Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಹಾಸಿಗೆ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳೇನು?
ರಾತ್ರಿ ಸರಿಯಾಗಿ ನಿದ್ದೆ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಇದು ಕೇವಲ ನೀವು ಎಷ್ಟು ಗಂಟೆಗಳು ನಿದ್ದೆ ಮಾಡುತ್ತೀರಿ ಎನ್ನುವುದನ್ನು ಅವಲಂಬಿಸಿಲ್ಲ. ಜೊತೆಗೆ ಎಷ್ಟು ಆರಾಮವಾಗಿ ನಿದ್ದೆ ಮಾಡಿದ್ದೀರಿ ಎನ್ನುವುದೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗೆ ಆರಾಮವಾಗಿ ಮಲಗುವುದು ಎನ್ನುವಾಗ ನಿಮ್ಮ ಹಾಸಿಗೆ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಹಾಸಿಗೆ ಎಲ್ಲರಿಗೂ ಒಂದೇ ರೀತಿಯಾಗಿ ಸರಿಹೊಂದುವುದಿಲ್ಲ. ಕೆಲವು ನಿಮ್ಮ ಬೆನ್ನಿಗೆ ಸರಿಯಾಗಿ ಮೃದು ಅನುಭವವನ್ನು ನೀಡಲು ರೂಪಿಸಲಾಗಿರುತ್ತದೆ ಹಾಗೂ ಇನ್ನೂ ಕೆಲವನ್ನು ನಿಮ್ಮ ಎತ್ತರ, ವಯಸ್ಸು ಹಾಗೂ ತೂಕಕ್ಕೆ ತಕ್ಕಂತೆ ನಿಮಗೆ ಆರಾಮ ನೀಡಲು ವಿನ್ಯಾಸ ಮಾಡಲಾಗಿರುತ್ತದೆ.
ಆದರೆ ನಾವು ಸಾಮಾನ್ಯವಾಗಿ ಹಾಸಿಗೆಯನ್ನು ಕೊಳ್ಳುವ ಮುನ್ನ ಇಷ್ಟೆಲ್ಲ ಯೋಚನೆ ಮಾಡಿ ಹಾಸಿಗೆ ಕೊಳ್ಳುವುದಿಲ್ಲ. ಆದರೆ ಇದನ್ನು ನಿರ್ಲಕ್ಷ ಮಾಡಿದರೆ ನಿಮ್ಮ ನಿದ್ದೆಯನ್ನು ಕೆಡಿಸುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿ ಹಾಸಿಗೆಯನ್ನು ಕೊಳ್ಳುವ ಮುನ್ನ ನೀವು ನೋಡಬೇಕಾದ ಕೆಲವು ಅಂಶಗಳನ್ನು ನೀಡಲಾಗಿದೆ.
ಖರೀದಿಸುವ ಮುನ್ನ ಪರೀಕ್ಷಿಸಿ
ನೀವು ಇಷ್ಟ ಪಟ್ಟ ಹಾಸಿಗೆಯನ್ನು ಕೊಳ್ಳುವ ಮೊದಲು ಕನಿಷ್ಟ ಪಕ್ಷ ಐದು ನಿಮಿಷ ಮಲಗಿ. ಇದು ಇದರ ಆರಾಮದಾಯಕ ಅನುಭವವನ್ನು ಹಾಗೂ ಇದು ನಿಮ್ಮ ಬೆನ್ನಿಗೆ ನೀಡುವ ಆಧಾರವನ್ನು ತಿಳಿಯಪಡಿಸುತ್ತದೆ. ನಿಮ್ಮ ನಿರ್ಧಾರವನ್ನು ಅಂಗಡಿ ಮಾಲೀಕನ ಕೈಯಲ್ಲಿ ಕೊಡಬೇಡಿ ಅಥವಾ ಬಹಳ ಅವಸರ ಅವಸರವಾಗಿ ನಿರ್ಧರಿಸಬೇಡಿ. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ

