Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 9 ಬಗೆಯ ಎಣ್ಣೆ ವಾಸನೆಗೆ ಸೊಳ್ಳೆ ಕಚ್ಚುವುದೇ ಇಲ್ಲ
ಮನೆಯನ್ನು ಎಷ್ಟೇ ಶುದ್ಧವಾಗಿಟ್ಟರೂ ಅಕ್ಕ-ಪಕ್ಕದ ಶುಚಿತ್ವ ಸ್ವಲ್ಪ ಕಡಿಮೆಯಿದ್ದರೆ ಸೊಳ್ಳೆಗಳು ಬರುತ್ತವೆ. ಸಂಜೆ ಹಾಗೂ ಬೆಳಗ್ಗಿನ ಹೊತ್ತಿನಲ್ಲಿ ಕಾಡುವ ಸೊಳ್ಳೆಯಿಂದ ಮುಕ್ತಿ ಪಡೆಯುವುದು ಹೇಗೆ ಎಂಬುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ಮನೆಯಲ್ಲಿ ಮಕ್ಕಳಿದ್ದರೆ ಅವರನ್ನು ಸೊಳ್ಳೆ ಕಡಿತದಿಂದ ಪಾರು ಮಾಡುವುದು ಹೇಗೆ ಎಂಬುವುದನ್ನು ಪ್ರತಿಯೊಬ್ಬ ಪೋಷಕರು ಚಿಂತಿಸುತ್ತಾರೆ.

ಮನೆಯಲ್ಲಿ ತುಂಬಾ ಚಿಕ್ಕ ಮಕ್ಕಳಿದ್ದರೆ ಸೊಳ್ಳೆ ಕಚ್ಚಿದರೆ ಆ ಭಾಗದಲ್ಲಿ ಊತ , ಅಲರ್ಜಿ ಈ ರೀತಿಯ ಸಮಸ್ಯೆಗಳು ಉಂಟಾಗುವುದು. ಇನ್ನು ಚಿಕನ್‌ಗುನ್ಯಾ, ಡೆಂಗ್ಯೂನಂಥ ಮಾರಕ ರೋಗಗಳು ಸೊಳ್ಳೆ ಮೂಲಕ ಹರಡುವುದರಿಂದ ಸೊಳ್ಳೆಗಳು ತುಂಬಾ ಅಪಾಯಕಾರಿಯೂ ಹೌದು.
ಇದನ್ನು ತಡೆಗಟ್ಟಲು ಸೊಳ್ಳೆ ಬತ್ತಿ ಹಚ್ಚಿಡುವುದು, ಇತರ ದ್ರಾವಕಗಳನ್ನು ಬಳಸಬಹುದಾದರೂ ಅವುಗಳಲ್ಲಿ ರಾಸಾಯನಿಕಗಳಿರುವುದರಿಂದ ಅಡ್ಡಪರಿಣಾಮಗಳು ಇದ್ದೇ ಇರುತ್ತದೆ. ಇಲ್ಲಿ ನೈಸರ್ಗಿಕವಾದ ಎಣ್ಣೆಗಳನ್ನು ಬಳಸಿ ಸೊಳ್ಳೆ ಕಚ್ಚುವುದರಿಂದ ಪಾರಾಗುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

1. ನೀಲಗಿರಿ ಎಣ್ಣೆ
ಇದು ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವ ನೈಸರ್ಗಿಕವಾದ ಎಣ್ಣೆಯಾಗಿದೆ. ಸ್ವಲ್ಪ ನೀಲಗಿರಿ ಎಣ್ಣೆ ತೆಗೆದುಕೊಂಡು ಅದನ್ನು ಕೈ, ಕಾಲುಗಳಿಗೆ ಹಚ್ಚಿದರೆ ಅದರ ವಾಸನೆಗೆ ಸೊಳ್ಳೆ ಬರುವುದಿಲ್ಲ. ನಿಂಬೆಹಣ್ಣು ಹಾಗೂ ನೀಲಗಿರಿ ಮಿಶ್ರಣದಿಂದ ತಯಾರಿಸಿದ ಎಣ್ಣೆಯನ್ನೂ ಬಳಸಬಹುದು.

