Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪುಸ್ತಕ ಶೆಲ್ಫ್ ಅನ್ನು ಈ ಐದು ವಿಧಾನದಲ್ಲಿ ಸಂಘಟಿಸಿ!
ನೀವು ಪುಸ್ತಕ ಪ್ರೇಮಿಯಾಗಿದ್ದು ಸರಿಯಾಗಿ ಸೇರಿಸಿಡುವ ಕಲೆ ತಿಳಿದಿರದಿದ್ದರೆ ಖಂಡಿತವಾಗಿ ಮನೆ ತುಂಬಾ ಪುಸ್ತಕಗಳು ಹಾಗೆಯೇ ಬಿದ್ದಿರುತ್ತವೆ. ನಿಮ್ಮಲ್ಲಿರುವ ಪುಸ್ತಕಗಳನ್ನು ಕ್ರಿಯಾತ್ಮಕ ರೀತಿಯಲ್ಲಿ ಸಂಘಟಿಸುವುದು ಸುಲಭ. ಈ ಕೆಳಗೆ ನೀವು ಪುಸ್ತಕಗಳನ್ನು ಹೇಗೆ ಜೋಡಿಸಿಡಬಹುದು ಎಂಬುದರ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಾಗಿದೆ.
*ವರ್ಣಮಾಲೆಯ ಪ್ರಕಾರ ಸೇರಿಸಿ:
ತುಂಬಾ ಸಾಮಾನ್ಯ ಮತ್ತು ಜನಪ್ರಿಯ ಉತ್ತಮ ವಿಧಾನವೆಂದರೆ ಪುಸ್ತಕಗಳನ್ನು ವರ್ಣಮಾಲೆಯ ಆಧಾರದ ಮೇಲೆ ಸೇರಿಸಿಡುವುದು. ಅದನ್ನು ನೀವು ಲೇಖಕರ ಹೆಸರಿನ ಮೇಲೆ ಅಥವಾ ಪುಸ್ತಕದ ಹೆಸರಿನ ಮೇಲೆ ಕೂಡ ಮಾಡಬಹುದು.
*ಪುಸ್ತಕದ ಆಧಾರದ ಮೇಲೆ:
ನೀವು ಯಾವುದೇ ಪ್ರಕಾರದ ಪುಸ್ತಕವನ್ನು ಓದಲು ಇಷ್ಟಪಡುವಾಗ ಸುಲಭವಾಗಿ ಆಯ್ದುಕೊಳ್ಳಲು ಇದು ಬಹಳ ಸಹಾಯಕ.ಹಾಸ್ಯ,ಸಾಹಿತ್ಯ,ಥ್ರಿಲ್ಲರ್,ಸಸ್ಪೆನ್ಸ್ ಹೀಗೆ ವಿವಿಧ ರೀತಿಯ ಪುಸ್ತಕಗಳನ್ನು ವಿಂಗಡಿಸಿ ಪ್ರತ್ಯೇಕವಾಗಿ ಜೋಡಿಸಿಡಿ.

*ಬಣ್ಣಗಳ ಆಧಾರದ ಮೇಲೆ:
ನಿಮ್ಮ ಬಳಿ ಇರುವ ಪುಸ್ತಕಗಳನ್ನು ಕಾಮನ ಬಿಲ್ಲಿನಂತೆ ವಿವಿಧ ಬಣ್ಣಗಳ ಪುಸ್ತಕಗಳನ್ನು ಒಂದೆಡೆ ಸೇರಿಸಿಡಬಹುದು. ನಿಮ್ಮಲ್ಲಿರುವ ಹೆಚ್ಚಿನ ಪುಸ್ತಕಗಳು ಕಪ್ಪು ಮತ್ತು ಬಿಳಿ ಬಣ್ಣದವುಗಳಾಗಿದ್ದರೆ ಏಕವರ್ಣ ವಿಭಾಗವನ್ನು ಕೂಡ ಸೃಷ್ಟಿಸಿ ಇಡಬಹುದು.
*ಪಬ್ಲಿಕೇಷನ್ ಆಧಾರದ ಮೇಲೆ ಜೋಡಿಸಿಡಿ:
ನೀವು ಎಲ್ಲಾ ಪುಸ್ತಕಗಳನ್ನು ಮಿಶ್ರ ಮಾಡಲು ಇಚ್ಛಿಸದಿದ್ದಲ್ಲಿ ಪಬ್ಲಿಷರ್ ಪ್ರಕಟಿಸಿದ ಎಲ್ಲಾ ಪುಸ್ತಕಗಳನ್ನು ಒಟ್ಟುಗೂಡಿಸಿ ಜೋಡಿಸಿಡಬಹುದು.ಪ್ರತಿಯೊಬ್ಬ ಪ್ರಕಾಶಕರಿಗೂ ಪ್ರತ್ಯೇಕ ಸ್ಥಾನ ತಯಾರು ಮಾಡಿ ಜೋಡಿಸಿಡಿ.
*ಭಾವನೆಗಳ ಆಧಾರದ ಮೇಲೆ:
ಇದಲ್ಲದೆ ಬೇರೆ ರೀತಿಯ ವಿಧಾನವನ್ನು ಕೂಡ ನೀವು ಆಯ್ದುಕೊಳ್ಳಬಹುದು. ನಿಮಗೆ ಸ್ನೇಹಿತರು ಅಥವಾ ಕುಟುಂಬದವರು ಪುಸ್ತಕವನ್ನು ಉಡುಗೊರೆಯಾಗಿ ನೀಡಿರಬಹುದು. ಅವುಗಳಿಗೆ ಲೇಬಲ್ ಹಚ್ಚಿ ಪ್ರತ್ಯೇಕವಾಗಿ ಜೋಡಿಸಿಡಬಹುದು. ಮತ್ತು ನೀವೇ ಸ್ವತಃ ಕೊಂಡುಕೊಂಡ ಪುಸ್ತಕಗಳನ್ನೂ ಪ್ರತ್ಯೇಕವಾಗಿ ವಿಂಗಡಿಸಿ ಇಡಬಹುದು.



Click it and Unblock the Notifications
