Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಗುದೀಪ ಮಿರಿಮಿರಿ ಮಿಂಚುತಿರಲಿ ಮನೆಯಲಿ

ಬೆಲೆಬಾಳುವ ಈ ರೀತಿಯ ತೂಗುದೀಪ ಕೆಲವರಿಗೆ ಪ್ರೆಸ್ಟೀಜ್ ಸಂಕೇತ, ಇನ್ನೂ ಕೆಲವರಿಗೆ ಅದೊಂದು ಫ್ಯಾಷನ್. ಮನೆಗೆ ಬಂದವರ ಗಮನವನ್ನು ಪಕ್ಕನೆ ತನ್ನತ್ತ ಸೆಳೆಯುವ ತೂಗುದೀಪ ನೋಡಲು ಎಷ್ಟು ಶುಚಿಯಾಗಿದೆ ಎಂಬುದರಿಂದಲೇ ಆ ಮನೆಯ ಶುಚಿತ್ವದ ಬಗ್ಗೆ ತಿಳಿಯಬಹುದು.
ಆದ್ದರಿಂದ ತೂಗುದೀಪವನ್ನು ಶುಚಿಯಾಗಿಡಲು ಹತ್ತಿ ಬಟ್ಟೆ ಅಥವಾ ಧೂಳು ಒರಿಸುವ ಬ್ರಷ್ ನಿಂದ ದಿನಾ ಒರೆಸುವುದರಿಂದ ದೀಪದ ಮೇಲೆ ಧೂಳು ಕೂರುವುದನ್ನು ತಡೆಯಬಹುದು. ದೀಪದಲ್ಲಿ ಬೆಳಕಿನ ತೀಕ್ಷಣತೆ ಮಂದವಾಗಿ ಗೋಚರಿಸುತ್ತಿದ್ದು, ದೀಪದ ಬಣ್ಣ ಮಂಕಾದರೆ ನೀವು ನಿಮ್ಮ ತೂಗು ದೀಪವನ್ನು ಶುಚಿಗೊಳಿಸಬೇಕಾಗುತ್ತದೆ. ಹಾಗೆ ಕ್ಲೀನ್ ಮಾಡುವಾಗ ದೀಪದ ಆಕಾರ, ವಿನ್ಯಾಸ, ಕ್ರಿಸ್ಟಲ್ ಗೆ ಅನುಸಾರವಾಗಿ ಕ್ಲೀನ್ ಮಾಡಬೇಕಾಗುತ್ತದೆ. ಅದು ಹೇಗೆ? ಓದಿ.
1. ದೀಪವನ್ನು ಕ್ಲೀನ್ ಮಾಡುವಾಗ ಲೈಟ್ ನ್ನು ಸ್ವಿಚ್ ಆಫ್ ಮಾಡಿ ದೀಪದ ಬಿಸಿ ಆರಿದ ಮೇಲೆಯಷ್ಟೆ ಒರೆಸಿ. ಮೃದುವಾದ ಹತ್ತಿ ಬಟ್ಟೆ, ಧೂಳು ಒರೆಸುವ ಬಟ್ಟೆಗಳನ್ನು ಬಳಸುವದರಿಂದ ಕ್ರಿಸ್ಟಲ್ ನ ಮೇಲಿ ಕಲೆಗಳನ್ನು ತೆಗೆಯ ಬಹುದಾಗಿದೆ.
2.ಕ್ಲೀನರ್ ನ್ನು ಸ್ಪ್ರೇ ಮಾಡುವುದಾಗಲಿ ಕ್ರಿಸ್ಟಲ್ ನ್ನು ನೀರಿನಲ್ಲಿ ಮುಳುಗಿಸುವುದಾಗಲಿ ಮಾಡಬೇಡಿ.
3. ತೂಗುದೀಪದ ಬಲ್ಬ್ ನ್ನು ಬಿಚ್ಚಿ ಪಕ್ಕಕ್ಕೆ ಇಡಿ. ನಂತರ ಹತ್ತಿ ಬಟ್ಟೆಗಳ ಮೇಲೆ ಸ್ವಲ್ಪ ಗ್ಲಾಸ್ ಕ್ಲೀನರ್ ನ್ನು ಹಾಕಿ ಅದರಿಂದ ಒರೆಸಿ ಆದರೆ ನೆನಪಿಡಿ, ಗ್ಲಾಸ್ ಕ್ಲೀನರ್ ಅನ್ನು ಕ್ರಿಸ್ಟಲ್ ನ ಮೇಲೆ ನೇರವಾಗಿ ಹಾಕಬೇಡಿ.
4. ಒಂದು ವೇಳೆ ನಿಮ್ಮ ದೀಪದ ಕ್ರಿಸ್ಟಲ್ ನೀರಿನಲ್ಲಿ ತೊಳೆಯುವಂತಹದು ಆಗಿದ್ದರೆ ಸ್ವಲ್ಪ ನೀರು ಹಾಕಿ ಒರಿಸಿ ನಂತರ ಬಟ್ಟೆಯಿಂದ ಚೆನ್ನಾಗಿ ಒರೆಸಿ.
5.ನಿಮಗೆ ನಿಮ್ಮ ತೂಗು ದೀಪವನ್ನು ಬಿಚ್ಚಿ ಜೋಡಿಸಲು ಗೊತ್ತಿದ್ದರೆ ಅದರ ಭಾಗಗಳನ್ನು ಬಿಚ್ಚಿ ಕ್ಲೀನ್ ಮಾಡಬಹುದು.
6. ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಮೃದುವಾದ ಬಟ್ಟೆಯನ್ನು ಅದರಲ್ಲಿ ಅದ್ದಿ ಒರೆಸುವುದರಿಂದ ಕ್ರಿಸ್ಟಲ್ ಮೇಲೆ ಗೆರೆಗಳು ಉಂಟಾಗುವುದಿಲ್ಲ.
7.ತೂಗುದೀಪದ ಬಲ್ಬ್ ನ ಧೂಳನ್ನು ಒರೆಸಲು ಒಣ ಬಟ್ಟೆಗಳನ್ನು ಬಳಸಿ.
8. ತೊಳೆದ ತೂಗುದೀಪವನ್ನು ಒಂದಿಷ್ಟು ನೀರಿನ ಅಂಶ ಇರದಂತೆ ಒಣಗಿಸಿ.



Click it and Unblock the Notifications
