ನಿಮ್ಮ ಆಭರಣಗಳ ಜೋಪಾನಕ್ಕಾಗಿ 6 ಸಲಹೆಗಳು

By Super

ನನ್ನ ಮುತ್ತಿನ ಕಿವಿಯೋಲೆಗಳು ಹಳದಿ ಬಣ್ಣಕ್ಕೇಕೆ ತಿರುಗಿದೆ?ಎಂದು ನೀವು ಎಂದಾದರೂ ಪರಿತಪಿಸಿದ್ದೀರಾ? ಇದಕ್ಕಾಗಿ ನಿಮ್ಮ ಆಭರಣ ಅಂಗಡಿಯನ್ನು ದೂರುವುದು ಸರಿಯಲ್ಲ. ಇದು ನಿಮ್ಮ ತಪ್ಪುನಿಂದ ಕೂಡ ಆಗಿರಬಹುದು. ಎಲ್ಲಾ ಆಭರಣಗಳೂ ಒಂದು ಅಪೇಕ್ಷಣೀಯ ಪ್ರಮಾಣವನ್ನು ಹೊಂದಿರುತ್ತವೆ. ಎಲ್ಲರೂ ಅವುಗಳನ್ನು ಖರೀದಿ ಮಾಡಲು ಬಯಸುತ್ತಾರೆ ಮತ್ತು ಅದನ್ನು ಧರಿಸುವುದರಲ್ಲಿ ಮೋಜಿದೆ. ಆದರೆ ನೀವು ಆಭರಣಗಳನ್ನು ಸಂಗ್ರಹಿಸಿಡುವಲ್ಲಿ ಅಸಡ್ಡೆ ಮಾಡಿದರೆ ಅವು ಸುಲಭವಾಗಿ ಹಾನಿಯಾಗುತ್ತವೆ ಎಂಬುದು ನಿಮಗೆ ಗೊತ್ತೇ?

ಉದಾಹರಣೆಗೆ, ತೇವಾಂಶ, ಧೂಳು ಅಥವಾ ಇತರೆ ಲೋಹಗಳ ಸಂಪರ್ಕ ಮೊದಲಾದ ಅನೇಕ ಕಾರಣಗಳಿಂದ ಅವುಗಳು ಅನುಪಯುಕ್ತವಾಗಬಹುದು. ಆದ್ದರಿಂದ, ನಿಮ್ಮ ಆಭರಣ ಅವಲಂಬಿಸಿ ಅದನ್ನು ಸಂಗ್ರಹಿಸುವ ಸ್ಥಳವನ್ನು ವಿನ್ಯಾಸಗೊಳಿಸುವುದೂ ಮುಖ್ಯ. ಆಭರಣ ಸಂಗ್ರಹಿಸುವ ಸಂದರ್ಭದಲ್ಲಿ, ಅದನ್ನು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸೃಜನಾತ್ಮಕ ಆಲೋಚನೆಗಳನ್ನು ಮಾಡಬಹುದು. ನೀವು ಅವುಗಳನ್ನು ಸರಿಯಾಗಿ ನಿರ್ವಹಿಸಿದರೆ ನಿಮ್ಮ ಆಭರಣಗಳನ್ನು ನಿಮ್ಮ ಜೀವಮಾನವಿಡೀ ಬಳಸಬಹುದು.

ಇವುಗಳನ್ನು ಸಂಗ್ರಹಿಸಿಡಲು ವಿಧಾನಗಳು ಬಹಳಷ್ಟಿವೆ, ಆದರೆ ನೀವು ನಿಮ್ಮ ಸ್ಥಳಾವಕಾಶದ ಲಭ್ಯತೆಯ ಪ್ರಕಾರ ಯೋಜಿಸಬೇಕು. ಆಭರಣಗಳ ಸಂಗ್ರಹವನ್ನು ಸೊಗಸಿನಿಂದ ಕಂಗೊಳಿಸುವಂತೆಯೂ ಮಾಡಬಹುದು. ನೀವು ಸರಿಯಾದ ರೀತಿಯಲ್ಲಿ ಅದನ್ನು ಮಾಡದಿದ್ದರೆ ಆಭರಣಗಳನ್ನು ಸಂಗ್ರಹಿಸುವುದು ಕಷ್ಟವಾಗಬಹುದು. ಜೊತೆಗೆ ನಿಮ್ಮ ದುಬಾರಿ ಆಭರಣ ಹಾನಿಗೊಳಗಾಗಬಹುದು. ಆದ್ದರಿಂದ ಇದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮನೆಯಲ್ಲೇ ಕಮಲದ ಗಿಡವನ್ನು ಬೆಳೆಸಲು ಸರಳ ಮಾರ್ಗಗಳು

