Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಫೆಂಗ್‌ಶುಯಿ ಪ್ರಕಾರ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಈ ರೀತಿ ಮಾಡಬೇಕಂತೆ
ಲಕ್ಷ್ಮಿ ನಮ್ಮ ಮನೆಯಲ್ಲಿ ನೆಲೆಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತೇವೆ, ಏಕೆಂದರೆ ಲಕ್ಷ್ಮಿ ನೆಲೆಸಿದ ಕಡೆ ಸಂಪತ್ತಿಗೆ ತೊಂದರೆಯಿರಲ್ಲ. ಯಾವುದೇ ಆರ್ಥಿಕ ಸಂಕಷ್ಟವಿರಲ್ಲ , ಹೀಗಾಗಿ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಆಸ್ತಿಕರು ಶ್ರದ್ಧೆಯಿಂದ ಪ್ರಯತ್ನಿಸುತ್ತಾರೆ. ನಮ್ಮಲ್ಲಿ ವಾಸ್ತು ಶಾಸ್ತ್ರ ಇರುವಂತೆ ಚೈನೀಸ್ ಫೆಂಗ್ ಶುಯಿ ಇದೆ. ಇದರಲ್ಲಿಯೂ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಮಾರ್ಗದ ಬಗ್ಗೆ ಹೇಳಲಾಗಿದೆ, ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಮೂರು ಕಾಲಿನ ಹಣದ ಕಪ್ಪೆ
ಫೆಂಗ್ ಶುಯಿ ಪ್ರಕಾರ ಮೂರು ಕಾಲಿನ ಹಣದ ಕಪ್ಪೆ (ನಾಣ್ಯಗಳಿಮದ ಮಾಡಲಾದ ಕಪ್ಪೆಯ ಆಕೃತಿಯನ್ನು ಮನೆಯ ಮುಂಬಾಗಿಲಿನಲ್ಲಿ ಇಡುವುದರಿಂದ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ ಎಂದು ಹೇಳಲಾಗುವುದು. ಇದನ್ನು ಮೆಟ್ಟಿಲುಗಳ ಕೆಳಗಡೆ, ಕೈ ತೊಳೆಯುವಲ್ಲಿ, ಬಾತ್‌ರೂಂ-ಟಾಯ್ಲೆಟ್ ಸಮೀಪದಲ್ಲಿ ಇಡಬೇಡಿ.

ನಗುತ್ತಿರುವ ಬುದ್ಧ
ನಗುತ್ತಿರುವ ಬುದ್ಧದ ಪ್ರತಿಮೆ ನಮಗೆ ಶುಭವನ್ನು ತರುತ್ತದೆ ಎಂಬ ನಂಬಿಕೆ ನಮ್ಮಲ್ಲಿಯೂ ಇದೆ. ನಗುತ್ತಿರುವ ಬುದ್ಧನ ಪ್ರತಿಮೆ ಮನೆಯಲ್ಲಿದ್ದರೆ ಲಕ್ಷ್ಮಿ ಆಕರ್ಷಿತಳಾಗುತ್ತಾಳೆ, ನಗುತ್ತಿರುವ ಬುದ್ಧನ ಪ್ರತಿಮೆ ಮನೆಯ ಹಾಲ್‌ನಲ್ಲಿಡಿ. ಅದರಲ್ಲೂ ಈ ಬುದ್ಧನ ಪ್ರತಿಮೆ ನಿಮಗೆ ಗಿಫ್ಟ್ಸ್ ಆಗಿ ಬಂದರೆ ಇನ್ನೂ ಒಳ್ಳೆಯದು.
ಚಿನ್ನದ ಮೀನು
ಫೆಂಗ್ ಶುಯಿ ಪ್ರಕಾರ ಚಿನ್ನದ ಮೀನನನ್ನು ಮನೆಯ ಹಾಲ್ ಅಥವಾ ಡ್ರಾಯಿಂಗ್ ರೂಂನಲ್ಲಿಡುವುದರಿಂದ ತುಂಬಾನೇ ಧನಾತ್ಮಕ ಬದಲಾವಣೆ ಉಂಟಾಗುವುದು.
