Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ವಿಧಾನಗಳ ಮೂಲಕ ನಿಮ್ಮ ಮನೆ ಸುಂದರಗೊಳ್ಳಲಿ!
ಗಂಡಸಾಗಿರಲಿ ಅಥವಾ ಹೆಂಗಸಾಗಿರಲಿ ಮನೆಯನ್ನು ಸ್ವಚ್ಛಗಿಳಿಸುವುದು ಸುಂದರವಾಗಿಟ್ಟುಕೊಳ್ಳಬೇಕೆಂಬ ಬಯಕೆ ಅವರಿಗೆ ಇದ್ದೇ ಇರುತ್ತದೆ. ನಮ್ಮ ಮನೆ ಹೀಗಿರಬೇಕು ಹಾಗಿರಬೇಕು ಎಂದು ಹಲವಾರು ದುಡ್ಡು ವ್ಯಯಿಸಿ ಮನೆಯನ್ನು ಚಂದಗಾಣಿಸುತ್ತೇವೆ. ಜೊತೆಗೆ ಅದರ ಸ್ವಚ್ಛತೆ ಅಂದ ಚೆಂದದ ಕಡೆಗೂ ಗಮನ ನೀಡಬೇಕಾದ್ದು ಅತ್ಯವಶ್ಯಕ.
ಹಾಗಿದ್ದರೆ ಮನೆಯನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವುದು ಹೇಗೆಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಅದಕ್ಕೆ ಪರಿಹಾರವಾಗಿದೆ ಈ ಲೇಖನ. ಯಾವಾಗಲೂ ರಾಸಾಯನಿಕ ಹಾಗೂ ದುಬಾರಿ ಸ್ವಚ್ಛಕಗಳಿಂದ ಮನೆಯನ್ನು ನಿತ್ಯವೂ ಸ್ವಚ್ಛ ಮಾಡುವುದು ಅಸಾಧ್ಯದ ಮಾತು. ಇದೆಲ್ಲವನ್ನೂ ಸಾಧ್ಯವಾಗಿಸುವುದು ಹೇಗೆಂಬುದು ನಿಮಗೆ ತಿಳಿಯಬೇಕಿದ್ದಲ್ಲಿ ಮುಂದೆ ಓದಿ.

ಬೆಡ್ ಶೀಟ್ ಮೇಲಿನ ರಕ್ತದ ಕಲೆ ತೆಗೆಯಲು ಟಿಪ್ಸ್!
ಕಿಟಕಿಯನ್ನು ಸ್ವಚ್ಛ ಮಾಡುವುದು:
ಹೊಳೆಯುವ ಕಿಟಕಿಯನ್ನು ನೀವು ಪಡೆಯಬೇಕಿದ್ದಲ್ಲಿ, ಬಕೆಟಿಗೆ ನಾಲ್ಕು ಲೀಟರ್‌ಗಳಷ್ಟು ನೀರನ್ನು ಹಾಕಿ. 100 ಎಂಎಲ್‌ನಷ್ಟು ವಿನೇಗರ್ ಅನ್ನು ಅದಕ್ಕೆ ಸೇರಿಸಿ ನಂತರ ಅದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಸ್ಪಾಂಜ್ ಅಥವಾ ಒಳ್ಳೆಯ ಮೆದುವಾದ ಬಟ್ಟೆಯಿಂದ ಕಿಟಕಿಯನ್ನು ಒರೆಸಿ.