ನಿಮ್ಮ ಆಭರಣ ಸಂಗ್ರಹಿಸುವ ಮೊದಲು ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ನೀವು ಕೆಲವು ಮೂಲಭೂತ ಸಲಹೆಗಳ ಪ್ರಕಾರ ಆಭರಣಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಬಹುದು. ಕಿವಿಯೋಲೆಗಳು, ನೆಕ್ಲೇಸ್ ಗಳು, ಪದಕ (ಪೆಂಡೆಂಟ್ಸ್)ಗಳು, ಉಂಗುರಗಳು, ಉದ್ದವಾದ ಸರಪಳಿಗಳು, ಅದು ಯಾವುದೇ ಇರಲಿ, ಉತ್ತಮವಾಗಿ ನಿರ್ವಹಿಸಲ್ಪಟ್ಟ ರೀತಿಯಲ್ಲಿ ಶೇಖರಿಸಿಡಬೇಕು. ಸರಿಯಾಗಿ ಆಭರಣ ಸಂಗ್ರಹಿಸಿಡುವುದು ಹೇಗೆ ಎಂಬುದನ್ನು ನೋಡೋಣ.

ನೆಕ್ಲೇಸ್‌ಗಳು
ವಿಶೇಷವಾಗಿ ನೆಕ್ಲೇಸ್‌ಗಳಂತ ಮಿಶ್ರ ಆಭರಣಗಳು, ಹೆಚ್ಚಾಗಿ ಹಾನಿಗೊಳಗಾಗುತ್ತವೆ. ಆದ್ದರಿಂದ ಅವುಗಳಿಗೆಗೆ ಒಂದು ನಿರ್ದಿಷ್ಟ ಸ್ಥಳವನ್ನು ಕಲ್ಪಿಸಿ. ಮಣಿಗಳ ನೆಕ್ಲೇಸ್ ಗಳನ್ನು ಸರಿಯಾಗಿ ಸುರುಳಿ ಸುತ್ತಿ ಒಂದು ಪೆಟ್ಟಿಗೆಯಲ್ಲಿಡಬೇಕು. ಇದರಿಂದ ಅದು ತುಂಡಾಗುವುದು ತಪ್ಪುತ್ತದೆ. ಅಥವಾ ಒಂದು ಕೊಕ್ಕೆಗೆ (ಹ್ಯಾಂಗ್) ನೇತುಹಾಕಬಹುದು.

ಪದಕಗಳು
ಪದಕಗಳು ಹೆಚ್ಚು ಸೂಕ್ಷ್ಮ ಮತ್ತು ದುಬಾರಿಯಾಗಿರುವುದರಿಂದ ಇದನ್ನು ಹೆಚ್ಚು ಎಚ್ಚರಿಕೆಯಿಂದ ಶೇಖರಿಸಿಡಬೇಕು. ಇದು ಬೇರೆ ಆಭರಣಗಳ ಘರ್ಷಣೆಯಿಂದ ಹಾನಿಗೊಳಗಾಗುವುದನ್ನು ತಪ್ಪಿಸಲು ಹತ್ತಿಯಂತೆ ತುಂಬಾ ನಯವಾದ ಪೆಟ್ಟಿಗೆಯಲ್ಲಿ ಶೇಖರಿಸಿಡುವುದು ಹೆಚ್ಚು ಸೂಕ್ತ.

ಬಳೆಗಳು
ಗಾಜು, ಲೋಹ, ಮರದಿಂದ ತಯಾರಿಸಿದ ಮತ್ತು ಪ್ಲಾಸ್ಟಿಕ್ ಹೀಗೆ ಬಳೆಗಳ ಪ್ರಕಾರಗಳ ಆಧಾದರ ಮೇಲೆ ಶೇಖರಿಸಿಡಬಹುದು. ಪ್ರತ್ಯೇಕ ವಿಭಾಗಗಳನ್ನು ಹೊಂದಿರುವ ಒಂದು ದೊಡ್ಡ ಪೆಟ್ಟಿಗೆಯನ್ನು ಕೊಂಡುಕೊಂಡರೆ ಸರಿಯಾದ ರೀತಿಯಲ್ಲಿ ಬಳೆಗಳನ್ನು ಸಂಗ್ರಹಿಸಿಡಬಹುದು. ನೀವು ಸರಿಯಾದ ಗಮನ ನೀಡದಿದ್ದಲ್ಲಿ ಮರದ ಕೊಂಬೆಯ ರೀತಿಯ ಬಳೆ ಸಂಗ್ರಹಣಾ ವ್ಯವಸ್ಥೆ ಅಷ್ಟು ಸುರಕ್ಷಿತವಲ್ಲ. ನಿಮ್ಮ ಮರದ ಬಳೆಯನ್ನು ತೂಕುಹಾಕುವುದರ ಮೂಲಕ ಸುರಕ್ಷಿತವಾಗಿಡಬಹುದು.

