Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾಷಿಂಗ್ ಮೆಷಿನ್‌ನಲ್ಲಿ ಡೆಲಿಕೇಟ್ ಬಟ್ಟೆಯನ್ನು ಈ ಟ್ರಿಕ್ಸ್ ಬಳಸಿ ಒಗೆಯಲು ಹಾಕಿದರೆ ಹಾಳಾಗಲ್ಲ
ವಾರ್ಷಿಂಗ್ ಮೆಷಿನ್‌ನಲ್ಲಿ ಗ್ರ್ಯಾಂಡ್ ವರ್ಕ್ಸ್ ಇರುವ ಬಟ್ಟೆ ಹಾಕಲು ಅಥವಾ ತುಂಬಾನೇ ಡೆಲಿಕೇಟ್ ಆಗಿರುವ ಬಟ್ಟೆಗಳನ್ನು ಹಾಕಲು ಹಿಂದೇಟು ಹಾಕುತ್ತೇವೆ, ಏಕೆಂದರೆ ಬಟ್ಟೆ ಹಾಳಾಗುವ ಸಾಧ್ಯತೆ ಇದೆ.
ವರ್ಕ್ಸ್ ಹಾಳಾಗಬಹುದು ಅಥವಾ ಬಟ್ಟೆಯ ದಾರ ಎಳೆದು ಬಟ್ಟೆ ಹಾಳಾಗಬಹುದು ಹಾಗಾಗಿ ಡೆಲಿಕೇಟ್ ಆಯ್ಕೆ ಇದ್ದರೂ ಬಟ್ಟೆ ಹಾಕುವುದಕ್ಕೆ ಧೈರ್ಯ ಬರಲ್ಲ, ದುಬಾರಿ ಬಟ್ಟೆ ಹಾಳಾದರೆ? ಆದರೆ ನೀವು ಕೆಲವೊಂದು ಟ್ರಿಕ್ಸ್ ಬಳಸಿದರೆ ರೇಷ್ಮೆ ಬಟ್ಟೆಯಾಗಿರಲಿ ಅಥವಾ ಎಷ್ಟೇ ವರ್ಕ್ಸ್ ಇರುವ ಬಟ್ಟೆಯಾಗಿರಲಿ ಒಗೆದು ತೆಗೆಯಬಹುದು, ಬನ್ನಿ ಆ ಟ್ರಿಕ್ಸ್ ಏನಪ್ಪಾ ಎಂದು ನೋಡೋಣ ಬನ್ನಿ:

ಮೊದಲು ಡೆಲಿಕೇಟ್ ಬಟ್ಟೆಯನ್ನು ಪತ್ಯೇಕಿಸಿ
ನೀವು ಇತರ ಬಟ್ಟೆ ಜೊತೆ ಇದನ್ನು ಹಾಕಬಾರದು, ಡೆಲಿಕೇಟ್ ಬಟ್ಟೆಯನ್ನು ಪ್ರತ್ಯೇಕ ಮಾಡಿ, ಅದರಲ್ಲಿಯೂ ವರ್ಕ್ಸ್ ಹೆಚ್ಚಿರುವ ಅಥವಾ ತುಂಬಾನೇ ಮೃದುವಾದ ಬಣ್ಣದ ಉಡುಪುಗಳನ್ನು ಪ್ರತ್ಯೇಕಿಸಿ.
ಲೇಬಲ್ ಓದಿ
ನೀವು ಬಟ್ಟೆಯ ಮೇಲೆ ಬರೆದಿರುವ ಲೇಬಲ್ ಓದಬೇಕು ಅದರ ಮೇಲೆ ಹ್ಯಾಂಡ್ ವಾಶ್, ಹ್ಯಾಂಡ್ ವಾಶ್ ಓನ್ಲಿ, ಡ್ರೈ ಕ್ಲೀನ್ ಓನ್ಲಿ ಎಂದು ಬರೆದಿರುತ್ತೆ. ಹ್ಯಾಂಡ್ ವಾಶ್ ಎಂದು ಬರೆದಿರುವ ಬಟ್ಟೆಯನ್ನು ವಾಷಿಂಗ್ ಮೆಷಿನ್‌ನಲ್ಲಿ ಡೆಲಿಕೇಟ್ ಆಪ್ಷನ್‌ನಲ್ಲಿ ಹಾಕಿ ಸ್ವಚ್ಛಗೊಳಿಸಬಹುದು, ಆದರೆ ಡ್ರೈ ಕ್ಲೀನ್ ಓನ್ಲಿ ಎಂದು ಬರೆದಿದ್ದರೆ ಅದನ್ನು ಮಾತ್ರ ಒಗೆಯಲೇಬಾರದು.
