Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ನಿಮ್ಮ ಕನ್ನಡಕವನ್ನು ಸ್ವಚ್ಛಗೊಳಿಸಲು ಸರಳ ಸಲಹೆಗಳು
ನಾವು ಇಂದು ಕಣ್ಣಿನ ದೃಷ್ಟಿಯ ದೋಷದೊಂದಿಗೆ ಹೋರಾಡಲು ನಮಗೆ ಕನ್ನಡಕಗಳು ಅತೀ ಆವಶ್ಯಕ. ಕಣ್ಣಿಗೆ ಪೊರೆ ಬಂದ ಸಂದರ್ಭದಲ್ಲಿ, ಸಮೀಪ ದೃಷ್ಟಿ, ದೂರದೃಷ್ಟಿ ಸಮಸ್ಯೆಗಳು ಮೊದಲಾದ ಸಮಯದಲ್ಲಿ ಕಣ್ಣಿನ ಚಿಕಿತ್ಸೆಗೆ ಒಳಗಾಗಿ ವೈದ್ಯರು ಪರೀಕ್ಷಿಸಿದ ಕನ್ನಡಕಗಳು ನಮ್ಮ ಮೂಗಿನ ಮೇಲೇರುತ್ತದೆ.
ಕಣ್ಣಿನಿಂದ ಅತಿಯಾಗಿ ನೀರು ಬರುವುದು, ಕಂಪ್ಯೂಟರ್‌ನಲ್ಲಿ ಹೆಚ್ಚು ಕೆಲಸ ಮಾಡುವಾಗ ಉಂಟಾಗುವ ಕಣ್ಣಿನ ಸಮಸ್ಯೆಗಳ ನಿವಾರಣೆಗೂ ಇಂದು ಕನ್ನಡಕ ಬೇಕೇ ಬೇಕು. ಆಧುನಿಕತೆಗೆ ಅನುಗುಣವಾಗಿ ಧಿರಿಸು, ಒನಪು ವಯ್ಯಾರ ಬದಲಾದಂತೆ ನಾವು ಧರಿಸುವ ಕನ್ನಡಕದ ಸ್ಥಾನವನ್ನು ಈಗ ಲೆನ್ಸ್ ಪಡೆದುಕೊಂಡಿದೆ.
ಕನ್ನಡಕದಿಂದ ಕಣ್ಣಿನ ಕೆಳಗೆ ಉಂಟಾಗುವ ಕಪ್ಪು ವರ್ತುಲಗಳು, ಕನ್ನಡಕದಿಂದ ಉಂಟಾಗುವ ಹಿಂಜರಿಕೆ ಇದನ್ನೆಲ್ಲಾ ಮಾದರಿಯಾಗಿಟ್ಟುಕೊಂಡೇ ಲೆನ್ಸ್ ಜನ್ಮತಾಳಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಈಗ ಮತ್ತಷ್ಟು ಸುಲಭ!

ಇದರಿಂದ ನಮ್ಮ ಕಣ್ಣಿನ ಸಮಸ್ಯೆಯೂ ದೂರಾಗುತ್ತದೆ ನಾವು ಧರಿಸಿರುವುದೂ ಯಾರಿಗೂ ಗೊತ್ತಾಗುವುದೂ ಇಲ್ಲ. ಆದರೂ ಕನ್ನಡಕವನ್ನೇ ಬಳಸುವ ಹೆಚ್ಚಿನ ಮಂದಿಗೆ ಲೆನ್ಸ್ ತೊಡುವುದು ಕಷ್ಟದ ಮಾತೇ. ಕನ್ನಡಕ ಸ್ವಚ್ಛವಾಗಿದ್ದರೆ ಮಾತ್ರ ನಾವು ಮಾಡುವ ಕೆಲಸ ಸ್ಚಚ್ಛವಾಗಿರುತ್ತದೆ.
