Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಅರಶಿನ ಕಲೆಯನ್ನು ನಿವಾರಿಸಲು ಇಲ್ಲಿದೆ ಸುಲಭ ಟಿಪ್ಸ್
ಬಟ್ಟೆಗಳಿಂದ ಕಲೆಯನ್ನು ಹೋಗಲಾಡಿಸಲು ತುಂಬಾ ಕಷ್ಟಕರವಾದ ಕಲೆಯೆಂದರೆ ಅದು ಹಳದಿಯ ಕಲೆಯಾಗಿದೆ. ಹೆಚ್ಚಿನ ಮನೆಗಳಲ್ಲಿ, ಪ್ರತಿಯೊಂದು ಅಡುಗೆಯಲ್ಲೂ ಅರಶಿನವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಈ ಅರಶಿನ ಸಾಂಬಾರು ಪದಾರ್ಥವು ನಿಮ್ಮ ಊಟಕ್ಕೆ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದರ ಒಂದು ಹನಿ ನಿಮ್ಮ ಬಟ್ಟೆಗೆ ಬಿತ್ತೆಂದರೆ ಸಾಕು ಅದನ್ನು ನಿವಾರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ.
ಪದಾರ್ಥದಿಂದ ಉಂಟಾದ ಪರಿಮಳ ಮತ್ತು ಕಲೆಯನ್ನು ನಿವಾರಿಸುವುದು ತುಂಬಾ ಕಷ್ಟವಾದ ಕೆಲಸವಾಗಿದೆ. ಆದರೆ ನಿಮಗೊಂದು ಸ್ವಾಭಾವಿಕ ಸಾಮಾಗ್ರಿ ಈ ಹಳದಿಗಟ್ಟಿದ ಕಲೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಬಿಳಿ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ ಏಕೆಂದರೆ ಅದರ ಬಿಳಿಯ ಬಣ್ಣ ಇಲ್ಲಿ ಮುಖ್ಯವಾಗಿರುತ್ತದೆ. ಹಾಗಿದ್ದರೆ ನಿಮ್ಮ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವ ಒಂದು ನೈಸರ್ಗಿಕ ಸಾಮಾಗ್ರಿ ಯಾವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.
ನಿಮ್ಮ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸುವ ಮುನ್ನ, ಹರಿಯುತ್ತಿರುವ ತಣ್ಣೀರಿನಿಂದ ಮೊದಲು ನಿಮ್ಮ ಬಟ್ಟೆಯನ್ನು ತೊಳೆದುಕೊಳ್ಳಿ, ಅಥವಾ ಉಗುರುಬೆಚ್ಚನೆ ನೀರಿನಲ್ಲಿ ಬಟ್ಟೆಯನ್ನು ನೆನೆಸಿಡುವುದೂ ಕೂಡ ಬಟ್ಟೆಗೆ ಮೃದುತ್ವವನ್ನು ನೀಡುತ್ತದೆ. ಕಲೆಯನ್ನು ನಿವಾರಿಸಿದ ನಂತರ ನೈಸರ್ಗಿಕ ಮೃದುತ್ವವನ್ನು ಬಟ್ಟೆಗಳಿಗೆ ನೀಡಲು ಪ್ರಯತ್ನಿಸಿ.
ಅಡುಗೆ ಕೋಣೆ ಫಳ-ಫಳ ಹೊಳೆಯಬೇಕೆ? ಇಲ್ಲಿದೆ ಟಿಪ್ಸ್

ಗ್ಲಿಸರಿನ್
ಬಟ್ಟೆಯಿಂದ ಅರಶಿನ ಕಲೆಯನ್ನು ಹೋಗಲಾಡಿಸಲು ಗ್ಲಿಸರಿನ್ ಅನ್ನು ಬಳಸಬಹುದು. ಕಲೆಯಾದ ಜಾಗದಲ್ಲಿ ಗ್ಲಿಸರಿನ್‌ನಿಂದ ಉಜ್ಜಿ. ಇದು ಸ್ವಲ್ಪ ಗಂಟೆಗಳ ಕಾಲ ಬಟ್ಟೆಯಲ್ಲಿ ನೆನೆಯಲಿ. ನಂತರ ಯಾವಾಗಲೂ ಬಟ್ಟೆ ಒಗೆಯುವಂತೆ ಒಗೆಯಿರಿ.

