Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ಕಂಡುಬರುವ ಕಲೆಯನ್ನು ಹೋಗಲಾಡಿಸುವುದು ಹೇಗೆ?
ಗೋಡೆಯ ಮೇಲೆ ಮೂಡಿದ ಕಲೆಗಳು, ಕಟ್ಟಿಕೊಂಡ ಕಾಲುವೆಗಳು, ಕೊಳೆಗಟ್ಟಿದ ಬಚ್ಚಲು ಮನೆಯ ಬಾಗಿಲುಗಳು ಇತ್ಯಾದಿಗಳೆಲ್ಲವು ಸೇರಿ ನಿಮ್ಮ ಮನೆಯನ್ನು ದನದ ಕೊಟ್ಟಿಗೆಗಿಂತ ಕಡೆಯನ್ನಾಗಿ ಮಾಡುತ್ತವೆ. ಇವುಗಳೆಲ್ಲವನ್ನು ಹೋಗಲಾಡಿಸುವುದರ ಜೊತೆಗೆ ನಿಮ್ಮ ಮನೆಯಲ್ಲಿ ಪರಿಶುಭ್ರತೆ ಹಾಗು ಆರೋಗ್ಯಕಾರಿ ಪರಿಸರವನ್ನು ನಿರ್ಮಾಣ ಮಾಡುವುದು ಸ್ವಲ್ಪ ಕಷ್ಟವೇ.
ಇಲ್ಲಿ ನಿಮಗಾಗಿ ಕೆಲವು ಮನೆಯಲ್ಲಿಯೇ ದೊರೆಯುವ ವಸ್ತುಗಳಿಂದ ಮನೆಯಲ್ಲಿ ಹೇಗೆ ಶುಭ್ರತೆಯನ್ನು ತರಬಹುದು ಎಂದು ನಾವು ತಿಳಿಸಿದ್ದೇವೆ ಓದಿ ನೋಡಿ. ನಿಮ್ಮ ಮನೆಯಲ್ಲಿ ಪರಿಶುಭ್ರತೆಯನ್ನು ತಕ್ಷಣ ತರಲು ಇಲ್ಲಿದೆ ನೋಡಿ ಸರಳ ಉಪಾಯಗಳು

ನಿಮ್ಮ ಟವೆಲ್‍ಗಳು ಹೊಸತರಂತೆ ಕಾಣಬೇಕೇ?:
ನಿಮ್ಮ ಟವೆಲ್‍ಗಳನ್ನು ಒಗೆಯುವಾಗ ನೀರಿಗೆ ಒಂದು ಕಪ್ ಉಪ್ಪನ್ನು ಬೆರೆಸಿ. ಈ ಉಪ್ಪು ನಿಮ್ಮ ಟವೆಲಿನಲ್ಲಿರುವ ಬಣ್ಣವು ಕುಂದದಂತೆ ಕಾಪಾಡುತ್ತದೆ.
ಬೆಳ್ಳಿಗೆ ಮೆರಗು ನೀಡಲು:
ಬೆಳ್ಳಿಯನ್ನು ಸ್ವಚ್ಛಗೊಳಿಸಲು ಬೆಳ್ಳನೆಯ ಟೂಥ್ ಪೇಸ್ಟ್ ಬಳಸಿ. ಟೂಥ್ ಫೇಸ್ಟನ್ನು ಸುಮ್ಮನೆ ಅದರ ಮೇಲೆ ಉಜ್ಜಿ ನಂತರ ತೊಳೆಯಿರಿ. ಈಗ ನೋಡಿ ಬೆಳ್ಳಿ ಹೊಳೆಯುತ್ತಿರುತ್ತದೆ.
ಕಪ್ಪುಕಲೆಗಳು:
ನಿಮ್ಮ ಮನೆಯಲ್ಲಿನ ಸಿಂಕ್‍ನಲ್ಲಿ ತುಕ್ಕು, ಮುಂತಾದ ಕಲೆಗಳು ಇದ್ದಲ್ಲಿ, ಬೊರಾಕ್ಸ್ ಮತ್ತು ನಿಂಬೆರಸ ಬೆರೆಸಿ ಮಾಡಿದ ಫೇಸ್ಟ್ ನಿಂದ ಉಜ್ಜಿ. ಕಲೆ ಚಿಕ್ಕದಿದ್ದರೆ ನಿಂಬೆ ಹಣ್ಣಿನ ಚೂರು ಉಜ್ಜಿದರೆ ಹೋಗುತ್ತದೆ.
