Latest Updates
-
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ?
ದಾಲ್ಚಿನಿಯ ಎಂಟು ಗೃಹಬಳಕೆಯ ಉಪಯೋಗ
ಬೇಕಾದ ವಸ್ತು ಬಳಿಯಲ್ಲೇ ಎಲ್ಲವೂ ಇದ್ದು ಒಮ್ಮೊಮ್ಮೆ ನಾವು ಮನೆ ಹುಡುಗಾಡುವುದಿದೆ. ಅದೇ ರೀತಿ ಹಲವು ಅಡುಗೆ ಮನೆಯ ವಸ್ತುಗಳು ನಮಗೆ ಗೊತ್ತಿರದ ಅದೆಷ್ಟೋ ಪ್ರಭಾವಗಳನ್ನು ಹೊಂದಿವೆ. ನಮಗೆ ಇವು ತಿಳಿದಿರುವುದಿಲ್ಲ ಅಷ್ಟೇ. ಇದೇ ರೀತಿ ದಾಲ್ಚಿನಿ. ಸಂಬಾರ ಪದಾರ್ಥವಾಗಿ ಮಾತ್ರ ಎಲ್ಲರಿಗೂ ಪರಿಚಿತವಾಗಿರುವ ಈ ವಸ್ತುವಿನ ಇನ್ನಷ್ಟು ಉಪಯೋಗಗಳನ್ನು ಇಲ್ಲಿ ಹೇಳಲಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು
ಆಡಂ ಈ ವಸ್ತುವಿನ ಬಗ್ಗೆ ಮತ್ತು ಇದರ ಬಳಕೆಯ ಬಗ್ಗೆ ಬ್ಲಾಗ್ ನಲ್ಲಿ ಬರೆಯುತ್ತಾನೆ. ಇದನ್ನು ಬಾಯಿ ತೊಳೆಯುವುದರಿಂದ ಆರಂಭಿಸಿ ಕೀಟ ನಾಶಕದವರೆಗೂ ಬಹಳ ರೀತಿಯಲ್ಲಿ ಬಳಸಬಹುದು. ಇದು ಬೇಯಿಸುವ ಪದಾರ್ಥಗಳ ಮತ್ತು ಬಹು ಬೇಡಿಕೆಯ ವಸ್ತುವಾಗಿದೆ. ಆದರೆ ಇದರ ಬಳಕೆ ಇಲ್ಲಿಗೆ ಸೀಮಿತವಾಗಿಲ್ಲ. ಇದನ್ನು ಮನೆಯ ಕೆಲವು ಭಾಗಗಳನ್ನು ಸ್ವಚ್ಛಮಾಡುವುದರಿಂದ ಹಿಡಿದು ಸೊಳ್ಳೆಗಳನ್ನು ನಿಯಂತ್ರಣ ಮಾಡುವ ತನಕ ಎಲ್ಲದಕ್ಕೂ ಬಳಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಅಡುಗೆಮನೆ ಟವೆಲ್ ಸ್ವಚ್ಛವಾಗಿಡಲು ಕೆಲವೊಂದು ಟಿಪ್ಸ್

ಟಿಂಚರ್
ಒಂದು ಕಪ್ ವೊಡ್ಕಾ ದೊಂದಿಗೆ ದಾಲ್ಚಿನಿಯನ್ನು ಮಿಶ್ರಣ ಮಾಡಿದರೆ ಇದು ಅದ್ಭುತವಾದ ರುಚಿಯನ್ನು ನೀಡುತ್ತದೆ ಜೊತೆಗೆ ಇದು ಪ್ರಭಾವಶಾಲಿ ಟಿಂಚರ್ ಆಗಿಯೂ ಬಳಸಬಹುದು. ಇದು ನಿಮ್ಮ ಕಾಕ್ ಟೈಲ್ ನಲ್ಲಿ ಸ್ವಲ್ಪ ಹೆಚ್ಚಿನ ಕಿಕ್ ಗಾಗಿಯೂ ಬಳಸಬಹುದು ಹಾಗೂ ಇದನ್ನು ಮತ್ತಷ್ಟು ವೊಡ್ಕಾದೊಂದಿಗೆ ಸೇರಿಸಿದರೆ ಇದೊಂದು ಪ್ರಭಾವಶಾಲಿ ಆಫ್ಟರ್ ಶೇವ್ ಆಗುತ್ತದೆ.

ಏರ್ ಫ್ರೆಶ್ನರ್
ಇದನ್ನು ರೂಮ್ ಅನ್ನು ಸುಗಂಧಶಾಲಿಯಾಗಿ ಇಡಲು ಉಪಯೋಗಿಸಬಹುದು. ಸ್ವಲ್ಪ ನೀರಿನಲ್ಲಿ ದಾಲ್ಚಿನಿಯನ್ನು ಹಾಕಿ ಕಲಕಿದರೆ ನಿಮ್ಮ ರೂಮ್ ಫ್ರೆಶ್ನರ್ ಸಿದ್ಧ.

ಕೀಟನಾಶಕ
ನೀವು ನಿಮ್ಮ ಕಪಾಟಿನಲ್ಲಿಡುವ ವಾಸನೆ ತರಿಸುವ ಕೀಟನಾಶಕಗಳಿಗೆ ವಿದಾಯ ಹೇಳುವ ಸಮಯ ಬಂದಾಗಿದೆ. ದಾಲ್ಚಿನಿನ ಸುಗಂಧ ಈ ಕೆಲಸವನ್ನು ಮಾಡಬಹುದಾದಾಗ ದುರ್ಗಂಧ ಬೀರುವ ಅಂತಹ ವಸ್ತುಗಳೇಕೆ.

