಬಂದು ಕೂರುವುದು ತಪ್ಪುತ್ತದೆ. ಜೊತೆಗೆ ಇದರಿಂದ ನಿಮ್ಮ ಬೆನ್ನಿಗೆ ಅನುಕೂಲವು ಸಹ ಆಗುತ್ತದೆ. ಹಾಸಿಗೆಯನ್ನು ಹೊಡೆಯುವುದರಿಂದ ನಿಮ್ಮ ಹಾಸಿಗೆಯಲ್ಲಿರುವ ನಾರಿನ ಮಟ್ಟವು ಸರಿದೂಗಲು ಸಹಾಯವಾಗುತ್ತದೆ.
ಬೆಡ್ ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಮಾಡಿ
ಸರಿಯಾದ ಬ್ಲಾಂಕೆಟ್ ಅನ್ನು ಆರಿಸಿಕೊಳ್ಳಿ
ನಿಮ್ಮ ಹಾಸಿಗೆಗೆ ಸರಿಹೊಂದುವ ಒಂದು ಬ್ಲಾಂಕೆಟ್ ಅನ್ನು ಆರಿಸಿಕೊಳ್ಳಿ. ಅತಿ ಹೆಚ್ಚು ಧೂಳನ್ನು ಸೆಳೆದುಕೊಳ್ಳುವ ಬ್ಲಾಂಕೆಟ್ ಅನ್ನು ಕೊಂಡುಕೊಳ್ಳಬೇಡಿ. ಇದರಿಂದ ನಿಮ್ಮ ತ್ವಚೆಯ ಮೇಲೆ ಅಲರ್ಜಿಯ ಪರಿಣಾಮಗಳು ಕಂಡು ಬರಬಹುದು. ಹಾಸಿಗೆಯಿಂದ ತಿಗಣೆಗಳನ್ನು ಹೊಡೆದೋಡಿಸಲು ಫಲಪ್ರದ ಸಲಹೆ
ಆಹಾರವನ್ನು ದೂರ ಇಡಿ
ನಿಮ್ಮ ಬೆಡ್‌ರೂಮನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕಾದಲ್ಲಿ, ಆಹಾರವನ್ನು ಹಾಸಿಗೆಯ ಮೇಲೆ ತರಬೇಡಿ. ಆಹಾರವು ಅನಾವಶ್ಯಕ ಕೀಟಗಳನ್ನು ಹಾಸಿಗೆಯತ್ತ ಆಕರ್ಷಿತವಾಗುವಂತೆ ಮಾಡುತ್ತದೆ. ಆದ್ದರಿಂದ ಆಹಾರವನ್ನು ಹಾಸಿಗೆಯಿಂದ ದೂರ ಇಡಿ.



Click it and Unblock the Notifications


