Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಬಚ್ಚಲುಮನೆಯನ್ನು ಸ್ವಚ್ಛಗೊಳಿಸಲು 6 ವಿಧಾನಗಳು
ನಾವು ಸ್ನಾನ ಮಾಡುವ ಬಚ್ಚಲು ಮನೆಯನ್ನು ನಿತ್ಯವೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯ ಸ್ವಚ್ಛತೆಯ ಮೂಲವೇ ಟಾಯ್ಲೆಟ್ ಹಾಗೂ ಬಚ್ಚಲು ಮನೆಯಾಗಿದೆ. ನಿಮ್ಮ ಬಚ್ಚಲು ಮನೆಯನ್ನು ಹೊಳೆಯುವಂತೆ ಮಾಡಲು ನೀವು ಪರಿಶ್ರಮಪಡಬೇಕು. ಕೆಲವೊಂದು ಸೂತ್ರಗಳನ್ನು ಅನುಸರಿಸವುದರಿಂದ ನೀವು ಹೆಚ್ಚು ಪರಿಶ್ರಮಪಡಬೇಕಾಗಿಲ್ಲ.
ನಿಮ್ಮ ಬಚ್ಚಲು ಮನೆಯನ್ನು ಸ್ವಚ್ಚಗೊಳಿಸುವ ಹಲವಾರು ರಾಸಾಯನಿಕಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೀವು ಇವುಗಳನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಬಚ್ಚಲುಮನೆಯನ್ನು ವೃತ್ತಿಗೊಳಿಸಿ.
ನಿಮ್ಮ ಬಚ್ಚಲು ಮನೆಯನ್ನು ಸ್ವಚ್ಚಗೊಳಿಸಲು ನಾವು 6 ವಿಧಾನಗಳನ್ನು ನೀಡುತ್ತಿದ್ದೇವೆ. ಅವುಗಳನ್ನು ಬಳಸಿಕೊಂಡು ನಿಮ್ಮ ಬಚ್ಚಲು ಮನೆಯನ್ನು ಲಕ ಲಕ ಹೊಳೆಯುವಂತೆ ಮಾಡಿ.
ಬೇಸಿನ್
ಕೊಳೆಯಾಗಿರುವ ಬೇಸಿನ್‌ನಲ್ಲಿ ನೀವು ಬಾಯಿ ಮುಕ್ಕಳಿಸುವುದು, ಹಲ್ಲುಜ್ಜುವುದು ಮಾಡುವುದರಿಂದ ಗಂಟಲು ನೋವು ಬರುತ್ತದೆ. ಆದ್ದರಿಂದ ನಿಮ್ಮ ಗಂಟಲು ನೋವಿನ ನಿವಾರಣೆಗಾಗಿ ಉಪ್ಪು ಹಾಗೂ ಲಿಂಬೆ ಹುಳಿಯನ್ನು ಬಳಸಿಕೊಂಡು ಬಚ್ಚಲು ಮನೆ ಸ್ವಚ್ಛಗೊಳಿಸಿ. ಉಪ್ಪಿನಲ್ಲಿ ಮುಳುಗಿಸಿದ ಲಿಂಬೆಯನ್ನು ಬೇಸಿನ್ ಸುತ್ತಲೂ ಉಜ್ಜಿ. 15 ನಿಮಿಷ ಹಾಗೆಯೇ ಬಿಟ್ಟು ಅದನ್ನು ಸ್ವಚ್ಛ ನೀರಿನಿಂದ ತೊಳೆಯಿರಿ.
ನಲ್ಲಿ
ಬಚ್ಚಲು ಮನೆಯ ನಲ್ಲಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನೀವು ಮಾಡಬೇಕಾದ ಎರಡನೆಯ ಕೆಲಸವಾಗಿದೆ. ನಲ್ಲಿಯು ಸೂಕ್ಷ್ಮವಾಗಿರುವುದರಿಂದ ವಿನೇಗರ್‌ನಲ್ಲಿ ಅದ್ದಿದ ಹತ್ತಿ ಉಂಡೆಯಿಂದ ಮಾತ್ರ ಇದನ್ನು ಸ್ವಚ್ಛಗೊಳಿಸಬೇಕು. ನಿಮ್ಮ ನಲ್ಲಿಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹೊಳೆಯುವಂತೆ ಮಾಡಲು ಎರಡು ವಾರಗಳಿಗೊಮ್ಮೆ ಪ್ರಕ್ರಿಯೆಯನ್ನು ಮುಂದುವರಿಸಿ.
ಕರ್ಟನ್‌ಗಳು
ತಿಂಗಳಿಗೊಮ್ಮೆಯಾದರೂ ಕರ್ಟನ್‌ಗಳನ್ನು ಬದಲಾಯಿಸಬೇಕು. ಕರ್ಟನ್‌ನಲ್ಲಿ ಅಂಟಿಕೊಂಡಿರುವ ಬೂಸ್ಟು, ಧೂಳು ಎಣ್ಣೆ ಪಸೆ ಮೊದಲಾದುವನ್ನು ವಿನೆಗರ್ ಹಾಗೂ ಉಪ್ಪು ಬಳಸಿಕೊಂಡು ಸ್ವಚ್ಛವಾಗಿಸಿ. ಬೂಸ್ಟು ಹಾಗೂ ಧೂಳನ್ನು ತೆಗೆಯಲು ವಿನೇಗರ್ ಸಹಾಯ ಮಾಡುತ್ತದೆ.
ಟೈಲ್ಸ್
ಬಚ್ಚಲುಮನೆಯಲ್ಲಿ ಮಾತ್ರ ಟೈಲ್ಸ್‌ಗಳಲ್ಲಿ ಕಲೆಯಾಗುತ್ತವೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ನೀವು ಮಾಡಬೇಕಾಗಿಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಶೌಚಾಲಯವನ್ನು ಹೀಗೆ ಶುಚಿಯಾಗಿಟ್ಟುಕೊಳ್ಳಿ
ಕೊಮೊಡೊ
500 ಎಮ್‌ಎಲ್ ವಿನೇಗರ್ ಅನ್ನು ಉಪ್ಪು ಹಾಗೂ ಲಿಂಬೆಯೊಂದಿಗೆ ಮಿಶ್ರ ಮಾಡಿಕೊಂಡು ನಿಮ್ಮ ಬಚ್ಚಲು ಮನೆಯ ಫ್ಲಶ್ ಅನ್ನು ಸ್ವಚ್ಛವಾಗಿಸಿ. ಈ ಮೂರೂ ವಸ್ತುಗಳು ಫ್ಲಶ್‌ನಲ್ಲಿರುವ ಕೊಳೆಯನ್ನು ಸ್ವಚ್ಛವಾಗಿಸಿ ಹೊಳೆಯುವಂತೆ ಮಾಡುತ್ತದೆ. ಕೊಮೊಡೊ ಹಳದಿಗಟ್ಟುವುದನ್ನು ಇದು ತಡೆಯುತ್ತದೆ.
ಹೀಗೆ 6 ವಿಧಾನಗಳಲ್ಲಿ ಸುಲಭವಾಗಿ ನಿಮ್ಮ ಬಚ್ಚಲು ಮನೆಯನ್ನು ಸ್ವಚ್ಛಗೊಳಿಸಬಹುದು. ಈ 6 ವಿಧಾನಗಳ ಬಳಕೆಯನ್ನು ಮಾಡಿಕೊಂಡು ನಿಮ್ಮ ಬಚ್ಚಲು ಮನೆಯನ್ನು ಸ್ವಚ್ಛಗೊಳಿಸಿ.



Click it and Unblock the Notifications