ಪೋಟ್ ಪುರಿ
ಒಂದು ದಾಲ್ಚಿನಿಯ ಕಡ್ಡಿ ಅಥವಾ ಹುಡಿ ಮಾಡಿದ ದಾಲ್ಚಿನಿಯನ್ನು ಪೋಟ್ ಪುರಿಯ ಮೇಲೆ ಸಿಂಪಡನೆ ಮಾಡಬಹುದು. ಇದು ಅತ್ಯಾಕರ್ಷಕ ಸುವಾಸನೆಯನ್ನು ನೀಡುತ್ತದೆ ಹಾಗೂ ಪೋಟ್ ಪುರಿ ಹಿಂದೆಂದಿಗಿಂತಲೂ ವಿಭಿನ್ನವಾಗಿರುತ್ತದೆ.

ವ್ಯಾಲೆಂಟೈನ್ ಡೇ ಗಿಫ್ಟ್
ದಾಲ್ಚಿನಿಯ ಕಡ್ಡಿಯಿಂದ ಒಂದು ಮನೆಯಲ್ಲೇ ಮಾಡಬಹುದಾದ ವ್ಯಾಲೆಂಟೇನ್ ಡೇ ಗಿಫ್ಟ್ ತಯಾರಿಸಬಹುದು. ದಾಲ್ಚಿನಿಯ ಕಡ್ಡಿಯನ್ನು ಮೇಣದಲ್ಲಿ ಮುಳುಗಿಸಿ ಹಾಗೂ ಇದನ್ನು ಒಂದು ರಿಬ್ಬನಿನೊಂದಿಗೆ ಸುತ್ತಿ. ಇದು ಒಂದು ವಿಶೇಷ ಗಿಫ್ಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

ಬಾಯಿಯನ್ನು ಸ್ವಚ್ಚಗೊಳಿಸುತ್ತದೆ:
ಬಾಯಿ ತೊಳೆಯುವ ವಸ್ತುಗಳು ಬಹಳ ಸುಲಭವಾಗಿ ತಯಾರಿಸಬಹುದು. ಆದರೂ ನಾವು ಯಾಕೆ ಅವುಗಳನ್ನು ಖರೀದಿಸುತ್ತೇವೆ ಎನ್ನುವುದು ಗೊತ್ತಿಲ್ಲ. ಒಂದು ಕಪ್ ವೋಡ್ಕಾಕ್ಕೆ ಒಂಬತ್ತು ಚಮಚದಷ್ಟು ದಾಲ್ಚಿನಿಯನ್ನು ಹಾಕಿ ಈ ಮಿಶ್ರಣವನ್ನು ಎರಡು ವಾರಗಳ ತನಕ ಹಾಗೆಯೇ ಇಡಿ. ಹಾಗೂ ನಂತರ ಕಾಫಿಯನ್ನು ಸೋಸುವ ಸೋಸಣಿಕೆಯಲ್ಲಿ ಸೋಸಿ ಇಡಿ.

ಇರುವೆ ನಿವಾರಕ
ಇರುವೆಗಳ ಸೈನ್ಯ ನಿಮ್ಮ ಮನೆಯ ಮೇಲೆ ಆಗಾಗಾ ದಾಳಿ ಮಾಡುತಿರುತ್ತದೆಯೇ? ಯಾವುದಾದರೂ ಸಂದಿಗಳಲ್ಲಿ ಇರುವೆಗಳು ಬರುತ್ತಿದ್ದರೆ ಅಲ್ಲಿ ಸುತ್ತಲೂ ದಾಲ್ಚಿನಿಯ ಹುಡಿಯನ್ನು ಸಿಂಪಡನೆ ಮಾಡಿದರೆ ಇರುವೆಗಳು ಬರುವುದೇ ಇಲ್ಲ.

ಸೊಳ್ಳೆಗಳ ಲಾರ್ವಾ ನಿಯಂತ್ರಕ
ಸೊಳ್ಳೆಗಳ ಲಾರ್ವಾಗಳನ್ನು ಕೊಲ್ಲಲು ದಾಲ್ಚಿನಿಯಲ್ಲಿ ಬಹಳ ಪ್ರಭಾವಶಾಲಿ ಅಂಶವಿದೆ ಎಂದು 2004 ರಲ್ಲಿ ನಡೆದ ಒಂದು ಸಂಶೋಧನೆ ಹೇಳಿದೆ. ಇದು ಬಹಳ ಸುರಕ್ಷಿತ ಹಾಗೂ ಪರಿಸರದ ಮೇಲೂ ಹಾನಿ ಮಾಡದ ಅಂಶವಾಗಿದೆ. ಆದರೆ ಇದು ಎಲ್ಲಾ ಕಡೆಗಳಲ್ಲಿ ನಿಜವೆಂದು ನಂಬಲಾಗಿಲ್ಲ. ಇದರ ವಿರುದ್ಧವೂ ಕೆಲವು ಮಾತುಗಳಿವೆ. ಆದರೆ ಸೊಳ್ಳೆಗಳು ಇರುವ ಕಡೆಗೆ ಹಾಕಿದರೆ ಸೊಳ್ಳೆಗಳ ಸಂಖ್ಯೆ ಕಡಿಮೆ ಆಗುವುದಂತೂ ನಿಜ.



Click it and Unblock the Notifications
