Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಹೀಗೆ ಮಾಡದರೆ ಸಿಲ್ಕ್ ಬಟ್ಟೆಯ ಕಲೆ ತೆಗೆಯಬಹುದು, ಇಸ್ತ್ರಿ ಮಾಡುವಾಗ ಈ ಟಿಪ್ಸ್ ಬಳಸಿ
ಹೆಣ್ಮಕ್ಕಳಿಗೆ ಸೀರೆ ಉಟ್ಟರೆ ತುಂಬಾನೇ ಚೆಂದ, ಆದರೆ ಆ ಸೀರೆಯನ್ನು ಇಸ್ತ್ರಿ ಮಾಡುವುದು ಮಾತ್ರ ಸುಲಭವಲ್ಲ, ಅದರಲ್ಲೂ ದುಬಾರಿ ಸೀರೆಯನ್ನು ಇಸ್ತ್ರಿ ಮಾಡುವಾಗ ಸೀರೆ ಸುಟ್ಟು ಹೋದರೆ ಎಂಬ ಭಯ ಉಂಟಾಗುವುದು, ಹಾಗಾಗಿ ಹೊರಗಡೆ ಇಸ್ತ್ರಿ ಮಾಡಲು ಕೊಡುತ್ತೇವೆ.
ಒಂದು ಸೀರೆಗೆ ರುಪಾಯಿ 40-50 ಅಂತ ಕೊಡಬೇಕು, ಹಣ ಕೊಟ್ಟು ಇಸ್ತ್ರಿ ಮಾಡಿಸೋಣ ಅಂತ ಹೋದರೂ ಅವರು ಇವತ್ತು ಆಗಲ್ಲ, ಇನ್ನು ಎರಡು ದಿನ ಬೇಕು, ಮೂರು ದಿನ ಬೇಕು ಎಂದು ಹೇಳುತ್ತಾರೆ. ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳುವುದೇಕೆ ರೇಷ್ಮೆ ಸೀರೆಯನ್ನು ನೀವೇ ಇಸ್ತ್ರಿ ಮಾಡಬಹುದು, ಈ ಉಪಾಯ ಬಳಸಿದರೆ ಸೀರೆಗೆ ಯಾವುದೇ ಡ್ಯಾಮೇಜ್ (ಹಾನಿ) ಆಗುವುದಿಲ್ಲ.

ನಾವಿಲ್ಲಿ ಸಿಲ್ಕ್ ಬಟ್ಟೆಯನ್ನು ತೊಳೆಯುವ ಹಾಗೂ ಇಸ್ತ್ರಿ ಹಾಕುವ ಟಿಪ್ಸ್ ನೀಡಿದ್ದೇವೆ ನೋಡಿ:
ಸಿಲ್ಕ್ ಬಟ್ಟೆಯನ್ನು ತೊಳೆಯಲು ಟಿಪ್ಸ್
ಸಿಲ್ಕ್ ಬಟ್ಟೆಯನ್ನು ನೀವು ಮನೆಯಲ್ಲಿಯೇ ತೊಳೆಯುವುದಾದರೆ ಅದರೆ ಲೇಬಲ್ ಓದಿ, ಮಲ್ಟಿ ಕಲರ್ ಇದ್ರೆ ಬಣ್ಣ ಹೋಗಲ್ಲ ಎಂಬುವುದನ್ನು ಖಚಿತ ಪಡಿಸಿ, ಇನ್ನು ಸೀರೆ ಹಾಗೂ ಸೆರಗು ಬೇರೆ-ಬೇರೆ ಬಣ್ಣದಲ್ಲಿದ್ದರೆ ಈ ಬಗ್ಗೆ ಕೂಡ ಜಾಗ್ರತೆವಹಿಸಬೇಕು.
