For Quick Alerts
ALLOW NOTIFICATIONS  
For Daily Alerts

ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

By Hemanth P
|

ಬೆಳ್ಳಿ ಹೊಳೆದರೆ ಮಾತ್ರ ಅದರ ಸೌಂದರ್ಯ ಕಾಣಿಸುತ್ತದೆ. ಬೆಳ್ಳಿ ಲೇಪಿತ ಅಥವಾ ಮೂಲ ಸ್ಥಿತಿಯಲ್ಲಿ ಎರಡರಲ್ಲೂ ಹೊಳೆಯುತ್ತದೆ. ಆದರೆ ಹೊಳೆಯುವಂತೆ ಮಾಡಲು ನೀವು ನಿಯಮಿತವಾಗಿ ಅದನ್ನು ಶುಚಿಗೊಳಿಸುತ್ತಾ ಇರಬೇಕು. ಬೆಳ್ಳಿ ಲೇಪಿತ ಅಥವಾ ಮೂಲ ಸ್ಥಿತಿಯಲ್ಲಿ ಇದ್ದರೂ ಎರಡನ್ನು ಶುಚಿಗೊಳಿಸಲು ಒಂದೇ ರೀತಿಯ ವಿಧಾನಗಳನ್ನು ಅನುಸರಿಸಬೇಕು.

ಇವೆರಡಕ್ಕೂ ಬಳಸುವ ಸಾಧನಗಳು ಕೂಡ ಒಂದೇ. ನಿಮ್ಮ ಸಂಗ್ರಹದಲ್ಲಿ ಬೆಳ್ಳಿ ಲೇಪಿತ ಅಥವಾ ಬೆಳ್ಳಿ ವಸ್ತುಗಳಿದ್ದರೆ ಆಗ ನೀವು ಕೆಲವೊಂದು ಮೂಲ ಉತ್ಪನ್ನಗಳೊಂದಿಗೆ ಅದನ್ನು ಶುಚಿಗೊಳಿಸಬೇಕು. ಆದರೆ ಬೆಳ್ಳಿ ಶುಚಿಗೊಳಿಸುವುದು ಅತ್ಯಂತ ಕಠಿಣ ಕೆಲಸ. ಇದಕ್ಕೆ ಹೆಚ್ಚಿನ ತಾಳ್ಮೆ ಬೇಕಾಗುತ್ತದೆ. ಅದೇ ರೀತಿ ಕೆಲವೊಂದು ವಿಧಾನಗಳನ್ನು ಪಾಲಿಸಬೇಕು.

Cleaning silver plates: tips

ಬೆಳ್ಳಿ ಲೇಪಿತ ವಸ್ತುಗಳನ್ನು ಶುಚಿಗೊಳಿಸಲು ನಯವಾದ ವಸ್ತುಗಳು ಬೇಕಾಗುತ್ತದೆ. ಒರಟು ಅಥವಾ ಬಲವಾದ ಸಾಧನಗಳನ್ನು ಬಳಸಿಕೊಂಡು ಬೆಳ್ಳಿ ಶುಚಿಗೊಳಿಸಬೇಡಿ. ಇದರಿಂದ ಬೆಳ್ಳಿ ಲೇಪನಕ್ಕೆ ಹಾನಿಯಾಗಬಹುದು. ಬೆಳ್ಳಿ ಲೇಪಿತ ವಸ್ತುಗಳನ್ನು ಶುಚಿಗೊಳಿಸಲು ಕೆಲವೊಂದು ಸರಳ ಟಿಪ್ಸ್ ಗಳು ಇಲ್ಲಿವೆ.

