Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಳೆಯ ಬಿಳಿ ಬೆಡ್ಶೀಟ್ಗಳನ್ನು ಮರುಬಳಕೆ ಮಾಡಲು 5 ಸಲಹೆಗಳು
ಹಳೆದಾಗಿರುವ ಬಿಳಿ ಬೆಡ್ಶೀಟ್ಗಳನ್ನು ಮರುಬಳಕೆ ಮಾಡಲು ಹಲವಾರು ಮಾರ್ಗಗಳಿವೆ. ಹೊಸದಾಗಿ ತಂದಂತಹ ಬೆಡ್‍ಶೀಟ್‍ಗಳನ್ನು ಕೆಲವು ತಿಂಗಳು ಬಳಸಿದ ಮೇಲೆ ನಾವು ಅವುಗಳನ್ನು ಬಿಸಾಡಿ ಹೊಸ ಬೆಡ್‍ಶೀಟ್ ಕೊಂಡುಕೊಳ್ಳಲು ಇಚ್ಛಿಸುತ್ತೇವೆ. ಆದರೆ ನಿಮ್ಮ ಹಳೆಯ ಬೆಡ್‍ಶೀಟ್‍ಗಳನ್ನು ಉಳಿಸಿಕೊಂಡು ಅವುಗಳನ್ನು ಸೃಜನಶೀಲವಾಗಿ ಬಳಸಿಕೊಳ್ಳಲು ಹಲವಾರು ಮಾರ್ಗಗಳಿವೆ. ನೀವು ಸಹ ಸ್ವಲ್ಪ ಸೃಜನಶೀಲತೆಯಿಂದ ಆಲೋಚಿಸಿ, ನಿಮಗೂ ಸಹ ಹೊಚ್ಚ ಹೊಸ ಆಲೋಚನೆಗಳು ಲಭಿಸಬಹುದು.
ಬೆಡ್‍ಶೀಟಿನ ಮೇಲೆ ಸಣ್ಣ ಕಲೆ ಅಥವಾ ಸ್ವಲ್ಪ ಹರಿದಿದ್ದರೆ ನಾವು ಅದನ್ನು ಬಿಸಾಡಲು ಆಲೋಚಿಸುತ್ತೇವೆ. ಅದರಲ್ಲೂ ಬಿಳಿಯ ಬೆಡ್‍ಶೀಟುಗಳು ಕಲೆಗಳಿಗೆ ಹೆಚ್ಚು ಈಡಾಗುತ್ತದೆ. ಆದಾಗಿಯೂ ನೀವು ಇದನ್ನು ಬಿಸಾಡದೆ ಬಳಸಿಕೊಳ್ಳಲು ಹಲವಾರು ಮಾರ್ಗಗಳು ಇರುತ್ತವೆ. ಒಂದು ವೇಳೆ ನಿಮ್ಮ ಹಳೆಯ ಬಿಳಿಯ ಬೆಡ್‍ಶೀಟ್‍ಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂದು ನಿಮಗೆ ಗೊತ್ತಿದ್ದರೆ, ಅವುಗಳನ್ನು ಬಳಸಿಕೊಂಡು ನೀವು ನಾನಾ ಉಪಯೋಗಗಳನ್ನು ಪಡೆದುಕೊಳ್ಳಬಹುದು. ಬನ್ನಿ ಅದಕ್ಕಾಗಿ ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಮುಂದೆ ಓದಿ....
ನಿಮ್ಮ ಪೀಠೋಪಕರಣಗಳನ್ನು ಮುಚ್ಚಿ
ಒಂದು ವೇಳೆ ನಿಮ್ಮ ಮನೆಯಲ್ಲಿ ಬಳಸದೆ ಇರುವಂತಹ ಪೀಠೋಪಕರಣಗಳು ಇದ್ದಲ್ಲಿ, ಅವುಗಳನ್ನು ಬೆಡ್‍ಶೀಟಿನಿಂದ ಮುಚ್ಚಿ. ಹಾಗೆಯೇ ನೀವು ರಜೆಯ ಮೇಲೆ ಹೊರಗೆ ಹೋಗುತ್ತಿದ್ದಲ್ಲಿ, ಧೂಳಿನಿಂದ ಮುಕ್ತವಾಗಿರಬೇಕಾದ ಪೀಠೋಪಕರಣಗಳನ್ನು ಬೆಡ್‍ಶೀಟಿನಿಂದ ಮುಚ್ಚಿ. ಜೊತೆಗೆ ನಿಮ್ಮ ಮನೆಯನ್ನು ಯಾವುದಾದರು ಒಂದು ಸಮಾರಂಭಕ್ಕೆ ಮುನ್ನ ಸಿದ್ಧಗೊಳಿಸಬೇಕಾದಲ್ಲಿ ಸಹ ಈ ಬೆಡ್‍ಶೀಟ್‍ಗಳನ್ನು ಪೀಠೋಪಕರಣಗಳ ಮೇಲೆ ಮುಚ್ಚ ಬಹುದು. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ನಿಮ್ಮ ಇಸ್ತ್ರಿ ಮಾಡುವ ಮೇಜಿನ ಮೇಲೆ ಮುಚ್ಚಿ
ನಿಮ್ಮ ಬೆಡ್‍ಶೀಟ್‍ಗಳನ್ನು ಹೇಗೆ ಬಳಸುವುದು? ಹಳೆಯ ಬೆಡ್‍ಶೀಟ್‍ಗಳನ್ನು ನಿಮ್ಮ ಬಟ್ಟೆಗಳನ್ನು ಇಸ್ತ್ರಿ ಮಾಡುವ ಮೇಜಿನ ಮೇಲೆ ಮುಚ್ಚಿ. ಸಾಮಾನ್ಯವಾಗಿ, ನಿಮ್ಮ ಇಸ್ತ್ರಿ ಮಾಡುವ ಮೇಜಿನ ಮೇಲೆ ಇದಕ್ಕೆ ಅನುಕೂಲಕರವಾಗಿ ಕೆಲವೊಂದು ಬಟ್ಟೆಗಳನ್ನು ಹಾಕಬೇಕಾಗುತ್ತದೆ. ಇದಕ್ಕೆಂದು ಹೊಸ ಬಟ್ಟೆಗಳನ್ನು ಹಾಕುವ ಬದಲು, ನೀವು ನಿಮ್ಮ ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಳ್ಳಬಹುದು. ಏಕೆಂದರೆ ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಳ್ಳಬೇಕಾದಾಗ ನೀವು ಬಟ್ಟೆ ಸುಟ್ಟು ಹೋಗುತ್ತದೆ ಎಂಬುದರ ಕುರಿತಾಗಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.
