Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು
ನಿತ್ಯವೂ ನಿಮ್ಮ ಬಟ್ಟೆ ಹಲವಾರು ಕಾರಣಗಳಿಂದ ಕೊಳೆಯಾಗುತ್ತಿರುತ್ತದೆ. ಕೆಲವೊಮ್ಮೆ ನೀವು ಬಳಸುವಂತಹ ಕೆಲವು ವಸ್ತುಗಳು ಅವುಗಳ ಕಲೆಯನ್ನು ನಿಮ್ಮ ಬಟ್ಟೆಯಲ್ಲಿ ಹಾಗೆಯೇ ಬಿಟ್ಟಿರುತ್ತವೆ. ಬಾಳೆಕಾಯಿ ಕಲೆಯಾಗಿರಬಹುದು, ರಕ್ತದ ಕಲೆಯಾಗಿರಬಹುದು, ಕಾಫಿ ಅಥವಾ ಟೀ ಕಲೆಯಾಗಿರಬಹುದು ಹೀಗೆ ಕಲೆಗಳ ಗಾಢತೆ ಹೆಚ್ಚಿದ್ದಷ್ಟೂ ಅವುಗಳ ಪ್ರಭಾವ ಕೂಡ ದಟ್ಟವಾಗಿರುತ್ತದೆ.
ಬೆಡ್ ಶೀಟ್ ಮೇಲಿನ ರಕ್ತದ ಕಲೆ ತೆಗೆಯಲು ಟಿಪ್ಸ್!
ಇಂದಿನ ಲೇಖನದಲ್ಲಿ ಕೂಡ ನಾವು ಒಂದು ಕಲೆಯ ಬಗ್ಗೆ ಮಾತನಾಡುತ್ತಿದ್ದೇವೆ. ಇಂಕಿನ ಕಲೆ ಸಾಮಾನ್ಯವಾಗಿ ಎಲ್ಲರ ಬಟ್ಟೆಯಲ್ಲಿ ಉಂಟಾಗುವಂಥದ್ದು ಮತ್ತು ಅದನ್ನು ನಿವಾರಿಸುವುದು ತುಂಬಾ ಕಷ್ಟದ ಕೆಲಸ. ನೀವು ಇಂಕು ಕಲೆಯಿರುವ ಬಟ್ಟೆಯನ್ನು ಸಾಕಷ್ಟು ಬಾರಿ ತೊಳೆದರೂ ಕೂಡ ಈ ಕಲೆ ಬೆನ್ನು ಬಿಡದ ಬೇತಾಳನಂತೆ ನಿವಾರಣೆಯಾಗುವುದೇ ಇಲ್ಲ.
ಹಾಗಿದ್ದರೆ ಈ ಕಲೆಯನ್ನು ಹೋಗಲಾಡಿಸಲು ಯಾವುದಾದರೂ ವಿಧಾನ ಇರಲೇಬೇಕಲ್ಲವೇ? ಆ ವಿಧಾನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನೀವು ಈ ಇಂಕಿನ ಕಲೆಯನ್ನು ಮನೆಯಲ್ಲೇ ದೊರೆಯಬಹುದಾದ ಗೃಹೋಪಯೋಗಿ ವಸ್ತುಗಳನ್ನು ಬಳಸಿ ತೆಗೆಯಬಹುದು. ಇದರಿಂದ ಸಮಯ, ದುಡ್ಡು ನಿಮಗೆ ಉಳಿತಾಯವಾಗುತ್ತದೆ ಮತ್ತು ಇವುಗಳು ಸರಳ ವಿಧಾನಗಳಾಗಿವೆ.
ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!

ಟೂತ್‌ಪೇಸ್ಟ್:
ಜೆಲ್ ಇಲ್ಲದಿರುವಂತಹ ಟೂತ್‌ಪೇಸ್ಟನ್ನು ಕಲೆಯ ಮೇಲೆ ಅನ್ವಯಿಸಿ. ಅದನ್ನು ಒಣಗಲು ಬಿಡಿ ಮತ್ತು ನಿಮ್ಮ ಸಾಮಾನ್ಯ ಬಟ್ಟೆ ಒಗೆಯುವ ಸೋಪಿನಿಂದ ಬಟ್ಟೆ ತೊಳೆಯಿರಿ.

ನೇಲ್ ಪಾಲಿಶ್ ರಿಮೂವರ್:
ಹತ್ತಿ ಉಂಡೆಯನ್ನು ತೆಗೆದುಕೊಂಡು ರಿಮೂವರ್‌ನಲ್ಲಿ ಅದ್ದಿಕೊಳ್ಳಿ ಹಾಗೂ ಇಂಕಿನ ಕಲೆಯಾಗಿರುವ ಜಾಗದಲ್ಲಿ ಅದನ್ನು ಹರಡಿಸಿ. ಕಲೆ ಮಾಯವಾದೊಡನೆ ಅದನ್ನು ತೊಳೆಯಿರಿ.

ಉಪ್ಪು:
ಕಲೆ ಇನ್ನೂ ಒದ್ದೆಯಾಗಿರುವಾಗಲೇ ಉಪ್ಪುನ್ನು ಚಿಮುಕಿಸಿ. ಒದ್ದೆ ಪೇಪರ್ ಟಿಶ್ಯೂನಿಂದ ಒರೆಸಿ ಮತ್ತು ಉಪ್ಪನ್ನು ಉಜ್ಜಿ. ಕಲೆ ಹೋಗುವವರೆಗೆ ಹೀಗೆ ಮಾಡಿ.

ಹಾಲು:
ಹಿಂದಿನ ದಿನ ಹಾಲಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ಮರುದಿನ ಸೋಪಿನಿಂದ ತೊಳೆಯಿರಿ.

ಕೋರ್ನ್‌ಸ್ಟಾರ್ಕ್:
ಕೋರ್ನ್‌ಸ್ಟಾರ್ಕ್‌ಗೆ ಸ್ವಲ್ಪ ಹಾಲು ಹಾಕಿ ಅದನ್ನು ಪೇಸ್ಟ್‌ನಂತೆ ತಯಾರಿಸಿ. ಇದನ್ನು ಬಟ್ಟೆಗೆ ಲೇಪಿಸಿ ಮತ್ತು ನಿಮಿಷಗಳ ಕಾಲ ಹಾಗೆಯೇ ಬಿಡಿ. ಒಮ್ಮೆ ಅದು ಒಣಗಿದ ನಂತರ, ಅದಕ್ಕೆ ಬ್ರಶ್ ಹಾಕಿ.

ಸ್ಯಾಂಡ್‌ಪೇಪರ್:
ಸ್ಯಾಂಡ್‌ಪೇಪರ್ ಅನ್ನು ಕಲೆಯಾಗಿರುವ ಜಾಗಕ್ಕೆ ಹಾಕಿ ತಿಕ್ಕಿ ಮತ್ತು ಬಟ್ಟೆಯನ್ನು ತೊಳೆಯಿರಿ.

ಆಲ್ಕೋಹಾಲ್:
ಸ್ವಲ್ಪ ಆಲ್ಕೋಹಾಲ್ ಅನ್ನು ಕಲೆಯ ಮೇಲೆ ಚಿಮುಕಿಸಿ ಮತ್ತು ಹಾಗೆಯೇ ಬಿಡಿ. ಸೋಪಿನಲ್ಲಿ ಬಟ್ಟೆಯನ್ನು ನೆನೆಸಿ ಮತ್ತು ತೊಳೆಯಿರಿ.



Click it and Unblock the Notifications