ನಿಯಮಿತವಾಗಿ ಶುಚಿಗೊಳಿಸುವುದು
ಇಲ್ಲ, ಬೆಳ್ಳಿ ಲೇಪಿತ ವಸ್ತುಗಳನ್ನು ನಿಯಮತವಾಗಿ ಶುಚಿಗೊಳಿಸಬೇಕೆಂಬುವುದು ಇದರ ಅರ್ಥವಲ್ಲ. ಇದರಿಂದ ಬೆಳ್ಳಿಗೆ ಸಂಪೂರ್ಣ ಹಾನಿಯಾಗುತ್ತದೆ. ಬೆಳ್ಳಿಯನ್ನು ಮೃದುವಾದ ಬಟ್ಟೆ ಅಥವಾ ಬ್ರಶ್ ಬಳಸಿ ಶುಚಿಗೊಳಿಸಿ. ಕೆಲವೊಮ್ಮೆ ಬಿಸಿ ನೀರಿಗೆ ಸೋಪ್ ಹಾಕಿ ಅದನ್ನು ತೊಳೆಯಬಹುದು. ಇದರಿಂದ ಅದರಲ್ಲಿರುವ ಕೊಳೆ ಹೋಗುತ್ತದೆ. ಹೀಗೆ ತೊಳೆದ ಬಳಿಕ ಅದರಲ್ಲಿನ ನೀರನ್ನು ಮೃದುವಾದ ಬಟ್ಟೆ ಬಳಸಿ ಒರೆಸಿ.

ಅಡುಗೆ ಸೋಡಾ
ಅಡುಗೆ ಸೋಡಾ ಬಳಸಿ ಬೆಳ್ಳಿ ಲೇಪಿತ ವಸ್ತುಗಳನ್ನು ಶುಚಿಗೊಳಿಸಬಹುದು. ಒಂದು ಮುಷ್ಟಿಯ ಪ್ರಮಾಣದಲ್ಲಿ ಅಡುಗೆ ಸೋಡಾ ತೆಗೆದುಕೊಳ್ಳಿ ಮತ್ತು ಅದನ್ನು ಬಿಸಿ ನೀರಿಗೆ ಹಾಕಿ. ಅದು ನೀರಿನಲ್ಲಿ ಕರಗಲು ಬಿಡಿ. ಇದರ ಬಳಿಕ ಬೆಳ್ಳಿಯ ವಸ್ತುಗಳನ್ನು ಅದರಲ್ಲಿ ಅದ್ದಿಡಿ. ಸುಮಾರು 10 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ನೀರಿನಿಂದ ತೆಗೆದು ಮೃದುವಾದ ಬಟ್ಟೆಯಲ್ಲಿ ಬೆಳ್ಳಿಯ ವಸ್ತುಗಳನ್ನು ಒರೆಸಿ.

ಸ್ಪಂಜ್ ನಿಂದ ಕ್ಲೀನ್ ಮಾಡುವುದು
ಒರಟಲ್ಲದ ವಸ್ತುಗಳನ್ನು ಬಳಸಿಕೊಂಡು ಬೆಳ್ಳಿ ಲೇಪಿತ ವಸ್ತುಗಳನ್ನು ಶುಚಿಗೊಳಿಸಬಹುದು. ಮೃದುವಾದ ಸೋಪ್ ನಲ್ಲಿ ಸ್ಪಂಜ್ ನ್ನು ಅದ್ದಿ ಮತ್ತು ಬೆಳ್ಳಿಯ ವಸ್ತುಗಳನ್ನು ಅದರಿಂದ ಉಜ್ಜಿ. ಬೆಳ್ಳಿಯ ಪದಕಗಳು ಸಿರಾಮಿಕ್ ಅಥವಾ ಗಾಜಿನಿಂದ ಮಾಡಿದ್ದರೆ ಆಗ ಅದನ್ನು ಸೋಪ್ ಇರುವ ಬಿಸಿ ನೀರಿನಲ್ಲಿ ಅದ್ದಿ ತೆಗೆಯಿರಿ. ಗಡುಸಲ್ಲದ ಸೋಪ್ ನಿಂದ ತೊಳೆದ ಬಳಿಕ ಬಿಸಿನೀರಿನಲ್ಲಿ ತೊಳೆಯಿರಿ ಮತ್ತು ಮೃದುವಾದ ಬಟ್ಟೆಯಿಂದ ನೀರನ್ನು ಒರೆಸಿ. ಹತ್ತಿ ಬಟ್ಟೆಗಳನ್ನು ಮಾತ್ರ ಒರೆಸಲು ಬಳಸಿ. ಉಣ್ಣೆಯಿಂದ ಮಾಡಿರುವಂತಹ ಬಟ್ಟೆಗಳನ್ನು ಬಳಸಬೇಡಿ. ಬೆಳ್ಳಿಯ ವಸ್ತುಗಳನ್ನು ಶುಚಿಗೊಳಿಸುವ ವೇಳೆ ಗ್ಲೌಸ್ ಹಾಕುವ ಯೋಜನೆಯಿದ್ದರೆ ನೀವು ಪ್ಲಾಸ್ಟಿಕ್ ಅಥವಾ ಹತ್ತಿಯ ಗ್ಲೌಸ್ ಬಳಸಿ. ರಬ್ಬರ್ ಗ್ಲೌಸ್ ಹಾನಿಯುಂಟು ಮಾಡಬಹುದು.

