Latest Updates
-
ಛತ್ ಪೂಜೆ 2026: ದೀರ್ಘ ಉಪವಾಸದ ನಡುವೆಯೂ ಆರೋಗ್ಯವಾಗಿರಲು ಈ ಸರಳ ಫಿಟ್ನೆಸ್ ಟಿಪ್ಸ್ ಫಾಲೋ ಮಾಡಿ! -
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ!
ರೇಷ್ಮೆ ಸೀರೆ ಮನೆಯಲ್ಲಿಯೇ ತೊಳೆಯಲು ಈ ಟಿಪ್ಸ್ ಅನುಸರಿಸಿ
ರೇಷ್ಮೆ ಸೀರೆ ಉಡಲು ತುಂಬಾ ಇಷ್ಟವಾಗುವುದು, ಉಟ್ಟಾಗ ಲಕ್ಷ್ಮಿಯಂತೆ ಕಂಗೊಳಿಸುತ್ತೇವೆ. ಇತರ ಸೀರೆಗಿಂತ ರೇಷ್ಮೆ ಸೀರೆ ಉಟ್ಟರೆ ಮುಖದಲ್ಲಿ ಅದೇನೋ ಕಳೆ. ಅದರಲ್ಲೂ ಶುಭ ಕಾರ್ಯದಲ್ಲಿ ರೇಷ್ಮೆ ಸೀರೆ ಉಟ್ಟುಕೊಂಡರೆ ಶುಭ ಎಂದು ಹೇಳಲಾಗುವುದು. ಆದ್ದರಿಂದ ಪೂಜಾ ಕಾರ್ಯಗಳಲ್ಲಿ, ಮದುವೆಯಲ್ಲಿ ರೇಷ್ಮೆ ಸೀರೆಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗಿದೆ.

ಆದರೆ ರೇಷ್ಮೆ ಸೀರೆ ಎಷ್ಟು ಚೆಂದನೋ ಅದರ ನಿರ್ವಹಣೆ ಕೂಡ ಕಷ್ಟದ ಕೆಲಸ. ತುಂಬಾ ಜನ ಡ್ರೈ ಕ್ಲೀನ್ಗೆ ಕೊಟ್ಟು ಕ್ಲೀನ್ ಮಾಡಿಸುತ್ತಾರೆ, ಮನೆಯಲ್ಲಿ ಒಗೆದರೆ ಅಷ್ಟು ದುಬಾರಿ ಸೀರೆ ಎಲ್ಲಿ ಹಾಳಾಗುತ್ತದೆ ಎಂಬ ಅಂಜಿಕೆ, ಅಲ್ಲದೆ ಅದರ ಬಾರ್ಡರ್ ಕಲರ್ ಸೀರೆಗೆ ಅಂಟುವುದು ಈ ರೀತಿಯ ಅವಾಂತರ ಉಂಟಾಗುವುದು, ಹಾಗಾಗಿ ಈ ರಿಸ್ಕ್ ತೆಗೆದುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಆದರೆ ನಿಮಗೆ ರೇಷ್ಮೆ ಸೀರೆ ಒಗೆಯುವ ಟ್ರಿಕ್ಸ್ ಗೊತ್ತಾದರೆ ನೀವೇ ತೊಳೆಯಬಹುದು:
ಸ್ಟೆಪ್ 1:
ದೊಡ್ಡ ಬಕೆಟ್ನಲ್ಲಿ ತಣ್ಣೀರು ತುಂಬಿ ಅದರಲ್ಲಿ ಸೀರೆಯನ್ನು ಹಾಕಿ, ಸೀರೆ ಹಾಕುವಾಗ ಕಲರ್ ಹೋಗುವಂತಿದ್ದರೆ ಹಾಕಬೇಡಿ (ರೇಷ್ಮೆ ಸೀರೆ ಕಲರ್ ಬಿಡುವುದಿಲ್ಲ, ಆದರೂ ಕೆಲವೊಂದು ಸೀರೆಯ ಬಣ್ಣ ಸ್ವಲ್ಪ ಹೋಗುವುದು)
ಸ್ಟೆಪ್ 2
ಬಕೆಟ್ ನೀರಿಗೆ 2 ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ. ನಂತರ ನಿಮ್ಮ ಸಿಲ್ಕ್/ರೇಷ್ಮೆ ಸೀರೆಯನ್ನು ಹಾಕಿ 15-20 ನಿಮಿಷ ಹಾಕಿ. ವೈಟ್ ವಿನೆಗರ್ ಹಾಕುವುದರಿಂದ ರೇಷ್ಮೆ ಸೀರೆಯ ಹೊಳಪು ಹಾಗೇ ಇರುತ್ತದೆ.
ಸ್ಟೆಪ್ 3
ಈಗ ಇನ್ನೊಂದು ಬಕೆಟ್ನಲ್ಲಿ ಮೈಲ್ಡ್ ಡಿಟರ್ಜೆಂಟ್ ಹಾಕಿ. ಅದರಲ್ಲೂ ಲಿಕ್ವಿಡ್ ಬಳಸಿ. anti-color fading ಡಿಟರ್ಜೆಂಟ್ ಬಳಸಿ.
ಸ್ಟೆಪ್ 4
ಈಗ ಡಿಟರ್ಜೆಂಟ್ ಹಾಕಿರುವ ಬಕೆಟ್ಗೆ ಸೀರೆ ಹಾಕಿ ಮೆಲ್ಲನೆ ಕೈಯಲ್ಲಿಯೇ ತೊಳೆಯಿರಿ.
ಸ್ಟೆಪ್ 5
ನಂತರ ಸೀರೆಯನ್ನು ಹಿಂಡಬೇಡಿ. ಹಾಗೇ ನೀರು ಹೋಗಲು ಇಟ್ಟು ನಂತರ ಒಣಹಾಕಿ.
ಸ್ಟೆಪ್ 6
ಸೀರೆಯನ್ನು ಒಣಗಲು ಹಾಕುವಾಗ ಎಲ್ಲಿಯೂ ಮಡಚಿರಬಾರದು.
ಒಂದು ವೇಳೆ ಕಲೆಯಿದ್ದರೆ ಏನು ಮಾಡಬೇಕು?
ನಿಂಬೆಹಣ್ಣು ಅಥವಾ ವಿನೆಗರ್ ಸಲ್ಯೂಷನ್ ಬಳಸಿ ತೆಗೆಯಬಹುದು.ಸ
ಸೀರೆಯನ್ನು ತೊಳೆಯುವ ಮುನ್ನ ಅದರ ಲೇಬಲ್ ಚೆಕ್ ಮಾಡಿ.



Click it and Unblock the Notifications