ಕಿವಿಯೋಲೆಗಳು
ಸಣ್ಣ ಅಥವಾ ದೊಡ್ಡ ಸ್ಟಡ್ (ಗುಂಡಿ)ಗಳು, ಭಾರವಾದ ಕಲ್ಲಿನಂತಹ ಕಿವಿಯೋಲೆಗಳು ಮತ್ತು ಕುಣಿಕೆಗಳು ಹೀಗೆ ಕಿವಿಯೋಲೆಗಳಲ್ಲಿ ಅನೇಕ ಪ್ರಕಾರಗಳಿವೆ. ಆದ್ದರಿಂದ, ಅವುಗಳನ್ನು ಸುಲಭವಾಗಿ ಪತ್ತೆ ಮಾಡುವ ರೀತಿಯಲ್ಲಿ ಶೇಖರಿಸಿಡಬೇಕು. ಸರಿಯಾಗಿ ವಿನ್ಯಾಸಗೊಂಡ ರೀತಿಯಲ್ಲಿ ಅವುಗಳನ್ನು ನೇತುಹಾಕುವುದು ಉತ್ತಮ. ಪಾತ್ರೆಗಳ ಸುಟ್ಟ ಕಲೆಯನ್ನು ತೆಗೆಯುವ ವಿಧಾನ ಹೇಗೆ?

ಉಂಗುರಗಳು, ಕಡಗಗಳು ಮತ್ತು ಇತರೆ ಆಭರಣಗಳು
ಉಂಗುರಗಳನ್ನು ಒಂದು ಪೆಟ್ಟಿಗೆಲ್ಲಿ ಇಡಬಹುದು. ಕಲ್ಲಿನ ಅಥವಾ ಹರಳಿನ ಉಂಗುರಗಳನ್ನು ನೀವು ದಿನವೂ ಉಪಯೋಗಿಸದಿದ್ದಲ್ಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ಸಹ ಶೇಖರಿಸಿಡಬೇಕು. ನೀವು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿ ಕೆಲವು ಆಭರಣಗಳನ್ನು ಶೇಖರಿಸಿಡಲು ನಿಮ್ಮ ಸೃಜನಶೀಲ ಯೋಚನೆಯನ್ನು ಬಳಸಬಹುದು.

ಮುತ್ತಿನ ಆಭರಣ
ಮುತ್ತಿನ ಆಭರಣಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣೆಯ ಅಗತ್ಯವಿದೆ. ಮುತ್ತುಗಳು ಸುಲಭವಾಗಿ ಬೆವರು ಮತ್ತು ತೇವಾಂಶ ಮೂಲಕ ಹಾನಿಗೊಳಗಾಗಬಹುದು. ಆದ್ದರಿಂದ,ಮುತ್ತುಗಳ ಆಭರಣಗಳನ್ನು ಧರಿಸಿದ ನಂತರ, ಒಂದು ಮೃದುವಾದ ಬಟ್ಟೆಯಿಂದ ಅಥವಾ ಟಿಶ್ಯೂ ಕಾಗದದಿಂದ ಅದನ್ನು ಚೆನ್ನಾಗಿ ಒರೆಸಿ ಇಡಬೇಕು. ಇವುಗಳನ್ನು ಸಂಗ್ರಹಿಸಲು ಒಂದು ಒಣ ಬಟ್ಟೆ ಅಥವಾ ಕಾಗದವನ್ನು ಬಳಸಿ.
ಆಭರಣಗಳನ್ನು ಈ ಸುಲಭ ವಿಧಾನಗಳಿಂದ ಸಂರಕ್ಷಣೆ ಮಾಡಬಹುದಾಗಿದೆ. ಜೊತೆಗೆ ನೀವು ನಿಮ್ಮ ಆಭರಣ ಸಂಗ್ರಹಿಡಲು ನಿಮ್ಮ ಸ್ವಂತ ವಿಧಾನಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು. ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿ ನಿಮ್ಮ ಆಭರಣಗಳನ್ನು ಸಂಗ್ರಹಿಸಿಡಲು ಸರಿಯಾದ ಮತ್ತು ಸ್ವಚ್ಛವಾದ ಸ್ಥಳವನ್ನು ವ್ಯವಸ್ಥೆ ಮಾಡಿಕೊಳ್ಳಬೇಕು.

X
Desktop Bottom Promotion