ಆದ್ದರಿಂದ ನಮ್ಮ ಕನ್ನಡಕದ ಸ್ವಚ್ಛತೆಗೂ ನಾವು ಗಮನ ನೀಡಬೇಕು. ಕೊಳೆ ಹಾಗೂ ಧೂಳು ತುಂಬಿದ ಕನ್ನಡಕ ನಮಗೆ ಉಪಕಾರಿಯಾಗುವುದರಿಂದ ಹೆಚ್ಚು ಅಪಕಾರಿಯಾಗಿರುತ್ತದೆ. ಹಾಗಿದ್ದರೆ ನಿಮ್ಮ ಒಡನಾಡಿಯಂತಿರುವ ಕನ್ನಡಕವನ್ನು ಈ ಕೆಳಗಿನ ವಿಧಾನಗಳ ಮೂಲಕ ಸ್ವಚ್ಛಗೊಳಿಸಿ.
ಒರೆಸುವುದು - ಕನ್ನಡಕವನ್ನು ದಿನವೂ ಒರೆಸುವುದು ಅವನ್ನು ಸ್ವಚ್ಛವಾಗಿಡುತ್ತದೆ. ಹೆಚ್ಚಾಗಿ ಕನ್ನಡಕಗಳು ಕೊಳೆಯಾಗುತ್ತವೆ. ಮೃದುವಾದ ಮಸ್ಲಿನ್ ಬಟ್ಟೆಗಳಲ್ಲಿ ಕನ್ನಡಕವನ್ನು ಒರೆಸುವುದು ಉತ್ತಮ. ದಪ್ಪನೆಯ ಬಟ್ಟೆ ಕನ್ನಡಕದಲ್ಲಿ ಗೆರೆಯನ್ನುಂಟು ಮಾಡುವುದರಿಂದ ಮೃದು ಬಟ್ಟೆಯನ್ನು ಬಳಸಿ. ಕನ್ನಡಕಗಳನ್ನು ಸ್ವಚ್ಛಗೊಳಿಸುವ ಸುಲಭ ಮತ್ತು ಸರಳ ವಿಧಾನ ಇದಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು
ಬೆಚ್ಚಗಿನ ನೀರು ಮತ್ತು ಸೋಪ್ - ಒಂದು ಪಾತ್ರೆ ತುಂಬಾ ಬೆಚ್ಚಗಿನ ನೀರು ತೆಗೆದುಕೊಳ್ಳಿ. ಇದೀಗ, ಮೃದು ಸೋಪ್ ಅನ್ನು ನೀರಿನಲ್ಲಿ ಅದ್ದಿ. ಸೋಪ್ ನೊರೆಗೆ ನಿಮ್ಮ ಕನ್ನಡಕವನ್ನು ಅದ್ದಿ. ಕನ್ನಡಕದಲ್ಲಿ ಹಿಡಿದುಕೊಂಡಿರುವ ಎಲ್ಲಾ ಕೊಳೆಯನ್ನು ಸೋಪು ನೀರು ತೊಳೆಯುತ್ತದೆ. ಇದು ಕನ್ನಡಕಕ್ಕೆ ಹೊಳಪನ್ನು ತರುತ್ತದೆ. ನಿಮ್ಮ ಕನ್ನಡಕವನ್ನು ಈ ವಿಧಾನದಲ್ಲಿ ವಾರಕ್ಕೊಮ್ಮೆಯಾದರೂ ತೊಳೆಯಿರಿ.
