Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ನವರಾತ್ರಿ 2019 ವಿಶೇಷ: ಸ್ವಚ್ಛತೆ ಇಲ್ಲದೆಡೆ ದುರ್ಗೆಯು ಬರಲ್ಲ!
ನೋಡನೋಡುತ್ತಿದ್ದಂತೆ 2019ರ ನವರಾತ್ರಿಗೆ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ಈಗಾಗಲೇ ಜಂಬೂಸವಾರಿಗೆ ಆನೆಗಳಿಗೆ ತಯಾರಿಯನ್ನು ನೀಡಲಾಗುತ್ತಿದೆ. ತಾಯಿ ದುರ್ಗೆಯ ಪೂಜೆಗೆ ಒಂಭತ್ತು ದಿನಗಳನ್ನು ಮೀಸಲಿಡುವಂತಹ ನವರಾತ್ರಿ ವೇಳೆ ಹಲವಾರು ವಿಧದ ಕಾರ್ಯಕ್ರಮಗಳು ನಡೆಯುವುದು. ಮನೆಯಲ್ಲಿ ದುರ್ಗೆಯ ಮೂರ್ತಿ ತಂದು ಆರಾಧಿಸಲು ಪ್ರತಿಯೊಬ್ಬರು ಕಾತರದಿಂದ ಇದ್ದಾರೆ. ದುರ್ಗಾ ಪೂಜೆಗಳು ಸಾರ್ವಜನಿಕವಾಗಿ ನಡೆಯುವುದು ಹೆಚ್ಚಾದರೂ ಕೆಲವೊಂದು ಕಡೆ ಮನೆಗೆ ತಂದು ದುರ್ಗೆಯ ಮೂರ್ತಿಗೆ ಪೂಜೆ ಮಾಡಲಾಗುವುದು.
ದುರ್ಗೆಯ ಮೂರ್ತಿಯ ಮನೆಗೆ ತರುವ ಮೊದಲು ಮನೆಯನ್ನು ಅಲಂಕರಿಸುವುದು ಅತೀ ಅಗತ್ಯ. ಇದಕ್ಕೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ಬಣ್ಣಬಳಿದು ಶೃಂಗರಿಸಬೇಕು. ಯಾಕೆಂದರೆ ಸ್ವಚ್ಛತೆಯಿಲ್ಲದೆಡೆ ದೇವರು ಕೂಡ ಬರುವುದಿಲ್ಲ. ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಪೂಜೆಯ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ನಿಮಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ.

ನವರಾತ್ರಿಗೆ ಪೂಜಾಕೊಠಡಿ ಸ್ವಚ್ಛಗೊಳಿಸುವುದು ನೆಲ ಸ್ವಚ್ಛಗೊಳಿಸುವುದು ಪೂಜಾ ಕೊಠಡಿಯ ನೆಲ ಸ್ವಚ್ಛಗೊಳಿಸುವುದು ಅತೀ ಅಗತ್ಯ. ಪೂಜಾ ಕೊಠಡಿಯಲ್ಲಿ ಮಂದಿರದಂತೆ ಮಾಡಿದ್ದರೆ ಅದನ್ನು ಮೊದಲು ಸ್ವಚ್ಛಗೊಳಿಸುವುದು ಅತೀ ಅಗತ್ಯ.
ಮೂರ್ತಿಗಳ ಸ್ವಚ್ಛತೆ
ನಿಮ್ಮ ಮನೆಯಲ್ಲಿ ಲೋಹ ಅಥವಾ ಬೆಳ್ಳಿಯ ದುರ್ಗೆಯ ಮೂರ್ತಿಯಿದ್ದರೆ, ಇದನ್ನು ಉಪ್ಪು ಅಥವಾ ಹಲ್ಲುಜ್ಜುವ ಪೇಸ್ಟ್ ನಿಂದ ಸ್ವಚ್ಛಗೊಳಿಸಿ. ಇದರಿಂದ ಮೂರ್ತಿಗೆ ಒಳ್ಳೆಯ ಹೊಳಪು ಬರುವುದು.
