Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೊಟ್ಟೆಗಳು ಸಿಡಿಯದಂತೆ ಬೋಂಡಾ ಮಾಡಿ: ಇಲ್ಲಿದೆ ಸುಲಭದ ಟ್ರಿಕ್ಸ್!
ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಹಲವು ರೀತಿಯ ಸ್ನ್ಯಾಕ್ಸ್ ಸವಿಯುವುದು ನೋಡಬಹುದು. ಬೋಂಡಾ, ಬಜ್ಜಿ, ಪಾನಿಪೂರಿ, ಗೋಬಿ ಮಂಚೂರಿಯನ್, ನೂಡಲ್ಸ್, ಚುರುಮುರಿ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗಲಿದೆ. ರುಚಿ ರುಚಿಯ ಸ್ನ್ಯಾಕ್ಸ್ ಸವಿಯೋದು ಅಂದ್ರೆ ಮನೆ ಮಂದಿಗೆಲ್ಲಾ ಇಷ್ಟವಾಗುತ್ತೆ. ಇನ್ನು ಮನೆಯಲ್ಲೇ ಮಾಡಿ ಸವಿಯುವ ಹಲವು ರೀತಿಯ ಸ್ನ್ಯಾಕ್ಸ್ ನೋಡಬಹುದು.
ಅದ್ರಲ್ಲು ಹಲವರು ರಸ್ತೆ ಬದಿಯಲ್ಲಿ ನೀಡುವಂತಹ ಬೋಂಡಾ, ಬಜ್ಜಿಗಳ ಸವಿಯುವುದು ಅಂದ್ರೆ ಬಹಳ ಇಷ್ಟವಾಗುತ್ತೆ. ನಾವಿಂದು ರಸ್ತೆ ಬದಿ ಸಿಗುವಂತಹ ಮೊಟ್ಟೆ ಬೋಂಡಾವನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಮೊಟ್ಟೆ ಬೋಂಡಾ ಎಲ್ಲರ ಮೆಚ್ಚಿನ ಸ್ನ್ಯಾಕ್ಸ್. ಮೊಟ್ಟೆ ಬೋಂಡಾ ಜೊತೆಗೆ ಈರುಳ್ಳಿ, ಹಸಿ ಮೆಣಸಿನ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಗೆ ಮತ್ತೆ ಎರಡು ಮೂರು ಬೋಂಡಾ ಸವಿಯುತ್ತೀರಿ.

ಸದ್ಯ ಈ ರೀತಿಯ ಮೊಟ್ಟೆ ಬೋಂಡಾವನ್ನು ಮನೆಯಲ್ಲೇ ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನೋಡೋಣ. ಈ ಬೋಂಡಾವನ್ನು ಮಾಡುವಾಗ ಸಿಡಿಯುವ ಆತಂಕ ಇರುತ್ತದೆ. ಆದ್ರೆ ಈ ರೀತಿಯ ಟ್ರಿಕ್ಸ್ ಬಳಸಿದ್ರೆ ಈ ಮೊಟ್ಟೆ ಬೋಂಡಾ ಸಿಡಿಯುವುದಿಲ್ಲ ಹಾಗಾದ್ರೆ ಮನೆಯಲ್ಲಿ ರುಚಿ ರುಚಿಯ ಮೊಟ್ಟೆ ಬೋಂಡಾ ಮಾಡುವುದು ಹೇಗೆ ನೋಡೋಣ.
ಮೊಟ್ಟೆ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ? ಸಿಡಿಯದಂತೆ ಮಾಡೋದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊಟ್ಟೆ ಬೋಂಡಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಮೊಟ್ಟೆಗಳು- 5ರಿಂದ 6
- ಕಡಲೆ ಹಿಟ್ಟು
- ಈರುಳ್ಳಿ
- ಕೊತ್ತಂಬರಿ ಸೊಪ್ಪು
- ಅರಶಿಣ
- ಉಪ್ಪು
- ಖಾರದ ಪುಡಿ
- ಅಡುಗೆ ಸೋಡಾ
- ಗರಂ ಮಸಾಲೆ
- ಅಜ್ವೈನ
- ಎಣ್ಣೆ
- ಜೀರಿಗೆ
ಮೊಟ್ಟೆ ಬೋಂಡಾ ಮಾಡುವ ವಿಧಾನವೇನು?
