Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಬೇಸಿಗೆಯಲ್ಲಿ ಮನೆಯನ್ನು ಕೂಲ್ ಆಗಿ ಇರಿಸಲು 8 ಟಿಪ್ಸ್
ಮಾರ್ಚ್ ಶುರುವಾಗಿದೆಯಷ್ಟೇ ಈಗಲೇ ಬಿಸಿಲ ಧಗೆಯಿಂದ ಜನರಿಗೆ ತುಂಬಾನೇ ಕಷ್ಟವಾಗುತ್ತಿದೆ. ಇನ್ನು ಏಪ್ರಿಲ್, ಮೇ ತಿಂಗಳಿನಲ್ಲಿ ಈ ಬಿಸಿಲಿನ ಉರಿ ಮತ್ತಷ್ಟು ಹೆಚ್ಚಾಗಬಹುದು, ಬಿಸಿಲಿನಲ್ಲಿ ಹೊರಗಡೆ ಒಡಾಡುವುದು ಇರಲಿ, ಮನೆಯೊಳಗೆ ಕೂರಲು ಕೂಡ ಕಷ್ಟವಾಗುತ್ತಿದೆ, ಫ್ಯಾನ್ ಹಾಕಿದರೂ ಫ್ಯಾನ್‌ನಿಂದ ಬಿಸಿ ಗಾಳಿ ಬರುತ್ತಿದೆ ಎಂದನಿಸುವುದು. ಏರ್ ಕಂಡೀಷನರ್ ಇದ್ದರೆ ತಂಪು ಅನಿಸುವುದು, ಇಲ್ಲದಿದ್ದರೆ ಕಷ್ಟವಾಗುತ್ತಿದೆ.
ಬಿಸಿಲು ಹೆಚ್ಚಿರುವಾಗ ನೀವು ಮನೆಯನ್ನು ತಂಪಾಗಿಟ್ಟರೆ ಮನೆಯೊಳಗೆ ಆರಾಮ ಅನಿಸುವುದು. ಮನೆಯನ್ನು ಕೂಲ್ ಆಗಿಡಲು ಈ ಟ್ರಿಕ್ಸ್ ಸಹಕಾರಿಯಾಗಿದೆ ನೋಡಿ:

ರಾತ್ರಿ ಹೊತ್ತಿನಲ್ಲಿ ಕಿಟಕಿಯನ್ನು ತೆರೆದಿಡಿ
ರಾತ್ರಿ ಹೊತ್ತಿನಲ್ಲಿ ಕಿಟಕಿಗಳನ್ನು ತೆರೆದಿಡಿ ಕಿಟಕಿಗಳನ್ನ ತೆರೆದಿಟ್ಟಾಗ ರಾತ್ರಿ ತಂಪಾದ ಗಾಳಿ ಮನೆಯೊಳಗೆ ಬರುತ್ತದೆ, ಇದರಿಂದ ನಿದ್ದೆ ಚೆನ್ನಾಗಿ ಬರುತ್ತದೆ. ಆದರೆ ಎಲ್ಲಾ ಕಡೆ ಕಿಟಕಿಗಳನ್ನು ತೆರೆದಿಡಲ ಸಾಧ್ಯವಿಲ್ಲ, ಏಕೆಂದರೆ ಸೊಳ್ಳೆಕಾಟವಿರುತ್ತದೆ, ಅದಕ್ಕಿಂತ ಹೆಚ್ಚಾಗಿ ಕೆಲವು ಕಡೆ ಕಳ್ಳರ ಕಾಟವಿರುತ್ತದೆ. ಕಿಟಕಿ ತೆರೆದಿಟ್ಟು ನಿದ್ದೆ ಮಾಡಿದರೆ ಮೊಬೈಲ್ ಮತ್ತಿತರ ವಸ್ತುಗಳು ಕಳ್ಳತನವಾಗುವುದು. ಹಾಗಾಗಿ ನೀವು ಈ ಬಗ್ಗೆ ಕೂಡ ಎಚ್ಚರವಹಿಸಬೇಕು, ಕಿಟಕಿಗಳಿಗೆ ಹಾಕಲು ನೆಟ್ ಸಿಗುತ್ತೆ, ಇವುಗಳನ್ನು ಬಳಸುವುದರಿಂದ ಸೊಳ್ಳೆಗಳ ಕಾಟದಿಂದ ರಕ್ಷಣೆ ಪಡೆಯಬಹುದು. ಮನೆಗೆ ಗ್ರಿಲ್ಡ್ ಹಾಕಿದ್ದರೆ ಕಳ್ಳರು ಅಷ್ಟು ಸುಲಭವಾಗಿ ನುಗ್ಗಲು ಸಾಧ್ಯವಿಲ್ಲ, ಗೇಟ್‌ಗಳನ್ನು ಆರಾಮವಾಗಿ ತೆರೆದಿಡಬಹುದು.