ಮೂರು ಚೈನೀಸ್ ಕಾಯಿನ್
ಚೈನೀಸ್ ಫೆಂಗ್‌ಶುಯಿ ಪ್ರಕಾರ ಮೂರು ಚೈನೀಸ್ ಕಾಯಿನ್ ಅನ್ನು ಇಡುವುದರಿಂದ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ ಇದೆ. ನಮ್ಮಲ್ಲಿ ಕಳಸದಲ್ಲಿ ನಾಣ್ಯವನ್ನು ಹಾಕಿಟ್ಟು ಮನೆಯ ಮುಂಭಾಗದಲ್ಲಿಟ್ಟರೆ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆ ನಮ್ಮಲ್ಲಿಯೂ ಇದೆ.
ಕನ್ನಡಿಯನ್ನು ನೇತು ಹಾಕುವುದು
ಕನ್ನಡಿಯನ್ನು ಮನೆಯ ಮುಂಭಾಗದಲ್ಲಿ ನೇತು ಹಾಕುವುದು ಶುಭ ಎಂದು ಪರಿಗಣಿಸಲಾಗಿದೆ. ಆದರೆ ಮುಂಬಾಗಿಲ ಪ್ರತಿಬಿಂಬ ಬೀಳುವಂತೆ ನೇತು ಹಾಕಬೇಡಿ. ಕನ್ನಡಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರದಲ್ಲಿ ಹೇಳಲಾಗಿದೆ.
ಲಕ್ಷ್ಮಿಯ ಫೋಟೋ
ಲಕ್ಷ್ಮಿಯ ಫೋಟೋ ಅಥವಾ ಮೂರ್ತಿ ಮನೆಯಲ್ಲಿದ್ದರೆ ಶುಭ ಎಂದು ಪರಿಗಣಿಸಲಾಗುವುದು. ಲಕ್ಷ್ಮಿಯನ್ನು ಆರಾಧಿಸುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು
ನೀರು ಹರಿಯುವುದು
ಮನೆಯಲ್ಲಿ ಒಂದು ಚಿಕ್ಕ ಫೌಂಟೇನ್ ಇದ್ದು ಅದರಲ್ಲಿ ನೀರು ಸದಾ ಹರಿಯುತ್ತಿರುವಂತೆ ಇದ್ರೆ ಒಳ್ಳೆಯದು ಎಂದು ಹೇಳಲಾಗುವುದು. ಇಲ್ಲದಿದ್ದರೆ ಜಲಪಾತದ ಫೋಟೋವನ್ನು ಮನೆಯಲ್ಲಿ ನೇತು ಹಾಕುವುದರಿಂದ ಮನೆಗೆ ಶುಭ ಉಂಟಾಗುವುದು ಎಂದು ಹೇಳಲಾಗುವುದು.
ವೃತ್ತಿ ಜೀವನದಲ್ಲಿ ಏಳಿಗೆ ಉಂಟಾಗಲು ಫೆಂಗ್‌ಶುಯಿ ಟಿಪ್ಸ್
* ಕೆಲಸದ ಟೇಬಲ್ ಹಾಗೂ ಕೆಲಸದ ವಸ್ತುಗಳನ್ನು ಸ್ವಚ್ಛವಾಗಿಡಿ.
* ಕೆಲಸದ ಟೇಬಲ್‌ನಲ್ಲಿ ಕೆಂಪು ಪಕ್ಷಿಯ ಚಿತ್ರವಿದ್ದರೆ ಒಳ್ಳೆಯದು
* ಚಿಕ್ಕ ಗಿಡಗಳನ್ನು ಕೆಲಸದ ಟೇಬಲ್‌ನಲ್ಲಿಡಿ
* ನೀವು ಕಿಟಕಿಗೆ ಎದುರಾಗಿ ಕೂರಬೇಡಿ.
* ಮನೆಯ ಹಾಲ್ ಅನ್ನು ಸ್ವಚ್ಛವಾಗಿ ಹಾಗೂ ಆಕರ್ಷಕವಾಗಿಡಿ.
ಫೆಂಗ್ ಶುಯಿ ಅಥವಾ ವಾಸ್ತು ನಂಬುವುದು, ಬಿಡುವುದು ಅವರವರ ನಂಬಿಕೆಗೆ ಬಿಟ್ಟದ್ದು, ಇಲ್ಲಿ ಹೇಳಲಾಗಿರುವ ಅಂಶಗಳನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧಾರದ ಮೇಲೆ ನೀಡಲಾಗಿದೆ.



Click it and Unblock the Notifications
