Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬೆಚ್ಚನೆಯ ಮೈಗೆ ಫ್ಯಾಷನೆಬಲ್ ಜಾಕೆಟ್

ಹುಡುಗಿಯರು ಚೆನ್ನಾಗಿರುವ ಡ್ರೆಸ್ ಹಾಕಿದಾಗ ಅದರ ಮೇಲೆ ಸ್ವೆಟರ್ ಹಾಕಲು ಇಷ್ಟಪಡುವುದಿಲ್ಲ, ಆದರೆ ಚಳಿ ಸಹಿಸಲೂ ಆಗುವುದಿಲ್ಲ, ಮನಸ್ಸಿನಲ್ಲಿಯೆ ಚಳಿಯನ್ನು ಬಯ್ದುಕೊಂಡು ಸ್ವೆಟರ್ ಧರಿಸುತ್ತಾರೆ. ಆದರೆ ಇನ್ನು ಮುಂದೆ ಚಿಂತೆ ಮಾಡಬೇಕಾಗಿಲ್ಲ.
ತುಂಬಾ ಫ್ಯಾಷನೆಬಲ್ ಆದ ಚಳಿಗಾಲದ ಉಡುಪುಗಳು ಮಾರುಕಟ್ಟೆಗೆ ಬಂದಿದ್ದು ಅವುಗಳು ಚಳಿಯಿಂದ ರಕ್ಷಣೆ ಜೊತೆಗೆ ನಿಮ್ಮನ್ನು ಮತ್ತಷ್ಟು ಫ್ಯಾಶಷನೆಬಲ್ ಆಗಿ ಕಾಣುವಂತೆ ಮಾಡುತ್ತದೆ.
ಅದರಲ್ಲೂ ಜೀನ್ಸ್, ಮಿಡಿ ಹೀಗೆ ಫ್ಯಾಷನ್ ಡ್ರೆಸ್ ಮೇಲೆ ಈ ಜಾಕೆಟ್ ಗಳನ್ನು ಧರಿಸಬಹುದು.
1. ಕಾರ್ಡೂರಾಯ್ ಜಾಕೆಟ್: ಕಂದು, ಬೂದಿ, ಬಿಸ್ಕೆಟ್ ಬಣ್ಣದ ಜಾಕೆಟ್ ಗಳನ್ನು ಮಿಡಿ, ಜೀನ್ಸ್ ಮತ್ತು ಟಾಪ್ ಹಾಕಿಕೊಂಡಾಗ ಅವುಗಳ ಮೇಲೆ ಧರಿಸಿದರೆ ತುಂಬಾ ಚೆನ್ನಾಗಿ ಕಾಣುತ್ತದೆ.
2. ಲೆದರ್ ಜಾಕೆಟ್ : ಉದ್ದದ ಲೆದರ್ ಜಾಕೆಟ್ ಔಟ್ ಆಫ್ ಫ್ಯಾಷನ್ ಆಗಿದ್ದರೂ, ಬಿಗಿಯಾದ ಲೆದರ್ ಜಾಕೆಟ್ ಧರಿಸುವುದು ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಇದನ್ನು ಲೆದರ್ ಪ್ಯಾಂಟ್ ಮೇಲೆ ಧರಿಸಬೇಡಿ, ಏಕೆಂದರೆ ಲೆದರ್ ಪ್ಯಾಂಟ್ ಮೇಲೆ ಲೆದರ್ ಜಾಕೆಟ್ ಭಯಾನಕವಾಗಿ ಕಾಣುತ್ತದೆ.
3.ಜೀನ್ಸ್ ಜಾಕೆಟ್ : ಜೀನ್ಸ್ ಜಾಕೆಟ್ ಹುಡುಗರಿಗಿಂತ ಹುಡುಗಿಯರಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದು ಬಿಗಿ ಎನಿಸಿದರೂ ತುಂಬಾ ಬಿಗಿಯಾಗಿರುವುದಿಲ್ಲ. ಬೆಲ್ಟ್ ಜೊತೆ ಬರುವ ಜೀನ್ಸ್ ಜಾಕೆಟ್ ಗಳು ಕಾಲೇಜು ಕನ್ಯೆಯರಿಗೆ ತುಂಬಾ ಪ್ರಿಯ.
4. ಸ್ಯೂಡ್ ಜಾಕೆಟ್ : ಈ ಜಾಕೆಟನ್ನು ಮೊದಲೆಲ್ಲಾ ಗಂಡಸರು ಮಾತ್ರ ಧರಿಸುತ್ತಿದ್ದರು. ಈಗ ಇದರಲ್ಲಿ ಸ್ವಲ್ಪ ವಿನ್ಯಾಸ ಬದಲಾಯಿಸಿ ಬರುತ್ತಿರುವ ಲೇಡಿಸ್ ಜಾಕೆಟ್ ಗಳು ಹುಡುಗಿಯರ ಮೆಚ್ಚುಗೆಯನ್ನು ಗಳಿಸಿದೆ.
5. ಉಣ್ಣೆಯ ಜಾಕೆಟ್: ಉಣ್ಣೆಯಿಂದ ಸಾಧಾರಣ ವಿನ್ಯಾಸದ ಸ್ವೆಟರ್ ಗಿಂತ ಜಿಪ್ ಇರುವ, ದೊಡ್ಡ ಬಟನ್ ಇರುವ ಸ್ಟೆಟರ್ ಚಳಿಯಿಂದ ರಕ್ಷಣೆ ಕೊಡುವುದರ ಜೊತೆ ನೋಡಲೂ ಫ್ಯಾಷನೆಬಲ್ ಆಗಿರುತ್ತದೆ.



Click it and Unblock the Notifications
