Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
2 ನಿಮಿಷದಲ್ಲಿ ಮಾಡಿ ಮೊಟ್ಟೆ ಪಡ್ಡು..!! ಈ ರೀತಿ ಮಾಡಿದ್ರೆ ಒಂದೂ ಬಾಕಿ ಉಳಿಯಲ್ಲ!!
ನೀವು ಪ್ರತಿದಿನ ಬೆಳಗ್ಗೆ ತಿಂಡಿಗೆ ವಿಧ ವಿಧವಾದ ತಿಂಡಿಯನ್ನು ಮಾಡಿ ಸವಿಯಲು ಇಷ್ಟಪಡುತ್ತೀರಿ. ಅದೇ ರೀತಿ ಸಂಜೆಯ ಸ್ನ್ಯಾಕ್ಸ್ ಕೂಡ ಸವಿಯಲು ಇಷ್ಟಪಡುವ ಮಂದಿ ಆಗಿರಬಹುದು. ಆದ್ರೆ ನಿತ್ಯ ಒಂದೊಂದು ರೀತಿ ತಿಂಡಿ ಮನೆಯಲ್ಲೇ ಮಾಡೋದು ಕಷ್ಟ ಹೀಗಾಗಿ ಮನೆಯೊಂದ ಹೊರಗೆ ಸವಿಯಲು ಇಷ್ಟಪಡುವವರೆ ಹೆಚ್ಚು.
ಅದ್ರಲ್ಲೂ ಸಂಜೆ ಸಮಯದಲ್ಲಿ ಬಿಸಿ ಬಿಸಿಯಾದ ಬೋಂಡಾ ಬಜ್ಜಿ ಅದರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಹಾಗೆ ಮನೆಯಲ್ಲೇ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಇಷ್ಟೊಡುವಂತೆ ಮಾಡುವ ಯಾವುದಾದರು ತಿಂಡಿ ಮಾಡಿ ಸವಿಯುವ ನಿಮ್ಮ ಆಸೆ ಇದ್ದರೆ ಈ ರೀತಿ ತಿಂಡಿ ಮಾಡಿ.

ಮೊಟ್ಟೆಯನ್ನು ಬಳಸಿ ಮಾಡುವಂತಹ ಪಡ್ಡು ಎಲ್ಲರಿಗೂ ಇಷ್ಟವಾಗುತ್ತೆ, ಮೊಟ್ಟೆ ಬಳಸಿ ನೀವು ಹಲವು ರೀತಿಯ ರುಚಿ ರುಚಿಯಾದ ತಿಂಡಿ ಮಾಡಿರುತ್ತೀರಿ. ಆದ್ರೆ ಸಂಜೆ ಸಮಯದಲ್ಲಿ ಸವಿಯಲೆಂದು ಮಾಡುವ ಮೊಟ್ಟೆಯ ಪಡ್ಡು ನಿಮ್ಮ ರುಚಿ ದುಪ್ಪಟ್ಟಾಗಿಸುತ್ತೆ. ಹಾಗಾದ್ರೆ ಈ ಪಡ್ಡು ಮಾಡುವ ಕುರಿತಾಗಿ ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಪಡ್ಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊಟ್ಟೆ ಪಡ್ಡು ಮಾಡಲು ಬೇಕಾಗುವ ವಸ್ತುಗಳು
- ಮೊಟ್ಟೆ- 5 ರಿಂದ 6
- ಈರುಳ್ಳಿ
- ಟೊಮೆಟೋ
- ಹಸಿ ಮೆಣಸು
- ಕೊತ್ತಂಬರಿ ಸೊಪ್ಪು
- ಖಾರದ ಪುಡಿ
- ಅರಶಿಣ
- ಕಾಳು ಮೆಣಸಿನ ಪುಡಿ
- ಗರಂ ಮಸಾಲ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಮೊಟ್ಟೆ ಪಡ್ಡು ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬೌಲ್‌ಗೆ 5ರಿಂದ 6 ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಟೊಮೆಟೋ ಸೇರಿಸಿಕೊಳ್ಳಿ. ಹಾಗೆ ಖಾರಕ್ಕೆ ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಅರಶಿಣ, ಕಾಳು ಮೆಣಸಿನ ಪುಡಿ, ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿಕೊಳ್ಳಿ.
ಹೀಗೆ ಈ ಎಲ್ಲಾ ಪದಾರ್ಥಗಳ ಹಾಕಿದ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ ಪ್ಲೇಟ್ ಮುಚ್ಚಿ 5 ನಿಮಿಷ ಹಾಗೆಯೇ ಬಿಡಿ. ಅನಂತರ ಮತ್ತೆ ತೆಗೆದು ಒಮ್ಮೆ ಮಿಕ್ಸ್ ಮಾಡಿ. ಈಗ ಒಲೆ ಮೇಲೆ ಪಡ್ಡು ಮಾಡುವ ತವಾ ಅಥವಾ ಕಾವಲಿಯನ್ನು ಇಟ್ಟು ಎಣ್ಣೆ ಹಚ್ಚಿಕೊಂಡು ಬಿಸಿಯಾಗಲು ಬಿಡಿ.
ಈ ತವಾ ಬಿಸಿಯಾದಾಗ ಬೌಲ್‌ನಲ್ಲಿನ ಮೊಟ್ಟೆಯ ಮಿಶ್ರಣವನ್ನು ಒಂದೊಂದು ಅಚ್ಚಿಗೆ ನಿಧಾನವಾಗಿ ಹಾಕಿಕೊಳ್ಳಿ. ಅನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 4 ನಿಮಿಷ ಬೇಯಿಸಿ. ಎರಡೂ ಕಡೆ ಇದೇ ರೀತಿ ಬೇಯಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಮೊಟ್ಟೆ ಪಡ್ಡು ಸಿದ್ದವಾಗುತ್ತೆ.
ಇದು ಅತ್ಯಂತ ಸುಲಭವಾಗಿ ಹಾಗೆ ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವಂತಹ ಖಾದ್ಯ. ನೀವು ಬಹಳ ಇಷ್ಟಪಟ್ಟು ಮಾಡಿ ಸವಿಯುತ್ತೀರಿ. ಹಾಗೆ ಮಕ್ಕಳಿಗೂ ಇದು ಬಹಳ ಇಷ್ಟವಾಗುತ್ತೆ. ಬೆಳಗ್ಗೆ ತಿಂಡಿಗೆ ಮಾತ್ರವಲ್ಲದೆ ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿ ಸವಿಯಬಹುದು. ಇದಕ್ಕೆ ಚಟ್ನಿ ಬೇಕಾಗಿಲ್ಲ ಹಾಗೆಯೇ ಸವಿಯಬಹುದು. ಇದನ್ನು ನೀವು ಕೇವಲ 5 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಮಾಡಿ ಸವಿಯಬಹುದು. ಗಡಿಬಿಡಿಯಲ್ಲಿ ಇದ್ದಾಗ ಇದನ್ನು ಬ್ರೇಕ್ ಫಾಸ್ಟ್ ಆಗಿಯೂ ಮಾಡಿಕೊಳ್ಳಬಹುದು.



Click it and Unblock the Notifications
