Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಬಟ್ಟೆಗಳಿಂದ ಅರಶಿನದ ಕಲೆಯನ್ನು ಹೋಗಲಾಡಿಸುವ 8 ವಿಧಾನಗಳು
ಬಟ್ಟೆಗಳಿಂದ ಕಲೆಗಳನ್ನು ಹೋಗಲಾಡಿಸುವುದೆಂದರೆ ತಲೆನೋವಿನ ಕೆಲಸ. ಮಹಿಳೆಯರು ತಮ್ಮ ಬಟ್ಟೆಗಳಿಗೆ ಕಲೆಯಾಗುವುದನ್ನು ತಪ್ಪಿಸಲು ಹರಸಾಹಸ ಮಾಡಿದರೂ ಈ ಕಲೆಗಳು ಉಂಟಾಗುತ್ತವೆ. ವಿಶೇಷವಾಗಿ ಅಡುಗೆ ಕೆಲಸ ಮಾಡುವಾಗ ಮತ್ತು ಸುತ್ತಲೂ ಮಕ್ಕಳಿದ್ದರೆ ನಿಮ್ಮ ಬಟ್ಟೆಗಳಿಗೆ ಕಲೆಯಾಗುವುದು ಖಂಡಿತ.
ಕಲೆಗಳಲ್ಲಿ ಹಲವಾರು ವಿಧಗಳಿದ್ದು ಪ್ರತಿಯೊಂದನ್ನು ಜಾಗರೂಕರಾಗಿ ಮತ್ತು ಶ್ರದ್ಧೆಯಿಂದ ತೆಗೆಯಬೇಕಾಗುತ್ತದೆ. ಕೆಲವೊಂದು ಕಲೆಗಳು ನಿವಾರಿಸಲು ಸುಲಭವಾಗಿರುತ್ತವೆ. ನೀರು ಮತ್ತು ಸೋಪು ಈ ಕಲೆಗಳನ್ನು ಹೋಗಲಾಡಿಸಲು ಸಾಕು. ಆದರೆ ಕೆಲವೊಂದು ಕಲೆಗಳಿಗೆ ಈ ವಿಧಾನ ಸಾಕಾಗುವುದಿಲ್ಲ. ಬಹು ಪ್ರಯಾಸದಿಂದ ಅವುಗಳನ್ನು ತೆಗೆಯಬೇಕಾಗುತ್ತದೆ ಅದರಲ್ಲೂ ಅರಶಿನದ ಕಲೆ ತುಂಬಾ ಪ್ರಯಾಸಪಟ್ಟು ಹೋಗುವಂತಹ ಕಲೆಯಾಗಿದೆ.
ಶುಂಠಿಯ ಕುಟುಂಬದಿಂದ ಬಂದಂತಹ ಹಳದಿ ಸುಗಂಧಯುಕ್ತ ಹುಡಿಯಾಗಿದ್ದು ಗೆಡ್ಡೆಯ ರೂಪದಲ್ಲಿ ಇದನ್ನು ಬೆಳೆಸುತ್ತಾರೆ. ಇದು ಆಯುರ್ವೇದಲ್ಲಿ ಮಹತ್ವದ ಸ್ಥಾನ ಪಡೆದಿದ್ದು ಆರೋಗ್ಯದ ಮೂಲವಾಗಿದೆ. ಆದರೆ ನಿಮ್ಮ ಬಟ್ಟೆಗೆ ಇದರ ಕಲೆಯಾಯಿತೆಂದರೆ ಅದು ಜಪ್ಪಯ್ಯ ಅಂದರೂ ಹೋಗುವುದಿಲ್ಲ.
ಅರಶಿನದ ಕಲೆ ಬಟ್ಟೆಗೆ ಆದ ಕೂಡಲೇ ನೀವು ಅದನ್ನು ತೆಗೆಯಲು ನೋಡಬೇಕು. ಇಲ್ಲದಿದ್ದಲ್ಲಿ ಮತ್ತೆ ಅದನ್ನು ಹೋಗಲಾಡಿಸುವುದು ಸುಲಭದ ಮಾತಲ್ಲ. ನಿಮ್ಮ ಬಟ್ಟೆಯ ಗುಣ, ಅರಶಿನವು ನಿಮ್ಮ ಬಟ್ಟೆಯ ಮೇಲೆ ಉಂಟುಮಾಡಿರುವ ಕಲೆಯ ಗಾಢತೆ, ಮತ್ತು ಕಲೆ ಉಂಟಾದ ಸಮಯ ನಿಮ್ಮ ಬಟ್ಟೆಯ ಅರಶಿನದ ಕಲೆಯನ್ನು ಹೋಗಲಾಡಿಸುವಾಗ ತಿಳಿದುಕೊಳ್ಳಬೇಕಾದ ಅಂಶಗಳು. ಕಲೆಗಳು ಹಳತಾದಂತೆ ಅವುಗಳನ್ನು ತೆಗೆಯುವುದು ಕಷ್ಟವಾಗುತ್ತದೆ.
ಅರಶಿನದ ಕಲೆಯನ್ನು ನಿವಾರಿಸುವುದು ಕಷ್ಟವಾಗಿದ್ದರೂ ಕೆಲವೊಂದು ವಿಧಾನಗಳ ಮೂಲಕ ಇದನ್ನು ನಿವಾರಿಸಬಹುದು. ಒಳ್ಳೆಯ ಸೋಪು ಮತ್ತು ಲಿಂಬೆ ರಸವನ್ನು ಬಳಸುತ್ತಾರೆ. ಇದಲ್ಲದೆ ಅರಶಿನ ಕಲೆಯನ್ನು ಹೋಗಲಾಡಿಸುವ ಕೆಲವೊಂದು ವಿಧಾನಗಳನ್ನು ಇಲ್ಲಿ ನಾವು ನೀಡಿದ್ದು ಖಂಡಿತ ಈ ವಿಧಾನಗಳನ್ನು ನಿಮಗೆ ಅನುಸರಿಸಬಹುದು.
ಚರಂಡಿ ಬ್ಲಾಕ್ ಆಗಿದೆಯಾ? ಸರಿಪಡಿಸಲು ಇಲ್ಲಿವೆ ಸರಳ ವಿಧಾನಗಳು