2. ಲಾವಂಚದ ಎಣ್ಣೆ
ಕೈ ಕಾಲುಗಳಿಗೆ, ಬಟ್ಟೆಗೆ ಲಾವಂಚದ ಎಣ್ಣೆ ಸ್ವಲ್ಪ ಹಾಕುವುದರಿಂದ ಅದರಿಂದ ಹೊರಡುವ ಸುವಾಸನೆಯು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತದೆ. ಲಾವಂಚದ ಎಣ್ಣೆಯ ವಾಸನೆ ಹಿತವಾಗಿರುವುದರಿಂದ ಸೊಳ್ಳೆ ಕಾಟದಿಂದ ಮುಕ್ತಿ, ಮೂಗಿಗೂ ಸುವಾಸನೆ ದೊರೆಯುವುದು.

3. ಚಕ್ಕೆ ಎಣ್ಣೆ
ಚಕ್ಕೆ ಎಣ್ಣೆ ಕೂಡ ಸೊಳ್ಳೆ ತಡೆಗಟ್ಟುವಲ್ಲಿ ಸಹಕಾರಿ. ಇತರ ಎಣ್ಣೆ ಜೊತೆಗೆ ಒಂದೆರಡು ಹನಿ ಚಕ್ಕೆ ಎಣ್ಣೆ ಹಾಕಿ ಮಿಶ್ರ ಮಾಡಿ ಆ ಎಣ್ಣೆಯನ್ನು ಕೈಗೆ, ಕಾಲಿಗೆ ಹಚ್ಚಿ, ಬಟ್ಟೆ ಮೇಲೆ ಸ್ವಲ್ಪ ಸವರಿ. ಇದು ಸೊಳ್ಳೆಯನ್ನು ತಡೆಗಟ್ಟುವಲ್ಲಿ ಸಹಕಾರಿ.

4. ಪುದೀನಾ ಎಣ್ಣೆ
ಒಂದೆರಡು ಹನಿ ಪುದೀನಾ ಎಣ್ಣೆಯನ್ನು ಒಂದು ಚಮಚ ಆ್ಯಪಲ್ ಸಿಡರ್ ಎಣ್ಣೆ ಜೊತೆ ಮಿಶ್ರ ಮಾಡಿ. ಇದನ್ನು ಹಾಕಿರುವ ಬಟ್ಟೆಯ ಮೇಲೆ ಹಚ್ಚಿ. ಇದು ಕೂಡ ಸೊಳ್ಳೆ ತಡೆಗಟ್ಟುವಲ್ಲಿ ತುಂಬಾ ಸಹಕಾರಿಯಾಗಿದೆ.

5. ಥೈಮೆ ಎಣ್ಣೆ
ಥೈಮೆ ಆಯಿಲ್ ಸೊಳ್ಳೆ ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಥೈಮೆ ಎಲೆಯನ್ನು ಸುಟ್ಟರೂ ಅದರ ಘಾಟು ವಾಸನೆಗೆ ಸೊಳ್ಳೆಗಳು ಬರುವುದಿಲ್ಲ. 4 ಹನಿ ಥೈಮೆ ಎಣ್ಣೆಯನ್ನು 2 ಚಮಚ ನೀರಿನೊಂದಿಗೆ ಮಿಶ್ರ ಮಾಡಿ ಹಾಕಿರುವ ಬಟ್ಟೆಗೆ ಚಿಮುಕಿಸಿದರೆ ಸೊಳ್ಳೆ ಬರುವುದಿಲ್ಲ.

6. ಟೀ ಟ್ರೀ ಆಯಿಲ್
ಟೀ ಟ್ರೀ ಆಯಿಲ್ ಸೊಳ್ಳೆ ಕಡಿತದಿಂದ ಪಾರು ಮಾಡುವಲ್ಲಿ ತುಂಬಾ ಸಹಕಾರಿ. ಅದಲ್ಲದೆ ಈ ಎಣ್ಣೆ ಹಚ್ಚುವುದರಿಂದ ಸೊಳ್ಳೆ ಕಡಿತದಿಂದ ಉಂಟಾದ ಊತ, ತುರಿಕೆ ಕೂಡ ಕಡಿಮೆಯಾಗುವುದು. ಚಿಕ್ಕ ಮಕ್ಕಳಿಗೆ ಇದನ್ನು ಹಚ್ಚಬಹುದು.