ಸಿಲ್ಕ್ ಬಟ್ಟೆಯನ್ನು ಸೋಪು ನೀರಿನಲ್ಲಿ ನೆನೆ ಹಾಕಬೇಡಿ
ಕೆಲವರು ಒಂದು 10 ನಿಮಿಷ ಸೋಪ್ ನೀರಿನಲ್ಲಿ ಹಾಕಿದರೆ ಕೊಳೆ ಹೋಗುತ್ತೆ ಎಂದು ಹಾಕಿಡುತ್ತಾರೆ, ಆದರೆ ಆ ರೀತಿ ಮಾಡಬೇಡಿ, ಬಣ್ಣ ಬಿಟ್ಟರೆ ಬಟ್ಟೆ ಹಾಳಾಗುವುದು.
ಬದಲಿಗೆ ಬಕೆಟ್ ನೀರಿಗೆ ಶ್ಯಾಂಪೂ ಹಾಕಿ ಕೈಯಿಂದ ಉಜ್ಜಿ ತೊಳೆಯಿರಿ.
ಸಿಲ್ಕ್ ಬಟ್ಟೆಯಲ್ಲಿ ಕಲೆಯಾದರೆ ಏನು ಮಾಡಬೇಕು?
ವಿನೆಗರ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ, 2 ಚಮಚ ವಿನೆಗರ್ ಆದರೆ 2 ಚಮಚ ನೀರು ಹಾಕಿ ಮಿಕ್ಸ್ ಮಾಡಿ, ನಂತರ ಅಷ್ಟೇ ಪ್ರಮಾಣದ ಅಮೋನಿಯಾ ಅಥವಾ ಆಲ್ಕೋಹಾಲ್ ಹಾಕಿ ನಂತರ ಕಲೆ ಮೇಲೆ ಹಾಕಿ ನಿಂಬೆ ಹಣ್ಣಿನ ತುಂಡು ಕತ್ತಿರಿಸಿ ಉಜ್ಜಿ ಕಲೆ ಹೋಗುವುದು.
ಈ ಮಿಶ್ರಣವನ್ನು ಹಾಕಿಟ್ಟು ಹಾಗೆಯೇ ಬಿಡಬೇಡಿ, ಆ ತಕ್ಷಣವೇ ತೊಳೆಯಿರಿ. ನಂತರ ಒಳ್ಳೆಯ ನೀರಿನಲ್ಲಿ ಅದ್ದಿ ನಂತರ ನೆರಳಿನಲ್ಲಿ ಒಣ ಹಾಕಿ.
ಟಿಪ್ಸ್ 1
ತೊಳೆದ ತಕ್ಷಣ ಇಸ್ತ್ರಿ ಮಾಡಬೇಕು
ನಾವು ಸಾಮಾನ್ಯವಾಗಿ ಬಟ್ಟೆಯನ್ನು ಒಗೆದ ಮೇಲೆ ಹಾಗೆಯೇ ಮಡಚಿ ಇಡುತ್ತೇವೆ, ಎಲ್ಲಿಗಾದರೂ ಹೋಗುವಾಗ ಆ ಬಟ್ಟೆ ಧರಿಸಬೇಕೆಂದನಿಸಿದರೆ ಇಸ್ತ್ರಿ ಮಾಡುತ್ತೇವೆ ಅಲ್ವಾ? ಹಾಗೆ ಮಾಡಬೇಕು, ನೀವು ಬಟ್ಟೆಯನ್ನು ಒಣಗಿಸಿ ತಂದು ಮಡಚಿ ಇಡುವ ಮುನ್ನವೇ ಇಸ್ತ್ರಿ ಹಾಕಿ ಮಡಚಿ ಇಡಿ. ಇದರಿಂದ ಬಟ್ಟೆ ತುಂಬಾನೇ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಸುಕ್ಕು ಸುಕ್ಕಾಗಿ ಇರುವುದು, ಇಸ್ತ್ರಿ ಮಾಡಿದಾಗ ಆ ಸುಕ್ಕು ಅಷ್ಟು ಸುಲಭದಲ್ಲಿ ಹೋಗುವುದಿಲ್ಲ, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
ರೇಷ್ಮೆ ಬಟ್ಟೆಯನ್ನು ಮಗುಚಿ ಹಾಕಿ ಇಸ್ತ್ರಿ ಮಾಡಿ
ನೀವು ರೇಷ್ಮೆ ಸೀರೆಯನ್ನಾಗಲಿ ಅಥವಾ ಚೂಡಿದಾರ , ಇತರ ಉಡುಪುಗಳನ್ನಾಗಿ ಮಗುಚಿ ಹಾಕಿ, ಉದಾಹರಣೆ ಚೂಡಿದಾರದ ಕೈ, ಅದನ್ನು ಮಗುಚಿ ಹಾಕಿವುದು ಸೇಫ್, ಒಳಗಡೆ ಲೈನಿಂಗ್ ಇಲ್ಲಾಂದ್ರೆ ಬೃರೆ ಬಟ್ಟೆಯನ್ನು ಅದರ ಮೇಲೆ ಹಾಕಿ ಇಸ್ತ್ರಿ ಮಾಡಿ.