ಡ್ರೈ ಡಿಟರ್ಜೆಂಟ್
ಬಣ್ಣದ ಹಾಗೂ ಬಿಳಿ ಬಟ್ಟೆಗಳಿಗೆ ಈ ವಿಧಾನವನ್ನು ಅನುಸರಿಸಬಹುದು. ಡ್ರೈ ಡಿಟರ್ಜೆಂಟ್ ಬಾರ್ ಮೂಲಕ ಕಲೆಯ ಮೇಲೆ ಉಜ್ಜಿ ಮತ್ತು ಕಲೆಯ ಮೇಲೆ ಸ್ವಲ್ಪ ಹೊತ್ತು ಇದನ್ನು ಹಾಗೆಯೇ ಬಿಡಿ. ನಂತರ ನೀರು ಹಾಕಿ ಚೆನ್ನಾಗಿ ಒಗೆಯಿರಿ

ನೀರು ಮತ್ತು ಸೋಪು
ತಂಪು ನೀರು ಮತ್ತು ಸೋಪಿನಿಂದ ಕಲೆಯಾದ ಬಟ್ಟೆಯನ್ನು ಒಗೆಯುವುದೂ ಕೂಡ ಇದನ್ನು ನಿವಾರಿಸುತ್ತದೆ. ಬಿಸಿಲಿನಲ್ಲಿ ಬಟ್ಟೆಯನ್ನು ಒಣಗಿಸಿ ಮತ್ತು ಇತರ ಬಟ್ಟೆಗಳೊಂದಿಗೆ ಸಾಮಾನ್ಯವಾಗಿ ಒಗೆಯಿರಿ.

ಬ್ಲೀಚ್ ಮತ್ತು ನೀರು ಬಳಕೆ
ಕಲೆಗಳನ್ನು ಚೆನ್ನಾಗಿ ತೊಳೆದು ನಂತರ ಬ್ಲೀಚ್ ಮತ್ತು ನೀರಿನ ಮಿಶ್ರಣವಿರುವ ದ್ರಾವಣದಲ್ಲಿ ಇದನ್ನು ಮುಳುಗಿಸಿಡಬೇಕು. ನಂತರ ರಾತ್ರಿ ಪೂರ್ತಿ ನೀರು ಹಾಗೂ ಬೇಕಿಂಗ್ ಸೋಡಾ ಮಿಶ್ರಣದಲ್ಲಿ ಮುಳುಗಿಸಿಡಿ. ಬಟ್ಟೆಗಳಿಂದ ಕಲೆಯನ್ನು ನಿವಾರಿಸಲು ಈ ವಿಧಾನ ಕೂಡ ಸಹಕಾರಿ.