ಮೊದಲು ಮೊಟ್ಟೆಯನ್ನು ಬೇಯಿಸಿಕೊಳ್ಳಬೇಕು. ಹೀಗೆ ಬೇಯಿಸಿಕೋಳ್ಳುವಾಗ ನೀರಿನಲ್ಲಿ ಅರ್ಧ ಈರುಳ್ಳಿಯನ್ನು ಸಿಪ್ಪೆ ಸಮೇತವಾಗಿ ಹಾಕಿ ಇಡಿ, ಹಾಗೆ ಒಂದು ಚಿಟಿಕೆ ಉಪ್ಪು ಸಹ ಸೇರಿಸಿ ಬೇಯಿಸಿಕೊಳ್ಳಿ. ನಂತರ ಮೊಟ್ಟೆ ಸಿಪ್ಪೆ ತೆಗೆದು ಒಂದು ಮೊಟ್ಟೆಯನ್ನು ಎರಡು ಭಾಗವಾಗಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಇಡಿ ಮೊಟ್ಟೆಯಲ್ಲಿ ಬೋಂಡಾ ಮಾಡುವಾಗ ಸಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಕತ್ತರಿಸಿದ ಮೊಟ್ಟೆ ಸಿಡಿಯುವುದಿಲ್ಲ.
ಬಳಿಕ ಒಂದು ಪಾತ್ರೆಗೆ ಕಡಲೆ ಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಪುಡಿ ಮಾಡಿಕೊಂಡ ಅಜ್ವೈನ, ಜೀರಿಗೆ, ಅರಶಿಣ ಪುಡಿ, ಗರಂ ಮಸಾಲ ಪುಡಿ, ಖಾರದ ಪುಡಿ, ಉಪ್ಪು, ಅಡುಗೆ ಸೋಡಾ ಇದ್ದರೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಕೊಳ್ಳುತ್ತಾ ಹಿಟ್ಟು ಹದ ಮಾಡಿಕೊಳ್ಳಿ.
ಬೋಂಡಾ ಹಿಟ್ಟು ಬಹಳ ತೆಳುವಾಗಿ ಮಾಡಿಕೊಳ್ಳಬೇಡಿ. ಹಿಟ್ಟು ಮೊಟ್ಟೆಗೆ ಅಂಟಿಕೊಳ್ಳಬೇಕು. ಎಲ್ಲಾ ಮೊಟ್ಟೆ ಪೀಸ್‌ಗಳನ್ನು ಈ ಹಿಟ್ಟಿನಲ್ಲಿ ಹಾಕಿಕೊಂಡು ಬಳಿಕ ಒಂದೊಂದಾಗಿ ತೆಗೆದು ಬಾಣಲೆಯಲ್ಲಿ ಇಟ್ಟಿರುವ ಬಿಸಿಯಾದ ಎಣ್ಣೆಗೆ ಬಿಟ್ಟುಕೊಳ್ಳಿ. ಹಾಗೆ ಎಣ್ಣೆಯಲ್ಲಿ ಹದವಾಗಿ ಬೇಯಲು ಬಿಡಿ. ಇಡಿ ಮೊಟ್ಟೆಯಲ್ಲಿ ಬೋಂಡಾ ಮಾಡುವುದಾದರೆ ಅದನ್ನು ಎಣ್ಣೆಗೆ ಬಿಡುವ ಮುನ್ನ ಒಂದು ರಂಧ್ರ ಅಥವಾ ಒಂದು ಬದಿ ಸಣ್ಣದಾಗಿ ಕತ್ತರಿಸುವುದು ಉತ್ತಮ. ಇದರಿಂದ ಮೊಟ್ಟೆ ಸಿಡಿಯುವುದಿಲ್ಲ.
ಮೊಟ್ಟೆ ಚೆನ್ನಾಗಿ ಕಾದ ಬಳಿಕ ಮೊಟ್ಟೆಯನ್ನು ತೆಗೆದು ಒಂದು ಜರಡಿಯಲ್ಲಿ ಇಟ್ಟು ಚೆನ್ನಾಗಿ ಎಣ್ಣೆ ಇಳಿಯಲು ಬಿಡಿ. ಇಷ್ಟಾದರೆ ಸಂಜೆ ಸಮಯದಲ್ಲಿ ಸವಿಯಲು ನಿಮಗೆ ರುಚಿ ರುಚಿಯ ಮೊಟ್ಟೆ ಬೋಂಡಾ ರೆಡಿಯಾಗಿರಲಿದೆ.



Click it and Unblock the Notifications