ಹಳೆಯ ಹಾಸಿಗೆ ನಿಮ್ಮ ನಿದ್ದೆಗೆ ಭಂಗ ತರಬಹುದು
ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂದಾದರೆ ಅದಕ್ಕೆ ಕಾರಣ ನಿಮ್ಮ ಹಾಸಿಗೆ ಕೂಡ ಆಗಿರಬಹುದು, ಅದು ಎಷ್ಟು ಹಳೆಯದು ಎನ್ನುವುದಾಗಿರಬಹುದು. ಎಲ್ಲಾ ಹಾಸಿಗೆಗಳು ಒಂದು ನಿಗದಿತ ಸಮಯದ ನಂತರ ಬದಲಾಯಿಸಲೇ ಬೇಕು. ಒಂದು ನಿಗದಿತ ಸಮಯದ ನಂತರ ಹಾಸಿಗೆಗಳು ತಮ್ಮ ಮೊದಲಿನ ಆರಾಮದಾಯಕ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಹೀಗಾದ ಸಂದರ್ಭದಲ್ಲಿ ನೀವು ನಿಮ್ಮ ಹಾಸಿಗೆಯನ್ನು ಬದಲಾಯಿಸಬೇಕು
ಹಾಸಿಗೆಗಾಗಿ ವಿಶೇಷವಾಗಿರುವ ಅಂಗಡಿಯಲ್ಲೇ ಖರೀದಿಸಿ
ಸಾಮಾನ್ಯ ಮಳಿಗೆಗಳಲ್ಲಿ ಹಾಸಿಗೆಯನ್ನು ಎಂದೂ ಖರೀದಿಸಬೇಡಿ. ಹಾಸಿಗೆ ಮಾರಾಟಕ್ಕಾಗಿ ಸೀಮಿತವಾಗಿರುವ ಅಂಗಡಿಗಳಲ್ಲಿನ ಸೇಲ್ಸ್‌ಮೆನ್‌ಗಳು ನಿಮಗೆ ಸರಿಯಾದ ಆಯ್ಕೆಯನ್ನು ಮಾಡಲು ನೆರವಾಗುತ್ತಾರೆ.
ವಾರಂಟಿಯನ್ನು ನೋಡಿ ಖರೀದಿಸಿ
ಒಂದು ಒಳ್ಳೆಯ ಹಾಸಿಗೆ ಕನಿಷ್ಟ ಪಕ್ಷ 2 ಅಥವಾ 3 ವರ್ಷಗಳ ಸಂಪೂರ್ಣ ಬದಲಾವಣೆ (ಫುಲ್ ರಿಪ್ಲೇಸ್ ಮೆಂಟ್) ಅಥವಾ ನಾನ್ ಪ್ರೊರೇಟೆಡ್ ವಾರಂಟಿಯನ್ನು ನೀಡುತ್ತವೆ.
ಎಲ್ಲಾ ಆಯ್ಕೆಗಳನ್ನೂ ನೋಡಿ
ನೀವು ಇಷ್ಟ ಪಟ್ಟ ಹಾಸಿಗೆ ಗಟ್ಟಿಯಾಗಿದೆ, ಈಗಿನ ಮಾದರಿಯಲ್ಲಿದೆ ಹಾಗೂ ತಲೆದಿಂಬು ಜೊತೆಗಿದೆ ಎಂದು ಖಾತ್ರಿ ಪಡಿಸಿಕೊಳ್ಳಿ. ಹಾಸಿಗೆ ಮಾರಾಟದಲ್ಲಿ ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರಿರುವ ಬ್ರಾಂಡ್‌ಗಳನ್ನೇ ಆರಿಸಿ. ಕಡಿಮೆ ಬೆಲೆಯ, ಹಾಗೂ ಸಾಧಾರಣವಾಗಿದ್ದರೆ ಸಾಕು ಎಂದು ಯಾವತ್ತೂ ಯೋಚಿಸಬೇಡಿ



Click it and Unblock the Notifications