7. ಕಹಿ ಬೇವಿನೆಣ್ಣೆ
ಕಹಿ ಬೇವಿನ ಎಣ್ಣೆಯಿಂದ ಹಲವಾರು ಪ್ರಯೋಜನ ಪಡೆಯಬಹುದು. ಸಾಕು ಪ್ರಾಣಿಗಳಿಗೆ ಗಾಯವಾದಾಗ ಇತರ ಕೀಟಗಳು ಕೂರದಿರಲು ಕಹಿ ಬೇವಿನ ಎಣ್ಣೆ ಹಚ್ಚಿದರೆ ಸಾಕು. ಇನ್ನು ಸೊಳ್ಳೆ ಕಾಟದಿಂದ ಪಾರಾಗಲು ಕೂಡ ಈ ಎಣ್ಣೆ ಬಳಸಬಹುದು. ಸಂಜೆ ಹಾಗೂ ಬೆಳಗ್ಗಿನ ಹೊತ್ತು ಬರುವ ಸೊಳ್ಳೆಗಳು ಇದರ ವಾಸನೆಗೆ ಹತ್ತಿರ ಸುಳಿಯವುದಿಲ್ಲ. ಇದನ್ನು ಬಳಸಿ ಶೇ.80ರಷ್ಟು ಸೊಳ್ಳೆ ಕಡಿತದಿಂದ ಪಾರಾಗಬಹುದು.

8. ಬೆಳ್ಳುಳ್ಳಿ ಎಣ್ಣೆ
ಬೆಳ್ಳುಳ್ಳಿ ಎಸಳನ್ನು ಮೈ ಮೇಲೆ ಹಚ್ಚಿದರೆ ಅದರ ವಾಸನೆಗೆ ಸೊಳ್ಳೆ ಬರುವುದಿಲ್ಲ. ಇನ್ನು ಬೆಳ್ಳುಳ್ಳಿಯಿಂದ ತಯಾರಿಸಿದ ಎಣ್ಣೆ ಸೊಳ್ಳೆ ತಡೆಗಟ್ಟುವಲ್ಲಿ ತುಂಬಾ ಪ್ರಯೋಜನಕಾರಿ. ಇದನ್ನು ಜಜ್ಜಿ ಮಕ್ಕಳ ಬಟ್ಟೆ ಮೇಲೆ ಸ್ವಲ್ಪ ಉಜ್ಜಿದರೆ ಸೊಳ್ಳೆ ಕಚ್ಚುವುದಿಲ್ಲ. ಮೈ ಮೇಲೆ ಹಚ್ಚಬೇಡಿ, ಅವರ ತ್ವಚೆ ಉರಿಯುವುದು.

9.ನಿಂಬೆಹಣ್ಣು
ನಿಂಬೆಹಣ್ಣು ಕೂಡ ಸೊಳ್ಳೆತಡೆಗಟ್ಟುವಲ್ಲಿ ತುಂಬಾ ಸಹಕಾರಿ. ನಿಂಬೆರಸದಿಂದ ತಯಾರಿಸಿದ ಎಣ್ಣೆ ದೊರೆಯುತ್ತದೆ ಅದನ್ನು ಲೆಮನ್ ಆಯಿಲ್ ಅಂತಾರೆ. ಅದನ್ನು ತಂದು ಹಚ್ಚಿದರೆ ಅದರ ವಾಸನೆಗೆ ಸೊಳ್ಳೆ ಬರುವುದಿಲ್ಲ. ಇನ್ನು ನಿಂಬೆಹಣ್ಣು ಕತ್ತರಿಸಿ ಅದರ ಮೇಲೆ ಲವಂಗ ಹಾಕಿ ಇಟ್ಟರೆ ಅದರ ವಾಸನೆಗೂ ಸೊಳ್ಳೆಗಳು ದೂರ ಓಡುತ್ತವೆ.
ಸಲಹೆ: ಸೊಳ್ಳೆ ಕಾಟ ತಡೆಯಲು ಸಂಜೆ ಹೊತ್ತು ಮನೆಯ ಕಿಟಕಿ, ಬಾಗಿಲು ಮುಚ್ಚಿರಿ. ಮಲಗುವಾಗ ಸೊಳ್ಳೆ ಪರದೆ ಬಳಸಿ. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.

