Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಮಳೆಗಾಲದಲ್ಲಿ ಅಡುಗೆ ಮನೆಯಲ್ಲಿ ನುಸಿ, ನೊಣಗಳ ಸಮಸ್ಯೆ ತಡೆಗಟ್ಟುವುದು ಹೇಗೆ?
ಮಳೆಗಾಲದಲ್ಲಿ ಕಿಚನ್‌ನಲ್ಲಿ ದೊಡ್ಡ ಸಮಸ್ಯೆಯೆಂದರೆ ನುಸಿ ಬರುವುದು. ಅದರಲ್ಲೂ ಅಕ್ಕಪಕ್ಕ ತೋಟವಿದ್ದರಂತೂ ಮುಗೀತು, ಈ ನುಸಿ ಕಾಟಕ್ಕೆ ತುಂಬಾನೇ ಸುಸ್ತು ಆಗಿ ಬಿಡುತ್ತೇವೆ. ಈ ನುಸಿ ಬರದಂತೆ ತಡೆಗಟ್ಟಲು ಕೆಲವೊಂದು ಕಿಚನ್ ಟಿಪ್ಸ್ ನೀಡಲಾಗಿದೆ ನೋಡಿ:

ಕಿಚನ್‌ನಲ್ಲಿ ಈ ವಸ್ತುಗಳನ್ನು ಇಡಿ
ತುಳಸಿ, ಪುದೀನಾ, ಲೆಮನ್‌ಗ್ರಾಸ್ ಇವುಗಳನ್ನು ಕಿಟಕಿ ಪಕ್ಕದಲ್ಲಿ ಇಡಿ. ಲ್ಯಾವೆಂಡರ್, ನೀಲಗಿರಿ ಎಣ್ಣೆ ಇವುಗಳನ್ನು ಕಿಟಕಿ ಬಳಿ ಡಿ. ಇದರ ವಾಸನೆಗೆ ಅಂಥ ನುಸಿ ಬರುವುದಿಲ್ಲ.
ವಿನೆಗೆರ್ ಮತ್ತು ಪಾತ್ರೆ ಉಜ್ಜುವ ಸೋಪು
ಒಂದು ದೊಡ್ಡ ಗ್ಲಾಸ್‌ಗೆ ಪಾತ್ರೆ ಉಜ್ಜಿವ ಸೋಪು ಮತ್ತು ವಿನಗರ್ ಹಾಕಿ, ಅದರ ಮೇಲೆ ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ನಂತರ ಒಂದು ತೂತ ಮಾಡಿ, ವಿನೆಗರ್ ವಾಸನೆ ಈ ನುಸಿ,ಸೊಳ್ಳೆಗಳನ್ನು ಆಕರ್ಷಿಸುತ್ತದೆ, ಅವು ರಂಧ್ರದ ಒಳಗಡೆ ಹೋಗಿ ಸೋಪು ನೀರಿನಲ್ಲಿ ಬಿದ್ದು ಸತ್ತು ಹೋಗುತ್ತದೆ.
ಕಿಚನ್ ಅನ್ನು ಸ್ವಚ್ಛವಾಗಿ ಇಡಿ
ಕಿಚನ್‌ನಲ್ಲಿ ನೀರಿನಂಶ ಇರಲು ಬಿಡಬಾರದು, ಕಿಚನ್ ಅನ್ನು ತುಂಬಾ ಸ್ವಚ್ಛವಾಗಿ ಇಡಬೇಕು. ತರಕಾರಿ ಹಣ್ಣುಗಳನ್ನು ಕತ್ತರಿಸಿ ಹಾಗೇ ಇಡುವುದು, ಅದರ ಸಿಪ್ಪೆ ಹಾಗೇ ಇಡುವುದು ಮಾಡಬಾರದು. ಅದನ್ನು ಮುಚ್ಚಳವಿರುವ ಕಸದ ಬುಟ್ಟಿಗೆ ಹಾಕಿ.
ಲೀಕೇಜ್ ಪೈಪ್ಸ್ ಕಡೆ ಗಮನಹರಿಸಿ
ಲೀಕೇಜ್ ಪೈಪ್ಸ್ ಇದ್ದರೆ ಅದನ್ನು ಸರಿಪಡಿಸಿ, ಸಿಂಕ್ ಕೆಳಗಡೆ ನೀರು ಸೋರುತ್ತಿದ್ದರೆ ಅದನ್ನು ಸರಿಪಡಿಸಿ, ಸಿಂಕ್ ತೊಳೆದು ಸ್ವಚ್ಛವಾಗಿಡಿ.
ಹಣ್ಣುಗಳನ್ನು , ಕೆಲವೊಂದು ತರಕಾರಿಗಳನ್ನು ಫ್ಲೈ ಸ್ಕ್ರೀನ್ ಬಳಸಿ
ಫ್ಲೈ ಸ್ಕ್ರೀನ್ ಸಿಗುತ್ತದೆ, ಆ ಬಲೆಯನ್ನು ಆಹಾರ ಸಾಮಗ್ರಿ ಮೇಲೆ ಇಟ್ಟರೆ ಅಥವಾ ಹಣ್ಣುಗಳನ್ನು ಮುಚ್ಚಿಡಲು ಬಳಸಿದರೆ ನಾವು ತಿನ್ನುವ ಆಹಾರ, ಹಣ್ಣುಗಳ ಮೇಲೆ ಈ ನುಸಿ ಬಂದು ಕೂರುವುದನ್ನು ತಡೆಗಟ್ಟಬಹುದು.
ಪಾತ್ರೆಗಳನ್ನು ಕೂಡಲೇ ಸ್ವಚ್ಛವಾಗಿಡಬೇಕು
ತಿಂದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೆಯೇ ತುಂಬಾ ಹೊತ್ತು ಹಾಕಿಡುವುದರಿಂದ ಈ ನುಸಿಗಳು ಆ ಪಾತ್ರೆಗಳ ಮೇಲೆ ಕೂರುವುದನ್ನು ಆದ್ದರಿಂದ ಪಾತ್ರೆಯನ್ನು ಸ್ವಚ್ಛವಾಗಿಡಿ.
ಈ ನುಸಿ, ನೊಣಗಳನ್ನು ಯಾವುದು ಆಕರ್ಷಿಸುತ್ತದೆ?
ಕೊಳೆಯುತ್ತಿರುವ ಆಹಾರ ವಸ್ತಗಳು
ಮಾಂಸಾಹಾರ
ಹಣ್ಣುಗಳು
ಪ್ರೊಫೆಷನಲ್ ವ್ಯಕ್ತಿಗಳಿಗೆ ನೀಡಬಹುದು
ಮನೆಯಲ್ಲಿ, ನೊಣ, ನುಸಿ, ಪಲ್ಲಿ, ಜೇಡರ ಹುಳು ಇವುಗಳ ಕಾಟ ಹೆಚ್ಚಿದ್ದರೆ ಅದನ್ನು ಹೋಗಲಾಡಿಸಲು ವೃತ್ತಿಪರ ಪರಿಣಿತರಿಗೆ ನೀಡಬಹುದು, ಅವರು ಬಂದು ಕೆಮಿಕಲ್ ಸ್ಪ್ರೇ ಮಾಡಿ ಹೋದಾಗ ಈ ಬಗೆಯ ನುಸಿ, ನೊಣ ಇವುಗಳನ್ನು ನಿಯಂತ್ರಿಸಬಹುದು.



Click it and Unblock the Notifications