Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಕಾಯಿ ಮಾವನ್ನು ಹಣ್ಣು ಮಾಡುವ ವಿಧಾನ ನಿಮಗೆ ತಿಳಿದಿದೆಯೇ?
ಮಾವಿನ ಸೀಸನ್‌ನಲ್ಲಿ ಮಾವು ತಿನ್ನುವುದು ಒಂದು ಸುಗ್ಗಿಯೇ. ಆದರೆ ಎಳೆಯ ಕಾಯಿಯನ್ನು ತಿನ್ನುವುದು ಯಾವಾಗಲೂ ಸುಖಕರವಾಗಿರುವುದಿಲ್ಲ. ಆದರೆ ಈ ಕಾಯಿ ಮಾವನ್ನು ಹಣ್ಣು ಮಾಡುವ ವಿಧಾನವು ನಿಮಗೆ ತಿಳಿದಿದ್ದರೆ ಅದರ ರುಚಿಯನ್ನು ಮನದಣಿಯೇ ಸವಿಯಬಹುದು.
ಆದರೆ ಕಾಯಿಯನ್ನು ಹಣ್ಣು ಮಾಡುವುದು ಹೇಗೆಂಬುದು ನಿಮ್ಮ ಚಿಂತೆಯಾಗಿದ್ದರೆ ಅದಕ್ಕಿದೆ ನಮ್ಮ ಬಳಿ ಸುಲಭ ಉಪಾಯ! ಹೌದು ಈ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಸಲಹೆಗಳು ಖಂಡಿತ ನಿಮ್ಮ ಮಾವಿನ ಹಣ್ಣು ತಿನ್ನುವ ಬಯಕೆಯನ್ನು ಪೂರೈಸುತ್ತದೆ.
ನಿಮ್ಮ ಮನೆಯಲ್ಲೇ ಈ ವಿಧಾನಗಳನ್ನು ಮಾಡುವುದು ತುಂಬಾ ಸುಲಭವಾದ್ದರಿಂದ ನಿಮ್ಮ ಬಯಕೆಯನ್ನು ಕೇವಲ ಕೆಲವೇ ದಿನದಲ್ಲಿ ಪೂರೈಸಿಕೊಳ್ಳಬಹುದಾಗಿದೆ.

ಸಮ್ಮರ್ ಸ್ಪೆಶಲ್ ರುಚಿಯಾದ ಮಾವಿನ ಕಾಯಿ ಚಟ್ನಿ
ಅಕ್ಕಿಯಲ್ಲಿ ಇಡಿ:
ನೀವು ಕಾಯಿ ಮಾವನ್ನು ತಂದು ನಿರಾಶೆಗೊಂಡಿರುವಿರಾ. ಹೆಚ್ಚು ಯೋಚಿಸದಿರಿ ಅವುಗಳನ್ನು ಅಕ್ಕಿಯಲ್ಲಿ ಎರಡು ವಾರಗಳವರೆಗೆ ಹುದುಗಿಸಿಡಿ. ನಂತರ ಮಾವು ತನ್ನ ಬಣ್ಣವನ್ನು ಮಾರ್ಪಡಿಸಿ ನಿಮಗೆ ತಿನ್ನಲು ಯೋಗ್ಯವಾಗುವಂತೆ ಮಾಡುತ್ತದೆ.
ಬುಟ್ಟಿಯ ಬಳಕೆ:
ಬುಟ್ಟಿ ಹಾಗೂ ಒಣ ಹುಲ್ಲನ್ನು ಬಳಸಿ ಹಳ್ಳಿಗಳಲ್ಲಿ ಕಾಯಿಯನ್ನು ಹಣ್ಣಾಗಿಸುತ್ತಾರೆ. ಇದೇ ವಿಧಾನವನ್ನು ನಿಮಗೂ ಅನುಸರಿಸಬಹುದು. ಅಂದರೆ ಒಣ ಹುಲ್ಲಿನಲ್ಲಿ ಕಾಯಿ ಮಾವನ್ನು ಮುಚ್ಚಿ ಕತ್ತಲೆ ಕೋಣೆಯಲ್ಲಿ ಇರಿಸಿ.
ಸೇಬಿನ ಹಣ್ಣು ಸಹಾಯ:
ಸೇಬಿನ ಹಣ್ಣು ಗ್ಯಾಸ್ ಅಂಶಗಳನ್ನು ಹೆಚ್ಚಿಸಿ ಅವು ಹಣ್ಣಾಗಲು ಸಹಾಯ ಮಾಡುತ್ತವೆ. ಇದರಿಂದ ನಿಮಗೆ ಮಾವಿನ ಕಾಯಿಯನ್ನು ಸೇಬಿನ ಜೊತೆಗೂ ಇರಿಸಬಹುದಾಗಿದೆ.
ಮಾವಿನ ಹಣ್ಣಿನಲ್ಲಿರುವ 8 ಆರೋಗ್ಯಕರ ಗುಣಗಳು
ಹಣ್ಣಿನೊಂದಿಗೆ ಕಾಯಿಯನ್ನು ಇರಿಸಿ:
ಹಣ್ಣು ಮಾವಿನೊಂದಿಗೆ ಕಾಯಿ ಮಾವನ್ನು ಇರಿಸಿದರೂ ಉಳಿದವುಗಳು ಹಣ್ಣಾಗುತ್ತವೆ ಎಂದೂ ಹೇಳುತ್ತಾರೆ. ನಿಮಗೆ ಈ ವಿಧಾನವನ್ನೂ ಕೂಡ ಅನುಸರಿಸಬಹುದಾಗಿದೆ.
ಕತ್ತಲ ಕೋಣೆ:
ಮಾವನ್ನು ಕತ್ತಲ ಕೋಣೆಯಲ್ಲಿ ಇರಿಸುವುದರಿಂದ ಕೂಡ ಹಣ್ಣು ಮಾವು ನಿಮಗೆ ದೊರೆಯುತ್ತದೆ. ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ನೈಸರ್ಗಿಕವಾಗಿ ಇದನ್ನು ಹಣ್ಣು ಮಾಡಿ.
ಮೇಲೆ ತಿಳಿಸಿದ ವಿಧಾನಗಳು ಖಂಡಿತ ನಿಮಗೆ ಮಾವಿನ ಕಾಯಿಯನ್ನು ಹಣ್ಣಾಗಿಸುವಲ್ಲಿ ಸಹಕಾರಿಯಾಗಿದೆ. ಈ ವಿಧಾನಗಳನ್ನು ಅನುಸರಿಸಿ ಈ ವೀಕೆಂಡನ್ನು ಮಾವಿನ ಹಣ್ಣಿನೊಂದಿಗೆ ಆಸ್ವಾದಿಸಿ.



Click it and Unblock the Notifications