ವಿನೇಗರ್
ಬಟ್ಟೆಯಿಂದ ಅರಶಿನ ಕಲೆಯನ್ನು ನಿವಾರಿಸಲು ವಿನೇಗರ್ ಅನ್ನು ಕೂಡ ಬಳಸಬಹುದು. ವಿನೇಗರ್ ಅನ್ನು ಬಳಸಲು, ಮೊದಲು ಕಲೆಯಾದ ಜಾಗವನ್ನು ನೀರಿನಿಂದ ನೆನೆಸಿ ನಂತರ ಲಿಕ್ವಿಡ್ ಸೋಪನ್ನು ಬಳಸಿ ಸ್ವಲ್ಪ ಹೊತ್ತು ಬಟ್ಟೆಯಲ್ಲಿರಿಸಿ. ಕಲೆಯನ್ನು ತೊಳೆಯಿರಿ ಮತ್ತು ವಿನೇಗರ್ ಅನ್ನು ಕಲೆಯಾದ ಜಾಗದಲ್ಲಿ ಹಚ್ಚಿ.

ಲಿಂಬೆ
ಕಲೆಯಾದ ಜಾಗವನ್ನು ಲಿಂಬೆಯಿಂದ ಉಜ್ಜಿ ಮತ್ತು ಕಲೆ ಒಣಗುವವರೆಗೆ ಬಿಸಿಲಿನಲ್ಲಿ ಒಣಗಿಸಿ. ನಂತರ ಬಟ್ಟೆಯನ್ನು ಯಾವಾಗಲೂ ಒಗೆಯುವಂತೆ ಒಗೆಯಿರಿ. ಬಟ್ಟೆಯಿಂದ ಕಲೆ ಹೋಗುವವರೆಗೂ ಈ ವಿಧಾನವನ್ನು ನೀವು ಅನುಸರಿಬೇಕಾಗುತ್ತದೆ.

ಗ್ಲಿಸರಿನ್
ಬಟ್ಟೆಯಿಂದ ಅರಶಿನ ಕಲೆಯನ್ನು ಹೋಗಲಾಡಿಸಲು ಗ್ಲಿಸರಿನ್ ಅನ್ನು ಬಳಸಬಹುದು. ಕಲೆಯಾದ ಜಾಗದಲ್ಲಿ ಗ್ಲಿಸರಿನ್‌ನಿಂದ ಉಜ್ಜಿ. ಇದು ಸ್ವಲ್ಪ ಗಂಟೆಗಳ ಕಾಲ ಬಟ್ಟೆಯಲ್ಲಿ ನೆನೆಯಲಿ. ನಂತರ ಯಾವಾಗಲೂ ಬಟ್ಟೆ ಒಗೆಯುವಂತೆ ಒಗೆಯಿರಿ.

ಹೈಡ್ರೋಜನ್ ಫೆರಾಕ್ಸೈಡ್
ಇದು ಮೆಡಿಕಲ್‌ಗಳಲ್ಲಿ ಲಭ್ಯವಿರುತ್ತದೆ. ಬಿಳಿ ಬಟ್ಟೆಗಳಿಗೆ ಮಾತ್ರವೇ ಇದನ್ನು ಬಳಸಿ. ಹೈಡ್ರೋಜನ್ ಮೂಲಕ ಅರಶಿನ ಕಲೆ ಉಂಟಾದ ಜಾಗದಲ್ಲಿ ಚೆನ್ನಾಗಿ ಉಜ್ಜಿ ನಂತರ ಸ್ವಲ್ಪ ಸಮಯ ಬಿಟ್ಟು ಇದನ್ನು ತೊಳೆಯಿರಿ.

ಡ್ರೈ ಕ್ಲೀನರ್ಸ್
ಮನೆಯಲ್ಲಿನ ಸಾಮಾಗ್ರಿಗಳನ್ನು ಬಳಸಿಕೊಂಡು ಅರಶಿನ ಕಲೆಯನ್ನು ಹೋಗಲಾಡಿಸುವುದೆಂದರೆ ಪ್ರಯಾಸವೇ ಸರಿ. ಕಲೆಯ ಸಮಯವನ್ನು ತಿಳಿದುಕೊಂಡು, ಕಲೆ ಪೂರ್ಣವಾಗಿ ಹೋಗಬೇಕೆಂದೇನಿಲ್ಲ. ಈ ಸಮಯದಲ್ಲಿ ನೀವು ವೃತ್ತಿಪರ ಡ್ರೈ ಕ್ಲೀನರ್‌ಗಳನ್ನು ಭೇಟಿ ಮಾಡುವುದು ಒಳ್ಳೆಯದು.



Click it and Unblock the Notifications