ಹಗಲಿನಲ್ಲಿ ಕಿಟಕಿಗಳನ್ನು ಮುಚ್ಚಿ
ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಮುಚ್ಚಿ ಕರ್ಟನ್ ಹಾಕಿಡಿ, ಇದರಿಂದ ಮನೆ ತಂಪಾಗಿ ಇರುತ್ತದೆ, ಮನೆ ಬಾಗಿಲು, ಕಿಟಕಿಗಳನ್ನು ಹಗಲು ಹೊತ್ತಿನಲ್ಲಿ ಮುಚ್ಚಿದರೆ ಮನೆ ತಂಪಾಗಿರುತ್ತದೆ.
ವಾಶಿಂಗ್ ಮೆಷಿನ್ ಬಳಕೆ, ಡಿಶ್ ವಾಷರ್ ಬಳಕೆ ಸಂಜೆ ಹೊತ್ತಿನಲ್ಲಿ ಬಳಸಿ
ಹೌದು ಇಂಥ ಸಾಧನಗಳ ಬಳಕೆ ಕೂಡ ಮನೆಯೊಳಗಡೆ ಉಷ್ಣಾಂಶ ಹೆಚ್ಚು ಮಾಡುತ್ತದೆ, ಇವುಗಳನ್ನು ನೀವು ಸಂಜೆ ಅಥವಾ ರಾತ್ರಿ ಹೊತ್ತಿನಲ್ಲಿ ಬಳಸಿ, ಇನ್ನು ಡ್ರೈಯರ್ ಬಳಸದೆ ಬಟ್ಟೆಯನ್ನು ಬಿಸಿಲಿನಲ್ಲಿ ಒಣಗಿಸಿ, ಇದು ಕೂಡ ಡ್ರೈಯರ್ ಬಳಕೆ ಕಡಿಮೆ ಮಾಡುತ್ತದೆ, ಕರೆಂಟ್ ಉಳಿಸುತ್ತೆ, ಸೆಕೆ ಕಡಿಮೆ ಮಾಡುತ್ತೆ.
ಸಾಧ್ಯವಾದರೆ ಮನೆಯ ಹೊರಗಡೆ ಅಡುಗೆ ಮಾಡಿ
ಈ ಫ್ಲ್ಯಾಟ್‌ಗಳಲ್ಲಿ, ದೊಡ್ಡ-ದೊಡ್ಡ ಬಿಲ್ಡಿಂಗ್‌ಗಳಲ್ಲಿ ಹೊರಗಡೆ ಅಡುಗೆ ಮಾಡುವ ಜಾಗವಿರಲ್ಲ, ಆದರೆ ಇಂಡಿಪೆಂಡೆಂಟ್ ಹೌಸ್‌ಗಳಲ್ಲಿ, ಹಳ್ಳಿಗಳ ಮನೆಗಳಲ್ಲಿ ಹೊರಗಡೆ ಸ್ವಲ್ಪ ಜಾಗವಿರುತ್ತದೆ, ಅಲ್ಲಿ ಅಡುಗೆಗೆ ವ್ಯವಸ್ಥೆ ಮಾಡಿ, ಬೇಸಿಗೆಯಲ್ಲಿ ಮನೆಯ ಹೊರಗಡೆ ಮಾಡಿದಾಗ ಮನೆಯ ಒಳಗಡೆ ತಂಪು ಆಗಿರುತ್ತದೆ. ಅದೇ ನಾವು ಮನೆಯೊಳಗಡೆ ಅಡುಗೆ ಮಾಡಿದರೆ ಅಡುಗೆ ಮನೆ ಮಾತ್ರವಲ್ಲ ಇಡೀ ಮನೆಯಲ್ಲಿ ಉಷ್ಣಾಂಶ ಹೆಚ್ಚಾಗಿ ಸೆಕೆ-ಸೆಕೆ ಅನಿಸುವುದು.
ವಿಂಡೋ ಶೇಡ್‌ಗಳನ್ನು ಬಳಸಿ
ಮಧ್ಯಾಹ್ನ ಹೊತ್ತು ವಿಂಡೋ ಶೀಲ್ಡ್ ಬಳಸಿದರೆ ಅದು ಮಧ್ಯಾಹ್ನ ಹೊತ್ತಿನಲ್ಲಿ ಉರಿ ಬಿಸಿಲು ಮನೆಯೊಳಗಡೆ ಉಷ್ಣಾಂಶ ಹೆಚ್ಚು ಮಾಡುವುದನ್ನು ತಡೆಗಟ್ಟಬಹುದು.
ಫ್ಯಾನ್‌ಗಳನ್ನು ಗಾಳಿ ಚೆನ್ನಾಗಿ ಬರುವ ಕಡೆ ಇಡಿ
ನೀವು ಫ್ಯಾನ್ ಅನ್ನು ಕಿಟಕಿ ಪಕ್ಕದಲ್ಲಿ ಇಡಿ, ಆವಾಗ ಗಾಳಿ ಚೆನ್ನಾಗಿ ಬರುತ್ತದೆ. ಕಿಟಕಿ ಪಕ್ಕ ಫ್ಯಾನ್ ಇಟ್ಟಾಗ ಅದು ಹೊರಗಡೆಯ ತಂಪಾದ ಗಾಳಿಯನ್ನು ಹೀರಿಕೊಳ್ಳುತ್ತದೆ, ಹೀಗಾಗಿ ಫ್ಯಾನ್ ತುಂಬಾ ತಿರುಗಿದಾಗ ಬಿಸಿ ಗಾಳಿ ಬರುವುದಿಲ್ಲ.
