Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಚೆಂಡು ಹೂವು ಬೆಳೆಯುವುದು ಹೇಗೆ? ಒಳ್ಳೆಯ ಆದಾಯ ಕೂಡ ಸಿಗುತ್ತದೆ
ಚೆಂಡು ಮನೆ ಮುಂದೆ ಇದ್ದರೆ ಅದನ್ನು ಹೂವು ಬಿಟ್ಟಾಗ ನೋಡುವುದೇ ಚೆಂದ. ಹಬ್ಬ ಹರಿದಿನಗಳಲ್ಲಿ ಈ ಚೆಂಡು ಹೂವಿನ ಅಲಂಕಾರ ತರುವ ಮೆರುಗು ಇದೆಯೆಲ್ಲಾ ಅದನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ, ಇದನ್ನು ಬರಿ ಮನೆಯ ಅಲಂಕಾರಕ್ಕೆ ಅಲ್ಲ ವಾಣಿಜ್ಯ ಉದ್ದೇಶದಿಂದಲೂ ಮಾಡಬಹುದು. ಹೌದು ಈ ಹೂವು ಬೆಳೆದರೆ ಉತ್ತಮ ಆರ್ಥಿಕ ಲಾಭ ಕೂಡ ಬೆಳೆಯಬಹುದು.
ಅದರಲ್ಲಿಯೂ ನೀವು ಈ ದಸರ ಅಥವ ಆ ದೀಪಾವಳಿ ಸಮಯಕ್ಕೆ ನೆಟ್ಟರೆ ಇದೆಯೆಲ್ಲಾ ಒಳ್ಳೆಯ ಲಾಭವೇ ಗಳಿಸಬಹುದು. ತುಂಬಾನೇ ಬೇಡಿಕೆ ಇರುವ ಈ ಹೂವು ಬೆಳೆಯುವುದು ಹೇಗೆ ಎಂದು ನೋಡೋಣ:

ಮೊದಲು ನೋವು ಸೂಕ್ತವಾದ ಮಣ್ಣು ಆಯ್ಕೆ ಮಾಡಬೇಕು
ಮಣ್ಣಿನ pH 6.5 ರಿಂದ 7.5 ಇರಬೇಕು, ಅತಿಯಾದ ಆಮ್ಲೀಯ ಅಥವಾ ಲವಣಯುಕ್ತ ಮಣ್ಣು ಚೆಣಡು ಹೂವಿನ ಕೃಷಿಗೆ ಒಳ್ಳೆಯದಲ್ಲ. ಮಣ್ಣು ಫಲವತ್ತತೆಯಿಂದ ಕೂಡಿರಬೇಕು.
ನೀವು ಬಿತ್ತನೆಗೆ ಮಣ್ಣು ಹೇಗೆ ಸಿದ್ಧ ಮಾಡಬೇಕು?
ಭೂಮಿಯನ್ನು ಉಳುಮೆ ಮಾಡಿ ಒಳ್ಳೆಯ ಹದ ಮಾಡಬೇಕು, ನೀವು ಉಳುಮೆ ಮಾಡಿದ ಮೇಲೆ ಮಣ್ಣಿಗೆ ಸ್ವಲ್ಪ ಸೆಗಣಿ ಕೊಬ್ಬರ ಹಾಕಿ ಕೊಟ್ಟರೆ ಇನ್ನೂ ಒಳ್ಳೆಯದು. ಫಲವತ್ತತೆ ಚೆನ್ನಾಗಿರುವ ಮಣ್ಣಿನಲ್ಲಿ ಬೆಳೆ ಕೂಡ ಚೆನ್ನಾಗಿ ಬೆಳೆಯುತ್ತದೆ.
ಚೆಂಡು ಹೂವು ಬಿತ್ತನೆಗೆ ಸೂಕ್ತ ಸಮಯ ಯಾವಾಗ?
ನೀವು ಚೆಂಡು ಹೂವು ಯಾವುದೇ ಸೀಸನ್‌ನಲ್ಲಿ ಬೆಳೆಯಬಹುದು ಆದರೆ ಡಿಮ್ಯಾಂಡ್ ಅಧಿಕ ಬರುವಂತೆ ಬೆಳೆದರೆ ಇನ್ನೂ ಒಳ್ಳೆಯದು ಹಾಗಾಗಿ ಜೂನ್-ಜುಲೈನಲ್ಲಿ ಚೆಂಡು ಹೂವು ನೆಟ್ಟರೆ ಅದರ ಬೆಳೆ ನಿಮಗೆ ಸೆಪ್ಟೆಂಬರ್, ಅಕ್ಟೋಬರ್ ಮಾಸದಲ್ಲಿ ಸಿಗುವುದು.
ಚೆಂಡು ಹೂವಿನ ಗಿಡಗಳನ್ನು ಹೇಗೆ ನೆಟ್ಟರೆ ಒಳ್ಳೆಯದು?