ಸರಿಯಾಗಿ ಪಾಲಿಶ್ ಮಾಡಿ.
ಬೆಳ್ಳಿಯ ವಸ್ತುಗಳನ್ನು ಹೊಳೆಯುವಂತೆ ಮಾಡುವ ಇನ್ನೊಂದು ವಿಧಾನವೆಂದರೆ ಅದನ್ನು ಸರಿಯಾಗಿ ಪಾಲಿಶ್ ಮಾಡುವುದು. ನೀವು ಸ್ಪಂಜ್ ನಿಂದ ಬೆಳ್ಳಿ ವಸ್ತುಗಳನ್ನು ಶುಚಿಗೊಳಿಸಿದ ಬಳಿಕ ಅವುಗಳಿಗೆ ಬೆಳ್ಳಿ ಪಾಲಿಶಿಂಗ್ ಮಾಡುವ ಕ್ರೀಮ್ ಹಾಕಿ. ಮೃದುವಾದ ಬಟ್ಟೆಯಿಂದ ಕ್ರೀಮ್ ಹಚ್ಚಿ. ತುಂಬಾ ಗಡುಸಾಗಿ ಉಜ್ಜಬೇಡಿ. ನಿಧಾನವಾಗಿ ಲೇಪನದ ಮೇಲೆ ಪಾಲಿಶ್ ಹಚ್ಚಿ. ಪಾಲಿಶ್ ಮಾಡಲು ನೀವು ಹತ್ತಿಯನ್ನು ಬಳಸಬಹುದು. ಪಾಲಿಶ್ ಮಾಡಿದ ಬಳಿಕ ಬೆಳ್ಳಿಯ ವಸ್ತುಗಳು ಹೊಳೆಯುವುದನ್ನು ಕಾಣಬಹುದು.

ಬೆಳ್ಳಿಯ ತಟ್ಟೆಗಳನ್ನು ತೊಳೆಯಲು ಹಾಕುವಾಗ ಅದರ ಮೇಲಿರುವ ಆಹಾರದ ಕಲೆಗಳನ್ನು ತೆಗೆಯಲು ಮರೆಯದಿರಿ. ಇದರಿಂದ ಬೆಳ್ಳಿ ಸವೆಯುವುದು ತಪ್ಪುತ್ತದೆ. ನಿಯಮಿತವಾಗಿ ಬ್ರಶ್ ಮಾಡುವುದರಿಂದ ಬೆಳ್ಳಿಯ ವಸ್ತುಗಳನ್ನು ಶುಚಿಗೊಳಿಸುವುದರಿಂದ ನಿಮ್ಮನ್ನು ತಪ್ಪಿಸಬಹುದು.

English summary

Cleaning silver plates: tips

Silver looks beautiful only when it shines rather sparkles. As long as silver survives on either the plated or original silver, it will shine. But, for this you need to clean it regularly.
X
Desktop Bottom Promotion