Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಆರು ವಿಧಾನಗಳಲ್ಲಿ ನಿಮ್ಮ ಬಟ್ಟೆಯನ್ನು ಪರ್ಫಕ್ಟ್‌ಗೊಳಿಸಿ
ತಮ್ಮ ಬಟ್ಟೆಯನ್ನು ಸ್ಟಿಫ್ ಆಗಿ ಓರಣವಾಗಿ ಇಟ್ಟುಕೊಳ್ಳಬೇಕು. ಇಸ್ತ್ರಿ ಹಾಕದೇ ಇದ್ದರೂ ಸುಕ್ಕಾಗದೇ ಚೆನ್ನಾಗಿ ತೋರಬೇಕೆಂಬುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ನೀವು ದೋಭಿಯವರಲ್ಲಿ ಬಟ್ಟೆ ಒಗೆಸಿ ತಂದಾಗ ಅದು ಎಷ್ಟೊಂದು ಅಚ್ಚುಕಟ್ಟಾಗಿರುತ್ತದೆ ಅಲ್ಲವೇ
ಹಾಗೆಯೇ ನಿಮಗೂ ಕೆಲವೊಂದು ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಬಟ್ಟೆಗೂ ಒಪ್ಪ ಮತ್ತು ಓರಣವನ್ನು ನೀಡಬಹುದು. ನಿಮ್ಮ ಬಟ್ಟೆಯನ್ನು ಸ್ಟಿಫ್‌ಗೊಳಿಸುವ ಹಲವಾರು ಉಪಕರಣಗಳು ಮಾರುಕಟ್ಟೆಯಲ್ಲಿ ದೊರೆಬಹುದು ಆದರೆ ಅವು ನಿಮ್ಮ ಬಟ್ಟೆಗೆ ಹಾನಿಯುಂಟುಮಾಡುವುದು ಖಂಡಿತ. ಹಾಗಿದ್ದರೆ ನಿಮ್ಮೊಂದಿಗೆ ಬೋಲ್ಡ್ ಸ್ಕೈ ಕೆಲವೊಂದು ಸರಳ ವಿಧಾನಗಳಲ್ಲಿ ನಿಮ್ಮ ಬಟ್ಟೆಯನ್ನು ಸ್ಟಿಫ್ ಆಗಿಸುವ ಉಪಾಯವನ್ನು ಸೂಚಿಸುತ್ತಿದೆ.
ಈ ಮನೆಬಳಕೆಯ ಕೆಲವೊಂದು ವಸ್ತುಗಳು ಖಂಡಿತ ನಿಮ್ಮ ಬಟ್ಟೆಗೆ ಜೀವ ತುಂಬಿ ಅವು ಸುಕ್ಕಾಗದಿರುವಂತೆ ನೋಡಿಕೊಳ್ಳುತ್ತವೆ. ಹಾಗಿದ್ದರೆ ಬಟ್ಟೆಗೆ ಗಂಜಿ ಹಾಕುವುದು ಹೇಗೆಂಬುದನ್ನು ತಿಳಿದುಕೊಳ್ಳುವ ಮತ್ತು ಆ ಮನೆ ಅಗತ್ಯದ ವಸ್ತುಗಳನ್ನು ತಿಳಿದುಕೊಳ್ಳುವ ಉತ್ಸಾಹ ನಿಮ್ಮದೇ ಹಾಗಿದ್ದರೆ ಈ ಲೇಖವನ್ನು ಓದಿ.
ಬಟ್ಟೆಯಿಂದ ಇಂಕ್ ಕಲೆಯನ್ನು ಹೋಗಲಾಡಿಸಲು ಸರಳ ವಿಧಾನಗಳು

ಕೋರ್ನ್ ಸ್ಟ್ರಾಕ್
ಕೋರ್ನ್ ಸ್ಟ್ರಾಕ್ (15 ಮಿಲಿ) ತಂಪು ನೀರು ಮತ್ತು ಸ್ಪ್ರೇ ಬಾಟಲ್ ಇದನ್ನು ಮಾಡಲು ಅಗತ್ಯವಿದೆ. ನೀವು ಮೊದಲಿಗೆ ನೀರನ್ನು ಕುದಿಸಬೇಕು. ನೀರು ತಣ್ಣಗಾಗುತ್ತಿದ್ದಂತೆ ಅದಕ್ಕೆ ಕೋರ್ನ್ ಸ್ಟ್ರಾಕ್ ಅನ್ನು ಸೇರಿಸಿ. ಇದನ್ನು ಸ್ಪ್ರೇ ಬಾಟಲ್‌ಗೆ ಹುಯ್ಯಿರಿ. ಸ್ಪ್ರೇ ಬಾಟಲ್ ಅನ್ನು ಚೆನ್ನಾಗಿ ಕುಲುಕಿಸುವ ಮೂಲಕ ಸಾಮಾಗ್ರಿಗಳನ್ನು ಮಿಶ್ರಗೊಳಿಸಿ. ನಿಮ್ಮ ಬಟ್ಟೆಯನ್ನು ಸ್ಟ್ರಾಚ್ ಮಾಡುವ ನೈಸರ್ಗಿಕ ವಿಧಾನಗಳಲ್ಲಿ ಇದೂ ಒಂದು.

