Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮನೆಯ ಕೈತೋಟದಲ್ಲಿರಲಿ ಈ ನಾಲ್ಕು ಸಸ್ಯಗಳು

ನಿಮ್ಮ ಕೈತೋಟದಲ್ಲಿರಬೇಕಾದ ನಾಲ್ಕು ಗಿಡಗಳು:
1.ಹಸಿಮೆಣಸಿನ ಕಾಯಿ: 25 ರೀತಿಯ ಮೆಣಸಿನ ಕಾಯಿಗಳಿವೆ. ಆದರೆ ಅದರಲ್ಲಿ ಹಸಿರು ಉದ್ದ ಮೆಣಸಿನ ಕಾಯಿಯನ್ನು ಬೆಳೆಸಿದರೆ ಸಾಕು. ಅದು ದಿನನಿತ್ಯದ ಅಡುಗೆಗೆ ಎಷ್ಟೋ ಉಪಕಾರಿ. ಸ್ವಲ್ಪ ಬಿಸಿಲಿರುವ ಜಾಗದಲ್ಲಿ ಈ ಗಿಡವನ್ನು ಬೆಳೆಸಬೇಕು. ಮೆಣಸಿನ ಕಾಯಿಯನ್ನು ಅರ್ಧ ಹೋಳು ಮಾಡಿ ಅದರಲ್ಲಿನ ಬೀಜಗಳನ್ನು ಮಣ್ಣಿನ ಮೇಲೆ ಹಾಕಿದರೆ ಸಾಕು, ಅಲ್ಲಿ ಗಿಡ ಬೆಳೆಯಲು ಆರಂಭಿಸುತ್ತದೆ.
2. ಕೊತ್ತಂಬರಿ ಸೊಪ್ಪು: ಖಾರದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುವ ಕೊತ್ತಂಬರಿ ಸೊಪ್ಪು ನಿಮ್ಮ ತೋಟದಲ್ಲಿ ಇದ್ದರೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಆದರೆ ತುಂಬಾ ಬಿಸಿಲಿನಲ್ಲಾಗಲೀ, ತುಂಬಾ ತೇವದ ಜಾಗದಲ್ಲಾಗಲೀ ಇದನ್ನು ಬೆಳೆಸುವುದು ಕಷ್ಟ. ಆದ್ದರಿಂದ ಆದಷ್ಟು ತಂಪಾಗಿರುವ ಜಾಗದಲ್ಲಿ ಬೆಳೆಸಬಹುದು. ಕೊತ್ತಂಬರಿಯನ್ನು ಪಾಟ್ ನಲ್ಲಿ ಹಾಕಿದರೆ ಚೆನ್ನಾಗಿ ಬೆಳೆಯುವುದಿಲ್ಲ. ಮಣ್ಣಿನ ಒಂದು ಸಾಲಿನಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆಸಬಹುದು. ಧನ್ಯ ಬೀಜವನ್ನು ಹಾಕಿದರೆ ಕೊತ್ತಂಬರಿ ಹುಲುಸಾಗಿ ಬೆಳೆಯುತ್ತದೆ. ಅದು ಬೆಳೆದು ಬಲಿಯಲು ಆರಂಭಿಸುತ್ತಿದ್ದ ಹಾಗೆ ಕೀಳಬೇಕು..
3. ಶುಂಠಿ: ಒಳ್ಳೆಯ ಮಣ್ಣಿದ್ದರೆ ಶುಂಠಿ ಬೆಳೆಯಲು ತುಂಬಾ ಅನುಕೂಲ. ಕೆಂಪು ಮಣ್ಣಿದ್ದರೆ ಇನ್ನೂ ಚೆನ್ನಾಗಿ ಬೆಳೆಯುತ್ತದೆ. ಶುಂಠಿಗೆ ಚೆನ್ನಾಗಿ ನೀರು ಹಾಕಬೇಕು. ಆದರೆ ಮಣ್ಣಿನಲ್ಲಿ ಅತಿಯಾಗಿ ನೀರು ನಿಲ್ಲುವಂತೆ ಮಾಡಬಾರದು. ಅಂಗಡಿಯಲ್ಲಿ ಸ್ವಲ್ಪ ಹಸಿಯಾಗಿರುವ ಅಥವಾ ಮೊಳಕೆ ಒಡೆದಿರುವ ಶುಂಠಿ ತಂದು ನೆಲದ ಒಳಗೆ ಹಾಕಿದರೆ ಸಾಕು, ಅದು ಚೆನ್ನಾಗಿ ಹರಡಿಕೊಳ್ಳುತ್ತದೆ ಮತ್ತು ವಿಶಾಲವಾದ ಜಾಗದಲ್ಲಿ ಇದನ್ನು ಬೆಳೆಸಿದರೆ ಸರಿ.
4. ತುಳಸಿ: ಸಾಮಾನ್ಯವಾಗಿ ತುಳಸಿ ಎಲ್ಲರ ಮನೆಯಲ್ಲೂ ಇರುತ್ತದೆ. ಆದರೆ ತುಳಸಿಯನ್ನು ಬೆಳೆಸದವರು ತಮ್ಮ ತೋಟದಲ್ಲಿ ಇದನ್ನು ನೆಡಲು ಮರೆಯಬೇಡಿ. ತುಳಸಿಯನ್ನು ಪಲಾವ್ ಮತ್ತು ದಾಲ್ ಗಳ ರುಚಿಗೂ ಬಳಸಬಹುದು. ಪೂಜೆ ಮತ್ತು ಅಡುಗೆ ಎರಡಕ್ಕೂ ಉಪಯೋಗಕ್ಕೆ ಬರುವ ತುಳಸಿಯನ್ನು ಅಗಲವಾದ ಪಾಟ್ ನಲ್ಲಿ ಬೆಳೆಸಬಹುದು. ತುಳಸಿ ಬೀಜವನ್ನು ಅಥವಾ ಗಿಡವನ್ನು ತಂದು ಪಾಟ್ ಗೆ ಹಾಕಬಹುದು. ತುಳಸಿ ಬೇಗ ಒಣಗಿ ಹೋಗುವ ಗಿಡವಾದ್ದರಿಂದ ದಿನಕ್ಕೆ ಎರಡು ಬಾರಿ ನೀರು ಹಾಕಬೇಕು. ಮತ್ತು ಇದನ್ನು ಹೆಚ್ಚು ಹರಡಿಕೊಳ್ಳಲೂ ಬಿಡಬಾರದು. ತುಂಬಾ ಉದ್ದವಾಗಿ ಬೆಳೆದರೆ ತುಳಸಿ ಬೇಗನೆ ಒಣಗಿಹೋಗುತ್ತದೆ.
ಮನೆಯ ಕೈತೋಟದಲ್ಲಿ ಬೆಳೆಸಬಹುದಾದ ಇನ್ನೂ ಅನೇಕ ಗಿಡಗಳಿವೆ. ಆದರೆ ಜಾಗದ ಕೊರತೆ ಇದ್ದವರು ಇಲ್ಲವೇ ಸಮಯ ಇಲ್ಲದವರು ಇವಿಷ್ಟು ಗಿಡಗಳನ್ನು ಹಾಕಿದರೆ ಸಾಕು.



Click it and Unblock the Notifications