ಕತ್ತರಿಗಳನ್ನು ಹರಿತಗೊಳಿಸಲು:
ನಿಮ್ಮ ಮನೆಯಲ್ಲಿರುವ ಮೊಂಡಾದ ಕತ್ತರಿಗಳನ್ನು ತೆಗೆದುಕೊಂಡು ಮೂರು ಪದರಗಳಾಗಿ ಜೋಡಿಸಿದ ಟಿನ್ ಫಾಯಿಲ್(ತಗಡು) ಅನ್ನು 10-12 ಬಾರಿ ಕತ್ತರಿಸಿ. ನಂತರ ಒಂದು ಕಾಗದವನ್ನು ಕತ್ತರಿಸಿ ಕತ್ತರಿಯ ಹರಿತವನ್ನು ಪರೀಕ್ಷಿಸಿ.
ಶಿಲೀಂಧ್ರಗಳನ್ನು ತೆಗೆದುಹಾಕಲು:
ನಿಮ್ಮ ಮನೆಯ ಶೌಚಾಲಯದಲ್ಲಿ ಕಟ್ಟಿಕೊಂಡಿರುವ ಶಿಲೀಂಧ್ರಗಳನ್ನು ತೆಗೆದುಹಾಕಲು ಹೈಡ್ರೋಜನ್ ಪೆರಾಕ್ಸಯಿಡ್ ಬಳಸಿ. ಇದನ್ನು ನೇರವಾಗಿ ಶಿಲೀಂಧ್ರ ಇರುವ ಭಾಗಕ್ಕೆ ಲೇಪಿಸಿ. ಇದು ತಕ್ಷಣ ಅವುಗಳನ್ನು ಮೃದುಗೊಳ್ಸಿಸುತ್ತದೆ. ನಂತರ ಅವುಗಳನ್ನು ಒಂದು ಬಟ್ಟೆಯಿಂದ ಒರೆಸಿ.
ಗೋಡೆಯಲ್ಲಿ ಉಂಟಾದ ಕಲೆಗಳು:
ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಗೊತ್ತೇ ಇರುತ್ತದೆ. ಅವರ ಬರೆಯುವ ಉತ್ಸಾಹಕ್ಕೆ ಮೊದಲು ಸಿಕ್ಕುವುದು ಮನೆಯ ಗೋಡೆಗಳು ಎಂದು. ಮಕ್ಕಳು ಗೋಡೆಗಳಲ್ಲಿ ಕಂಡದ್ದನ್ನು ಗೀಚುತ್ತಿರುತ್ತಾರೆ. ಗೀಚಿದರೆ ಗೀಚಲಿ ಬಿಡಿ ಎಷ್ಟಾದರು ಅವರು ನಿಮ್ಮ ಮಕ್ಕಳಲ್ಲವೇ? ಅವರು ಬರೆದರೆ ಅದನ್ನು ಅಳಿಸಲು ಒಂದು ಎರೆಸರ್ ಬಳಸಿ ಅಳಿಸಿಹಾಕಿ ಅಷ್ಟೇ. ಇಲ್ಲವಾದಲ್ಲಿ ಒಂದು ಬ್ಲೋ ಡ್ರೈಯರ್ ತೆಗೆದುಕೊಂಡು ಅದನ್ನು ಕಲೆಗಳು ಇರುವ ಜಾಗದಲ್ಲಿ ಹತ್ತು ನಿಮಿಷ ಹಿಡಿದುಕೊಳ್ಳಿ. ನಂತರ ಅದನ್ನು ಒಣಗಿದ ಟವೆಲಿನಿಂದ ಒರೆಸಿ ಅಷ್ಟೇ. ಕಲೆಗಳು ಮಾಯವಾಗುತ್ತವೆ.
ಪೀಠೋಪಕರಣದ ಮೇಲೆ ಇರುವ ಮೇಣವನ್ನು ತೆಗೆಯಲು:
ಮೇಣವನ್ನು ಹೇರ್ ಡ್ರೈಯರ್ ನಿಂದ ಬಿಸಿ ಮಾಡಿ ಮೆತ್ತಗೆ ಮಾಡಿ. ಪೇಪರ್ ಟವೆಲ್‍ನಿಂದ ಇದನ್ನು ತೆಗೆದು, ವಿನೆಗರ್ ಮತ್ತು ನೀರಿನ ಮಿಶ್ರಣದಿಂದ ಸ್ವಚ್ಛಗೊಳಿಸಿ.



Click it and Unblock the Notifications