ಬಟ್ಟೆಯಲ್ಲಿ ಜಿಪ್, ಬಟನ್, ಹುಕ್ ಇದ್ದರೆ ಅದರಿಂದ ಬಟ್ಟೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು, ಅವುಗಳ ಬಟನ್ ಹಾಕಿದರೆ,ಹುಕ್ ಹಾಕಿದರೆ ಬಟ್ಟೆ ನೂಲು ಎಳೆಯುವ ಸಾಧ್ಯತೆ ಕಡಿಮೆ ಇರುತ್ತದೆ.
ಬಣ್ಣದ ಬಟ್ಟೆಯನ್ನು ಪ್ರತ್ಯೇಕಿಸಬೇಕು
ನೀವು ಬಿಳಿ ಬಣ್ಣದ ಬಟ್ಟೆಯನ್ನು ಪ್ರತ್ಯೇಕಿಸಬೇಕು, ಅದೇ ರೀತಿ ಬೇರೆ-ಬೇರೆ ಬಣ್ಣದ ಬಟ್ಟೆಯನ್ನು ಪ್ರತ್ಯೇಕಿಸಬೇಕು, ಎಲ್ಲಾ ಬಟ್ಟೆಯನ್ನು ಜೊತೆಗೆ ಹಾಕಬೇಡಿ, ಬಣ್ಣ ಹಿಡಿಯುತ್ತೆ ಹಾಗಾಗಿ ಅವುಗಳನ್ನು ಜೊತೆಯಲ್ಲಿ ಹಾಕಬೇಡಿ.
ಈಗ ಬಟ್ಟೆಯನ್ನು ಮೆಶ್ ಬ್ಯಾಗ್‌ನಲ್ಲಿ ಹಾಕಿ
ರಂಧ್ರವಿರುವ ಮೆಶ್‌ಬ್ಯಾಗ್ ಸಿಗುತ್ತೆ, ಅದರೊಳಗಡೆ ಬಟ್ಟೆ ಹಾಕಿ, ಸುವಾಸನೆ ಸ್ವಲ್ಪ ಚಿಕ್ಕ ಪಿಲ್ಸ್ ಅಥವಾ ಲಿಕ್ವಿಡ್ ಸೇರಿಸಿ.
ನಂತರ ಡೆಲಿಕೇಟ್‌ನಲ್ಲಿ ಹಾಕಿ.
ಬಟ್ಟೆಯನ್ನು ವಾಷಿಂಗ್ ಮೆಷಿನ್‌ಗೆ ಹಾಕುವ ಮುನ್ನ ಈ ಅಂಶ ಗಮನಿಸಿ
ಕಲೆಯಾಗಿದ್ದರೆ ಆ ಭಾಗನನ್ನು ಬ್ರೆಷ್ ಹಾಕಿ ಮೆಲ್ಲನೆ ತಿಕ್ಕಿ ಕಲೆ ಹೋಗಲಾಡಿಸಿ, ನಂತರ ಬಟ್ಟೆಯನ್ನು ಮಗುಚಿ ಹಾಕಿ ವಾಷಿಂಗ್ ಮೆಷಿನ್‌ನಲ್ಲಿ ಹಾಕಬೇಕು.
ಬಟ್ಟೆಯನ್ನು ಡ್ರೈ ಮಾಡಲು ಹರಡಿ ಹಾಕಿ
ಬಟ್ಟೆಯನ್ನು ಡ್ರೈ ಮಾಡಲು ನೀವು ಬಟ್ಟೆಯನ್ನು ಚೆನ್ನಾಗಿ ಹರಡಿ ಒಣಗಿಸಬೇಕು, ತಂತಿ ಮೇಲೆ ನೇರವಾಗಿ ಹಾಕಬೇಡಿ, ಕ್ಲಿಪ್ ಬಳಸಿ ಹಾಕಿ, ಇಲ್ಲದಿದ್ದರೆ ಬಟ್ಟೆಯಲ್ಲಿ ಬಟ್ಟೆ ಒಣ ಹಾಕಿದ ಗೆರೆ ಉಳಿದುಕೊಳ್ಳುವುದು. ಅಲ್ಲದೆ ಬಟ್ಟೆ ಚೆನ್ನಾಗಿ ಒಣಗಿದ ಮೇಲಷ್ಟೇ ಇಡಬೇಕು.



Click it and Unblock the Notifications
