Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ದೀಪ ಹಚ್ಚುವಾಗ ಎಣ್ಣೆ ಕಲೆಯಾದರೆ ಏನು ಮಾಡ್ತೀರಾ?

ಹೆಚ್ಚು ಬೆಲೆ ಕೊಟ್ಟು ಹಬ್ಬಕ್ಕೆಂದು ತಂದ ಹೊಸ ಬಟ್ಟೆ ಎಣ್ಣೆಯಿಂದಾಗಿ ತನ್ನ ರೂಪ ಕಳೆದುಕೊಂಡರೆ ತೊಡಲು ಹಿಂಜರಿಕೆ. ಆದ್ದರಿಂದ ಬಟ್ಟೆಯಿಂದ ಎಣ್ಣೆ ಕಲೆ ಹೋಗಿಸುವ ಕೆಲವು ಸುಲಭ ಉಪಾಯಗಳನ್ನು ಇಲ್ಲಿ ನೀಡಲಾಗಿದೆ.
ಬಟ್ಟೆ ಮೇಲಿನ ಎಣ್ಣೆ ಕಲೆ ಹೋಗಿಸುವುದು ಹೇಗೆ?
* ಬೇಬಿ ಪೌಡರ್: ಬಟ್ಟೆಯ ಮೇಲೆ ಎಣ್ಣೆ ಬಿದ್ದಿದ್ದರೆ ಎಣ್ಣೆಯಾದ ಜಾಗಕ್ಕೆ ಬೇಬಿ ಟಾಲ್ಕಂ ಪೌಡರ್ ಹಚ್ಚಬೇಕು. ಹಚ್ಚಿದ ಕೆಲ ಗಂಟೆ ಹಾಗೆ ಬಿಟ್ಟು ಪೌಡರ್ ತೆಗೆಯಬೇಕು. ಎಣ್ಣೆಯನ್ನು ಹೀರಿಕೊಂಡ ಪೌಡರ್ ಬಣ್ಣ ಬದಲಾಗಿರುತ್ತದೆ. ಆಗ ಬಟ್ಟೆಯನ್ನು ಒಗೆದರೆ ಎಣ್ಣೆ ಕಲೆ ಕಾಣುವುದಿಲ್ಲ.
* ಡಿಶ್ ಸೋಪ್ : ಎಣ್ಣೆ ಕಲೆಯನ್ನು ಹೋಗಿಸಲು ಪಾತ್ರೆ ತೊಳೆಯುವ ಸೋಪನ್ನು ಉಪಯೋಗಿಸಬಹುದು. ಕಲೆಯಾದ ಜಾಗಕ್ಕೆ ಸ್ವಲ್ಪ ಸೋಪನ್ನು ಹಾಕಿ ಟೂಥ್ ಬ್ರಶ್ ಸಹಾಯದಿಂದ ಮೃದುವಾಗಿ ಉಜ್ಜಿ ಕೆಲ ನಿಮಿಷ ಬಿಟ್ಟು ತೊಳೆದು ಒಣಗಿಸಬೇಕು.
* ಕಾರ್ನ್ ಸ್ಟಾರ್ಚ್: ಎಣ್ಣೆ ಕಲೆಯಾದ ಜಾಗವನ್ನು ಸಮತಟ್ಟಾಗಿರಿಸಿ ಅದರ ಮೇಲೆ ಕಾರ್ನ್ ಸ್ಟಾರ್ಚ್ ಹಾಕಿ ಅರ್ಧ ಗಂಟೆ ನೆನೆಸಿ ಒಗೆದರೆ ಕಲೆ ಕಡಿಮೆಯಾಗಿರುತ್ತದೆ.
*ಶಾಂಪು: ತಲೆಯಿಂದ ಎಣ್ಣೆ ತೆಗೆಯಲು ಬಳಸುವ ಶಾಂಪುವನ್ನು ಕಲೆಗಳಿಗೂ ಬಳಸಬಹುದು. ಕಲೆಯಾದ ತಕ್ಷಣವೇ ಆ ಜಾಗಕ್ಕೆ ಶಾಂಪುವಿನಿಂದ ಉಜ್ಜಿ ತೊಳೆದು ಒಣಗಿಸಿದರೆ ಕಲೆ ಸುಲಭವಾಗಿ ಬಿಡಬಹುದು.
ಆದರೆ ಈ ವಿಧಾನವನ್ನು ಅನುಸರಿಸುವ ಮುನ್ನ ಬಟ್ಟೆಯ ವಿಧ, ಅದರ ನಿರ್ವಹಣೆಯ ವಿಧಾನ ಎಲ್ಲವನ್ನೂ ತಿಳಿದುಕೊಂಡು ಈ ಟಿಪ್ಸ್ ಗಳನ್ನು ಪಾಲಿಸಬೇಕು.



Click it and Unblock the Notifications