ಒದ್ದೆ ಬಟ್ಟೆ - ನಿಮ್ಮ ಕನ್ನಡಕದಲ್ಲಿ ಹೆಚ್ಚಿನ ಧೂಳು ತುಂಬಿದ್ದರೆ ಅದನ್ನು ಸ್ವಚ್ಛಗೊಳಿಸಲು ಒದ್ದೆ ಬಟ್ಟೆಯನ್ನು ಬಳಸಿ. ಮೃದು ಬಟ್ಟೆಯನ್ನು ನೀರಿಗೆ ಅದ್ದಿ ಅದನ್ನು ಒದ್ದೆ ಮಾಡಿಕೊಳ್ಳಿ. ಕನ್ನಡಕದ ಒಳಗಿನ ಮತ್ತು ಹೊರಗಿನ ಗ್ಲಾಸುಗಳನ್ನು ಈ ಒದ್ದೆ ಬಟ್ಟೆಯಿಂದ ಒರೆಸಿ. ಇದು ಕೂಡ ನಿಮ್ಮ ಕನ್ನಡಕವನ್ನು ಸ್ವಚ್ಛವಾಗಿಡುವ ಒಂದು ವಿಧಾನವಾಗಿದೆ. ಸ್ವಚ್ಛಗೊಳಿಸುವಾಗ ನಿಮ್ಮ ಕೈ ಬೆರಳುಗಳ ಅಚ್ಚು ಕನ್ನಡಕದಲ್ಲಿ ಮೂಡದಂತೆ ಎಚ್ಚರವಹಿಸಿ.
ಕನ್ನಡಕಗಳನ್ನು ತೊಳೆಯಿರಿ - ಕನ್ನಡಕಗಳನ್ನು ವೇಗವಾಗಿ ಬೀಳುವ ನೀರಿನ ನಲ್ಲಿ ಅಡಿಯಲ್ಲಿ ಇರಿಸುವುದೂ ಕೂಡ ಉತ್ತಮ ವಿಧಾನವಾಗಿದೆ. ಗ್ಲಾಸ್‌ನಲ್ಲಿ ಅಂಟಿಕೊಂಡಿರುವ ಧೂಳು, ಕೊಳಕು ಮತ್ತು ಎಣ್ಣೆಪಸೆಗಳನ್ನು ತೆಗೆಯಲು ನಲ್ಲಿ ನೀರು ಸಹಾಯಕ. ನಲ್ಲಿ ನೀರಿನಲ್ಲಿ ನಿಮ್ಮ ಕನ್ನಡಕಗಳನ್ನು ತೊಳೆದ ನಂತರ ಒಣಗಿದ ಬಟ್ಟೆಯಲ್ಲಿ ಅದನ್ನು ಒರೆಸಿ. ನೀರಿನ ಪಸೆ ಸ್ವಲ್ಪವೂ ಇರದಂತೆ ನೀರನ್ನು ತೆಗೆಯಿರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಗಣೆ ನಿವಾರಣೆಗೆ ಕೆಲವೊಂದು ವಿಧಾನಗಳು
ಗ್ಲಾಸ್ ಸ್ವಚ್ಛಕ ಬಳಸಿ - ಕನ್ನಡಕಗಳ ಗ್ಲಾಸ್ ಅನ್ನು ತೊಳೆಯಲು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಕ್ಲೀನರ್‌ಗಳು (ಸ್ವಚ್ಛಕಗಳು) ಲಭ್ಯವಿವೆ. ಇವು ಕನ್ನಡಕದ ಕನ್ನಡಿಯನ್ನು ಸ್ವಚ್ಛಗೊಳಿಸಿ ಅವಕ್ಕೆ ಹೊಳಪನ್ನು ತರುತ್ತದೆ.
ಸ್ವಚ್ಛಕದಲ್ಲಿರುವ ರಾಸಾಯನಿಕಗಳು ಕನ್ನಡಕದ ಗ್ಲಾಸ್‌ನಲ್ಲಿ ಅಂಟಿಕೊಂಡಿರುವ ಕೊಳಕನ್ನು ನಿವಾರಿಸುತ್ತದೆ. ಕನ್ನಡಕದ ಅಂಗಡಿಯಲ್ಲಿ ಕೂಡ ನಿಮಗೆ ಈ ಸ್ವಚ್ಛಕಗಳು ದೊರೆಯಬಹುದು. ಈ ಪರಿಹಾರವನ್ನು ಬಳಸಿಕೊಂಡು ನಿಮ್ಮ ಕನ್ನಡಕವನ್ನು ಸ್ವಚ್ಛವಾಗಿಟ್ಟುಕೊಳ್ಳಿ.



Click it and Unblock the Notifications











