Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ತೆಂಗಿನ ಚಿಪ್ಪು ಬಿಸಾಡಬೇಡಿ, ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ತೆಂಗಿನಕಾಯಿ ಸುಲಿದ ಮೇಲೆ ಅದರ ಚಿಪ್ಪು ಏನು ಮಾಡುವುದು, ಒಲೆ ಇರುವುದಾದರೆ ಒಲೆಗೆ ಹಾಕುತ್ತಾರೆ, ಸಿಟಿಯಲ್ಲಿ ಒಲೆ ಇರಲ್ಲ ಹಾಗಾಗಿ ಕಸದ ಬುಟ್ಟಿಗೆ ಹಾಕುತ್ತಾರೆ, ಅದರೆ ಇನ್ನು ಮುಂದೆ ಬಿಸಾಡಬೇಡಿ, ಇದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗುವುದು.
ಇದನ್ನು ಮನೆ ಸ್ವಚ್ಛತೆಯಿಂದ ಹಿಡಿದು ಸೌಂದರ್ಯ ವೃದ್ಧಿವರೆಗೆ ಬಳಸಬಹುದು ನೋಡಿ:

ಬಾಣಂತಿ ಇರುವ ಮನೆಯಲ್ಲಿ ತುಂಬಾ ಒಳ್ಳೆಯದು: ಸಿಟಿಯಲ್ಲಿ ಇದ್ದಿಲು ಇರಲ್ಲ, ಬಾಣಂತಿಯರನ್ನು ಸ್ನಾನ ಮಾಡಿಸಿದ ಮೇಲೆ ಇದ್ದಿಲಿಗೆಕೆಲ ಗಿಡ ಮೂಲಿಕೆ ಹಾಕಿ ತಲೆ ಒಣಗಿಸುತ್ತಾರೆ, ಇದ್ದಿಲು ಸಿಗುವುದು ಕಷ್ಟವಾದಾಗ ಇದನ್ನು ಬಳಸಬಹುದು.
ಇನ್ನು ಮಗುವಿಗೆ ಸಾಂಬ್ರಾಣಿ ಹಾಕಲು ಬಳಸಬಹುದು, ಹೀಗೆ ಸಾಂಬ್ರಾಣಿ ಹಾಕುವಾಗ ಸ್ವಲ್ಪ ತೆಂಗಿನೆಣ್ಣೆ ಹಾಕಿದರೆ ಅದರ ಸುವಾಸನೆ ಮಗು-ಬಾಣಂತಿ ಮಲಗಿರುವ ಕೋಣೆಯನ್ನು ತುಂಬಾ ಸುವಾಸನೆಯಿಂದ ಇರಿಸುತ್ತೆ.
ತೆಂಗಿನ ಚಿಪ್ಪುವನ್ನು ಮಣ್ಣಿನ ಪಾತ್ರೆಯಲ್ಲಿ ಸುಡಿ
ಈಗ ಅದರಿಂದ ತಯಾರಾದ ಇದ್ದಿಲನ್ನು ಪುಡಿ, ಅದರ ನೈಸ್ ಪೌಡರ್ ತೆಗೆದು, ಅದರಲ್ಲಿ ಸ್ವಲ್ಪ ಟೂತ್ ಪೇಸ್ಟ್, ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಅದರಲ್ಲಿ ಹಲ್ಲುಜ್ಜಿದರೆ ಹಲ್ಲಿನ ಬಿಳುಪು ಹೆಚ್ಚುವುದು ಅಲ್ಲದೆ ಹಲ್ಲು ನೋವಿನ ಸಮಸ್ಯೆ ಇರುವವರೆಗೆ ಕಡಿಮೆಯಾಗುವುದು. ಅಲ್ಲದೆ ಇದರಲ್ಲಿ ಹಲ್ಲುಜ್ಜುತ್ತಿದ್ದರೆ ಹಲ್ಲುಗಳು ಗಟ್ಟಿ ಮುಟ್ಟಾಗುವುದು. ಭತ್ತದ ಹಿಟ್ಟಿನಿಂದ ಕೂಡ ಮಸಿ ಮಾಡಿ ಹಲ್ಲುಜ್ಜಲು ಬಳಸುತ್ತಾರೆ.
ಸೌಂದರ್ಯ ವೃದ್ಧಿಗೆ ಹೇಗೆ ಬಳಸುವುದು
ಸುಟ್ಟ ಚಿಪ್ಪಿನಿಂದ ಆದ ಇದ್ದಿಲನ್ನು ಪುಡಿ ಮಾಡಿ ಅದರ ನುಣಾಪದ ಪುಡಿ ತೆಗೆದು ನೀವು ಮುಖಕ್ಕೆ ಹಾಕುವ ಕ್ರೀಮ್ ಹಾಕಲಿ ಮಿಕ್ಸ್ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿ ಮುಖದ ಹೊಳಪು ಹೆಚ್ಚುವುದು. ಮುಖಕ್ಕೆ ಹಚ್ಚಿದರೆ ಮುಖದ ಹೊಳಪು ಹೆಚ್ಚುವುದು, ಕುತ್ತಿಗೆ ಭಾಗಕ್ಕೆ ಹಚ್ಚಿದರೆ ಕುತ್ತಿಗೆ ಭಾಗದಲ್ಲಿರುವ ಕಪ್ಪು ಕಡಿಮೆಯಾಗುವುದು.
