Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇವರ ದೀಪ ಹಚ್ಚುವ ದೇವರ ಕೋಣೆ ಹೀಗಿದ್ದರೆ ಮಾತ್ರ ಧನಾತ್ಮಕ ಶಕ್ತಿ ಹೆಚ್ಚುವುದು
ಮನೆಯಲ್ಲಿ ಬೆಳಗ್ಗೆ ಸಂಜೆ ದೀಪ ಬೆಳಗುತ್ತೇವೆ. ಹೀಗೆ ದೀಪ ಬೆಳಗುವುದರಿಂದ ಧನಾತ್ಮಕ ಶಕ್ತಿ ಆ ಮನೆಗೆ ಬರುವುದು, ಋಣಾತ್ಮಕ ಶಕ್ತಿ ಹೊರ ಹೋಗುವುದು. ಹಾಗಾಗಿ ಮನೆಗಳಲ್ಲಿ ದೀಪ ಹಚ್ಚಿ ದೇವರಿಗೆ ಕೈ ಮುಗಿಯುತ್ತೇವೆ.
ದೀಪಕ್ಕೆ ತುಪ್ಪ, ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆ ಹಚ್ಚಿ ದೀಪವನ್ನು ಬೆಳಗುತ್ತಾರೆ, ದೇವರಿಗೆ ನೀವು ಈ ಎಣ್ಣೆಗಳನ್ನು ಬಳಸುವುದರಿಂದ ಋಣಾತ್ಮಕ ಶಕ್ತಿ ದೂರಾಗುವುದು ಎಂದು ಹೇಳಲಾಗುವುದು. ಇನ್ನು ಮನೆಯಲ್ಲಿ ದೇವರ ಕೋಣೆ ಈ ರೀತಿಯಿದ್ದರೆ ಆ ಮನೆಯಲ್ಲಿ ಸಂತೋಷ ಹೆಚ್ಚಾಗುವುದು ಎಂಬ ನಂಬಿಕೆಯಿದೆ:

ದೇವರ ಕೋಣೆ
ದೇವರ ಕೋಣೆಯ ಬಾಗಿಲು ಈಶಾನ್ಯ ದಿಕ್ಕಿಲ್ಲಿರಬೇಕು
ನೀವು ದೇವರ ಕೋಣೆಯನ್ನು ಈಶಾನ್ಯ ದಿಕ್ಕಿನಲ್ಲಿ ನಿರ್ಮಿಸಬೇಕು. ವಾಸ್ತು ಶಾಸ್ತ್ರದಲ್ಲಿ ಈಸಾನ್ಯ ದಿಕ್ಕು ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ಇದ್ದರೆ ಮನೆಗೆ ತುಂಬಾ ಒಳ್ಳೆಯದು, ಮನೆಯಲ್ಲಿ ಸಂಪತ್ತು, ಸಂತೋಷ ಇರುತ್ತದೆ ಎಂದು ಹೇಳಲಾಗುವುದು.
ದೇವರ ಮೂರ್ತಿಗಳು ಅಥವಾ ಫೋಟೋಗಳನ್ನು ಕೂಡ ಈಶಾನ್ಯ ದಿಕ್ಕಿನಲ್ಲಿಡಬೇಕು
ಎಲ್ಲಾ ದೇವರುಗಳನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಅಲ್ಲದೆ ಮೂರ್ತಿಗಳನ್ನು ಗೋಡೆಗೆ ತಟ್ಟಿದಂತೆ ಇಡಬಾರದು. ಕೆಲವು ಇಂಚುಗಳು ದೂರ ಇರಬೇಕು. ಅಲ್ಲದೆ ದೇವರ ಪೋಟೋಗಳನ್ನು ಕೂಡ ಒಂದಕ್ಕೊಂದು ಅಂಟಿಕೊಂಡಂತೆ ಇಡಬಾರದು. ಅಲ್ಲದೆ ದೇವರ ಮೂರ್ತಿಗಳನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿ ಇಡಬೇಕು.
ದೇವರಿಗೆ ಬಳಸುವ ಎಣ್ಣೆ, ಬತ್ತಿ, ಕರ್ಪೂರ ಎಲ್ಲಿಡಬೇಕು?
ನೀವು ದೇವರಿಗೆ ಬಳಸುವ ವಸ್ತುಗಳನ್ನು ಮಂಟಪದ ಮೇಲೆ ಇಡಬಾರದು ಅಥವಾ ಪಕ್ಕದಲ್ಲಿಯೂ ಇಡಬೇಕು. ಸ್ವಲ್ಪ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಇಡಿ. ಸೂರ್ಯನ ಕಿರಣಗಳು ದೇವರ ಮೂರ್ತಿ ಮೇಲೆ ಬೀಳುವಂತೆ ಇದ್ದರೆ ಇನ್ನೂ ಒಳ್ಳೆಯದು.
ತೆಳು ಬಣ್ಣದ ಪೇಯಿಂಟ್ ಬಳಸಿ
ನೀವು ಯಾವತ್ತೂ ದೇವರ ಕೋಣೆಗೆ ತೆಳು ಬಣ್ಣದ ಪೇಯಿಂಟ್ ಮಾಡಿಸಬೇಕು, ಬಿಳಿ, ತೆಳು ಹಸಿರು ಅಥವಾ ಗೋಲ್ಡನ್ ಬಣ್ಣದ ಪೇಯಿಂಟ್ ಹಚ್ಚಿ.
ದೇವರ ಕೋಣೆಯಲ್ಲಿ ತಾಮ್ರದ ಜೊಂಬಿನಲ್ಲಿ ನೀರು ಇರಬೇಕು
ದೇವರ ಕೋಣೆಯಲ್ಲಿ ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಇಡಬೇಕು, ಅದರಲ್ಲಿ ನಾಣ್ಯಗಳನ್ನು ಹಾಕಿಡಬಹುದು, ಆದರೆ ಈ ನೀರನ್ನು ಪ್ರತಿದಿನ ಬದಲಾಯಿಸಬೇಕು.
ಯಾವ ಸಮಯ ದೇವರ ದೀಪ ಹಚ್ಚಲು ಒಳ್ಳೆಯದು?
ಬೆಳಗ್ಗೆ 5 ಗಂಟೆಯಿಂದ 7.30 ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು, ಸಂಜೆ 6-7 ಗಂಟೆಯ ಒಳಗಡೆ ದೀಪ ಹಚ್ಚಿದರೆ ಒಳ್ಳೆಯದು.
ದೇವರ ದೀಪ ಹಚ್ಚಿದ ಮೇಲೆ ಏನು ಮಾಡಬೇಕು?
ಮೊದಲಿಗೆ ಗಣೇಶನ ಆರಾಧಿಸಬೇಕು, ನಂತರ ಇಷ್ಟ ದೇವರನ್ನು ನೆನೆಸಿಕೊಂಡು ಆರಾಧನೆ ಮಾಡಿ, ದೀಪ ಹಚ್ಚಿ ಮಂತ್ರಗಳನ್ನು ಹೇಳುವುದು ಒಳ್ಳೆಯದು.
ಮಡಿಯಿಂದ ಪೂಜೆ ಮಾಡಬೇಕು
ಪೂಜೆಯ ಫಲ ಸಿಗಬೇಕೆಂದರೆ ನೀವು ಮಡಿಯಿಂದ ಪೂಜೆಯನ್ನು ಮಾಡಬೇಕು.



Click it and Unblock the Notifications