ಸಿಲ್ಕ್ ಬಟ್ಟೆ ಮೇಲೆ ಪ್ರೆಸ್ಸಿಂಗ್ ಬಟ್ಟೆ ಹಾಕಿ
ರೇಷ್ಮೆ ಬಟ್ಟೆಯನ್ನು ಹರಡಿ ಅದರ ಮೇಲೆ ಕಾಟನ್‌ನ ತೆಳುವಾಗ ಬಟ್ಟೆ ಹಾಕಿ, ಆ ಬಟ್ಟೆ ಬಣ್ಣ ಬಿಡುವಂತೆ ಇರಬಾರದು, ಬಿಳಿ ಬಟ್ಟೆ ಒಳ್ಳೆಯದು, ಅದರ ಮೇಲೆ ಇಸ್ತ್ರಿ ಮಾಡಿ, ಆವಾಗ ಸ್ವಲ್ಪ ಬಿಸಿ ಹೆಚ್ಚಾದರೂ ಏನೂ ತೊಂದರೆಯಾಗಲ್ಲ, ಬಟ್ಟೆ ಮೇಲಿದ್ದ ಸುಕ್ಕು ಹೋಗುವುದು.
ಇಸ್ತ್ರಿ ಮಾಡುವಾಗ ಅದರ ಹೀಟ್ ಸೆಟ್ಟಿಂಗ್ ಮಾಡಿ
ಎಲ್ಲಾ ಐರನ್ ಬಾಕ್ಸ್‌ನಲ್ಲಿ ಹೀಟ್ ಸೆಟ್ಟಿಂಗ್ ಇರುತ್ತದೆ, ಹೀಟ್ ಕಡಿಮೆ ಇಡಿ, ಅತ್ಯಧಿಕ ಹೀಟ್‌ನಲ್ಲಿ ಇಸ್ತ್ರಿ ಮಾಡಲು ಹೋಗಬೇಡಿ.
ಇಸ್ತ್ರಿ ಆದ ಮೇಲೆ ಚೆನ್ನಾಗಿ ತೆಗೆದಿಡಿ
ಮನೆಯಲ್ಲಿ ಆದರೆ ಹ್ಯಾಂಗರ್‌ನಲ್ಲಿ ಹಾಕಬಹುದು, ಆದರೆ ನೀವು ಯಾವುದಾದರೂ ಸಮಾರಂಭಕ್ಕೆ ಹಾಕಲು ಪ್ಯಾಕ್ ಮಾಡಿ ಹೋಗುತ್ತೀರಿ ಎಂದಾದರೆ ಸರಿಯಾದ ರೀತಿಯಲ್ಲಿ ಮಡಚಿ, ಪೇಪರ್ ಒಳಗಡೆ ಇಟ್ಟು ಬ್ಯಾಗ್ ಅಥವಾ ಸೂಟ್‌ಕೇಸ್‌ನಲ್ಲಿ ಹಾಕಬೇಕು.



Click it and Unblock the Notifications