ಫ್ಯಾನ್ ಕೆಳಗಡೆ ಬಕೆಟ್‌ನಲ್ಲಿ ಐಸ್ ಹಾಕಿಟ್ಟರೆ ಕೂಡ ಫ್ಯಾನ್ ತಿರುಗುವಾಗ ಮನೆ ತಂಪಾಗಿರುತ್ತದೆ.
ಎಕ್ಸಾಸ್ಟ್ ಫ್ಯಾನ್ ಬಳಸಿ
ಕಿಚನ್, ಬಾತ್‌ರೂಂಗಳಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಸಿ, ನೀವು ಅಡುಗೆ ಮಾಡುವಾಗ ಅಡುಗೆ ಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ತಪ್ಪದೆ ಬಳಸಿ, ಇದರಿಂದ ಅಡುಗೆ ಮಾಡುವಾಗ ಸೆಕೆಯಲ್ಲಿ ಬೇಯುವುದನ್ನು ತಡೆಗಟ್ಟಬಹುದು.
ಮನೆಯ ಬಲ್ಬ್ ಬದಲಾಯಿಸಿ
ಅಧಿಕ ವ್ಯಾಟ್‌ನ ಬಲ್ಬ್ ಬಳಿಸಿದಾಗ ಉಷ್ಣಾಂಶ ಹೆಚ್ಚಾಗುವುದು, ನೀವು ಕಡಿಮೆ ವ್ಯಾಟ್‌ನ ಬಲ್ಬ್ ಬಳಸಿ, ಇದು ಕೋಣೆಯ ಉಷ್ಣಾಂಶ ಕಡಿಮೆ ಮಾಡುವುದು.
ಟೆರೇಸ್ ಮನೆಯಾದರೆ ಹಂಚಿನ ಮನೆಗಿಂತ ಹೆಚ್ಚು ಸೆಕೆಯಾಗಿರುತ್ತದೆ, ಹಾಗಾಗಿ ಟೆರೇಸ್ ಮನೆಯ ಮೇಲೆ ಹಂಚಿನ ಮಾಡು ಮಾಡಿದರೆ ಮನೆ ಕೂಲ್ ಆಗಿರುತ್ತದೆ.
ಇದರ ಜೊತೆ ನಮ್ಮ ಜೀವನಶೈಲಿಯಲ್ಲಿನ ಬದಲಾವಣೆ ಕೂಡ ಹೆಚ್ಚು ಸೆಕೆಯಾಗುವುದನ್ನು ತಡೆಗಟ್ಟುತ್ತದೆ
ಸಡಿಲವಾದ ಕಾಟನ್ ಬಟ್ಟೆ ಧರಿಸಿ: ಬೇಸಿಗೆಯಲ್ಲಿ ಸಡಿಲವಾದ ಕಾಟ ಬಟ್ಟೆ ಧರಿಸಿ, ಮನೆಯಲ್ಲಿ ಚಿಕ್ಕ ಮಕ್ಕಳಿಗೆ ತೆಳುವಾದ, ಸಡಿಲವಾದ ಕಾಟನ್ ಬಟ್ಟೆ ಹಾಕಿ ಕೊಡಿ.
ತಣ್ಣೀರಿನ ಸ್ನಾನ: ಮನೆಯಲ್ಲಿದ್ದಾಗ ಸೆಕೆಗೆ ತಣ್ಣೀರಿನ ಸ್ನಾನ ತುಂಬಾನೇ ಒಳ್ಳೆಯದು, ರಾತ್ರಿ ಮೈಗೆ ತಣ್ಣೀರು ಹಾಕಿದರೆ ನಿದ್ದೆ ಚೆನ್ನಾಗಿ ಬರುತ್ತದೆ.
ತಂಪಾದ ಆಹಾರ ಸೇವಿಸಿ: ಹಣ್ಣುಗಳು, ಸಲಾಡ್, ಜ್ಯೂಸ್ ಈ ಬಗೆಯ ಆಹಾರ ಸೇವನೆ ಮಾಡಿ, ಇವುಗಳು ಮೈ ಉಷ್ಣಾಂಶ ಕಡಿಮೆ ಮಾಡುತ್ತದೆ, ತುಂಬಾ ಸೆಕೆ ಅನಿಸುವುದಿಲ್ಲ.
ಮಜ್ಜಿಗೆ ಸೇವಿಸಿ: ಮಜ್ಜಿಗೆ ಮಾಡಿಟ್ಟು ಸೇವಿಸಿ, ಇದರಿಂದ ದೇಹ ತಂಪಾಗಿಡುವಲ್ಲಿ ಸಹಾಯ ಮಾಡುತ್ತದೆ.



Click it and Unblock the Notifications