ಪೂಜಾ ಪಾತ್ರೆಗಳು
ಹೆಚ್ಚಿನ ಪೂಜಾ ಕೊಠಡಿಗಳಲ್ಲಿ ತಾಮ್ರದ ಪಾತ್ರೆಗಳು ಇರುವುದು. ನಿಮ್ಮಲ್ಲಿ ತಾಮ್ರದ ಪೂಜಾ ಪಾತ್ರೆಗಳು ಇದ್ದರೆ ಇದನ್ನು ಹುಣಸೆ ಹುಳಿ ಅಥವಾ ಹಲ್ಲುಜ್ಜುವ ಪೇಸ್ಟ್ ನಿಂದ ಸ್ವಚ್ಛ ಮಾಡಿ. ಬೆಳ್ಳಿ ಪಾತ್ರೆಗಳನ್ನು ಹಲ್ಲುಜ್ಜುವ ಪೇಸ್ಟ್ ನಿಂದ ಸ್ವಚ್ಛ ಮಾಡಬಹುದು.
ದೀಪಗಳು
ಮಣ್ಣಿನ ದೀಪಗಳು ತುಂಬಾ ಜಾರುತ್ತಾ ಇರುತ್ತದೆ. ಎಣ್ಣೆ ಮತ್ತು ಬೆಂಕಿಯಿಂದ ಇದು ಕಪ್ಪಾಗಿರುವುದು. ಇದನ್ನು ಸೋಪ್ ನೀರಿನಲ್ಲಿ ಸುಮಾರು 20-25 ನಿಮಿಷ ಕಾಲ ನೆನೆಸಿಡಿ. ಎಣ್ಣೆ ಹಾಗೂ ಕಪ್ಪು ಕಲೆ ತೆಗೆದುಹಾಕಲು ಸ್ವಲ್ಪ ಉಜ್ಜಿ.
ಮೂರ್ತಿಯ ಬಟ್ಟೆಗಳು
ಪೂಜಾ ಕೊಠಡಿ ಸ್ವಚ್ಛ ಮಾಡಿಕೊಂಡ ಬಳಿಕ ನೀವು ಮಾಡಬೇಕಾದ ಕೆಲಸವೆಂದರೆ ಮೂರ್ತಿಗೆ ಹಾಕಿರುವಂತಹ ಬಟ್ಟೆ, ಬಳೆ, ಸರ ಹಾಗೂ ಇನ್ನಿತರ ಆಭರಣಗಳನ್ನು ತೆಗೆದು ಸ್ವಚ್ಛಗೊಳಿಸಿ. ನವರಾತ್ರಿಗೆ ದುರ್ಗೆಯ ಮೂರ್ತಿಗೆ ಹೊಸ ಬಟ್ಟೆ ಖರೀದಿಸಿ. ಅದೇ ಆಭರಣಗಳನ್ನು ಬಳಸುವ ಕಾರಣದಿಂದ ಇದನ್ನು ಸೋಪ್ ನೀರಿಗೆ ಹಾಕಿ ತೊಳೆಯಿರಿ.
ಪೂಜೆಯ ಘಂಟೆ
ಪೂಜಾ ಸಾಮಗ್ರಿಗಳನ್ನು ಸ್ವಚ್ಛ ಮಾಡಿಕೊಳ್ಳುವುದು ಅಷ್ಟು ಕಷ್ಟದ ಕೆಲಸವಲ್ಲ. ಪೂಜಾ ಘಂಟೆಗೆ ಹುಣಸೆ ಹುಳಿ ಹಾಕಿಕೊಂಡು ತೊಳೆಯಿರಿ. ಇದು ಒಳ್ಳೆಯ ಕಾಂತಿ ನೀಡುವುದು.
ಟೈಲ್ಸ್
ಪೂಜಾ ಕೊಠಡಿಯ ಗೋಡೆ ಮತ್ತು ನೆಲದ ಮೇಲೆ ಟೈಲ್ಸ್ ಗಳು ಇದ್ದರೆ ಇದನ್ನು ಸೋಪ್ ನೀರು ಹಾಕಿ ತೊಳೆಯಿರಿ. ಗ್ರೀಸ್ ನಂತೆ ಇದ್ದರೆ ವಿನೇಗರ್ ಮತ್ತು ನೀರು ಹಾಕಿಕೊಂಡು ತೊಳೆಯಿರಿ. ಪೂಜಾ ಕೊಠಡಿ ಸ್ವಚ್ಛ ಮಾಡಲು ಇದು ಕೆಲವು ಸಲಹೆಗಳು, ಇದನ್ನು ಅನುಸರಿಸಿ ನವರಾತ್ರಿಗೆ ದುರ್ಗೆಯ ಪೂಜೆಗೆ ತಯಾರಾಗಿ.



Click it and Unblock the Notifications