ನೀವು ಚೆಂಡು ಹೂವಿನ ಬೀಜವನ್ನು ಬಿತ್ತಿ ನಂತರ ಗಿಡವಾದ ಮೇಲೆ ಮಣ್ಣಿನ ಬೆಡ್ ರೀತಿ ಮಾಡಿ 2 ಅಡಿ ಅಂತರದಂತೆ ಗಿಡವನ್ನು ನೆಡಿ.
ನೀವು ಚೆಂಡು ಹೂವಿನ ಬೀಜಗಳನ್ನು ಬಿತ್ತುವ ಮೊದಲು ಅದನ್ನು ಸ್ವಲ್ಪ ಗಂಜಿ ನೀರಿನಲ್ಲಿ ಹಾಕಿಟ್ಟು ನಂತರ ಬಿತ್ತಿದರೆ ಒಳ್ಳೆಯದು.
ಚೆಂಡು ಹೂವಿನ ಗಿಡಕ್ಕೆ ಗೊಬ್ಬರದ ಅಗ್ಯತವಿದೆಯೇ?
ಹೌದು ಚೆಂಡು ಹೂವಿನ ಗಿಡಕ್ಕೆ ಗೊಬ್ಬರದ ಅಗ್ಯತವಿದೆ. ನೀವು ಯೂರಿಯ ಆ ಗೊಬ್ಬರ ಬಳಸಬಹುದು.
ಕಳೆ ಜೊತೆಯಲ್ಲಿ ಬೆಳೆಯಲು ಬಿಡಬೇಡಿ
ನೀವು ಚೆಂಡು ಹೂವು ಬೆಳೆದಾಗ ಕಳೆ ಕೂಡ ಜೊತೆಯಲ್ಲಿ ಬೆಳೆಯಲು ಬಿಡಬೇಡೊ, ಕಿತ್ತಾಕಿ, ಬರೀ ಗಿಡವೇ ಸೊಂಪಾಗಿ ಬೆಳೆದರೆ ಹೂವುಗಳು ಹೆಚ್ಚಿರುತ್ತದೆ.
ನೀರು ಎಷ್ಟು ಬೇಕು?
ಗಿಡ ನೆಟ್ಟು ಸ್ವಲಪ್ ದೊಡ್ಡದಾಗುವವರೆಗೆ ನೀರು ಬೇಕು, ಆದರೆ ಗದ್ದೆಯಾದರೆ ನೀರು ನಿಲ್ಲದಂತೆ ಜಾಗ್ರತೆವಹಿಸಿ, ತುಂಬಾ ಬಿಸಿಲು ಇದ್ದಾಗ ನೀರು ಕೊಟ್ಟರೆ ಒಳ್ಳೆಯದು.
ಚೆಂಡು ಹೂವಿಗೆ ಯಾವ ಬಗೆಯ ಕಾಯಿಲೆಯ ಅಪಾಯವಿದೆ
ಚೆಂಡು ಹೂವಿನ ಗಿಡ ಬೆಳೆದಾಗ ಬೂದಿ ರೋಗ ಬರಬಹುದು
ಎಲೆ ಬಿಳಿ ಬಿಳಿಯಾಗಿರುತ್ತದೆ, ಇದರ ಬಗ್ಗೆ ಗಮನ ನೀಡದಿದ್ದರೆ ಇಡೀ ಗಿಡ ಸೊರಗಲಾರಂಭಿಸುತ್ತದೆ. ಹೀಗೆ ಕಂಡು ಬಂದಾಗ ನೀವು ಕೀಟನಾಶಕ ಸಿಂಪಡಿಸಬೇಕು.
ಸಸಿ ಯಾವಾಗ ಸಾಯುತ್ತದೆ?
ತುಂಬಾನೇ ನೀರಿನಂಶ ಇದ್ದಾಗ ಸಸಿ ಸಾಯಾರಂಭಿಸುತ್ತದೆ, ಆದ್ದರಿಂದ ನೀರು ಇಲ್ಲದಂತೆ ಜಾಗ್ರತೆವಹಿಸಿ.
ಹೂವು ಬಿಡಲು ಎಷ್ಟು ಸಮಯಬೇಕು?
ಚೆಂಡು ಹೂವು 2-5ರಿಂದ 3 ತಿಂಗಳಿಗೆ ಬರುತ್ತದೆ, ಫ್ರೆಂಚ್ ಚೆಂಡು ಹೂವು ಒಂದೂವರೆ ವರ್ಷಕ್ಕೆ ಬರುತ್ತದೆ. ಚೆಂಡು ಹೂವು ಕೀಳುವ ಮುನ್ನ ನೀರು ಹಾಕಿ ನಂತರ ಕೀಳಬೇಕು, ಸಂಜೆ ಅಥವಾ ಬೆಳಗ್ಗೆ ಹೂವು ಕೀಳಿ
ನಂತರ ಅದನ್ನು ಬುಟ್ಟಿಯಲ್ಲಿ ಅತವಾ ಗೋಣಿ ಚೀಲದಲ್ಲಿ ಹಾಕಿ ಮಾರುಕಟ್ಟೆಗೆ ಸಾಗಿಸಿ, ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಬೇಡಿ.



Click it and Unblock the Notifications