ಬಟಾಟೆ ನೀರು
ಈ ವಿಧಾನವನ್ನು ಕೆಲವೊಂದು ಬಟಾಟೆಗಳೊಂದಿಗೆ ಮನೆಯಲ್ಲೇ ನಿಮಗೆ ಅನುಸರಿಸಬಹುದು. ಮೊದಲಿಗೆ ಬಟಾಟೆಯನ್ನು ನೀರಿನಲ್ಲಿ ಕುದಿಸಿ ಮತ್ತು ಈ ನೀರು ತಣ್ಣಗಾಗಲು ಬಿಡಿ. ಮರುದಿನ, ನೀರನ್ನು ಬಸಿದು ಬಟಾಟೆ ನೀರನ್ನು ಮಾತ್ರ ಉಳಿಸಿಕೊಳ್ಳಿ. ಇದು ನಿಮ್ಮ ಬಟ್ಟೆಯನ್ನು ತಾಜಾ ಮತ್ತು ಶುಭ್ರವಾಗಿರಿಸುತ್ತದೆ.

ಅನ್ನದ ನೀರು
ನಿಮ್ಮ ಅನ್ನವನ್ನು ತುಂಬಾ ಬೇಯಿಸದಿರಿ. ಮೊದಲಿಗೆ ಅಕ್ಕಿಯನ್ನು ಕುದಿಸಿ ಮತ್ತು ನೀರನ್ನು ಬಸಿಯಿರಿ. ನೀರು ತಣ್ಣಗಾಗುವರೆಗೆ ಸ್ವಲ್ಪ ಹೊತ್ತು ಕಾಯಿರಿ. ತಣ್ಣಗಾದ ನಂತರ ನಿಮ್ಮ ಬಟ್ಟೆಯನ್ನು ನೀರಿನಲ್ಲಿ ಮುಳುಗಿಸಿ ಮತ್ತು ಬಿಸಿಲಿನಲ್ಲಿ ಒಣಗಿಸಿ.

ತರಕಾರಿ ನೀರು
ಮೊದಲಿಗೆ ತರಕಾರಿಗಳನ್ನು ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ ಬೇಯಿಸಿ. ನಂತರ ನೀರನ್ನು ಬಸಿದು ಇದಕ್ಕೆ ಸ್ವಲ್ಪ ಉಪ್ಪು ಹಾಕಿ. ನಿಮ್ಮ ಮೆಶಿನ್‌ನಲ್ಲಿರುವ ಕೊನೆಯ ಸಲ ಒಗೆದ ಬಟ್ಟೆಗೆ ಈ ನೀರನ್ನು ಹಾಕಿ. ನಂತರ ಬಟ್ಟೆಯನ್ನು ಒಣಗಿಸಿ.

ಅರಾರೋಟ್
ಇದೊಂದು ನಿಮ್ಮ ಬಟ್ಟೆಯನ್ನು ಸ್ಟ್ರೆಚ್ ಮಾಡುವ ನೈಸರ್ಗಿಕ ವಿಧಾನವಾಗಿದೆ. ಕೆಮಿಕಲ್ ವಿಧಾನದಲ್ಲಿ ಸ್ಟ್ರಾಚ್ ಮಾಡುವ ಬಟ್ಟೆಗೂ ಅರಾರೋಟ್ ಅನ್ನು ಬಳಸುತ್ತಾರೆ. ಅರ್ಧ ಮಗ್ ನೀರಿನಲ್ಲಿ ಅರಾರೋಟ್ ಅನ್ನು ಗ್ರೈಂಡ್ ಮಾಡಿ. ಈ ನೀರಿನಲ್ಲಿ ನಿಮ್ಮ ಬಟ್ಟೆಯನ್ನು ನೆನೆಸಿಡಿ ಮತ್ತು ಬಿಸಿಲಿನಲ್ಲಿ ಒಣಗಿಸಿ.

ಗೋಧಿ
ಅಕ್ಕಿಯಂತೆ ಗೋಧಿಯನ್ನೂ ಕೂಡ ಬಟ್ಟೆ ಸ್ಟ್ರಾಚ್ ಮಾಡಲು ಬಳಸುತ್ತಾರೆ. ಗೋಧಿ ನೀರಿನಲ್ಲಿ ನಿಮ್ಮ ಬಟ್ಟೆಯನ್ನು 20 ನಿಮಿಷಗಳ ಕಾಲ ನೆನೆಸಿಡಿ, ನಂತರ ಬಿಸಿಲಿನಲ್ಲಿ ಒಣಗಿಸಿ ಇದು ನಿಮ್ಮ ಬಟ್ಟೆಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.



Click it and Unblock the Notifications
