Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಮನೆಯನ್ನು ಸುಂದರವಾಗಿಸಲು ಅತ್ಯಪೂರ್ಣ ಸಲಹೆಗಳು
ಮನೆಯೆಂದರೆ ಮಂದಿರಕ್ಕೆ ಸಮಾನವೆನ್ನುತ್ತಾರೆ. ಮನೆಯನ್ನು ಮಂದಿರದಂತೆಯೇ ಸ್ವಚ್ಛ ಹಾಗೂ ಅಚ್ಚುಕಟ್ಟಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಕೆಲವರು ಮನೆಯೊಳಗೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಇಟ್ಟಿರುತ್ತಾರೆ. ಇದರಿಂದ ಮನೆಯ ಅಂದ ಕೆಡುತ್ತದೆ. ಮನೆಯ ಸೌಂದರ್ಯಕ್ಕೆ ಅದನ್ನು ನಾವು ಯಾವ ರೀತಿಯಲ್ಲಿ ಕಾಪಾಡಿಕೊಂಡು ಹೋಗುತ್ತಿದ್ದೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ.
ಇಂದಿನ ದುಬಾರಿ ಸಮಯದಲ್ಲಿ ಮನೆಯನ್ನು ಅನುಕೂಲಕ್ಕೆ ತಕ್ಕಂತೆ ಶೃಂಗರಿಸಿಡುವುದು ಕಷ್ಟವಾದರೂ ಸಣ್ಣ ಬಜೆಟ್ ನಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮನೆಯ ಅಂದವನ್ನು ಹೆಚ್ಚಿಸುವ ಸಲಹೆಗಳು ಇಲ್ಲಿದೆ. ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!
ಮನೆಯ ಮುಂದಿನ ದ್ವಾರ ಚೆನ್ನಾಗಿರಲಿ
ಮನೆ ಮುಂದಿನ ದ್ವಾರ ಮತ್ತು ಮೆಟ್ಟಿಲುಗಳಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿದ್ದರೆ ಅದಕ್ಕೆ ಸಿಮೆಂಟ್ ಹಾಕಿ ಅಥವಾ ಸಣ್ಣ ಇಟ್ಟಿಗೆಗಳನ್ನು ಜೋಡಿಸಿ ಮೆಟ್ಟಿಲು ರಚಿಸಿದರೆ ಅಂದ ಹೆಚ್ಚುತ್ತದೆ. ಬಿರುಕುಗಳನ್ನು ಸಿಮೆಂಟ್‌ನಿಂದ ತುಂಬಿಸಿ ಅದಕ್ಕೆ ಪೈಂಟ್ ಮಾಡಿ.
ಅಡುಗೆ ಕೋಣೆ ಸಾಮಗ್ರಿ
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ.

ಫರ್ನಿಚರ್ ಮತ್ತು ನೆಲಕ್ಕೆ ಪಾಲಿಶ್
ನೆಲ, ಬೇಸ್ ಬೋರ್ಡ್ ಮತ್ತು ಫರ್ನಿಚರ್ ಗಳಿಗೆ ಪಾಲಿಶ್ ಮಾಡಿ. ಶುಚಿತ್ವವೆಂದರೆ ದೇವರಿದ್ದಂತೆ ಎನ್ನುವ ಮಾತಿದೆ. ಇದನ್ನು ಪಾಲಿಸಿ.
ಅಡುಗೆ ಕೋಣೆ ಸಾಮಗ್ರಿ
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ. ಮೈಕ್ರೋವೇವ್‌ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು
ಕಾರ್ಪೆಟ್ ಗಳನ್ನು ಕ್ಲೀನ್ ಮಾಡಿ
ಅಮೋನಿಯಾ, ನೀರು, ವಿನೆಗರ್ ಮತ್ತು ಒಂದು ಕಪ್ ಬ್ಲೀಚ್ ಅನ್ನು ಬೆರೆಸಿ ಕಾರ್ಪೆಟ್ ಅನ್ನು ಸ್ವಚ್ಛ ಮಾಡುವುದರಿಂದ ಕಾರ್ಪೆಟ್ ಹೊಸತರಂತೆ ಕಂಗೊಳಿಸುತ್ತದೆ.



Click it and Unblock the Notifications