ನಿಮ್ಮ ಕಾರಿನಲ್ಲಿ ಬಳಸಿಕೊಳ್ಳಿ
ನಿಮ್ಮ ಕಾರಿನಲ್ಲಿ ಕೆಲವೊಂದು ವಸ್ತುಗಳನ್ನು ಇತರೆಡೆಗೆ ಸಾಗಿಸುವಾಗ, ನೀವು ನಿಮ್ಮ ಸೀಟ್ ಕವರ್‌ಗಳನ್ನು ಮಣ್ಣು ಮಾಡುವ ಸಾಧ್ಯತೆಯಿರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಬೆಡ್‍ಶೀಟ್ ಬಳಸಿದರೆ ನಿಮ್ಮ ಕಾರಿನ ಸೀಟ್‍ಗಳು ಹಾಳಾಗುವುದನ್ನು ತಡೆಯಬಹುದು. ಹೀಗೆ ನೀವು ನಿಮ್ಮ ಹಳೆಯ ಬಿಳಿ ಬೆಡ್‍ಶೀಟ್‍ಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು.
ಇವುಗಳನ್ನು ಏಪ್ರನ್‍ನಂತೆ ಬಳಸಿಕೊಳ್ಳಿ
ಹಳೆ ಬಿಳಿ ಬೆಡ್‍ಶೀಟ್‍ಗಳನ್ನು ಏನು ಮಾಡುವುದು? ಅವುಗಳನ್ನು ನಿಮ್ಮ ಏಪ್ರನ್‍ನಂತೆ ಬಳಸಿಕೊಳ್ಳಿ. ಹಳೆಯ ಬೆಡ್‍ಶೀಟ್‍ಗಳನ್ನು ಬಳಸಿಕೊಂಡು ಏಪ್ರನ್ ಹೊಲಿಸಿಕೊಳ್ಳಿ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕರೆಗಳು ಹಾಗುವ ಸಂಭವವಿರುತ್ತದೆ. ಅಂತಹ ಕರೆಗಳಿಂದ ನಿಮ್ಮ ಬಟ್ಟೆಗಳಿಗೆ ಹಾನಿಯನ್ನು ಮಾಡದಿರಲು ಈ ಏಪ್ರನ್‍ಗಳು ರಕ್ಷಣಾ ಕವಚದಂತೆ ಕೆಲಸ ಮಾಡುತ್ತವೆ. ಮನೆಯಲ್ಲಿ ಹಳೆಯ ಬೆಡ್ ಶೀಟ್ ಇರಿಸಿಕೊಂಡು ಹೊಸ ಏಪ್ರನ್ ಏಕೆ ಕೊಳ್ಳುವಿರಿ. ಹಳೆಯ ಬೆಡ್‍ಶೀಟನ್ನೇ ಹೊಸ ಏಪ್ರನ್ ಆಗಿ ಪರಿವರ್ತಿಸಿಕೊಳ್ಳಿ. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ
ಪರದೆಗಳಾಗಿ ಬಳಸಿ
ಒಂದು ವೇಳೆ ನಿಮ್ಮ ಹಳೆಯ ಬೆಡ್‍ಶೀಟಿನ ಬಣ್ಣಗಳು ನಿಮ್ಮ ಮನೆಯ ಗೋಡೆಗೆ ಹೊಂದಿಕೊಂಡರೆ, ಅವುಗಳನ್ನು ಏಕೆ ನಿಮ್ಮ ಮನೆಯ ಕಿಟಕಿ, ಬಾಗಿಲುಗಳಿಗೆ ಪರದೆಗಳಾಗಿ ಬಳಸಬಾರದು? ಬಿಳಿಯ ಬಣ್ಣವು ಬಹುತೇಕ ಎಲ್ಲಾ ಬಣ್ಣಗಳ ಜೊತೆಗೂ ಆರಾಮವಾಗಿ ಬೆರೆಯುತ್ತದೆ. ಹಾಗಾಗಿ ನೀವು ಅವುಗಳ ಬಗ್ಗೆ ಚಿಂತಿಸುವುದೇ ಬೇಡ. ನಿಮ್ಮ ಮನೆಯ ಗೋಡೆಗಳಿಗೆ ನಿಸ್ಸಂಶಯವಾಗಿ ನಿಮ್ಮ ಹಳೆಯ ಬಿಳಿ ಬೆಡ್ ಶೀಟ್ ಹೊಂದಿಕೊಳ್ಳುತ್ತದೆ. ಇದು ನಿಮ್ಮ ಹಳೆಯ ಬೆಡ್‍ಶೀಟನ್ನು ಬಳಸಿಕೊಳ್ಳಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದು.



Click it and Unblock the Notifications




