Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಹೊಳಪು ಕಳೆದುಕೊಳ್ಳದಿರಲಿ ನಿಮ್ಮ ಮುತ್ತಿನ ಒಡವೆ

ಮುತ್ತಿನ ಒಡವೆಗಳನ್ನು ಸಂರಕ್ಷಿಸುವ ವಿಧಾನ:
1. ಈ ಮೊದಲ ಸಲಹೆ ಎಲ್ಲಾ ಒಡವೆಗಳಿಗೂ ಅನ್ವಯವಾಗುತ್ತದೆ. ಆಭರಣಗಳ ಮೇಲೆ ಪರ್ಫ್ಯೂಮ್ ಅಥವಾ ಮೇಕಪ್ ಸಾಧನಗಳನ್ನು ತಾಕಿಸಬಾರದು. ಮೇಕಪ್ ಮತ್ತು ಪರ್ಫ್ಯೂಮ್ ಹಾಕಿಕೊಂಡ ನಂತರ ಒಡವೆಗಳನ್ನು ಧರಿಸಬೇಕು.
2. ಮುತ್ತಿನ ಒಡವೆಗಳನ್ನು ಧರಿಸಿದಾಗ ಒಡವೆಗಳನ್ನು ನೀರಿಗೆ ತಾಕಿಸಬಾರದು. ಶಾಂಪೂ, ಸೋಪ್ ಮತ್ತು ಹೆಚ್ಚು ನೀರು ತಾಗಿಸಿದರೆ ಮುತ್ತಿನ ಅಂದಕ್ಕೆ ಮಾರಕವಾಗಬಹುದು.
3. ಮುತ್ತು ಕೊಳೆಯಂತೆ ಕಂಡರೆ ಮೆತ್ತಗಿನ ಹತ್ತಿ ಬಟ್ಟೆಯಿಂದ ಮೃದುವಾಗಿ ಒರೆಸಬೇಕು. ಗಡುಸಾದ ಬಟ್ಟೆಯನ್ನು ಉಪಯೋಗಿಸಬಾರದು. ಇದರಿಂದ ಮುತ್ತಿನ ಮೇಲಿನ ಹೊದಿಕೆ ಕಿತ್ತು ಬರುವ ಸಾಧ್ಯತೆ ಹೆಚ್ಚಿರುತ್ತದೆ.
4. ಕೇವಲ ಒರೆಸುವುದರಿಂದ ಕೊಳೆ ಹೋದಂತೆ ನಿಮಗನ್ನಿಸದಿದ್ದರೆ ಸ್ವಲ್ಪ ನೀರನ್ನು ಅದ್ದಿ ಒರೆಸಬಹುದು. ಆದರೆ ಹೆಚ್ಚು ನೀರನ್ನು ಉಪಯೋಗಿಸಬಾರದು.
5. ನೀರಿನಿಂದ ಮುತ್ತನ್ನು ಶುದ್ಧಗೊಳಿಸಿದ ನಂತರ 10 ನಿಮಿಷ ಒಣಗಲು ಬಿಡಬೇಕು. ತಕ್ಷಣವೇ ಅದನ್ನು ಸುತ್ತಿಡಬಾರದು.
6. ತುಂಬಾ ಇಕ್ಕಟ್ಟಾದ ಜಾಗದಲ್ಲಿ ಒಡವೆ ವಸ್ತುಗಳನ್ನು ಇಡಬೇಡಿ. ಆಭರಣಕ್ಕೆ ಅಗತ್ಯ ಸ್ಥಳಾವಕಾಶ ಒದಗಿಸಿರಿ. ಇದರಿಂದ ಒಡವೆಗಳು ಕಿತ್ತು ಹೋಗುವುದನ್ನು ತಡೆಯಬಹುದು.
7. ಬೇರೆ ಒಡವೆಗಳೊಂದಿಗೆ ಮುತ್ತಿನ ಒಡವೆಗಳನ್ನು ಇಡಬೇಡಿ. ಇದರಿಂದ ಮುತ್ತಿನ ಹೊಳಪು ಕಡಿಮೆಯಾಗುವುದಲ್ಲದೆ ಸ್ಕ್ರಾಚ್ ಕೂಡ ಆಗಬಹುದು.
8. ಮುತ್ತನ್ನು ಪೋಣಿಸಿದ ದಾರ ಅಥವಾ ಕೊಂಡಿಯನ್ನು ಆಗಾಗ್ಗೆ ಪರೀಕ್ಷಿಸುತ್ತಿರಬೇಕು. ಸಮಯ ಕಳೆದಂತೆ ಅದು ಸವೆಯುತ್ತಾ, ಜಗ್ಗುತ್ತದೆ ಮತ್ತು ಕಿತ್ತು ಹೋಗುತ್ತದೆ. ಆದ್ದರಿಂದ ಆಗಾಗ್ಗೆ ಪರೀಕ್ಷಿಸಿ ಬದಲಾಯಿಸಬೇಕು.



Click it and Unblock the Notifications