ಟಾಯ್ಲೆಟ್ ಬೌಲ್‌ಗಳು:
ನಿಮ್ಮ ಟಾಯ್ಲೆಟ್ ಬೌಲ್‌ಗಳನ್ನು ಸ್ವಚ್ಛ ಮಾಡಲು ಕಠಿಣ ರಾಸಾಯನಿಕಗಳನ್ನು ಬಳಸಬೇಕೆಂದೇನಿಲ್ಲ. ಡೆಂಚರ್ ಮಾತ್ರೆಗಳ ಮೂಲಕ ಕೂಡ ಇದರ ಸ್ವಚ್ಛತೆ ಸಾಧ್ಯ. ಬೌಲ್‌ಗೆ ಮೂರು ನಾಲ್ಕು ಈ ಮಾತ್ರೆಗಳನ್ನು ಹಾಕಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನೀರಿನಿಂದ ಫ್ಲಶ್ ಮಾಡಿ ಹಾಗೂ ಟಾಯ್ಲೆಟ್ ಬ್ರಶ್‌ನಿಂದ ಬೌಲ್ ಸ್ವಚ್ಛಗೊಳಿಸಿ
ರಕ್ತದ ಕಲೆಗಳು:
ನೆಲ ಅಥವಾ ಕಾರ್ಪೆಟ್ ಮೇಲೆ ರಕ್ತದ ಕಲೆಗಳು ಉಂಟಾದಲ್ಲಿ ಅದನ್ನು ನಿವಾರಿಸುವುದು ಕಷ್ಟದ ಕೆಲಸ. ಅದನ್ನು ನಿವಾರಿಸಲು ವಿನೇಗರ್ ಹಾಗೂ ಲಿಂಬೆ ರಸವನ್ನು ಬೆರೆಸಿ ಕಲೆಯಾದ ಜಾಗದಲ್ಲಿ ಉಜ್ಜಿ. 15 ನಿಮಿಷಗಳ ನಂತರ ಮೃದುವಾದ ಬಟ್ಟೆಯಿಂದ ಆ ಭಾಗವನ್ನು ಸ್ವಚ್ಛಗೊಳಿಸಿ.
ಕೊಳಕು ಫ್ಯಾನ್:
ನಿಮ್ಮ ಫ್ಯಾನ್‌ನ ರೆಕ್ಕೆಗಳಲ್ಲಿ ಧೂಳು ಕುಳಿತುಕೊಂಡು ಅಸಹ್ಯವಾಗಿದ್ದರೆ ಚಿಂತಿಸದಿರಿ. ಅದೆ ಮೇಲೆ ಸ್ವಲ್ಪ ಲಿಂಬೆ ರಸವನ್ನು ಹಾಕಿ ನಂತರ ಬ್ರೂಮ್ ಮೂಲಕ ಸ್ವಚ್ಛಗೊಳಿಸಿ. ರೆಕ್ಕೆ ಒದ್ದೆಯಾಗಿರುವಾಗ ಅದರಲ್ಲಿರುವ ಧೂಳನ್ನು ತೆಗೆಯಲು ಸುಲಭವಾಗಿರುತ್ತದೆ. ಲಿಂಬೆ ಪರಿಮಳವನ್ನೂ ನಿಮ್ಮ ಕೊಠಡಿಗೆ ನೀಡುತ್ತದೆ.
ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!
ಕ್ಯಾಂಡಲ್ ಕಲೆಗಳನ್ನು ನಿವಾರಿಸಲು:
ಕ್ಯಾಂಡಲ್ ಕಲೆಗಳನ್ನು ಹೋಗಲಾಡಿಸಲು ನಿಮಗೆ ಸುಲಭವಾಗಿರುವ ವಿಧಾನವೆಂದರೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವುದಾಗಿದೆ. ಮೇಣದ ಕಲೆ ಹೋಗುವವರೆಗೆ ಬಾಳೆ ಸಿಪ್ಪೆಯಿಂದ ಅದನ್ನು ಒರೆಸಿ. ಇದು ಸುಲಭವಾಗಿ ಮೇಣದ ಕಲೆಯನ್ನು ಹೋಗಲಾಡಿಸುತ್ತದೆ.
ಹೀಗೆ ಈ ಕೆಲವು ಸರಳವಾದ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಮನೆಯನ್ನು ಸ್ವಚ್ಛ ಹಾಗೂ ಸುಂದರವಾಗಿಟ್ಟುಕೊಳ್ಳಬಹುದು.



Click it and Unblock the Notifications