ಬಿಳಿ ಕೂದಲನ್ನು ಹೋಗಲಾಡಿಸಲು ಬಳಸಬಹುದು
ತೆಂಗಿನಕಾಯಿ ಚಿಪ್ಪನ್ನು ಮಸಿ ಮಾಡಿ, ನುಣ್ಣೆಯ ಪುಡಿ ಸೋಸಿ ಅದಕ್ಕೆ ಸ್ವಲ್ಪ ತೆಂಗಿನಣ್ಣೆ ಹಾಕಿ ಮಿಕ್ಸ್ ಮಾಡಿ ಕೂದಲು ಬಿಳಿಯಾದ ಕಡೆ ಹಚ್ಚಿದರೆ ಯಾವ ಡೈ ಕೂಡ ಬೇಕಾಗಿಲ್ಲ, ಅಲ್ಲದೆ ಇದರಿಂದ ಅಡ್ಡಪರಿಣಾಮವೂ ಇಲ್ಲ.
ಫ್ರಿಡ್ಜ್‌ನಲ್ಲಿಟ್ಟ ದುರ್ವಾಸನೆ ಹೋಗಲಾಡಿಸಲು ಸಹಕಾರಿ
ನೀವು ಈ ಮಸಿ ಪುಡಿಯನ್ನು ಒಂದು ಪೇಪರ್‌ನಲ್ಲಿ ಹಾಕಿ, ಅ ಪೇಪರ್‌ಗೆ ರಂಧ್ರ ರೀತಿ ಮಾಡಿ, ಅದನ್ನು ಪ್ರಿಡ್ಜ್‌ನಲ್ಲಿಟ್ಟರೆ ಪ್ರಿಡ್ಜ್‌ನಲ್ಲಿರುವ ದುರ್ವಾಸನೆ ದೂರಾಗುವುದು. ತರಕಾರಿ, ಹಾಲು , ಮಾಂಸ ಹೀಗೆ ಎಲ್ಲಾ ವಸ್ತುಗಳನ್ನು ಇಡುವುದರಿಂದ ಫ್ರಿಡ್ಜ್ ದುರ್ವಾಸನೆ ಬೀರುತ್ತದೆ, ಅದನ್ನು ತಡೆಗಟ್ಟಲು ಸಹಕಾರಿ.
ಟೈಲ್ಸ್ ಸ್ವಚ್ಚಗೊಳಿಸಲು
ನೀವು ಬಕೆಟ್ ನೀರಿಗೆ ಮಸಿ ಹಾಕಿ ಮಿಕ್ಸ್ ಮಾಡಿ ಆ ನೀರಿನಲ್ಲಿ ಮನೆ ಒರೆಸಿದರೆ ಟೈಲ್ಸ್ ಫಳ-ಫಳ ಒಳೆಯುತ್ತೆ. ಒಮ್ಮೆ ಈ ನೀರಿನಲ್ಲಿ ಒರೆಸಿದ ಬಳಿಕ ನಂತರ ಬರಿ ನೀರಿನಲ್ಲಿ ಹಿಂಡಿ ನೆಲ ಒರೆಸಿದರೆ ನೆಲ ತುಂಬಾನೇ ಸ್ವಚ್ಛವಾಗಿ ಕಾಣುವುದು.
ಬಾತ್ ರೂಂ ತೊಳೆಯಲು ಬೆಸ್ಟ್
ಬಾತ್‌ರೂಂನಲ್ಲಿ ಕಲೆಗಳಾಗಿದ್ದಾರೆ ಈ ಮಸಿ ಹಾಕಿ ಬ್ರೆಷ್‌ನಿಂದ ತಿಕ್ಕಿದರೆ ಸಾಕು, ಬಾತ್‌ರೂಂ ಫಳ ಫಲ ಅಂತ ಹೊಳೆಯುತ್ತದೆ, ಸುಮ್ಮನೆ ಬಿಸಾಡುವ ತೆಂಗಿನಕಾಯಿ ಚಿಪ್ಪಿನಿಂದ ಎಷ್ಟೆಲ್ಲಾ ಪ್ರಯೋಜನವಿದೆ ನೋಡಿ... ಅಲ್ಲದೆ ಈ ರೀತಿ ಬಳಸುವುದರಿಂದ ಹಣದ ಉಳಿತಾಯ ಕೂಡ ಆಗುತ್ತೆ ಅಲ್ವಾ? ಟೈಲ್ಸ್, ಬಾತ್ ರೂಂ ಕ್ಲೀನ್‌ಗೆ ಬಳಸುವ ಲಿಕ್ವಿಡ್ ಎಲ್ಲಾ ಉಳಿಯುತ್ತೆ.
ಕಸದಿಂದ ರಸ ಎಂಬುವುದು ಇದಕ್ಕೆ ಅಲ್ವಾ?



Click it and Unblock the Notifications