ವಿನೇಗರ್
ಅರಶಿನದ ಕಲೆಯನ್ನು ಬಟ್ಟೆಯಿಂದ ನಿವಾರಿಸಲು ಬಿಳಿ ವಿನೇಗರ್ ಅನ್ನು ಬಳಸಿ. ಬಿಳಿ ವಿನೇಗರ್‌ನೊಂದಿಗೆ ಬಟ್ಟೆಯ ಡಿಟರ್ಜೆಂಟ್‌ನೊಂದಿಗೆ ತಂಪು ನೀರಿನಲ್ಲಿ ತೊಳೆಯಿರಿ. ಕಲೆ ಹೋಗುವವರೆಗ ಈ ವಿಧಾನವನ್ನು ಅನುಸರಿಸಿ.

ಆಲ್ಕೋಹಾಲ್
ಬಿಳಿ ಬಟ್ಟೆಯಿಂದ ಅರಶಿನದ ಕಲೆಯನ್ನು ನಿವಾರಿಸಲು ಮೃದು ಸ್ಪಾಂಜ್ ಅನ್ನು ಬಳಸಿ. ಕಲೆಗೆ ಆಲ್ಕೋಹಾಲ್‌ನಿಂದ ಮೊದಲು ಉಜ್ಜಿ ನಂತರ ಅದನ್ನು ಸ್ಪಾಂಜ್ ಬಳಸಿ ಉಜ್ಜಿ.

ಹೈಡ್ರೋಜನ್ ಫೆರಾಕ್ಸೈಡ್
ನೀರಿನ ಒಂಭತ್ತನೇ ಭಾಗಕ್ಕೆ ಸ್ವಲ್ಪ ಹೈಡ್ರೋಜನ್ ಫೆರಾಕ್ಸೈಡ್ ಅನ್ನು ಬಳಸಿ ಬಿಳಿ ಬಟ್ಟೆಯನ್ನು ನೆನೆಸಿಡಿ. ಕಲೆಗೆ ಬ್ರಶ್ ಹಾಕುವ ಮುನ್ನ ಇದನ್ನು ಕನಿಷ್ಟ ಪಕ್ಷ 30 ನಿಮಿಷಗಳ ಕಾಲ ನೆನೆಸಿಡಿ.

ಬಿಸಿ ನೀರು/ತಂಪು ನೀರು
ಬಿಳಿ ಬಟ್ಟೆಗೆ ಬಿದ್ದಿರುವ ಕಲೆಯನ್ನು ನಿವಾರಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಕಲೆಯನ್ನು ನಿವಾರಿಸಲು ಬಿಸಿ ನೀರಿನಲ್ಲಿ ಬಟ್ಟೆಯನ್ನು ಮುಳುಗಿಸಿಡುವುದು ಅತ್ಯವಶ್ಯಕ. ತಂಪು ನೀರು ಅಥವಾ ಐಸ್ ನೀರೂ ಕೂಡ ಕಲೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತದೆ.

ಲಿಂಬೆ
ತಾಜಾ ಲಿಂಬೆಯನ್ನು ಬಳಸಿ ಕೂಡ ನೀವು ಬಿಳಿ ಬಟ್ಟೆಯ ಮೇಲೆ ಬಿದ್ದಿರುವ ಕಲೆಯನ್ನು ನಿವಾರಿಸಬಹುದು. ಕಲೆಯಾದ ಜಾಗಕ್ಕೆ ಲಿಂಬೆಯನ್ನು ಕತ್ತರಿಸಿ ಅದರ ರಸವನ್ನು ಉಜ್ಜಿ ಇದು ನಿಮ್ಮ ಬಟ್ಟೆಗೆ ಮೃದು ಬ್ಲೀಚ್ ಆಗಿ ಕೆಲಸ ಮಾಡುತ್ತದೆ. ಇದು ಬಟ್ಟೆಯ ಹಳದಿ ಕಲೆಯನ್ನು ಕೂಡಲೇ ನಿವಾರಿಸುತ್ತದೆ.



Click it and Unblock the Notifications