ಅತೀ ಹೆಚ್ಚು ಕೇಳುವ ಪ್ರಶ್ನೆಗಳು
ಸೊಳ್ಳೆ ಕಾಟದಿಂದ ಮುಕ್ತಿ ಹೇಗೆ?
ಮನೆಯ ಸುತ್ತ- ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೆಳು ಬಣ್ಣದ ಬಟ್ಟೆಗಳನ್ನು ಧರಿಸಿ. ಮಕ್ಕಳಿಗೆ ತೋಳುಗಳಿರುವ ಬಟ್ಟೆ ಧರಿಸಿ, ಶಾರ್ಟ್ಸ್ ಬದಲಿಗೆ ಪ್ಯಾಂಟ್ ಹಾಕಿ ಕೊಡಿ. ಸಡಿಲವಾದ ಬಟ್ಟೆ ಧರಿಸಿ.
ಸೊಳ್ಳೆ ತಡೆಗಟ್ಟುವಲ್ಲಿ ಯಾವ ವಿಟಮಿನ್ ಒಳ್ಳೆಯದು?
ವಿಟಮಿನ್ ಬಿ1 ಸೊಳ್ಳೆ ತಡೆಗಟ್ಟುವಲ್ಲಿ ಸಹಕಾರಿ ಎಂದು ಹಲವಾರು ಅಧ್ಯಯನಗಳು ಹೇಳಿವೆ.
ಯಾವ ವಾಸನೆಗೆ ಸೊಳ್ಳೆಗಳು ಬರುವುದಿಲ್ಲ
ಕಹಿ ಹಾಗೂ ಸಿಟ್ರಸ್ ವಾಸನೆಗೆ ಸೊಳ್ಳೆಗಳು ಬರರುವುದಿಲ್ಲ.
ಸೊಳ್ಳೆಗಳು ಕಾಲುಗಳಿಗೆ ಏಕೆ ಹೆಚ್ಚಾಗಿ ಕಚ್ಚುತ್ತವೆ
ದೇಹದ ಇತರ ಭಾಗಗಳಲ್ಲಿ ಬಟ್ಟೆ ಇರುತ್ತದೆ, ಕಾಲುಗಳ ಬೇಗನೆ ಕಾಣಿಸುವುದರಿಂದ ಸೊಳ್ಳೆಗಳು ಕಾಲುಗಳಿಗೆ ಕಚ್ಚುತ್ತದೆ.
ಸೊಳ್ಳೆ ನಮ್ಮ ಮನೆಯಲ್ಲಿ ಇತರರಿಗಿಂತ ನನಗೆ ಹೆಚ್ಚು ಕಚ್ಚುತ್ತದೆ ಏಕೆ?
ಕೆಲವೊಂದು ರಕ್ತ ಗ್ರೂಪ್ ಸೊಳ್ಳೆಗಳನ್ನು ಬೇಗ ಆಕರ್ಷಿಸುತ್ತದೆ. O+ve ಗ್ರೂಪ್‌ನವರಿಗೆ ಎ ಹಾಗೂ ಬಿ ರಕ್ತ ಗ್ರೂಪ್‌ನವರಿಗೆ ಕಚ್ಚುವುದಕ್ಕಿಂತ ಹೆಚ್ಚು ಸೊಳ್ಳೆ ಕಚ್ಚುತ್ತದೆ.
ಸುಗಂಧ ದ್ರವ್ಯಕ್ಕೆ ಸೊಳ್ಳೆಗಳು ಆಕರ್ಷಿತವಾಗುತ್ತದೆಯೇ?
ಹೌದು, ಸುಗಂಧ ದ್ರವ್ಯಗಳು ಸೊಳ್ಳೆಗಳನ್ನು ಆಕರ್ಷಿಸುತ್ತದೆ.
ಟೈಗರ್ ಬಾಮ್ ಹಚ್ಚಿದರೆ ಸೊಳ್ಳೆ ಹಚ್ಚುವುದನ್ನು ತಡೆಗಟ್ಟಬಹುದೇ?
ಹೌದು, ಆದರೆ ಈ ವಿಧಾನ ತಾತ್ಕಾಲಿಕವಷ್ಟೆ.



Click it and Unblock the Notifications


